ಒಂದೇ ಮದ್ದಿನಿಂದ ವಿವಿಧ ರೀತಿಯ ಹಾವು ಕಡಿತಕ್ಕೆ ಚಿಕಿತ್ಸೆ ನೀಡಲು ಔಷಧಿ ತಯಾರಿಸುತ್ತಿದ್ದಾರೆ ಈ ವೈದ್ಯ

ಸ್ಯಾನ್‌ ಫ್ರಾನ್ಸಿಸ್ಕೋ ಮೂಲದ ಒಫಿರೆಕ್ಸ್‌ ಅನ್ನುಸ್ಥಾಪಿಸಿದ ಡಾ.ಮ್ಯಾಥೀವ್‌ ಲೆವಿನ್‌, ಕಡಿಮೆ ವೆಚ್ಚದಲ್ಲಿ ಹಾವು ಕಡಿತಕ್ಕೆ ಮದ್ದು ತಯಾರಿಸಿದ್ದು, ಅದರ ಅಣುವನ್ನು ವಿಶ್ವದಲ್ಲಿ ಹಾವು ಕಡಿತಕ್ಕೆ ಒಳಗಾದವರಲ್ಲಿ ಅರ್ಧಕ್ಕೂ ಹೆಚ್ಚು ಭಾರತೀಯರೇ ಇರುವುದರಿಂದ ಇಲ್ಲಿಯೇ ಪರೀಕ್ಷಿಸಲು ನಿರ್ಧರಿಸಿದ್ದಾರೆ.

ಒಂದೇ ಮದ್ದಿನಿಂದ ವಿವಿಧ ರೀತಿಯ ಹಾವು ಕಡಿತಕ್ಕೆ ಚಿಕಿತ್ಸೆ ನೀಡಲು ಔಷಧಿ ತಯಾರಿಸುತ್ತಿದ್ದಾರೆ ಈ ವೈದ್ಯ

Wednesday September 04, 2019,

4 min Read

ಅವರನ್ನು, ಹಾವುಗಳನ್ನು ಕಂಡರೆ ಭಯಪಡದ ಆಧುನಿಕ ದಿನದ ಇಂಡಿಯಾನ ಜೋನ್ಸ್‌ ಎಂದುಕೊಳ್ಳಿ. ಡಾ. ಮ್ಯಾಥೀವ್‌ ಲೆವಿನ್‌ 20 ಕ್ಕೂ ಹೆಚ್ಚು ವರ್ಷಗಳ ಕಾಲ ಪ್ರಪಂಚಾದ್ಯಂತ ವೈದ್ಯರಾಗಿ, ವಿಶೇಷಯಾತ್ರೆಗಳಿಗೆ ಹೋಗಿದ್ದಾರೆ.


ಮ್ಯಾಥೀವ್‌ ಅವರ ಹಾವುಕಡಿತದ ವಿರುದ್ಧದ ಧರ್ಮಯುದ್ಧ ಪ್ರಾರಂಭವಾಗಿದ್ದು ಕ್ಯಾಲಿಫೋರ್ನಿಯ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಸಂಶೋಧಕರೊಬ್ಬರು 2001ರಲ್ಲಿ ಆಗ್ನೇಯ ಏಷ್ಯಾದ ವಿಶೇಷಯಾತ್ರೆಯ ಸಮಯದಲ್ಲಿ ಹಾವು ಕಡಿತದದಿಂದ ಸಾವನ್ನಪ್ಪಿದಾಗ. ಹತ್ತು ವರ್ಷದ ನಂತರ ಅದೇ ಪ್ರದೇಶಕ್ಕೆ ವಿಶೇಷಯಾತ್ರೆ ಹೋದಾಗ ಹಾವು ಕಡಿತದ ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಮತ್ತು ಕಚ್ಚುವಿಕೆ ಹಾಗೂ ಆಸ್ಪತ್ರೆಯ ಆರೈಕೆಯ ನಡುವಿನ ಅಂತರವನ್ನು ಹೇಗೆ ನಿವಾರಿಸುವುದು ಎಂದು ಮ್ಯಾಥ್ಯೂ ಆಶ್ಚರ್ಯ ಪಟ್ಟರು. (ಅಲ್ಲಿಯೇ 75 ಪ್ರತಿಶತಕ್ಕಿಂತಲೂ ಹೆಚ್ಚು ಹಾವು ಕಡಿತ ಸಂಭವಿಸುತ್ತದೆ).


