ವಿಶ್ವದ ಅತ್ಯಂತ ದೊಡ್ಡ ಸಂವಿಧಾನದ ಹಿಂದಿನ ಕಥೆ
ಜನವರಿ 26, 1950 ಭಾರತದ ಪಾಲಿಗೆ ಅತ್ಯಂತ ಮಹತ್ತರವಾದ ದಿನ. ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ರಾಷ್ಟ್ರದ ಮೂಲಭೂತ ಕಾನೂನುಗಳನ್ನು ಒಳಗೊಂಡ ಸಂವಿಧಾನ ರಚನೆಯಾದ ದಿನ.
ಜನವರಿ 26, 1950 ಭಾರತದ ಪಾಲಿಗೆ ಅತ್ಯಂತ ಮಹತ್ತರವಾದ ದಿನ. ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ರಾಷ್ಟ್ರದ ಮೂಲಭೂತ ಕಾನೂನುಗಳನ್ನು ಒಳಗೊಂಡ ಸಂವಿಧಾನ ರಚನೆಯಾದ ದಿನ. 22 ಭಾಗ, 448 ವಿಧಿ, 12 ಪರಿಚ್ಛೇದ ಮತ್ತು 97 ತಿದ್ದುಪಡಿಗಳನ್ನು ಒಳಗೊಂಡು ವಿಶ್ವದ ಅತ್ಯಂತ ದೊಡ್ಡ ಸಂವಿಧಾನವಾಗಿ ಮೂಡಿಬಂದ ಹಾದಿ ಇಲ್ಲಿದೆ.
ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಅಸಹಕಾರ ಮತ್ತು ಅಹಿಂಸಾತ್ಮಕ ಚಳುವಳಿಗಳ ಮೂಲಕ ಭಾರತ ಬ್ರಿಟಿಷರ ಕಪಿಮುಷ್ಟಿಯಿಂದ ಆಗಸ್ಟ್ 15, 1947 ರಂದು ಹೊರಬಂದು ಸ್ವತಂತ್ರ ಭಾರತವಾಯಿತು.
ಆದರೆ, 15 ಆಗಸ್ಟ್ 1947 ಸ್ವಾತಂತ್ರ್ಯ ದಿನ ಎಂದು ಘೋಷಿಸಲು ಇದ್ದ ಮೊದಲ ಆಯ್ಕೆಯೆನಲ್ಲ. ಇದರ ಹಿಂದಿನ ಘಟನೆಗಳು ಇನ್ನೂ ಆಸಕ್ತಿದಾಯಕವಾಗಿದೆ.
ಡಿಸೆಂಬರ್ 29, 1929 ರಂದು, ಜವಾಹರಲಾಲ್ ನೆಹರು ಅವರು ಲಾಹೋರ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಭೆಯನ್ನು ಕರೆದರು, ಅಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿ ಮತ್ತು ಪೂರ್ಣ ಸ್ವರಾಜ್‌ಗೆ ಕರೆ ನೀಡಿದರು. (ಸಂಪೂರ್ಣ ಸ್ವ - ಆಡಳಿತ; ಪೂರ್ಣ - ಸಂಪೂರ್ಣ, ಸ್ವ - ಸ್ವಯಂ, ರಾಜ್ - ನಿಯಮ).
ಆ ದಿನ ಕಾಂಗ್ರೆಸ್ ಜನವರಿ 26, 1930 ಅನ್ನು ಭಾರತೀಯ ಸ್ವಾತಂತ್ರ್ಯ ದಿನವನ್ನಾಗಿ ಘೋಷಿಸಲಾಯಿತು. 1947 ರ ಆಗಸ್ಟ್ 15 ನ್ನು ಭಾರತವು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುವವರೆಗೂ ಸುಮಾರು 17 ವರ್ಷಗಳ ಕಾಲ ಜನವರಿ 26 ನ್ನು ಸ್ವಾತಂತ್ರ್ಯ ದಿನವನ್ನಾಗಿಯೇ ಆಚರಿಸಲಾಗುತ್ತಿತ್ತು.
