Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಕಡಿಮೆ-ವೆಚ್ಚದ ಪರಿಹಾರಗಳನ್ನು ನೀಡುತ್ತಿರುವ ಉದ್ಯಮಗಳು

ಕಡಿಮೆ-ವೆಚ್ಚದಲ್ಲಿ ಮೇವನ್ನು ಉತ್ಪಾದಿಸುವವರಿಗೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದರಿಂದ ಸಮರ್ಥ ಕೃಷಿ ಪದ್ಧತಿಗಳನ್ನು ಖಾತ್ರಿಪಡಿಸಿಕೊಳ್ಳುವವರೆಗೆ ಆನ್‌ಲೈನ್ ಪ್ಲಾಟ್‌ಫಾರ್ಮ್ ಗಳಾಗಿ ಈ ಉದ್ಯಮಗಳು ಬಹಳಷ್ಟು ರೀತಿಯಲ್ಲಿ ಕೆಲಸ ಮಾಡುತ್ತಿದೆ.

ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಕಡಿಮೆ-ವೆಚ್ಚದ ಪರಿಹಾರಗಳನ್ನು ನೀಡುತ್ತಿರುವ ಉದ್ಯಮಗಳು

Thursday October 31, 2019 , 4 min Read

ಭಾರತದಾದ್ಯಂತ ಶೇ.60ರಷ್ಟು ಭೂಮಿಯನ್ನು ಸಾಗುವಳಿ ಮಾಡುವ ಮೂಲಕ ದೇಶದ ಜಿಡಿಪಿಗೆ ಶೇ. 18 ರಷ್ಟು ಕೃಷಿ ಕ್ಷೇತ್ರವೊಂದೇ ಕೊಡುಗೆ ನೀಡುತ್ತದೆ. ಭಾರತದ ಆರ್ಥಿಕತೆಯಲ್ಲಿ ಅದರ ಪಾತ್ರ ಮಹತ್ವವಾಗಿದ್ದರೂ, ಕಡಿಮೆ ದರ್ಜೆಯ ಕೃಷಿ ಉಪಕರಣಗಳಿಂದ ಹಿಡಿದು ರಾಸಾಯನಿಕ-ಪ್ರೇರಿತ ಸಾಧನಗಳವರೆಗೆ ಹಾಗೂ ನೀರಿನ ಲಭ್ಯತೆಯ ಕೊರತೆಯಿಂದಾಗಿ ಈ ವಲಯವು ಹಲವು ಸಮಸ್ಯೆಗಳಿಂದ ಕೂಡಿದೆ.


ಕೃಷಿಕ್ಷೇತ್ರಕ್ಕಾಗಿ ಸರ್ಕಾರ ತನ್ನ ಕಾರ್ಯವನ್ನು ನಿರ್ವಹಿಸುತ್ತಿದ್ದರೆ, ಉದ್ಯಮಿಗಳು ಸಹ ಕೃಷಿ ಕ್ಷೇತ್ರಕ್ಕೆ ಪರಿಹಾರವನ್ನು ಒದಗಿಸುವಲ್ಲಿ ಕಾಲಿಟ್ಟಿದ್ದಾರೆ. ಪರಿಣಾಮಕಾರಿ ಯಂತ್ರಗಳಿಂದ ಹಿಡಿದು ಕಡಿಮೆ-ವೆಚ್ಚದ ಸಾವಯವ ಗೊಬ್ಬರಗಳವರೆಗೆ ಕೃಷಿ ಕ್ಷೇತ್ರದಲ್ಲಿ ಕೆಲವು ಉದ್ಯಮಗಳು ಹಲವು ಕೊಡುಗೆಗಳೊಂದಿಗೆ ತಮ್ಮದೇ ಆದ ಛಾಪು ಮೂಡಿಸುತ್ತಿವೆ.