ಮ್ಯಾಥ್ಯೂ ಅವರ ಕ್ಷೇತ್ರಕಾರ್ಯಗಳಾದ - ಫಿಲಿಪೈನ್ಸ್ ಕಾಡುಗಳು, ಮಂಗೋಲಿಯಾದ ಮರುಭೂಮಿಗಳು ಮತ್ತು ಭಾರತದ ಹೊಲಗಳು - ವಿಭಿನ್ನ ಹಾವುಗಳಿಗೆ ವಿಷ-ನಿರೋಧಕಗಳು ಲಭ್ಯವಿದೆ ಎಂದು ಅರಿತುಕೊಳ್ಳಲು ಕಾರಣವಾಯಿತು, ಆದರೆ ಯಾವುದನ್ನು ಬಳಸಬೇಕೆಂದು ನಿರ್ಧರಿಸುವುದೇ ಸಮಸ್ಯೆಯಾಗಿತ್ತು.


ಹಾವು ಕಚ್ಚಿದಾಗ, ಯಾವ ಹಾವು ಕಚ್ಚಿದೆ ಎಂದು ಯಾರೊಬ್ಬರಿಗೂ ತಿಳಿಯುತ್ತಿರಲಿಲ್ಲ. ಹಾವಿನ ಕಡಿತಕ್ಕೆ ಒಂದೇ ತರದ ಮದ್ದು ಏಕೆ ಇರಬಾರದು ಎಂದುಕೊಂಡು ಅವರು ಆಶ್ಚರ್ಯಪಟ್ಟರು. ಸಾವಿನ ಸಂಖ್ಯೆಗಳು ಸಮಸ್ಯೆಯ ಬಗ್ಗೆ ಏನಾದರೂ ಮಾಡಲು ಅವರನ್ನು ತಳ್ಳಿದವು.


ಮ್ಯಾಥೀವ್‌ ಲೆವಿನ್‌

ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಹಾವು ಕಡಿತವು ಹೆಚ್ಚಾಗಿ ಸಂಭವಿಸುತ್ತದೆ, ಗ್ರಾಮೀಣ ಪ್ರದೇಶಗಳು ಇದರ ತೀವ್ರತೆಯನ್ನು ಹೆಚ್ಚೆಚ್ಚು ಎದುರಿಸುತ್ತವೆ. ಡಬ್ಲ್ಯುಎಚ್‌ಒ ಪ್ರಕಾರ, ಪ್ರತಿವರ್ಷ ಸುಮಾರು 5.4 ದಶಲಕ್ಷ ಜನರಿಗೆ ಹಾವು ಕಚ್ಚುತ್ತವೆ, ಪರಿಣಾಮವಾಗಿ 1.8 ರಿಂದ 2.7 ದಶಲಕ್ಷ ಪ್ರಕರಣಗಳು ಕಂಡುಬರುತ್ತವೆ. 81,410 ದಿಂದ 137,880 ವರೆಗೆ ಸಾವುಗಳು ಸಂಭವಿಸುತ್ತಿವೆ, ಮತ್ತು ಪ್ರತಿವರ್ಷ ಸುಮಾರು ಮೂರು ಪಟ್ಟು ಹೆಚ್ಚು ಅಂಗ ಸಮಸ್ಯೆಗಳು ಮತ್ತು ಇತರ ಶಾಶ್ವತ ಅಂಗವೈಕಲ್ಯಗಳು ಸಂಭವಿಸುತ್ತವೆ.


ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿನ ಪರಿಶೋಧನೆ ಮತ್ತು ಪ್ರಯಾಣ ಆರೋಗ್ಯ ಮತ್ತು ಸ್ನೇಕ್‌ಬೈಟ್ ಯೋಜನೆಯ ಕೇಂದ್ರದ ಸಂಸ್ಥಾಪಕ 50 ರ ಮ್ಯಾಥ್ಯೂ, “ಇವುಗಳು ಉಳಿಸುವುದಕ್ಕೆ ಯೋಗ್ಯವಾದ ಜೀವಗಳಾಗಿವೆ” ಎಂದು ಹೇಳುತ್ತಾರೆ. ಎಲ್ಲಾ ಹಾವು ಕಡಿತಗಳಿಗೆ ಪ್ರತಿಮದ್ದಿನ ತಯಾರಿಕ ಕೆಲಸವನ್ನು ಪ್ರಾರಂಭಿಸಲು ಅವರು ನಿರ್ಧರಿಸಿದರು; ಇದು 2015 ರಲ್ಲಿ ಸಾರ್ವಜನಿಕ ಲಾಭದ ನಿಗಮವಾದ ಒಫಿರೆಕ್ಸ್ ಅನ್ನು ಪ್ರಾರಂಭಿಸಲು ಕಾರಣವಾಯಿತು.


ಒಫಿರೆಕ್ಸ್ನ ಕಥೆ


ಹಾವಿನ ಕಡಿತಕ್ಕೆ ಪ್ರತಿವಿಷಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ, ಇವುಗಳು ಹಾವುಗಳಿಗೆ ನಿರ್ದಿಷ್ಟವಾಗಿರುತ್ತವೆ ಮತ್ತು ಪ್ರತಿವಿಷಗಳನ್ನು ಹೆಚ್ಚಾಗಿ ಜೈವಿಕ ಚಿಕಿತ್ಸಕ ಎಂದು ಕರೆಯಲಾಗುತ್ತದೆ ಮತ್ತು ಮೂಲತಃ ಇವು ಹಾವಿನ ಕಡಿತದ ಲಕ್ಷಣಗಳಿಗೆ ಚಿಕಿತ್ಸೆ ನೀಡುವ ಸಣ್ಣ ಅಣುಗಳಾಗಿವೆ.


ಅಗ್ಗದ ಮತ್ತು ಫೂಲ್ ಪ್ರೂಫ್, ಪ್ರತಿವಿಷವನ್ನು ಮ್ಯಾಥ್ಯೂ ಕಂಡುಹಿಡಿದರು, ಅದು ಚಿಕಿತ್ಸೆಯನ್ನು ಸುಲಭ ಮತ್ತು ಅಗ್ಗವಾಗಿಸುತ್ತದೆ ಹಾಗೂ ಸಾವು ಮತ್ತು ಗಾಯಗಳನ್ನು ತಡೆಯುತ್ತದೆ.


2013 ರಲ್ಲಿಯೇ ಮ್ಯಾಥ್ಯೂ ವಿವಿಧ ಹಾವಿನ ವಿಷಗಳ ಘಟಕಗಳನ್ನು ಸಂಶೋಧಿಸಲು ಪ್ರಾರಂಭಿಸಿದರು ಮತ್ತು ವಿಭಿನ್ನ ಹಾವುಗಳ ವಿಷದಲ್ಲಿ (ಕ್ರೈಟ್, ರಸ್ಸೆಲ್ ವೈಪರ್, ಗರಗಸದ ಸ್ಕೇಪರ್ ವೈಪರ್ ಮತ್ತು ಕೋಬ್ರಾ) ಅತಿದೊಡ್ಡ ಅಂಶವನ್ನು ಪತ್ತೆಹಚ್ಚಲು ಪ್ರಾರಂಭಿಸಿದರು. ಪ್ರತಿ ವಿಷವು ಕಿಣ್ವಗಳು, ಪ್ರೋಟೀನ್ಗಳು, ಸಾವಯವ ಸಂಯುಕ್ತಗಳು ಮತ್ತು ಪೆಪ್ಟೈಡ್ಗಳ ಸಂಯೋಜನೆಯಾಗಿದೆ. ಹಾವಿನ ವಿಷದ ಸಾಮಾನ್ಯ ಅಂಶಗಳೊಂದಿಗೆ ರೋಗಗಳಿಗೆ ಚಿಕಿತ್ಸೆ ನೀಡುವ ಪ್ರಸ್ತುತ ಔಷಧಿಗಳ ಬಗ್ಗೆ ಮ್ಯಾಥ್ಯೂ ಓದಿದರು.


