ರಾಷ್ಟ್ರೀಯ ಮಟ್ಟದಲ್ಲಿ ನೇಕಾರರ ಜಾಲವನ್ನು ಕಟ್ಟುತ್ತಿರುವ ಭಾಷಾಭಾರತ್ ಈಕಾಮರ್ಸ್ ವೇದಿಕೆ
ಭಾಗಲ್ಪುರದಲ್ಲಿದಲ್ಲಿ 2017 ರಲ್ಲಿ ಪ್ರಾರಂಭವಾದ ಭಾಷಾಭಾರತ್ ಬಿಹಾರ ಮೂಲದ ಸಾಂಪ್ರದಾಯಿಕ ಜವಳಿ ಹಾಗೂ ನೇಕಾರರು ವಿನ್ಯಾಸಗೊಳಿಸಿದ ಕರಕುಶಲ ವಸ್ತುಗಳು ಹಾಗೂ ಜವಳಿಯನ್ನು ಜನಪ್ರಿಯಗೊಳಿಸುವತ್ತ ಕೆಲಸ ಮಾಡುತ್ತಿದೆ.
ಇತ್ತೀಚೆಗೆ, ಬಾಲಿವುಡ್ ನಟಿ ಕಂಗನಾ ರನೌತ್ ಸರಳ ಜೈಪುರ ಕಾಟನ್ ಸೀರೆಯುಟ್ಟು ವಿಮಾನದಲ್ಲಿ ಪ್ರಯಾಣಿಸಿ ಎಲ್ಲರ ಗಮನ ಸೆಳೆದರು. ವಿಮಾನ ನಿಲ್ದಾಣಕ್ಕೆ ಯಾರು ಸೀರೆ ಧರಿಸುತ್ತಾರೆ ಎಂದು ಹಲವರು ಹೇಳಬಹುದಾದರೂ, ಆದರೆ ಇದರಲ್ಲಿ ಭಾರತೀಯ ನೇಯ್ಗೆ ಮತ್ತು ಮಗ್ಗಗಳ ಬಗ್ಗೆ ವಿಶಿಷ್ಟವಾದ ಮತ್ತು ವಿಭಿನ್ನವಾದ ಕೊಡುಗೆ ಖಂಡಿತವಾಗಿಯೂ ಇದೆ.
ಈಗ ಹಲವು ದಶಕಗಳಿಂದ, ಭಾರತೀಯ ಕೈಮಗ್ಗಗಳು ಶ್ರೀಮಂತಿಕೆ, ಉತ್ಕೃಷ್ಟತೆ ಮತ್ತು ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಕೈಮಗ್ಗಗಳು ದೇಶದ ಅತಿದೊಡ್ಡ ಕಾಟೇಜ್ ಉದ್ಯಮವನ್ನು ರೂಪಿಸುತ್ತವೆ, ಮತ್ತಿದು ಲಕ್ಷಾಂತರ ಕುಟುಂಬಗಳಿಗೆ ಜೀವನೋಪಾಯವನ್ನು ಒದಗಿಸುತ್ತದೆ. ಆದರೂ, ಈಗ ಸಾಂಪ್ರದಾಯಿಕ ನೇಯ್ಗೆ ಮತ್ತು ಮುದ್ರಣಗಳು ದೇಶಾದ್ಯಂತ ಗ್ರಾಹಕರಿಗೆ ಸುಲಭವಾಗಿ ಲಭ್ಯವಿಲ್ಲ.
ಇದನ್ನು ಬದಲಾಯಿಸುವುದಕ್ಕಾಗಿಯೇ ಶಶಾಂಕ್ ಕುಮಾರ್ ಪಾಂಡೆ (31) ಮತ್ತು ಭಾವನಾ ಮಿಶ್ರಾ (50) ಅವರು 2017 ರಲ್ಲಿ ದೇಶದ ರೇಷ್ಮೆ ರಾಜಧಾನಿ - ಬಿಹಾರದ ಭಾಗಲ್ಪುರದಲ್ಲಿ ಭಾಷಾಭಾರತ್ ಅನ್ನು ಪ್ರಾರಂಭಿಸಿದರು. ಇದು ಆನ್ಲೈನ್ ಪ್ಲಾಟ್ಫಾರ್ಮ್ ಆಗಿದ್ದು, ಭಾರತದ ವಿವಿಧ ಭಾಗಗಳಿಂದ ನೇಕಾರರು ಮತ್ತು ಕುಶಲಕರ್ಮಿಗಳು ಮಾಡಿದ ಸಾಂಪ್ರದಾಯಿಕ ಕೈಮಗ್ಗದ ಉತ್ಪನ್ನಗಳನ್ನು ಮತ್ತು ಕರಕುಶಲ ವಸ್ತುಗಳನ್ನು ಉತ್ತೇಜಿಸುತ್ತದೆ ಮತ್ತು ಮಾರಾಟ ಮಾಡುತ್ತದೆ.