ಆಗಸ್ಟ್ 15 ಭಾರತಕ್ಕೆ ಬ್ರಿಟಿಷ್ ದಬ್ಬಾಳಿಕೆಯಿಂದ ಪಡೆದ ಸ್ವಾತಂತ್ರ್ಯವನ್ನು ಸೂಚಿಸಿದರೆ ಅದು ಬ್ರಿಟಿಷರಿಗೆ ಸಂಪೂರ್ಣವಾಗಿ ವಿಭಿನ್ನವಾದ ಅರ್ಥವನ್ನು ಕಲ್ಪಿಸಿತ್ತು- ಅದುವೇ ಎರಡನೇ ಮಹಾಯುದ್ಧದ ವಿಜಯೋತ್ಸವವು ಅವರನ್ನು ವಿಶ್ವದ ಮಹಾ ಬಲಶಾಲಿ ಶಕ್ತಿಯನ್ನಾಗಿ ಮಾಡಿದ ದಿನ.
ಆ ಕಾಲಘಟ್ಟ ಎರಡನೆಯ ಮಹಾಯುದ್ಧದ ಸಂಧರ್ಭ. ಅದೇ ಸಮಯದಲ್ಲಿ ಅಂದರೆ ಆಗಸ್ಟ್ 6 ಮತ್ತು 9, 1945 ರಂದು ಅಮೆರಿಕದ ಪಡೆಗಳು ಜಪಾನಿನ ನಗರಗಳಾದ ಹಿರೋಷಿಮಾ ಮತ್ತು ನಾಗಾಸಾಕಿ ಮೇಲೆ ಪರಮಾಣು ಬಾಂಬ್‌ಗಳನ್ನು ಸಿಡಿಸಿ ಜಗತ್ತನ್ನೇ ನಡುಗಿಸಿದ್ದವು.
ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಚೀನಾವನ್ನು ಒಳಗೊಂಡ ಈ ಬಿಗ್ ಫೋರ್ ಬಣವು ಜಪಾನ್ ತನ್ನೆಲ್ಲಾ ಸಾಮರ್ಥ್ಯವನ್ನು ಕಳೆದುಕೊಂಡು ಶಾಂತಿ ಸ್ಥಾಪನೆಗೆ ಮುಂದಾಗುವಂತೆ ಮಾಡಿದವು.
ದೊಡ್ಡ-ಪ್ರಮಾಣದ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಲಾಗದ ಅಸಮರ್ಥತೆಯಿಂದಾಗಿ, ಜಪಾನ್‌ಗೆ ಶರಣಾಗುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ, ಇದರ ತರುವಾಯ ಇತಿಹಾಸದ ಅತಿದೊಡ್ಡ ಸಶಸ್ತ್ರ ಸಂಘರ್ಷ, ಎರಡನೆಯ ಮಹಾಯುದ್ಧದ ಅಂತ್ಯವೂ ಆಯಿತು.
ಬ್ರಿಟಿಷರು ಜಪಾನಿನ ನೌಕಾಪಡೆಯು ತಮಗೆ ಶರಣಾದ ಎರಡನೇ ವಾರ್ಷಿಕೋತ್ಸವದಂದೆ, ಭಾರತದ ಸಂಪೂರ್ಣ ಸ್ವಾತಂತ್ರ್ಯವನ್ನು ಆಗಸ್ಟ್ 15 ರಂದು ಘೋಷಿಸಿದರು.
ಇತಿಹಾಸಕಾರ ಮತ್ತು ಲೇಖಕರಾದ ರಾಮಚಂದ್ರ ಗುಹಾ ತಮ್ಮ ‘ಇಂಡಿಯಾ ಆಫ್ಟರ್ ಗಾಂಧಿ: ದಿ ಹಿಸ್ಟರಿ ಆಫ್ ದ ವರ್ಲ್ಡ್ಸ್ ಲಾರ್ಜೆಸ್ಟ್ ಡೆಮಾಕ್ರಸಿʼ (ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಇತಿಹಾಸ) ಎಂಬ ಪುಸ್ತಕದಲ್ಲಿ ಹೇಳಿದಂತೆ, "ಆದ್ದರಿಂದ ಸ್ವಾತಂತ್ರ್ಯವು ಅಂತಿಮವಾಗಿ ರಾಷ್ಟ್ರೀಯತಾವಾದಿ ಭಾವನೆಗಿಂತ ಹೆಚ್ಚಾಗಿ ಸಾಮ್ರಾಜ್ಯಶಾಹಿ ಹೆಮ್ಮೆಯಿಂದ ಪ್ರತಿಧ್ವನಿಸಿತು."
