ಕರ್ನಾಟಕದ ಲೈಂಗಿಕ ಕಾರ್ಯಕರ್ತರಿಗೆ ದಿನಸಿ ಪದಾರ್ಥಗಳನ್ನು ಒದಗಿಸುತ್ತಿದೆ ಸಂಗಮ ಎನ್‌ಜಿಒ

ಬೆಂಗಳೂರು ಮೂಲದ ಸಂಗಮ ಲೈಂಗಿಕ ಕಾರ್ಯಕರ್ತರು ಮತ್ತು ಮಂಗಳಮುಖಿಯರಿಗೆ ಸುಮಾರು 2000 ರೂ.ಗಳ ದಿನಸಿ ಪದಾರ್ಥಗಳುಳ್ಳ ಕಿಟ್‌ಗಳನ್ನು ವಿತರಿಸುತ್ತಿದೆ.

ಕರ್ನಾಟಕದ ಲೈಂಗಿಕ ಕಾರ್ಯಕರ್ತರಿಗೆ ದಿನಸಿ ಪದಾರ್ಥಗಳನ್ನು ಒದಗಿಸುತ್ತಿದೆ ಸಂಗಮ ಎನ್‌ಜಿಒ

Wednesday April 08, 2020,

2 min Read

ಮಾರ್ಚ್ 24 ರಂದು ದೇಶಾದ್ಯಂತ ಘೋಷಿಸಲಾದ ಲಾಕ್ ಡೌನ್ ಈಗಾಗಲೇ ಹಿಂದುಳಿದ ವರ್ಗಗಳ ಜನರ ಜೀವನವನ್ನು ಹೆಚ್ಚು ಕಷ್ಟಕರವಾಗಿಸಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟವ ಸಲುವಾಗಿ ಕೈಗಾರಿಕೆಗಳು ಮತ್ತು ಸಂಸ್ಥೆಗಳು ಮುಚ್ಚುತ್ತಿರುವುದರಿಂದ, ಹಣಕಾಸಿನ ಭದ್ರತೆಯಿಲ್ಲದ ದೈನಂದಿನ ಕೂಲಿಕಾರರಿಗೆ ಬದುಕುಳಿಯುವುದು ಕಷ್ಟಕರವಾಗಿದೆ.


ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ 1999 ರಿಂದ ಕೆಲಸ ಮಾಡುತ್ತಿರುವ ಬೆಂಗಳೂರಿನ ಸಂಗಮ ಎನ್‌ಜಿಒ, ಲಾಕ್‌ಡೌನ್ ಆದ ಈ ಸಮಯದಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಮತ್ತು ಮಂಗಳಮುಖಿಯರ ಸಮುದಾಯದ ಕಷ್ಟವನ್ನು ನಿವಾರಿಸಲು ಮುಂದಾಗಿದೆ.


ಲೈಂಗಿಕ ಕಾರ್ಯಕರ್ತರ 350 ಕುಟುಂಬಗಳಿಗೆ ಮತ್ತು 150 ಮಂಗಳಮುಖಿಯರಿಗೆ ಸಂಗಮ ದಿನಸಿ ಒದಗಿಸುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿಗೆ ಬಳಕೆ ಆಗುವಷ್ಟು ದಿನಸಿ ನೀಡಲಾಗುತ್ತಿದೆ. ಒಂದು ಕಿಟ್‌ ಸುಮಾರು 2,000 ರೂ. ಮೌಲ್ಯದ ಸಾಮಗ್ರಿಗಳನ್ನು ಹೊಂದಿದೆ. ಮಕ್ಕಳು, ವೃದ್ಧರು ಮತ್ತು ಎಚ್‌ಐವಿ ಹೊಂದಿರುವ ಜನರ ಆದ್ಯತೆಯಾಗಿ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ನಗರದಲ್ಲಿ ಸರಕುಗಳನ್ನು ತಲುಪಿಸುವುದು ಸುಲಭವಾದರೂ, ಗ್ರಾಮೀಣ ಮತ್ತು ಪಟ್ಟಣಗಳಿಗೆ ಸರಬರಾಜು ಮಾಡುವುದು ಒಂದು ದೊಡ್ಡ ಕೆಲಸದಂತಾಗಿದೆ.