"ಭಾಗಲ್ಪುರ್ ರೇಷ್ಮೆ ಮತ್ತು ಜವಳಿಗಳಿಗೆ ಹೆಸರುವಾಸಿಯಾಗಿದೆ. ನಗರದಲ್ಲಿ ಹುಟ್ಟಿ ಬೆಳೆದ ನನಗೆ ಬಿಹಾರದಾದ್ಯಂತ ಲಭ್ಯವಿರುವ ರೀತಿಯ ಕೆಲಸ ಮತ್ತು ಕರಕುಶಲತೆ ನನಗೆ ತಿಳಿದಿತ್ತು. ಆದರೆ ಇನ್ನೂ, ಇವುಗಳು ಅಪಾರ ಸಂಖ್ಯೆಯ ಜನರನ್ನು ತಲುಪಿಲ್ಲ,” ಎಂದು ಶಶಾಂಕ್ ಹೇಳುತ್ತಾರೆ.
ಪ್ಲಾಟ್ಫಾರ್ಮ್ ಸೀರೆಗಳು, ದುಪಟ್ಟಾಗಳು, ಕುರ್ತಿಗಳು ಮತ್ತು ಜಾಕೆಟ್ಗಳು ಸೇರಿದಂತೆ ಹಲವಾರು ಉಡುಪುಗಳನ್ನು ನೀಡುತ್ತದೆ ಮತ್ತು ಗೊಂಡ್ ಆರ್ಟ್ ಪೇಂಟಿಂಗ್ಗಳಂತಹ ಮನೆಯ ಅಲಂಕಾರಿಕ ವಸ್ತುಗಳನ್ನು ಸಹ ಮಾರಾಟ ಮಾಡುತ್ತದೆ.
ಪ್ರಸ್ತುತ, ಈ ಸಂಸ್ಥೆ ತಿಂಗಳಿಗೆ ಸರಾಸರಿ 100 ಕ್ಕೂ ಹೆಚ್ಚು ಸೀರೆಗಳನ್ನು ಮಾರಾಟ ಮಾಡುತ್ತದೆ. ಇದು ಋತುವಿನ ಮೇಲೆ ಅವಲಂಬಿತವಾಗಿದೆ ಈ ಸೀಸನ್ ಗೆ ಸಂಬಂದಿಸಿದಂತೆ 50 ರಿಂದ 100 ಸೀರೆಗಳವರೆಗೆ ಲಭ್ಯವಿದೆ ಎಂದು ಶಶಾಂಕ್ ಹೇಳುತ್ತಾರೆ.
ಅಸಂಘಟಿತ ವಲಯದಲ್ಲಿ ಜವಳಿ ಉದ್ಯಮ
ಜವಳಿ ವ್ಯವಹಾರವನ್ನು ಹೊಂದಿರುವ ಕುಟುಂಬದಿಂದ ಬಂದ ಶಶಾಂಕ್ ಅವರು ತಮ್ಮ ಜೀವನದ ಬಹುಪಾಲನ್ನು ಕುಟುಂಬ ವ್ಯವಹಾರದಲ್ಲೆ ಕಳೆದಿದ್ದಾರೆ.
ವಿಭಿನ್ನ ನೇಕಾರರೊಂದಿಗಿನ ಅವರ ಸಂವಾದದ ಸಮಯದಲ್ಲಿ, ಅವರು, ಈ ಉದ್ಯಮವು ಅಸಂಘಟಿತವಾಗಿದೆ ಮತ್ತು ಅದನ್ನು ಭೇದಿಸುವುದು ಕಷ್ಟ ಎಂದು ಅವರು ಅರಿತುಕೊಂಡರು.