ಆಕ್ಸೆನ್ ಫಾರ್ಮ್ ಸಲ್ಯೂಷನ್

ಕೃಷಿಗೆ ಭೂಮಿಯನ್ನು ಹೊಂದಿದ್ದರೆ ಮಾತ್ರ ಸಾಕಾಗುವುದಿಲ್ಲ. ಜೊತೆಗೆ ಕಾರ್ಮಿಕ ಶಕ್ತಿ, ರಸಗೊಬ್ಬರಗಳು, ಯಂತ್ರೋಪಕರಣಗಳು ಹಾಗೂ ಸಮರ್ಪಕ ನೀರಿನಂತಹ ನೈಸರ್ಗಿಕ ಸಂಪನ್ಮೂಲಗಳು ಬೇಕಾಗುತ್ತವೆ. ಇವುಗಳಲ್ಲಿ, ಕಾರ್ಮಿಕರು ಯಾವಾಗಲೂ ದುಬಾರಿ ಮತ್ತು ಸಮಯ ತೆಗೆದುಕೊಳ್ಳುವ ಅಂಶವಾಗಿದೆ. ಈ ಸಂದಿಗ್ಧತೆಯನ್ನು ಪರಿಹರಿಸಲು, ಪುಣೆ ಮೂಲದ ಆಕ್ಸೆನ್ ಫಾರ್ಮ್ ಸಲ್ಯೂಷನ್ ಉದ್ಯಮವು ದೊಡ್ಡ ಪ್ರಮಾಣದ ಯಾಂತ್ರೀಕರಣದ ಮೂಲಕ ಪರಿಹಾರಗಳನ್ನು ಒದಗಿಸುತ್ತಿದೆ.


ವಿಶ್ವಜಿತ್ ಸಿನ್ಹಾ


ಕಾನ್‌ಪುರದ ಐಐಟಿಯ ಹಳೆಯ ವಿದ್ಯಾರ್ಥಿಯಾದ ವಿಶ್ವಜೀತ್ ಸಿನ್ಹಾ ಅವರು ಸ್ಥಾಪಿಸಿದ ಈ ಉದ್ಯಮವು, ರೈತರಿಗೆ ಓಲಾ ಮತ್ತು ಉಬರ್ ನಂತಹ ಕ್ಯಾಬ್ ಅಗ್ರಿಗೇಟರ್‌ಗಳು ಒದಗಿಸುವ ಸೇವಾ ಮಾದರಿಯಲ್ಲಿ, ಪ್ರತಿ ಬಳಕೆಗೆ ಪಾವತಿಸಿ ಕೃಷಿ ಸೇವೆಯನ್ನು ಪಡೆಯುವ ಮಾದರಿಯಲ್ಲಿ (ಫಾಸ್) ರೈತರಿಗೆ ನಾವೀನ್ಯತೆ ಮತ್ತು ಸುಧಾರಿತ ತಂತ್ರಜ್ಞಾನವನ್ನು ಒದಗಿಸುತ್ತದೆ.


ಸ್ಟಾರ್ಟ್ಅಪ್ ಇಂಟರ್ಫೇಸ್ ಎಂಬ ಮೊಬೈಲ್ ಆಧಾರಿತ ಅಪ್ಲಿಕೇಶನ್‌ನ ಮೂಲಕ, ರೈತರು ತಮ್ಮ ಕೃಷಿ ಬೆಳೆ ಬೆಳೆಯಲು ಬೇಕಾದ ಅವಶ್ಯಕತೆಗಳನ್ನು ತಿಳಿಬಹುದು. ಇದಾದ ನಂತರ ಅಗತ್ಯವಿರುವ ಯಂತ್ರದ ಮಾಲೀಕರು ಈ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ನಂತರ ಕೈಗೆಟುಕುವ ಮತ್ತು ಪಾರದರ್ಶಕ ಬೆಲೆಯಲ್ಲಿ ಯಂತ್ರಗಳ ಮೂಲಕ ರೈತರಿಗೆ ತಮ್ಮ ಸೇವೆಯನ್ನು ಬಾಡಿಗೆಗೆ ನೀಡುತ್ತಾರೆ.


ವಿಶ್ವಜೀತ್ ಮಾತನಾಡುತ್ತಾ,


ನಾವು ರೈತರಿಗೆ ಶೇಕಡಾ 50 ರವರೆಗೆ ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡುತ್ತೇವೆ. ಇದರರ್ಥ ರೈತರು ನಮ್ಮನ್ನು ಇಷ್ಟಪಡುತ್ತಾರೆ ಹೀಗಾಗಿ ವ್ಯಾಪಾರ ಮತ್ತು ಮಾರುಕಟ್ಟೆಯ ವಿಚಾರದಲ್ಲಿ ನಾವು ಇನ್ನೂ ಪ್ರಯತ್ನ ಮಾಡಬೇಕಾಗಿದೆ” ಎಂದರು.