ಜನವರಿ 26 ರ ದಿನಾಂಕವನ್ನು (ಆರಂಭದಲ್ಲಿ ಸ್ವಾತಂತ್ರ್ಯ ದಿನವೆಂದು ಘೋಷಿಸಲಾಯಿತು) ಯಾವ ಸ್ವಾತಂತ್ರ್ಯ ಹೋರಾಟಗಾರರು ಮರೆಯಲಾಗಲಿಲ್ಲ. ಇದು ನಂತರ ಭಾರತದ ಇತಿಹಾಸವನ್ನು ಬದಲಿಸುವ ಮತ್ತೊಂದು ಪ್ರಮುಖ ಘಟನೆಯನ್ನು ತಿಳಿಸಿತು.
ಭಾರತೀಯ ಸಂವಿಧಾನ - ಅದರ ಹಿಂದಿನ ಇತಿಹಾಸ
19 ನೇ ಶತಮಾನದ ಕೊನೆಯಲ್ಲಿ, ಸ್ವಾತಂತ್ರ್ಯ ಹೋರಾಟಗಾರರು ತಾವೂ ದೇಶವಾಸಿಗಳಾಗಿ ಸರ್ಕಾರದ ಕಾರ್ಯಕಲಾಪಗಳಲ್ಲಿ ಭಾಗಿಯಾಗಬೇಕೆಂದು ಒತ್ತಾಯಿಸಿದರು. ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತವೂ ಕೂಡ ಯುನೈಟೆಡ್ ಕಿಂಗ್ಡಮ್ ನ ಪರವಾಗಿ ಭಾಗವಹಿಸಿದ ಕಾರಣ, ಬ್ರಿಟಿಷ್ ಸಂಸತ್ತು 1919 ರ ಭಾರತ ಸರ್ಕಾರ ಕಾಯ್ದೆಯನ್ನು ಪರಿಚಯಿಸಿತು, ಮತ್ತು ಅದೇ ವರ್ಷ ಡಿಸೆಂಬರ್ 23 ರಂದು ಈ ಕಾಯ್ದೆ ರಾಯಲ್ ಅನುಮೋದನೆ ಪಡೆಯಿತು.
ಈ ಕಾಯ್ದೆಯ ಫಲವಾಗಿ - ಕೆಲವು ದೊಡ್ಡ ಪ್ರಾಂತ್ಯಗಳಲ್ಲಿ ಆಡಳಿತದ ಮೇಲ್ವಿಚಾರಣೆ ಬ್ರಿಟಿಷ ಮತ್ತು ರಾಜಪ್ರಭುತ್ವದ ನಡುವೆ ಹಂಚಿಕೆಯಾಯಿತು. ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಸ್ಥಳೀಯ ಸರ್ಕಾರದ ಮೇಲ್ವಿಚಾರಣೆಯಂತಹ ಆಡಳಿತದ ಕೆಲವು ಕ್ಷೇತ್ರಗಳನ್ನು ಪ್ರಾಂತೀಯ ಮಂಡಳಿಗೆ ವರದಿ ಮಾಡಿದ ಭಾರತೀಯ ಮಂತ್ರಿಗಳ ಗುಂಪಿಗೆ ಹಸ್ತಾಂತರಿಸಲಾಯಿತು. ಆದಾಗ್ಯೂ, ಮಿಲಿಟರಿ, ರಕ್ಷಣಾ, ವಿದೇಶಾಂಗ ವ್ಯವಹಾರಗಳು ಮತ್ತು ಸಂವಹನಗಳು ವೈಸ್‌ರಾಯ್‌ನ ನೇರ ನಿಯಂತ್ರಣದಲ್ಲಿದ್ದವು.
ಈ ಕಾಯ್ದೆಯನ್ನು 10 ವರ್ಷಗಳ ನಂತರ ವಿಶೇಷ ಆಯೋಗವು ಪರಿಶೀಲಿಸುತ್ತದೆ ಎಂದು ಭರವಸೆ ನೀಡಲಾಯಿತು ಮತ್ತು ಇದೆ ಕಾರಣಕ್ಕೆ ಸೈಮನ್ ಆಯೋಗವು 1928 ರಲ್ಲಿ ಭಾರತಕ್ಕೆ ಬಂದಿತು.