“ಅನೇಕ ನೇಕಾರರು ತಮ್ಮ ಸಾಂಪ್ರದಾಯಿಕ ಕಲೆಯನ್ನು ತೊರೆದು ಇತರ ಜೀವನೋಪಾಯವನ್ನು ನೋಡುತ್ತಿದ್ದರು. ಅಲ್ಲದೆ, ಮಾರುಕಟ್ಟೆಯು ಹೆಚ್ಚು ಅಸಂಘಟಿತವಾಗಿದೆ ಮತ್ತು ಈ ನೇಕಾರರಿಗೆ ಸಿಗಬೇಕಾದ ಬಹುಪಾಲನ್ನು ಮಧ್ಯವರ್ತಿಗಳಿಂದ ತೆಗೆದುಕೊಳ್ಳುತ್ತಾರೆ. ಆಗ ನಾನು ಭಾಗಲ್ಪಪುರ್ದಲ್ಲಿ ಭಾಷಾಭಾರತ್ ಅನ್ನು ಪ್ರಾರಂಭಿಸಲು ನಿರ್ಧರಿಸಿದೆ,” ಎಂದು ಶಶಾಂಕ್ ಹೇಳುತ್ತಾರೆ.
ಮೊದಲಿಗೆ, ಈ ಸಂಸ್ಥೆ ಲೆನಿನ್ ಸೀರೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು,ಈಗ ಬನಾರಸ್ ರೇಷ್ಮೆಗಳನ್ನು ಸಹ ಮಾರಲಿದೆ. ಸೀರೆಗಳನ್ನು ನೇಕಾರರಿಂದ ಪಡೆಯಲಾಗುತ್ತದೆ, ಅದರ ಮೇಲೆ ವಿವಿಧ ರೀತಿಯ ಮುದ್ರಣಗಳನ್ನು ಮಾಡಲಾಗುತ್ತದೆ.
"ನಮ್ಮಲ್ಲಿ ಸಾಂಪ್ರದಾಯಿಕ ಮಧುಬಾನಿ ಮತ್ತು ಗೊಂಡ್ ಮುದ್ರಣಗಳಿವೆ, ಮತ್ತು ಈಗ ಮುಂಬೈ ಮತ್ತು ದೆಹಲಿಯಿಂದ ಹೆಚ್ಚು ಆಧುನಿಕ ಡಿಜಿಟಲ್ ಮುದ್ರಣವನ್ನು ಮಾಡಲಾಗುತ್ತಿದೆ," ಎಂದು ಶಶಾಂಕ್ ಹೇಳುತ್ತಾರೆ.
ಪ್ರಸ್ತುತ, ಭಾಷಾಭಾರತ್ ಭಾಗಲ್ಪುರ್ ಮತ್ತು ರಾಜಸ್ಥಾನದಲ್ಲಿ ಒಟ್ಟು 20 ನೇಕಾರರೊಂದಿಗೆ ಈ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಈ ವರ್ಷದ ಅಂತ್ಯದ ವೇಳೆಗೆ ಕನಿಷ್ಠ 100 ನೇಕಾರರನ್ನು ಹೊಂದಲು ಬಯಿಸಿದೆ.
ಭಾಷಾಭಾರತ್ ತಂಡವನ್ನು ಕಟ್ಟುವುದು
ಇದು, ಶಶಾಂಕ್ ಅವರ ಮೊದಲ ಉದ್ಯಮವಲ್ಲ. 2015 ಮತ್ತು 2017 ರ ನಡುವೆ, ಅವರು ಇಕಾಮರ್ಸ್ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ದೆಹಲಿ-ಎನ್ಸಿಆರ್ಗೆ ತೆರಳಿದ್ದರು, ಹಲವಾರು ಇತರ ವ್ಯವಹಾರಗಳಲ್ಲಿ ತಮ್ಮ ಕೈಗಳನ್ನು ಪ್ರಯತ್ನಿಸಿದರು. ಆದರೆ ಅದರಿಂದ ಅವರು ತೃಪ್ತರಾಗಲಿಲ್ಲ.
"ದೆಹಲಿ-ಎನ್ಸಿಆರ್ ದೊಡ್ಡ ನಗರವಾಗಿದ್ದರೂ, ಸಣ್ಣ ಪಟ್ಟಣದಿಂದ ಯಾರಿಗಾದರೂ ಆರಂಭಿಕ ವ್ಯವಹಾರವನ್ನು ಸ್ಥಾಪಿಸುವುದು ಕಷ್ಟ. ಹಣಕಾಸು ಮತ್ತು ಬಂಡವಾಳದ ಕೊರತೆ ಇದೆ, ಮತ್ತು ಎಲ್ಲವೂ ದುಬಾರಿಯಾಗುತ್ತದೆ. ಆದ್ದರಿಂದ, ಭಾಷಾಭಾರತ್ನ ಕಲ್ಪನೆಯನ್ನು ನಾವು ಪಡೆದಾಗ, ಅದನ್ನು ಉತ್ಪನ್ನದ ಮುಖ್ಯ ಮೂಲವಾದ ಪ್ರದೇಶದಿಂದ ಪ್ರಾರಂಭಿಸುವುದು ಉತ್ತಮ ಎಂದು ನಾವು ಭಾವಿಸಿದ್ದೇವೆ,” ಎಂದು ಅವರು ಹೇಳುತ್ತಾರೆ.