ಅವರು ಮಾರುಕಟ್ಟೆಯಲ್ಲಿ ಎಲ್ಲಾ ಔಷಧಿಗಳನ್ನು ಖರೀದಿಸಿ, ಹಾವಿನ ವಿಷದಿಂದ ಚುಚ್ಚಿದ ಬಯೋ-ಏಜೆಂಟ್‌ಗಳಲ್ಲಿ (ಕೆಂಪು ಬಣ್ಣದಲ್ಲಿ) ಪ್ರಯೋಗವನ್ನು ಪ್ರಾರಂಭಿಸಿದರು (ವಿಷವನ್ನು ನಿರ್ವಹಿಸಿದಾಗ ಇವು ತಿಳಿ ಹಳದಿ ಬಣ್ಣಕ್ಕೆ ತಿರುಗಿದವು).


ಸೆಪ್ಸಿಸ್ಗೆ ಚಿಕಿತ್ಸೆ ನೀಡುವ ಔಷಧದ ಘಟಕಗಳನ್ನು ಬಳಸುವವರೆಗೂ ಬಾಟಲುಗಳಲ್ಲಿನ ಜೈವಿಕ ಏಜೆಂಟ್ ಹಳದಿ ಬಣ್ಣದಲ್ಲಿ ಉಳಿಯಿತು; ಅದು ನಂತರ ಸ್ಫಟಿಕ ಸ್ಪಷ್ಟವಾಯಿತು. ಅವರು ಇದನ್ನು ಒಂದೆರಡು ಬಾರಿ ಪ್ರಯತ್ನಿಸಿದರು ಮತ್ತು ಅವರು ಏನೋ ದೊಡ್ಡ ಪರಿಣಾಮವೇ ಆಗಿದೆ ಎಂದು ಅರಿತುಕೊಂಡರು. ಸೆಪ್ಸಿಸ್ ಮತ್ತು ಅದರ ಚಿಕಿತ್ಸೆಯ ಕುರಿತು ಹೆಚ್ಚಿನ ಸಂಶೋಧನೆಯು ಸೆಪ್ಸಿಸ್ ಚಿಕಿತ್ಸೆಗೆ ಬಳಸುವ ಔಷಧವು ಹಾವಿನ ವಿಷದಲ್ಲಿನ ಅತಿದೊಡ್ಡ ಘಟಕ ಕಿಣ್ವವಾದ ಫಾಸ್ಫೋಲಿಪೇಸ್ ಎ 2 (ಪಿಎಲ್‌ಎ 2) ಗೆ ಚಿಕಿತ್ಸೆ ನೀಡಬಹುದೆಂಬ ಅರಿವು ಮೂಡಿತು.


ಈ ಎಲ್ಲಾ ಸಮಯದಲ್ಲಿ, ಅವರು ತುರ್ತು ಔಷಧದಲ್ಲಿ ಎಂಡಿ ಆಗಿ ಕೆಲಸವನ್ನು ಮುಂದುವರೆಸಿದರು; ಪ್ರತಿವಿಷದ ಬಗ್ಗೆ ಅವರ ಸಂಶೋಧನೆಯನ್ನು ಮನೆಯಲ್ಲಿ ಮತ್ತು ಕಚೇರಿಯಲ್ಲಿ ನಡೆಸಿದರು.


2014 ರಲ್ಲಿ, ಅವರು ಸೆಪ್ಸಿಸ್‌ಗೆ ಚಿಕಿತ್ಸೆ ನೀಡುವ ಔಷಧಿಯನ್ನು ತಯಾರಿಸಿದ ಎಲಿ ಲಿಲ್ಲಿ ಎಂಬ ಕಂಪನಿಗೆ ಬಹಿರಂಗಪಡಿಸದ ಬೆಲೆಗೆ ಔಷಧಿಗೆ ಪರವಾನಗಿ ನೀಡಿದರು. ಫಾರ್ಮಾ ಮೇಜರ್ ವಾರೆಸ್ಪ್ಲಾಡಿಬ್ ಎಂಬ ಔಷಧಿಯು ಹಾವಿನ ವಿಷದಲ್ಲಿನ ಜೀವಾಣು ವಿಷವನ್ನು ತಡೆಯುತ್ತದೆ.


