ಐಐಟಿ-ಮದ್ರಾಸ್‌ನ ಸಂಶೋಧಕರು ಪ್ಲಾಸ್ಟಿಕ್ ನ್ನು ವಿಘಟನೆಗೊಳಿಸುವ ಪರಿಸರ ಸ್ನೇಹಿ ಮಾರ್ಗವನ್ನು ಕಂಡುಹಿಡಿದಿದ್ದಾರೆ
ಟಿ ಪ್ರದೀಪ್ ನೇತೃತ್ವದ ಐಐಟಿ-ಮದ್ರಾಸ್ ತಂಡವು ಹಲವಾರು ಬಗೆಯ ಪ್ಲಾಸ್ಟಿಕ್ ಗಳಾದ ಟೆಫ್ಲಾನ್, ಪಾಲಿಥಿಲೀನ್ ಮತ್ತು ಪಾಲಿಪ್ರೊಪಿಲೀನ್ ಗಳನ್ನು ವಿಘಟನೆಗೊಳಿಸಲು ಯಶಸ್ವಿಯಾಗಿ ಮಾರ್ಗವೊಂದನ್ನು ಕಂಡುಹಿಡಿದಿದೆ.
ಯುನೈಟೆಡ್ ದೇಶಗಳ ಪ್ರಕಾರ, ನಾವು ವಾರ್ಷಿಕವಾಗಿ 300 ದಶಲಕ್ಷ ಟನ್ ಪ್ಲಾಸ್ಟಿಕ್ ಕಸವನ್ನು ಉತ್ಪಾದಿಸುತ್ತೇವೆ. ಇದು ನಮ್ಮ ಜಲಮೂಲಗಳನ್ನು ಕಲುಷಿತಗೊಳಿಸುವುದಲ್ಲದೆ, ನಮ್ಮ ಆಹಾರವನ್ನೂ ಸಹ ಕಲುಷಿತಗೊಳಿಸುತ್ತದೆ.
ಪ್ಲಾಸ್ಟಿಕ್ ನ ಅಪಾಯವನ್ನು ನಿಗ್ರಹಿಸಲು ಮತ್ತು ಪ್ಲಾಸ್ಟಿಕ್ ಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು, ಪ್ಲಾಸ್ಟಿಕ್ ನ ಪರ್ಯಾಯಕ್ಕಾಗಿ ವಿಶ್ವಾದ್ಯಂತ ಅನೇಕ ತಜ್ಞರು ಮತ್ತು ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ. ಅವುಗಳಲ್ಲಿ ಐಐಟಿ-ಮದ್ರಾಸ್‌ನ ಒಂದು ತಂಡವು ಹಲವಾರು ರೀತಿಯ ಪ್ಲಾಸ್ಟಿಕ್ ಗಳಾದ ಟೆಫ್ಲಾನ್, ಪಾಲಿಥಿಲೀನ್ ಮತ್ತು ಪಾಲಿಪ್ರೊಪಿಲೀನ್ ಗಳನ್ನು ವಿಘಟನೆಗೊಳಿಸುವಂತಹ ಮಾರ್ಗವೊಂದನ್ನು ಕಂಡುಹಿಡಿದಿದೆ.
ಒಂದು ನಿರ್ದಿಷ್ಟ ಉದಾಹರಣೆಯನ್ನು ನೀಡುವುದಾದರೆ, ತಂಡವು ರಾಸಾಯನಿಕವಾಗಿ ಚಟುವಟಿಕೆಯಲ್ಲಿಲ್ಲದ ಮತ್ತು ದೈಹಿಕವಾಗಿ ಸ್ಥಿರವಾದ ಪ್ಲಾಸ್ಟಿಕ್ ಫ್ಲೋರೊಪಾಲಿಮರ್ ಪಾಲಿಟೆಟ್ರಾಫ್ಲೋರೋಎಥಿಲೀನ್ (ಪಿಟಿಎಫ್‌ಇ) ವಿಘಟನೆಗೊಳಿಸಿ ಅದರಿಂದ ಟೆಫ್ಲಾನ್ ಅನ್ನು ಪರಿಸರ ಸ್ನೇಹಿ ರೀತಿಯಲ್ಲಿ ತಯಾರಿಸಿದೆ.
ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ನ ಪ್ರಕಾರ, ಪ್ಲಾಸ್ಟಿಕ್ ವಿಘಟನಾ ಪ್ರಕ್ರಿಯೆಯು ಲೋಹಗಳು, ಗ್ಲೂಕೋಸ್ ಮತ್ತು ಟೆಫ್ಲಾನ್ ಮತ್ತು ಇತರ ಸಕ್ಕರೆಗಳೊಂದಿಗೆ ಲೇಪನ ಮಾಡಿದ ಮ್ಯಾಗ್ನೆಟಿಕ್ ಸ್ಟಿರರ್ ಸಾಧನವನ್ನು ಒಳಗೊಂಡಿರುವ ವೈಜ್ಞಾನಿಕ ಪ್ರಕ್ರಿಯೆಯ ನಂತರ ನಂತರ ಯಶಸ್ವಿಯಾಗಿದೆ.