ಸೈಮನ್ ಆಯೋಗವು ಸಾಂವಿಧಾನಿಕ ಸುಧಾರಣೆಗಳನ್ನು ನೋಡಿತು ಮತ್ತು 1919 ರ ಭಾರತ ಸರ್ಕಾರದ ಕಾಯ್ದೆಯನ್ನು ಪರಿಶೀಲಿಸಿತು. ಸೈಮನ್ ವರದಿಯನ್ನು 1930 ರಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟಿಸಲಾಯಿತು, ಈ ಸಾಂವಿಧಾನಿಕ ಬಿಕ್ಕಟ್ಟನ್ನು ನಂತರ ‘ಅಂತಿಮವಲ್ಲ' ಎಂದು ಕರೆಯಲಾಯಿತು. ಸಂವಿಧಾನವನ್ನು ಈ ಬಿಕ್ಕಟ್ಟಿನಿಂದ ಮುಕ್ತಗೊಳಿಸಲು, ಕ್ರಮವಾಗಿ 1930, 1931 ಮತ್ತು 1932 ರಲ್ಲಿ ದುಂಡು ಮೇಜಿನ ಸಮ್ಮೇಳನದ ಮೂರು ಅಧಿವೇಶನಗಳನ್ನು ನಡೆಸಲಾಯಿತು. ಸಮ್ಮೇಳನದಲ್ಲಿ ಹಲವಾರು ಭಾರತೀಯ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ದುಂಡುಮೇಜಿನ ಸಮ್ಮೇಳನದ ಆಧಾರದ ಮೇಲೆ ಬ್ರಿಟಿಷರು ತಮ್ಮದೇ ಆದ ವರದಿ ಮಾಡುವ ಕರಡುಗಳನ್ನು ‘ಶ್ವೇತಪತ್ರಗಳಲ್ಲಿ' ತಯಾರಿಸಿದರು. ಬ್ರಿಟಿಷ್ ಭಾರತದಿಂದ 20 ಜನ ಪ್ರತಿನಿಧಿಗಳು ಮತ್ತು ಏಳು ಭಾರತೀಯರನ್ನು ಹೊಂದಿರುವ ಸಮಿತಿಯು ಏಪ್ರಿಲ್ 1933 ರಿಂದ ಡಿಸೆಂಬರ್ 1934 ರವರೆಗೆ ಶ್ವೇತಪತ್ರಗಳಲ್ಲಿ ಕೆಲಸ ಮಾಡಿತು ಮತ್ತು ಆ ವರ್ಷದ ಅಂತ್ಯದ ವೇಳೆಗೆ ತನ್ನ ವರದಿಯನ್ನು ಬ್ರಿಟಿಷ್ ಸಂಸತ್ತಿಗೆ ಸಲ್ಲಿಸಿತು.
ಫೆಬ್ರುವರಿ 1935 ರಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತು, ಅದು ಜುಲೈ 24, 1935 ರಂದು ರಾಯಲ್ ಅನುಮೋದನೆಯನ್ನು ಪಡೆಯಿತು. ಇದು ಅಧಿಕೃತವಾಗಿ ಏಪ್ರಿಲ್ 1, 1935 ರಂದು ಜಾರಿಗೆ ಬಂದಿತು ಮತ್ತು ಇದನ್ನು ಭಾರತ ಸರ್ಕಾರ ಕಾಯ್ದೆ, 1935 ಎಂದು ಹೆಸರಿಸಲಾಯಿತು.
ಸಂವಿಧಾನ ಶಿಲ್ಪಿ ಅಂಬೇಡ್ಕರ್
ಭಾರತಕ್ಕೆ ಶಾಶ್ವತ ಮತ್ತು ಸಂಘಟಿತ ಸಂವಿಧಾನವನ್ನು ರಚಿಸುವ ಉದ್ದೇಶದೊಂದಿಗೆ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಆಗಸ್ಟ್ 28, 1947 ರಂದು ಕರಡು ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಈ ಸಮಿತಿಯು 141 ದಿನಗಳ ತರುವಾಯ ಸಂವಿಧಾನದ ಮೊದಲ ಕರಡನ್ನು ನವೆಂಬರ್ 4, 1947 ರಂದು ವಿಧಾನಸಭೆಗೆ ಸಲ್ಲಿಸಿತು.