ಹಾವಿನ ಕಡಿತಕ್ಕೆ ಚಿಕಿತ್ಸೆಯನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಸಂಯುಕ್ತಗಳನ್ನು ಗುರುತಿಸುವ ಮೂಲಕ, ಮ್ಯಾಥ್ಯೂ ಈಗ ಸಣ್ಣ ಅಣು ಚಿಕಿತ್ಸಕಗಳನ್ನು ರಚಿಸಿದ್ದಾರೆ, ಅದು “ಎಲ್ಲಿಯಾದರೂ, ಯಾವುದೇ ಸಮಯದಲ್ಲಿ, ಯಾರಿಗಾದರೂ” ಚಿಕಿತ್ಸೆಯನ್ನು ಖಚಿತಪಡಿಸುತ್ತದೆ. ಈ ಆವಿಷ್ಕಾರದ ಸಾಮರ್ಥ್ಯವು ದೊಡ್ಡದಾಗಿದೆ - ಇದು ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ವೈದ್ಯರಿಗೆ ಹಾವಿನ ಕಡಿತಕ್ಕೆ ಚಿಕಿತ್ಸೆ ನೀಡಲು ಬೇರೆ ಬೇರೆ ವಿರೋಧಿ ವಿಷಗಳ/ಮದ್ದುಗಳ ಅಗತ್ಯವಿಲ್ಲ ಎಂದು ಖಚಿತಪಡಿಸುತ್ತದೆ ಮತ್ತು ಸಾವಿರಾರು ಹಾವು ಕಡಿತದ ಸಂತ್ರಸ್ತರಿಗೆ ಚಿಕಿತ್ಸೆ ನೀಡಿ ಉಳಿಸಬಹುದಾಗಿದೆ.


ಅಣುವು ಪ್ರಸ್ತುತ ಪ್ರಾಣಿಗಳ ಪ್ರಯೋಗಗಳ ಮೂಲಕ ಸಾಗುತ್ತಿದೆ, ಇದು ಹೆಚ್ಚಾಗಿ ಯಶಸ್ವಿಯಾಗಿದೆ. ಒಫಿರೆಕ್ಸ್ ಈಗ ಮಾನವನ ಮೇಲೆ ಪ್ರಯೋಗಗಳನ್ನು ಪ್ರಾರಂಭಿಸಲು ಯೋಜಿಸಿದೆ; ಇದೀಗ ಅದು ಅನುಮತಿಗಾಗಿ ಕಾಯುತ್ತಿದ್ದು, ಪ್ರಯೋಗಕ್ಕೆ ಅನುದಾನ ನೀಡಬಲ್ಲ ಫಾರ್ಮಾ ಕಂಪನಿಯೊಂದಿಗೆ ಪಾಲುದಾರರಾಗ ಬಯಸಿದೆ. ಉತ್ಪನ್ನವು ಮಾರುಕಟ್ಟೆಗೆ ಬರುವ 2 ವರ್ಷ ಮುಂಚೆ ಮನುಷ್ಯರ ಮೇಲೆ ಪ್ರಯೋಗವಾಗಬೇಕಿದೆ.


ಪ್ರತಿಯೊಬ್ಬ ರೈತ / ಸೈನಿಕನು ಚಿಕಿತ್ಸೆಯನ್ನು ಟ್ಯಾಬ್ಲೆಟ್ ರೂಪದಲ್ಲಿ ಸಾಗಿಸುವ ಹಾಗೂ ಹಾವಿನ ಕಡಿತದ ಅಪಾಯದ ಬಗ್ಗೆ ಚಿಂತಿಸದೆ ತಮ್ಮ ದೈನಂದಿನ ಕೆಲಸಕ್ಕೆ ಹೋಗಬಹುದಾದ ಜಗತ್ತನ್ನು ಮ್ಯಾಥ್ಯೂ ರೂಪಿಸುತ್ತಿದ್ದಾರೆ.


q

ಹಾವು ಕಚ್ಚಿದವರಿಗೆ ಚಿಕಿತ್ಸೆ ನೀಡುತ್ತಿರುವ ಮ್ಯಾಥೀವ್‌.