"ಪ್ರಜಾಪ್ರಭುತ್ವ ಎಂಬ ನಮ್ಮ ವೆಬ್‌ಸೈಟ್ ಮೂಲಕ ಹಣವನ್ನು ಸಂಗ್ರಹಿಸಲು ನಿರ್ಧರಿಸಿದೆವು. ಕಳೆದ ವಾರದಿಂದ ನಾವು 11,98,702 ರೂ.ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಲು ಸಾಧ್ಯವಾಯಿತು ಮತ್ತು ಮುಂದಿನ ದಿನಗಳಲ್ಲಿ 20,00,000 ರೂಗಳನ್ನು ಸಂಗ್ರಹಿಸುವುದು ನಮ್ಮ ಗುರಿಯಾಗಿದೆ. ಈ ಹಣದಿಂದ ನಾವು ದಿನಸಿ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಇದಲ್ಲದೆ, ನಾವು ಸಾರಿಗೆಗೂ ಪಾವತಿಸಬೇಕಾಗಿದೆ ಏಕೆಂದರೆ ಈ ಯೋಜನೆಯು ರಾಜ್ಯಾದ್ಯಂತ ಮಾಡಲಾಗುತ್ತಿದೆ,” ಎಂದು ಸಂಗಮ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಶ್ರೀನಿವಾಸ್ ಹೇಳಿದರು, ವರದಿ ಎಡೆಕ್ಸ್ ಲೈವ್.


ಸಂಗಮ ಈ ಹಿಂದೆ ಬೆಂಗಳೂರು ನಗರದಲ್ಲಿ ಲೈಂಗಿಕ ಕಾರ್ಯಕರ್ತೆಯರ ಸಮುದಾಯದೊಂದಿಗೆ ಒಗ್ಗೂಡಿ ಕೆಲಸ ಮಾಡಿದೆ. ಹೀಗಾಗಿ ಸರಕುಗಳ ವಿತರಣೆ ಮಾಡಲು ಸುಲಭವಾಯಿತು. ಹಾಗೂ ಈ ಸಂಗಮವು ಕರ್ನಾಟಕ ಸೆಕ್ಸ್ ವರ್ಕರ್ಸ್ ಯೂನಿಯನ್ ಮತ್ತು ಉತ್ತರ ಕರ್ನಾಟಕ ಮಹಿಳಾ ಒಕ್ಕೂಟದೊಂದಿಗೆ ಕೆಲಸ ಮಾಡುತ್ತಿದೆ.


(ಚಿತ್ರಕೃಪೆ: ಸಂಗಮ)




ಬೆಂಗಳೂರು ಗ್ರಾಮೀಣ, ಹಾಸನ, ಬೀದರ್, ಯಾದಗಿರಿ, ರಾಮನಗರ, ಹಾವೇರಿ, ಗದಗ, ರಾಯಚೂರು, ಕೊಪ್ಪಳ, ಕೋಲಾರ, ಚಿಕ್ಕಮಗಳೂರು, ಮತ್ತು ಉತ್ತರ ಕನ್ನಡ ಪ್ರದೇಶಗಳಿಗೆ ದಿನಸಿ ವಿತರಿಸಲಾಗುತ್ತಿದೆ.


"ಉನ್ನತ ದಾನಿಗಳಲ್ಲಿ ಲೇಖಕಿ ಅರುಂಧತಿ ರಾಯ್ ಕೂಡ ಇದ್ದಾರೆ. ಇಲ್ಲಿಯವರೆಗೆ 1,53,000 ರೂಗಳನ್ನು ಸಂಗ್ರಹಿಸಲಾಗಿದೆ," ವರದಿ ದಿ ವೈರ್.


ಈ ದಿನಸಿ ಕಿಟ್‌ಗಳು 25 ಕೆಜಿ ಅಕ್ಕಿ, ಅಡುಗೆ ಎಣ್ಣೆಯ ಎರಡು ಪ್ಯಾಕ್, ಬೇಳೆಕಾಳುಗಳು ಮೂರು ಕೆಜಿ, ಸಕ್ಕರೆ ಒಂದು ಕೆಜಿ, ಉಪ್ಪು ಒಂದು ಕೆಜಿ, ಮೆಣಸಿನ ಪುಡಿ 500 ಗ್ರಾಂ, ಬೆಲ್ಲ 500 ಗ್ರಾಂ, ನೆಲಗಡಲೆ 500 ಗ್ರಾಂ, ಮೂರು ಸ್ನಾನದ ಸೋಪ್ ಬಾರ್ ಮತ್ತು ಎರಡು ಬಟ್ಟೆ ತೊಳೆಯುವ ಸೋಪ್‌ಗಳನ್ನು ಹೊಂದಿದೆ.