ಸಂವಿಧಾನ ರಚನಾ ಸಮಿತಿಯು ಮೂಲ ತತ್ವಗಳಾದ- ದೇಶವು ಗಣರಾಜ್ಯ, ಸಂಸದೀಯ ಸರ್ಕಾರದ ರೂಪ, ಫೆಡರಲ್ ರಚನೆ, ಮೂಲಭೂತ ಹಕ್ಕುಗಳು, ಸ್ವತಂತ್ರ ನ್ಯಾಯಾಂಗ ಶಾಖೆ ಮೊದಲಾದ ಅಂಶಗಳನ್ನು ಧ್ಯೇಯವಾಗಿ ಹೊಂದಿತ್ತು.
ಈ ಅಸೆಂಬ್ಲಿಯ ಅಧಿವೇಶನಗಳು 166 ದಿನಗಳು ನಡೆದವು, ಅಂದರೆ ಸುಮಾರು ಎರಡು ವರ್ಷಗಳ ಅವಧಿ. ಅದು ಸಾರ್ವಜನಿಕರಿಗೂ ಮುಕ್ತವಾಗಿತ್ತು. ಹಲವಾರು ಚರ್ಚೆಗಳು, ತಿದ್ದುಪಡಿಗಳು ಮತ್ತು ಕಠಿಣ ಪರಿಶ್ರಮದ ನಂತರ, ಜನವರಿ 24, 1950 ರಂದು, ಭಾರತದ ಸಂವಿಧಾನದ ಅಂತಿಮ ಕರಡಿನ ಎರಡು ಕೈ-ಲಿಖಿತ ಪ್ರತಿಗಳಲ್ಲಿ (ಹಿಂದಿ ಮತ್ತು ಇಂಗ್ಲಿಷ್) 616 ಸಹಿಗಳನ್ನು ವಿಧಾನಸಭೆಯ 308 ಸದಸ್ಯರು ಮಾಡಿದರು.
ಎರಡು ದಿನಗಳ ನಂತರ, ಜನವರಿ 26, 1950 ರಂದು, 22 ಭಾಗಗಳಲ್ಲಿ 448 ವಿಧಿಗಳನ್ನು, 12 ಪರಿಚ್ಛೇದಗಳನ್ನು ಮತ್ತು 97 ತಿದ್ದುಪಡಿಗಳನ್ನು ಒಳಗೊಂಡ ವಿಶ್ವದ ಸುದೀರ್ಘ ಲಿಖಿತ ಸಂವಿಧಾನವನ್ನು ಮೌಲ್ಯೀಕರಿಸಲಾಯಿತು.
ಅಂದಿನ ಇಂಡೋನೇಷ್ಯಾದ ಅಧ್ಯಕ್ಷ ಸುಕರ್ನೊ 1950 ರಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಗೆ ಭಾರತದ ಮೊದಲ ಗೌರವ ಅತಿಥಿಯಾಗಿದ್ದರು.
ಈ ದಿನ, ಸಂವಿಧಾನದ ಮೂಲ ಕೈಬರಹದ ಪ್ರತಿಗಳನ್ನು ಹೀಲಿಯಂ ತುಂಬಿದ ಪೆಟ್ಟಿಗೆಯಲ್ಲಿ ಸಂಸತ್ ಭವನದ ಗ್ರಂಥಾಲಯದಲ್ಲಿ ಇಡಲಾಗಿದೆ.
ಇಂದಿನವರೆಗೂ ಆಚರಣೆಗಳು ಮೂರು ದಿನಗಳವರೆಗೆ ಇರುತ್ತದೆ, ಪ್ರತಿ ವರ್ಷ ಜನವರಿ 29 ರಂದು ನಡೆಯುವ ಮಿಲಿಟರಿ ಸಮಾರಂಭವಾದ ‘ಬೀಟಿಂಗ್ ದಿ ರಿಟ್ರೀಟ್’ ನೊಂದಿಗೆ ಕೊನೆಗೊಳ್ಳುತ್ತದೆ. ಇದನ್ನು ಮೊದಲು 1950 ರ ದಶಕದಲ್ಲಿ ಭಾರತೀಯ ಸೇನೆಯ ಮೇಜರ್ ರಾಬರ್ಟ್ಸ್ ಪ್ರಾರಂಭಿಸಿದರು. ಮಹತ್ಮಾ ಗಾಂಧಿಯವರ ಅಚ್ಚುಮೆಚ್ಚಿನ ಅಬೈಡ್ ವಿಥ್ ಮಿ ಎಂಬ ಶ್ಲೋಕದೊಂದಿಗೆ ಈ ಸಂಜೆ ಕೊನೆಗೊಳ್ಳುತ್ತದೆ.