ವ್ಯವಹಾರ


ಕಳೆದ 100 ವರ್ಷಗಳಲ್ಲಿ ಹಾವಿನ ವಿಷಕ್ಕೆ ಯಾವುದೇ ಹೊಸ ಮದ್ದಿನ ಸೃಷ್ಟಿಯಾಗಿಲ್ಲ. ಟ್ರಾನ್ಸ್‌ಪರೆನ್ಸಿ ಮಾರ್ಕೆಟ್‌ ರೀಸರ್ಚ ಪ್ರಕಾರ, ವಿಷ-ವಿರೋಧಿ ಮಾರುಕಟ್ಟೆಯ ಗಾತ್ರವು $1.7 ಬಿಲಿಯನ್‌ನಷ್ಟಿದೆ. ದಿ ರಾಯಲ್‌ ಸೊಸೈಟಿ ಫಾರ್‌ ಕೆಮಿಸ್ಟ್ರಿಯ ಪ್ರಕಾರ, ಮಾರುಕಟ್ಟೆಯು ಮನುಷ್ಯರ ಮೇಲೆ ಸರಿಯಾಗಿ ಪ್ರಯೋಗ ಮಾಡಿರದ ಔಷಧಿಗಳಿಂದ ತುಂಬಿಹೋಗಿದ್ದು ಯಾವುದೇ ಪರಿಣಾಮವಿಲ್ಲದ ಉತ್ಪನ್ನವಾಗಿರುತ್ತದೆ. ಬೃಹತ್‌ ಫಾರ್ಮಾ ಕಂಪನಿಗಳು ಉತ್ಪಾದನೆಯನ್ನು ಆರಂಭಿಸಿದ್ದರೂ, ತಮ್ಮ ಪ್ರತಿಸ್ಪರ್ಧಿ ಕಂಪನಿಗಳು ಪರಿಶೀಲನೆಗೊಳ್ಳದೆ ಕಡಿಮೆ ವೆಚ್ಚಕ್ಕೆ ನೀಡುವುದರಿಂದ, ಲಾಭದಲ್ಲಿಲ್ಲ.


ಮ್ಯಾಥ್ಯೂ ಇಬ್ಬರು ದೈತ್ಯರ ಬೆಂಬಲವನ್ನು ಕಂಡುಕೊಂಡರು - ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್, ಕಂಪನಿ ಮತ್ತು ಜೆರ್ರಿ ಹ್ಯಾರಿಸನ್, ರಾಕ್ ಎನ್ ರೋಲ್ ಹಾಲ್ ಆಫ್ ಫೇಮರ್ ಹಾಗೂ ಉದ್ಯಮಿ.


ಸದಸ್ಯರಲ್ಲಿ ಒಬ್ಬರಾದ ಜೆರ್ರಿ ಮತ್ತು ಬ್ಯಾಂಡ್ ಟಾಕಿಂಗ್ ಹೆಡ್ಸ್‌ನ ಗಿಟಾರ್ ಮತ್ತು ಕೀಬೋರ್ಡ್ ಪ್ಲೇಯರ್, ಅವರು ಒಫಿರೆಕ್ಸ್‌ನಲ್ಲಿ ಏಕೆ ಹೂಡಿಕೆ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತಾರೆ. "ಬಹಳ ಸಮಯದವರೆಗೆ ವಿರೋಧಿ ವಿಷಗಳ ಕ್ಷೇತ್ರದಲ್ಲಿ ಯಾವುದೇ ಹೊಸತನವಿಲ್ಲ ಎಂದು ನಾನು ಗಮನಿಸಿದ್ದೇನೆ. ತಾವು ಏನು ಮಾಡುತ್ತಿದ್ದಾರೆಂದು ತಿಳಿದಿರುವ ವೈದ್ಯರ ಉತ್ಸಾಹವನ್ನು ಬೆಂಬಲಿಸುವುದು ತಾರ್ಕಿಕವಾಗಿದೆ,” ಎಂದರು.