ಆಕ್ಸಿಪಿಟಲ್ ಟೆಕ್

ಮುಂಬೈ ಮೂಲದ ಈ ಉದ್ಯಮವು ಹಣ್ಣು-ತರಕಾರಿಗಳನ್ನು ಅವುಗಳ ಗಾತ್ರ, ಬಣ್ಣ, ಆಕಾರ ಮತ್ತು ಮೇಲ್ಮೈ ಗುಣಮಟ್ಟದ ಆಧಾರದಲ್ಲಿ ವಿಂಗಡಿಸಿ ಗ್ರೇಡ್ ನೀಡಲು ಎಐ ಆಧಾರಿತ ದೃಷ್ಟಿ ವ್ಯವಸ್ಥೆಯನ್ನು ನೀಡುತ್ತದೆ. ನಿಖಿಲ್ ಪಾಂಡೆ ಅವರೊಂದಿಗೆ ತಂಡದ ಸದಸ್ಯರಾಗಿ ಕ್ಷಿತಿಜ್ ಠಾಕೂರ್ ಮತ್ತು ವಿನಾಯಕ್ ಘೋಸಲೆ ಅವರು ಸೇರಿ ಆರಂಭಿಸಿದ ಈ ಉದ್ಯಮವು ಸರಿಯಾದ ಸಮಯಕ್ಕೆ ಪ್ರತಿ ಉತ್ಪನ್ನಕ್ಕೂ ಏಕರೂಪದ ಮತ್ತು ನಿರಂತರ ಗುಣಮಟ್ಟದ ತಪಾಸಣೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.


ಸಿಇಒ ಕ್ಷಿತಿಜ್ ಠಾಕೂರ್ ಮತ್ತು ಆಕ್ಸಿಪಿಟಲ್ ಟೆಕ್‌ನ ಸಹ ಸಂಸ್ಥಾಪಕರಾದ ವಿನಾಯಕ್ ಘೋಸಲೆ


"ಸದ್ಯ ಇರುವ ವೆಚ್ಚವನ್ನು ಪ್ರಸ್ತುತ ಬೆಲೆಯಿಂದ ತಗ್ಗಿಸುವ ಗುರಿ ಹೊಂದಿದ್ದೇವೆ. ನಮ್ಮ ತಂತ್ರಜ್ಞಾನದೊಂದಿಗೆ, ಶೇ.98 ರಷ್ಟು ನಿಖರತೆ ಹೆಚ್ಚಿದೆ ಮತ್ತು ಮ್ಯಾನುವಲ್ ಪ್ರಕ್ರಿಯೆಯು ತೆಗೆದುಕೊಳ್ಳುವ ಸಮಯದಲ್ಲಿ ಐದನೇ ಒಂದು ಭಾಗದಷ್ಟು ಮಾತ್ರ ನಮ್ಮ ತಂತ್ರಜ್ಞಾನ ಬಳಸುತ್ತಿದೆ” ಎಂದು ಕ್ಷಿತಿಜ್ ಹೇಳುತ್ತಾರೆ. ಮಾರುಕಟ್ಟೆ ಸ್ಥಿತಿಯ ಕುರಿತು ಮಾತನಾಡಿದ ಅವರು, "ಹಣ್ಣುಗಳು ಮತ್ತು ತರಕಾರಿಗಳ ಗ್ರೇಡ್ ನೀಡುವಿಕೆ ಹಾಗೂ ವಿಂಗಡಣೆಯ ಸಮಸ್ಯೆಯನ್ನು ಗುರುತಿಸಲು ಸುಮಾರು ರಫ್ತುದಾರರು, ಎಫ್‌ಪಿಒಗಳು ಮತ್ತು ಆಹಾರ ಸಂಸ್ಕರಣಾ ಕಂಪನಿಗಳು ಸೇರಿದಂತೆ 20 ಕ್ಕೂ ಹೆಚ್ಚು ಕೃಷಿ ವ್ಯವಹಾರಗಳನ್ನು ಸಂದರ್ಶಿಸುವ ಮೂಲಕ ನಾವು ಈ ಉದ್ಯಮವನ್ನು ಪ್ರಾರಂಭಿಸಿದ್ದೇವೆ" ಎಂದರು.