ಅವರು ಆನ್ಲೈನ್ನಲ್ಲಿ ಸಂಶೋಧನೆ ನಡೆಸುತ್ತಿದ್ದಾಗ ಮತ್ತು ವಿನ್ಯಾಸಕಾರರಿಗಾಗಿ ವಿವಿಧ ಸಾಮಾಜಿಕ ಮಾಧ್ಯಮ ತಾಣಗಳನ್ನು ನೋಡುತ್ತಿದ್ದಾಗ ಅವರು ತಮ್ಮ ಸಹ ಸಂಸ್ಥಾಪಕಿ ಭಾವನಾ ಮಿಶ್ರಾ ಅವರನ್ನು ಫೇಸ್ಬುಕ್ನಲ್ಲಿ ಭೇಟಿಯಾದರು. ಗೃಹಿಣಿ, ಭಾವನಾ ಸಹ ಡಿಸೈನರ್ ಆಗಿದ್ದರು ಮತ್ತು ಅವರ ಕೆಲವು ವಿನ್ಯಾಸಗಳನ್ನು ಸಾಮಾಜಿಕ ಮಾಧ್ಯಮ ಸೈಟ್ನಲ್ಲಿ ಪೋಸ್ಟ್ ಮಾಡಿದ್ದರು.
ಈ ಹಿನ್ನಲೆಯಲ್ಲಿ ಇವರಿಬ್ಬರು ಮಾತುಕತೆ ನಡೆಸಿದರು, ಮತ್ತು ಅವರು ಶಶಾಂಕ್ ಅವರ ಜೊತೆ ಸಹ-ಸಂಸ್ಥಾಪಕರಾಗಿ ಸೇರಲು ನಿರ್ಧರಿಸಿದರು. ಇಂದು, ತಂಡದಲ್ಲಿ ಐದು ಸದಸ್ಯರಿದ್ದಾರೆ. ಏತನ್ಮಧ್ಯೆ, ಭಾವನಾ ಪತಿ ಎಪಿ ಮಿಶ್ರಾ ಅವರು ವ್ಯವಹಾರಕ್ಕೆ ಸಹಾಯ ಮಾಡಲು ಸಂಚಿತ ನಿಧಿಯನ್ನು ಹೂಡಿಕೆ ಮಾಡಿದರು.
ವೆಬ್ಸೈಟ್ ಕಾರ್ಯನಿರ್ವಹಣೆ ತಾಂತ್ರಿಕ ವಿಷಯವಾಗಿದ್ದು, ವೆಬ್ಸೈಟ್ ಮತ್ತು ಬ್ಯಾಕೆಂಡ್ ಕಾರ್ಯಾಚರಣೆಗಳನ್ನು ನಿರ್ಮಿಸಲು ಇವರಿಬ್ಬರು ಸ್ವತಂತ್ರ ಟೆಕ್ಕಿಗಳನ್ನು ನೇಮಿಸಿಕೊಂಡರು. "ವೆಬ್ಸೈಟ್ ಚಾಲನೆಯಲ್ಲಿರುವಾಗ, ನಾವು ಮೊದಲು ಮಾರುಕಟ್ಟೆಯ ಅನುಭವವನ್ನು ಪಡೆಯಲು ಬಯಸಿದ್ದೇವೆ, ಆದ್ದರಿಂದ ನಾವು ಹಲವಾರು ಪ್ರದರ್ಶನಗಳು ಮತ್ತು ಆಫ್-ರೋಡ್ ಪ್ರದರ್ಶನಗಳಲ್ಲಿ ಭಾಗವಹಿಸಿದ್ದೇವೆ," ಎಂದು ಶಶಾಂಕ್ ಹೇಳುತ್ತಾರೆ.