ಐಐಟಿ-ಮದ್ರಾಸ್‌ನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಟಿ ಪ್ರದೀಪ್, ದಿ ಹಿಂದೂ ಜೊತೆ ಮಾತನಾಡಿದಾಗ ಹೇಳಿದ್ದು,
“ನಾವು ಈಗ ಇದನ್ನು ಪಾಲಿಇಥಿಲೀನ್ ಮತ್ತು ಪಾಲಿಇಥಿಲೀನ್ ಟೆರೆಫ್ಥಲೇಟ್ (ಪಿಇಟಿ) ಮೇಲೆ ಪರೀಕ್ಷಿಸಿದ್ದೇವೆ ಮತ್ತು ಒಂದೇ ರೀತಿಯ ಫಲಿತಾಂಶಗಳನ್ನು ಪಡೆದುಕೊಂಡಿದ್ದೇವೆ. ಕೇಂದ್ರಿಕರಿಸಲ್ಪಟ್ಟ ಕರಗಿದ ಗ್ಲೂಕೋಸ್, ಪಿಟಿಎಫ್‌ಇಗೆ ಹೋಲಿಸಿದರೆ ಟ್ರೈಬೊಎಲೆಕ್ಟ್ರಿಕ್ ಚಾರ್ಜ್‌ನ ಉತ್ಪಾದನೆಯು ಕಡಿಮೆ ಇರುವುದರಿಂದ ಪ್ರತಿಕ್ರಿಯೆ ನಿಧಾನವಾಗಿರುತ್ತದೆ.”
ಈ ಪ್ರಕ್ರಿಯೆಯಲ್ಲಿ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಮಾರು 15 ದಿನಗಳವರೆಗೆ 1,000 ಪಿಪಿಎಂ (ಪಾರ್ಟ್ಸ್ ಪರ್ ಮಿಲಿಯನ್) ಗ್ಲೂಕೋಸ್ ಮತ್ತು ಲೋಹದ ಅಯಾನುಗಳನ್ನು ಹೊಂದಿರುವ ನೀರಿನಲ್ಲಿ ಫ್ಲೋರೊಪಾಲಿಮರ್ ಅನ್ನು ನಿರಂತರವಾಗಿ ಕಲುಕಲಾಗುತ್ತದೆ. ಅದೇ ವಿಧಾನವು ಪಾಲಿಪ್ರೊಪಿಲೀನ್ ಅನ್ನು ವಿಘಟನೆಗೊಳಿಸುವುದಕ್ಕೆ ತಂಡಕ್ಕೆ ಸಹಾಯವಾಯಿತು.
ಪ್ರದೀಪ್ ರವರು ಹೇಳಿದ್ದು,
“ಕೆಲವು ದಿನಗಳ ನಂತರ, ನಾವು ಪ್ರಕಾಶಮಾನವಾದ ಕೆಂಪು ಬೆಳಕಿನೊಂದಿಗೆ ಮೇಲ್ಮೈಯಲ್ಲಿ ತೇಲುತ್ತಿರುವ ಸಣ್ಣ ತುಣುಕುಗಳ ಗಮನಾರ್ಹ ವಿಷಯವನ್ನು ಕಂಡುಕೊಂಡಿದ್ದೇವೆ.”
ಪ್ರಕ್ರಿಯೆ
ಇನ್ಸ್ಟಿಟ್ಯೂಟ್ ನ ತಂಡವು ಟೆಫ್ಲಾನ್ ಅನ್ನು ಉಂಡೆಗಳು, ಟೇಪ್ಗಳು ಮತ್ತು ಫಲಕಗಳಿಂದ ಹಿಡಿದು ವಿವಿಧ ರೀತಿಗಳಲ್ಲಿ ಪರೀಕ್ಷಿಸಿದೆ ನಂತರ ಟೆಫ್ಲಾನ್ ಬೀಕರ್ ಬಳಸಿ ಪ್ರಯೋಗವನ್ನು ಪುನರಾವರ್ತಿಸಿದೆ. ಈ ಎಲ್ಲಾ ಪ್ರಯೋಗಗಳ ಫಲಿತಾಂಶಗಳು ಒಂದೇ ಆಗಿದೆ, ಆದರೆ ಚಿನ್ನದ ಬದಲಾಗಿ ತಾಮ್ರ, ಬೆಳ್ಳಿ ಮತ್ತು ಕಬ್ಬಿಣವನ್ನು ಬಳಸಿದಾಗ ಅದು ಕೆಂಪು ಬಣ್ಣವನ್ನು ತೋರಿಸಲಿಲ್ಲ.
ಪ್ರದೀಪ ಹೇಳುತ್ತಾರೆ,
"ನಂತರ ನಮಗೆ ಪಿಟಿಎಫ್ಇ ಪಾಲಿಮರ್ ಟ್ರೈಬೊಎಲೆಕ್ಟ್ರಿಕ್ ವಿಘಟನೆಯ ಮೂಲಕ ಅಣುಗಳಾಗಿ ವಿಭಜನೆಯಾಗಬಹುದು ಎಂಬ ಸುಳಿವು ಸಿಕ್ಕಿತು. ಪಾಲಿಮರನ್ನು ನಿರಂತರವಾಗಿ ನೀರಿನಲ್ಲಿ ಕಲಕುವಾಗ ಟೆಫ್ಲಾನ್ ಮತ್ತು ನೀರಿನ ಸಂಪರ್ಕದಲ್ಲಿ ವಿದ್ಯುತ್ ಸಾಮರ್ಥ್ಯವು ಉತ್ಪತ್ತಿಯಾಗುತ್ತದೆ.”
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.