ಅಗ್ರಿ10ಎಕ್ಸ್

ಪುಣೆ ಕಂಪನಿಯಾದ ಅಗ್ರಿ10ಎಕ್ಸ್ ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ಸಮಯಕ್ಕೆ ನ್ಯಾಯಯುತ ಬೆಲೆಯನ್ನು ಪಡೆಯುವಂತೆ ಮಾಡಲು ಕೃಷಿ ವ್ಯಾಪಾರದಲ್ಲಿನ ಮಧ್ಯವರ್ತಿ ಹಾವಳಿಗಳನ್ನು ನಿಲ್ಲಿಸಿತು.


ಪಾರದರ್ಶಕ ಪರಿಸರ ವ್ಯವಸ್ಥೆಯನ್ನು ಒದಗಿಸುವ ವಿಕೇಂದ್ರೀಕೃತ ವೇದಿಕೆಯನ್ನು ನೀಡುತ್ತಿದೆ. ಇದು ರೈತರಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡುತ್ತದೆ‌ ಮತ್ತು ಅವರು ಖರೀದಿದಾರರೊಂದಿಗೆ ತಮ್ಮ ನಿಜವಾದ ಗಳಿಕೆಯನ್ನು ಮಧ್ಯವರ್ತಿಗಳಿಲ್ಲದೇ ನೇರವಾಗಿ ವ್ಯಾಪಾರ ಮಾಡಬಹುದು.


ಅಗ್ರಿ10ಎಕ್ಸ್ ತಂಡ


2016 ರಲ್ಲಿ ಪಂಕಜ್ ಘೋಡ್, ಅಭಿಜಿತ್ ನರಪರಾಜು ಮತ್ತು ಸುಂದೀಪ್ ಬೋಸ್ ಅವರು ಸ್ಥಾಪಿಸಿದ ಅಗ್ರಿ10ಎಕ್ಸ್ ಶೇ. 6 ರಿಂದ 10 ರಷ್ಟು ವ್ಯಾಪಾರ ಶುಲ್ಕವನ್ನು ವಿಧಿಸುತ್ತದೆ. ಇದನ್ನು ರೈತರು ಮತ್ತು ವ್ಯಾಪಾರಿಗಳ ನಡುವೆ ಸಮಾನವಾಗಿ ವಿಂಗಡಿಸಲಾಗಿದೆ. ಈ ವಿಕೇಂದ್ರೀಕೃತ ವಿಧಾನದಿಂದ, ಮಧ್ಯವರ್ತಿಗಳಿಗೆ ಖರ್ಚಾಗುತ್ತಿದ್ದ ಹೆಚ್ಚಿನ ಹಣ ಎರಡೂ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯವಾಗುತ್ತದೆ.


ಕ್ರಿಮಾನ್‌ಶಿ

2015 ರಲ್ಲಿ ನಿಖಿಲ್ ಬೊಹ್ರಾ ಸ್ಥಾಪಿಸಿದ ಕ್ರಿಮಾನ್‌ಶಿ ಉದ್ಯಮವು, ಆಹಾರ ಮತ್ತು ಕೃಷಿ ತ್ಯಾಜ್ಯವನ್ನು ಮೇವಾಗಿ ಪರಿವರ್ತಿಸಿ ಡೈರಿ ರೈತರಿಗೆ ಕಡಿಮೆ ವೆಚ್ಚದಲ್ಲಿ ನೀಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ, ಈ ಸ್ಟಾರ್ಟ್ಅಪ್ ರಾಜಸ್ಥಾನದಾದ್ಯಂತ 500 ಕ್ಕೂ ಹೆಚ್ಚು ರೈತ ಕುಟುಂಬಗಳಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಸಹಾಯಮಾಡಿ ಪಶುವೈದ್ಯಕೀಯ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ.


ಇಷ್ಟೇ ಅಲ್ಲ, ಕ್ರಿಮಾನ್‌ಶಿ ಇದುವರೆಗೆ 100 ಟನ್ ತ್ಯಾಜ್ಯದಿಂದ ಮೌಲ್ಯವನ್ನು ಉತ್ಪಾದಿಸುವ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ(ದಿನಕ್ಕೆ 500 ಕೆಜಿ -1,000 ಕೆಜಿ).