ಲಾಜಿಸ್ಟಿಕ್ಸ್ ಚಾಲನೆಯಲ್ಲಿರುವ ಮತ್ತು ಕಾರ್ಯಾಚರಣೆಗಳನ್ನು ಪರಿಪೂರ್ಣಗೊಳಿಸಲು, ಗ್ರಾಹಕರು ಏನು ಬಯಸುತ್ತಾರೆ ಮತ್ತು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಉತ್ತಮ ಸಾಧನ ಎಂದು ಅವರು ಹೇಳುತ್ತಾರೆ. ಈ ಒಂದು ಪ್ರದರ್ಶನದ ಮೂಲಕವೇ ನಟಿ ಪದ್ಮಿನಿ ಕೊಲ್ಹಾಪುರೆ ಅವರ ನೇಯ್ಗೆ ಬಟ್ಟೆಗಳನ್ನು ಖರೀದಿಸಿ ಪ್ರೋತ್ಸಾಹ ನೀಡಿದರು.
ಗಳಿಕೆ ಉಳಿಕೆಯ ಸುತ್ತ
ಸರ್ಕಾರದ ವರದಿಗಳ ಪ್ರಕಾರ, ಭಾರತದಲ್ಲಿ ಸೀರೆ ಮಾರುಕಟ್ಟೆ 12 ಬಿಲಿಯನ್ ಡಾಲರ್ ಆಗಿದೆ, ಮತ್ತು ಇದು ಉಡುಪು ಮತ್ತು ಮನೆಯ ಜವಳಿಗಳ ಒಟ್ಟು ಬಳಕೆಯ ಮೂರನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತದೆ. ಅಲ್ಲದೆ, ಕೈಮಗ್ಗ, ಕರಕುಶಲ ವಸ್ತುಗಳು ಮತ್ತು ಆಹಾರಕ್ಕೆ ಸಂಬಂಧಿಸಿದ ಅಸಂಘಟಿತ ಮಾರುಕಟ್ಟೆ ಅಂದಾಜು 1.7 ಲಕ್ಷ ಕೋಟಿ ರೂ. ಯನ್ನು ಕೊಡುಗೆಯಾಗಿ ನೀಡುತ್ತದೆ.
ಪ್ರಸ್ತುತ ಭಾಷಾಭಾರತ್ನ ವಾರ್ಷಿಕ ಆದಾಯ 10 ಲಕ್ಷ ರೂ. ಇದು ಆದಾಯದ 20 ಪ್ರತಿಶತವನ್ನು ಉಳಿಸುತ್ತದೆ, ಮತ್ತು ಉಳಿದವನ್ನು ನೇಕಾರರಿಗೆ ನೀಡುತ್ತದೆ. ಸೀರೆಗಳ ಬೆಲೆ 2,500 ರಿಂದ 5,000 ರೂ. ಇದೆ. ಆದರೆ, ಬನಾರಸಿ ಸೀರೆಗಳು 10,000 ರೂ. ಪ್ರಸ್ತುತ ಈ ಸ್ಟಾರ್ಟ್ಆಪ್ ಹೂಪೋ ಆನ್ ಎ ಹಿಲ್ ನಂತಹ ಕಂಪನಿಗಳನ್ನು ಸಹ ಸ್ಪರ್ಧಿಗಳನ್ನಾಗಿ ಹೊಂದಿದೆ.
ಭವಿಷ್ಯದ ಬಗ್ಗೆ ಮಾತನಾಡುತ್ತಾ, ಶಶಾಂಕ್ ಹೇಳುತ್ತಾರೆ, “ನಾವು ಪ್ರಸ್ತುತ ನಮ್ಮ ತಂಡವನ್ನು ಬೆಳೆಸಲು, ಹೆಚ್ಚಿನ ನೇಕಾರರನ್ನು ಸೇರಿಸಲು ಮತ್ತು ಹಣವನ್ನು ಸಂಗ್ರಹಿಸಲು ನೋಡುತ್ತಿದ್ದೇವೆ. ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಬಟ್ಟೆಗಳು ಮತ್ತು ವಿನ್ಯಾಸಗಳನ್ನು ಜನಪ್ರಿಯಗೊಳಿಸುವುದು ನಮ್ಮ ಪ್ರಯತ್ನ. ನಾವು ಶೀಘ್ರದಲ್ಲೇ ವಿವಿಧ ರೀತಿಯ ಬಟ್ಟೆಗಳು ಮತ್ತು ಶೈಲಿಗಳನ್ನು ಸೇರಿಸಲಿದ್ದೇವೆ.”