ಐಐಟಿ ಗುವಾಹಟಿಯ ವಿಜ್ಞಾನಿಗಳು ಮುಗಾ ರೇಷ್ಮೆ ಬಳಸಿ 3ಡಿ ಮುದ್ರಿತ ಮಾನವ ಅಂಗಾಂಗಗಳನ್ನು ರಚಿಸುತ್ತಿದ್ದಾರೆ
ಮುಗಾ ರೇಷ್ಮೆಯ ಫ್ರೋಟಿನ್‌ನ ಜೈವಿಕ ಶಾಯಿಯನ್ನು ಬಳಸಿ ಸಿದ್ಧಪಡಿಸಿದ 3ಡಿ ಮುದ್ರಿತ ಅಂಗಾಂಗವು ಕಾಲಜನ್‌ನಿಂದ ತಯಾರಿಸಿದ 3ಡಿ ಮುದ್ರಣಕ್ಕೆ ಹೋಲಿಸಿದರೆ ಕೈಗೆಟಕುವ ಬೆಲೆಯಲ್ಲಿ ಸಿಗುತ್ತದೆ.
ಭಾರತದಂತಹ ದೇಶಗಳಲ್ಲಿ 3ಡಿ ಮುದ್ರಣಗಳಂತಹ ಮಾನವ ಅಂಗಗಳ ಮತ್ತು ಅಂಗಾಂಶಗಳ ಸುಧಾರಿತ ಮತ್ತು ಕೈಗೆಟಕುವ ವೈದ್ಯಕೀಯ ವೆಚ್ಚದ ಆರೋಗ್ಯ ರಕ್ಷಣೆಯ ಪರಿಹಾರಗಳು ಲಭ್ಯವಿರುವುದು ಒಂದು ಪ್ರಮುಖ ವಿಷಯವಾಗಿದೆ.
ಭಾರತದಲ್ಲಿ ಪ್ರತಿ ಸಾವಿರ ನಾಗರಿಕರಿಗೆ 0.7 ವೈದ್ಯರು ಮತ್ತು 1.1 ಬೆಡ್‌ಗಳು ಮಾತ್ರ ಇವೆ. ಕೊರತೆಯನ್ನು ನೀಗಿಸಲು ಮತ್ತು ಆರೋಗ್ಯ ಸೇವೆಯ ಅನುಕೂಲತೆಗಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಪರಿಹಾರಗಳನ್ನು ಪೂರೈಸಲು ಪ್ರಯತ್ನಿಸುತ್ತಿವೆ.
ಉದಾಹರಣೆಗೆ, ಆಯುಶ್ಮಾನ್ ಭಾರತ್ ಮತ್ತು ದೆಹಲಿ ಸರ್ಕಾರದ ಮೊಹಲ್ಲಾ ಕ್ಲೀನಿಕ್‌ಗಳು ಕೈಗೆಟಕುವ ದರದಲ್ಲಿ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲು ಈಗಾಗಲೇ ಪ್ರಾರಂಭಿಸಿವೆ. ಆದರೆ ಇನ್ನೂ ಹೆಚ್ಚಿನ ಅವಶ್ಯಕತೆ ಇದೆ.
ಮುಗಾ ರೇಷ್ಮೆಯ ಪ್ರೋಟೀನ್‌ಗಳನ್ನು ಬಳಸಿ, ಐಐಟಿ ಗುವಾಹಟಿ ಈಗಾಗಲೇ ಸಂಶೋಧನೆಯನ್ನು ಪ್ರಾರಂಭಿಸಿ ಜೀವಂತ ಕೋಶಗಳ ಜೈವಿಕ ಶಾಯಿಯನ್ನು ಯಶಸ್ವಿಯಾಗಿ ಸಿದ್ಧಪಡಿಸಿದೆ. ಜೀವಂತ ಕೋಶಗಳಿಂದ ಬೆಸೆದಿರುವ ಜೈವಿಕ ಶಾಯಿಯನ್ನು ಅಂಗಾಂಶಗಳು, ಇಂಪ್ಲಾಂಟ್‌ಗಳು, ನಂತರ ಸಾಧ್ಯವಾದರೆ ಅಂಗಾಂಗಗಳನ್ನು 3ಡಿ ಮುದ್ರಣಕ್ಕಾಗಿ ಕಡಿಮೆ ವೆಚ್ಚದಲ್ಲಿ ಬಳಸಲಾಗುತ್ತದೆ
ಐಐಟಿ ಗುವಾಹಟಿಯ ಜೈವಿಕ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊಫೆಸರ್ ಬಿಮನ್ ಬಿ ಮಂಡಲ್ ಅವರ ಪ್ರಕಾರ, ಕಾಲಜನ್ ಹೊಂದಿರುವ ಅಂಗಗಳ ಸಾಂಪ್ರದಾಯಿಕ 3ಡಿ ಮುದ್ರಣಕ್ಕೆ 10,000 ರೂ, ತಗಲಿದರೆ 10 ಗ್ರಾಂ ರೇಷ್ಮೆಯ ಮುದ್ರಣಕ್ಕೆ, ನಿಮಗೆ ಕೇವಲ 2 ರೂ ವೆಚ್ಚ ತಗಲುತ್ತದೆ.