ದೇಶದಲ್ಲಿರುವ ಜಾನುವಾರುಗಳಿಗೆ ಆಹಾರವನ್ನು ಒದಗಿಸಲು ವೆಚ್ಚ ಪರಿಣಾಮಕಾರಿ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ, ನಿಖಿಲ್ ಅವರು ಜೋಧ್‌ಪುರದ ಜ್ಯೂಸ್ ಅಂಗಡಿಗಳು ಮತ್ತು ಸ್ಥಳೀಯ ಮಾರುಕಟ್ಟೆಗಳಿಂದ ಹಣ್ಣು ಮತ್ತು ತರಕಾರಿ ತ್ಯಾಜ್ಯವನ್ನು ಕಡಿಮೆ ಮೊತ್ತದ ಮೂಲಕ ಸಂಗ್ರಹಣಾ ವ್ಯವಸ್ಥೆಯನ್ನು ಒಟ್ಟುಗೂಡಿಸಿದ್ದಾರೆ.


ಕ್ರಿಮಾನ್‌ಶಿ ಯ ಸಂಸ್ಥಾಪಕರಾದ ನಿಖಿಲ್ ಬೋಹ್ರಾ


ಈ ತ್ಯಾಜ್ಯವನ್ನು ನಂತರ ಜೈಪುರದ ಕ್ರಿಮಾನ್‌ಶಿಯ ಸಂಸ್ಕರಣಾ ಘಟಕಗಳಿಗೆ ಸಾಗಿಸಲಾಗುತ್ತದೆ. ತ್ಯಾಜ್ಯವನ್ನು ಸಂಸ್ಕರಿಸಲು, ಎಲ್ಲಾ ತೇವಾಂಶವನ್ನು ಹೀರಿಕೊಳ್ಳಲು ಮತ್ತು ಬ್ಯಾಕ್ಟೀರಿಯಾದ ಚಟುವಟಿಕೆಯನ್ನು ನಿಲ್ಲಿಸಲು ಕೆಲವು ಲವಣಗಳನ್ನು ಸೇರಿಸಲಾಗುತ್ತದೆ. ಪರಿಣಾಮವಾಗಿ ಮಿಶ್ರಣವನ್ನು ಚೂರ್ಣ ಮಾಡಿ ಪುಡಿಯಂತಹ ರೂಪದಲ್ಲಿ ಮಾಡಲಾಗುತ್ತದೆ. ಈ ಸೂಕ್ಷ್ಮ ಕಣಗಳನ್ನು ಮೇವಾಗಿ ಪರಿವರ್ತಿಸುವುದಕ್ಕಾಗಿ (ಉಂಡೆಗಳ ರೂಪದಲ್ಲಿ) ಜೋಧಪುರದ ಬಾಹ್ಯ ತಯಾರಕರಿಗೆ ಹೊರಗುತ್ತಿಗೆ ನೀಡಲಾಗುತ್ತದೆ.


ಸಿದ್ಧಪಡಿಸಿದ ಉತ್ಪನ್ನವನ್ನು ಸ್ಥಳೀಯ ವಿತರಕರಿಗೆ ಮಾರಾಟ ಮಾಡಲಾಗುತ್ತದೆ, ಇದನ್ನು ರಾಜಸ್ಥಾನದ ಡೈರಿ ರೈತರಿಗೆ ಮಾರುಕಟ್ಟೆ ಬೆಲೆಗಿಂತ ಶೇಕಡಾ 10 ರಷ್ಟು ಕಡಿಮೆ ಬೆಲೆಗೆ ನೀಡುತ್ತಾರೆ.


ಗ್ರಾಮೊಫೋನ್

ಖರಗ್‌ಪುರದ ಐಐಟಿ ಮತ್ತು ಅಹಮದಾಬಾದ್ ನ ಐಐಎಂ ಎರಡರಲ್ಲೂ ಬ್ಯಾಚ್‌ಮೇಟ್‌ಗಳಾಗಿದ್ದ ತೌಸೆಫ್ ಖಾನ್ ಮತ್ತು ನಿಶಾಂತ್ ಮಹಾತ್ರೆ ಅವರು ಗ್ರಾಮೊಫೋನ್ ಎಂಬ ಅಗ್ರಿಟೆಕ್ ಸ್ಟಾರ್ಟ್ಅಪ್ ಅನ್ನು ಸ್ಥಾಪಿಸಿದರು. ಇದು ರೈತರಿಗೆ ಉತ್ತಮ ಇಳುವರಿಯನ್ನು ಸಾಧಿಸಲು ಅಗತ್ಯವಾದ ಸಮಯೋಚಿತ ಮಾಹಿತಿ ಮತ್ತು ಸಲಹೆಗಳನ್ನು ನೀಡುತ್ತದೆ.