ಕುತೂಹಲಕಾರಿಯಾಗಿ, ಮ್ಯಾಟ್ ಹ್ಯಾರಿಸನ್‌ನನ್ನು ಅತ್ಯಂತ ಅಸಂಭವ ಪರಿಸ್ಥಿತಿಯಲ್ಲಿ ಭೇಟಿಯಾದರು - ಒಂದು ಪಾರ್ಟಿಯಲ್ಲಿ ಜೆರ್ರಿ ಯಾವುದೇ "ಕೋಣೆಯಲ್ಲಿನ ಅಸಾಮಾನ್ಯ ವ್ಯವಹಾರ ವಿಚಾರಗಳನ್ನು" ಚರ್ಚಿಸಲು ಸಂತೋಷಪಡುತ್ತೇನೆ ಎಂದು ಘೋಷಿಸಿದರು. 2015 ರಲ್ಲಿ ಮ್ಯಾಥೀವ್‌ ತಮ್ಮ ಕಲ್ಪನೆಗೆ ಬೆಂಬಲವನ್ನು ಹುಡುಕುತ್ತಿದ್ದರು. ತಕ್ಷಣವೇ ತಮ್ಮ ಕಲ್ಪನೆಯನ್ನು ಹೇಳಿಕೊಂಡ ಕೂಡಲೇ ಯುಎಸ್‌ ಡಿಫೆನ್ಸ್‌ ಡಿಪಾರ್ಟ್ಮೆಂಟ್‌ ಸಹ ಮು0ದೆ ಬಂದಿತು.


ಭಾರತದ ಜೊತೆ ಸಂಪರ್ಕ


ಮ್ಯಾಥೀವ್‌ ತಮ್ಮ ಉತ್ಪನ್ನವನ್ನು ಭಾರತದಲ್ಲೇ ತಯಾರಿಸಿ, ಇಲ್ಲಿಯೇ ಪ್ರಯೋಗಿಸುವ ಆಸೆ ಹೊಂದಿದ್ದಾರೆ. ಬಂಡವಾಳ ಹೂಡುವ ಮುಂಚೆ ಅವರು ಹಲವು ಫಾರ್ಮಾ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.


ಐದು ಮಂದಿಯ ಒಫೆರಿಕ್ಸ್‌ ತಂಡವು ಬೆಲೆ ನಿಗದಿಯನ್ನು ಮುಖ್ಯವಾಗಿ ನಂಬುತ್ತದೆ. ಭಾರತವನ್ನು ಆರಿಸಿಕೊಳ್ಳುವುದಕ್ಕೆ, ಇಲ್ಲಿನ ಗಣನೀಯವಾಗಿ ಇಳಿಕೆಯಾದ ಔಷಧೀಗಳ ಬೆಲೆಯೆ ಕಾರಣವಾಗಿದ್ದು, ಹೊರ ದೇಶಗಳಲ್ಲಿ ಇನ್ನೂ ಕಡಿಮೆ ಬೆಲೆಯಲ್ಲಿ ಮಾರಾಟಮಾಡಬಹುದೆಂದು ಹಾಗೂ ಅದರಿಂದಲೇ ಲಾಭ ಹಾಗೂ ಸಮಾಜದ ಮೇಲೆ ಪರಿಣಾಮ ಬೀರುವುದನ್ನು ಸಮತೋಲನಗೋಳಿಸಬಹುದು“ ಎನ್ನುತ್ತಾರೆ ಮ್ಯಾಥ್ಯೂ.


ಫಾರ್ಮಾ ಕೈಗಾರಿಕೆಯ ಮೂಲಗಳ ಪ್ರಕಾರ ಬೆಲೆಯು 100 ರಿ0ದ 180 ಕೋಟಿಯು ಪ್ರಯೋಗಕ್ಕೆ, ಉತ್ಪಾದನೆಗೆ ಹಾಗೂ ವಿತರಣೆಗೆ ತಗಲುತ್ತದೆ ಎನ್ನಲಾಗುತ್ತಿದೆ.


ತಮ್ಮ ಮನೆಯಲ್ಲಿ ಪ್ರಯಾಣದ, ವಿಶೇಷಯಾತ್ರೆಯ ಚಿತ್ರಪಟಗಳನ್ನು ಹಾಕಿಕೊಂಡಿರುವ ಮ್ಯಾಥ್ಯೂರನ್ನು ಇಂಡಿಯಾನ ಜೋನ್ಸ್‌ ಎನ್ನಬಹುದು. ಆದರೆ ಒಂದೇ ವ್ಯತ್ಯಾಸವೆಂದರೆ: ಇವರು ಸಾಮಾಜಿಕ ಕಾರ್ಯಕ್ಕಾಗಿ ಸಾಹಸಿಯಾಗಿದ್ದಾರೆ.