ಈಗ, ರೋಗಿಗೆ ಕೃತಕ ಅಂಗಾಂಗಗಳ ಅಗತ್ಯವಿದ್ದರೆ, ಜೈವಿಕ ಶಾಯಿಯನ್ನು ರೋಗಿಯ ಕಾಂಡಕೋಶಗಳೊಂದಿಗೆ ಸಂಯೋಜಿಸಲಾಗುತ್ತದೆ. ನಂತರ ಜೈವಿಕ ಶಾಯಿಯ ಮೂಲಕ ಜೈವಿಕ ಅಂಗಾಶಗಳನ್ನು 3ಡಿ ಮುದ್ರಣಗೊಳಿಸಲಾಗುತ್ತದೆ. ಕೃತಕ ಅಂಗಾಂಶಗಳನ್ನು ಮುದ್ರಿಸಿದ ನಂತರ, ಹಾನಿಗೊಳಗಾದ ದೇಹದ ಭಾಗಗಳನ್ನು ಬದಲಿಸುವ ಮೊದಲು ಅವುಗಳನ್ನು ಪ್ರಬುದ್ಧವಾಗಿಸಲು ಪ್ರಯೋಗಾಲಯದಲ್ಲಿ ಇಡಲಾಗುತ್ತದೆ.
ಬಿಮನ್ ಬಿ ಮಂಡಲ್ ನೇತೃತ್ವದ ಸಂಶೋಧನಾ ತಂಡವು ಐಐಟಿ ಗುಹಾವಟಿಯ ಅಂಗಾಂಶ ಎಂಜಿನಿಯರಿಂಗ್ ಪ್ರಯೋಗಾಲಯದಲ್ಲಿ ಈಗ ಸದ್ಯದ ಮಟ್ಟಿಗೆ ರೇಷ್ಮೆ ಪ್ರೋಟಿನ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಅವರು ಮಾನವ ಅಂಗಾಂಶಗಳು ಮತ್ತು ಮೃದು ಎಲಬುಗಳ ಜೈವಿಕ ರಚನೆಯನ್ನು ಪುನರಾವರ್ತಿಸುವಂತಹ ಕೃತಕ ಸಾಧನ ತಯಾರಿಸಲು ಪ್ರಯತ್ನಿಸುತ್ತಿದ್ದಾರೆಂದು ದಿ ಪ್ರಿಂಟ್ ವರದಿ ಮಾಡಿದೆ.
ಮ್ಯಾನುಫೆಕ್ಚರ್ 3ಡಿ ನಿಯತಕಾಲಿಕೆಯೊಂದಿಗೆ ಮುಗಾ ರೇಷ್ಮೆಯ ಉಪಯೋಗದ ಕುರಿತು ಮಾತನಾಡಿತ್ತಾ ಬಿಮನ್‌ರವರು ಹೀಗೆ ಹೇಳುತ್ತಾರೆ,
ಒಮ್ಮೆ ಅಳವಡಿಸಿದ ನಂತರ, 3ಡಿ ಮುದ್ರಿತ ಪ್ಯಾಚ್‌ನಲ್ಲಿನ ಕೋಶಗಳು ಬೆಳೆದು ವೃದ್ಧಿಯಾಗುತ್ತವೆ, ಈ ವೇಳೆಯಲ್ಲಿ ರೇಷ್ಮೆ ಪ್ರೋಟೀನ್‌ಗಳು ಅಮೈನೊ ಆಮ್ಲಗಳಾಗಿ ಕುಸಿದು - ಅಂಗದ ಹಾನಿಗೊಳಗಾದ ಭಾಗವು ಮತ್ತೆ ಬೆಳೆಯಲು ಜಾಗವನ್ನು ನೀಡುತ್ತದೆ.
ಮುಂದುವರಿದು ಹೀಗೆ ಹೇಳುತ್ತಾರೆ,
"ಈ ವಿಧಾನವು ಕೃತಕ ಸಾಧನವನ್ನು ತೆಗೆದು ಹಾಕಲು ಹೆಚ್ಚುವರಿ ಶಸ್ತ್ರ ಚಿಕಿತ್ಸೆಯ ಅಗತ್ಯವನ್ನು ದೂರು ಮಾಡುತ್ತದೆ. ನೀವು 3ಡಿ ಮುದ್ರಣ ಅಥವಾ ಜೈವಿಕ ಮುದ್ರಣವನ್ನು ಬಳಸುವಾಗ ಜೈವಿಕ ಶಾಯಿಯು ನಿರ್ಧಿಷ್ಟ ಗುಣ ಲಕ್ಷಣವನ್ನು ಹೊಂದಿರಬೇಕು. ಜೈವಿಕ ಶಾಯಿ ಸಿದ್ಧಪಡಿಸಲು ದ್ರವ ರೇಷ್ಮೆ ಬಳಸಲಾಗುತ್ತದೆ. ರೇಷ್ಮೆ ನಾರುಗಳನ್ನು ಸೂಕ್ತ ದ್ರಾವಕಗಳಾಗಿ ಕರಗಿಸುವ ಮೂಲಕ ಅಥವಾ ರೇಷ್ಮೆ ಹುಳದ ಗ್ರಂಥಿಗಳಿಂದ ನೇರವಾಗಿ ಹೊರತೆಗೆಯುವ ಮೂಲಕ ಇದನ್ನು ಪಡೆಯಬಹುದು."