ರೈತರು ಸ್ಥಳೀಯ ಬೆಳೆ ಪದ್ಧತಿ, ಬೆಳೆಯಲು ಉತ್ತಮ ಉತ್ಪನ್ನಗಳ ಕುರಿತು ಬೆಳೆ ಸಲಹೆ ಮತ್ತು ಹವಾಮಾನ ಮಾಹಿತಿಯನ್ನು ಪಡೆಯಬಹುದು. ಇದು ಉತ್ಪಾದಕತೆಯನ್ನು ಸುಧಾರಿಸಲು ಮಾತ್ರವಲ್ಲದೇ, ಕೃಷಿಯಿಂದ ತಮ್ಮ ಆದಾಯವನ್ನು ಸುಸ್ಥಿರವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.


ಗ್ರಾಮಫೋನ್‌ನ ಸಂಸ್ಥಾಪಕರು (ಎಡದಿಂದ-ಬಲಕ್ಕೆ) ಆಶಿಶ್ ರಾಜನ್ ಸಿಂಗ್, ತೌಸೆಫ್ ಖಾನ್, ಹರ್ಷಿತ್ ಗುಪ್ತಾ, ನಿಶಾಂತ್ ಮಹಾತ್ರೆ


ಮಣ್ಣಿನ ಪರೀಕ್ಷೆ ಮತ್ತು ಬೆಳೆ ಪೋಷಣೆಯ ನಿರ್ವಹಣೆಗೆ ಅನುಕೂಲವಾಗುವ ಮೂಲಕ ರೈತರು ತಮ್ಮ ಭೂಮಿಯ ಬಗ್ಗೆ ಚೆನ್ನಾಗಿ ಅರ್ಥೈಸಿಕೊಳ್ಳಲು ಇನ್‌ಪುಟ್ ಯೋಜನೆ ಸಹಾಯ ಮಾಡುತ್ತದೆ. ಬೆಂಬಲ ಮತ್ತು ಸಲಹಾ ಕಾರ್ಯವು ರೈತರಿಗೆ ಹವಾಮಾನ ಸಲಹೆ ಮತ್ತು ಮಂಡಿ ಬೆಲೆಗಳ ಮಾಹಿತಿ ನೀಡುವ ಮೂಲಕ ಮಾಹಿತಿ ಅಲಭ್ಯತೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.


ಗುಣಮಟ್ಟವು, ಉತ್ತಮ ಮತ್ತು ಹೆಚ್ಚು ಅಧಿಕೃತ ಉತ್ಪನ್ನಗಳನ್ನು ವಿಶ್ವಾಸಾರ್ಹ ಪೂರೈಕೆದಾರರಿಂದ ಸಂಗ್ರಹಿಸಲು ರೈತರಿಗೆ ಅನುವು ಮಾಡಿಕೊಡುತ್ತದೆ. ಸರಿಯಾದ ಉತ್ಪನ್ನಗಳ ಲಭ್ಯತೆಯು ರೈತರಿಗೆ ಮಾರುಕಟ್ಟೆಯಲ್ಲಿ ಹೊಸ ಬೆಳವಣಿಗೆಗಳೊಂದಿಗೆ ಹೊಂದಿಕೊಳ್ಳಲು ಸಹಾಯಮಾಡುತ್ತದೆ. ರೈತರು ತಮ್ಮ ಮನೆ ಬಾಗಿಲಲ್ಲಿಯೇ ಉತ್ಪನ್ನಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಕೊನೆಯದಾಗಿ, ಪರಿಣಾಮಕಾರಿ ವೆಚ್ಚದ ಕಾರ್ಯವು ಉತ್ಪನ್ನಗಳನ್ನು ಮೂಲ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಸ್ಪರ್ಧಾತ್ಮಕ ಬೆಲೆಗೆ ಮಾರಾಟವಾಗುವುದನ್ನು ಖಾತ್ರಿಗೊಳಿಸುತ್ತದೆ.