ಭಾರತದ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಆದ ಸಬ್ ಲೆಫ್ಟಿನೆಂಟ್ ಶಿವಾಂಗಿ

ಭಾರತೀಯ ನೌಕಾಪಡೆಯ ಸಬ್-ಲೆಫ್ಟಿನೆಂಟ್ ಶಿವಾಂಗಿ ಸೋಮವಾರ ಮೊದಲ ನೌಕಾ ಮಹಿಳಾ ಪೈಲಟ್ ಆಗಿ ತಮ್ಮ ಕರ್ತವ್ಯಕ್ಕೆ ಹಾಜರಾದರು.

ಭಾರತದ ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಆದ ಸಬ್ ಲೆಫ್ಟಿನೆಂಟ್ ಶಿವಾಂಗಿ

Wednesday December 04, 2019,

2 min Read

ಭಾರತೀಯ ನೌಕಾಪಡೆಯ ಸಬ್-ಲೆಫ್ಟಿನೆಂಟ್ ಶಿವಾಂಗಿ ಸೋಮವಾರ ಮೊದಲ ನೌಕಾ ಮಹಿಳಾ ಪೈಲಟ್ ಆಗಿ ತಮ್ಮ ಕರ್ತವ್ಯಕ್ಕೆ ಹಾಜರಾದರು.


"ನೌಕಾಪಡೆಯ ಮೊದಲ ಮಹಿಳಾ ಪೈಲಟ್ ಆಗಿರುವುದು ನನಗೆ ತುಂಬಾ ಹೆಮ್ಮೆಯ ಭಾವನೆ ತಂದಿದೆ. ಮತ್ತು ಇದು ವಿಭಿನ್ನ ಅನುಭವವಾಗಿದೆ..." ಎಂದು ಶಿವಾಂಗಿ ಸುದ್ದಿಗಾರರಿಗೆ ತಿಳಿಸಿದರು. ಮುಂದುವರೆದು ಮಾತನಾಡುತ್ತಾ, "ಮಹಿಳೆಯರು ಮೊದಲಿನಿಂದಲೂ ನೌಕಾಪಡೆಯಲ್ಲಿ ಇದ್ದರು. ಆದರೆ ಅವರು ಕಾಕ್‌ಪಿಟ್‌ನಲ್ಲಿ ಇರಲಿಲ್ಲ, ಈ ಮೊದಲು ಅವರು ಕೇವಲ ವೀಕ್ಷಕರಾಗಿದ್ದರು," ಎಂದರು.


ಶಿವಾಂಗಿ ನೌಕಾಪಡೆಯ ಪೈಲಟ್ ಆಗಿರುವ ಮೊದಲ ಮಹಿಳೆಯಾಗಿದ್ದು ಇದು ‘ರಕ್ಷಣಾ ಪಡೆಗೆ ಸೇರಲು ಬಯಸುವ ಇತರ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತದೆ.’ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡ ಅವರು, ದಕ್ಷಿಣ ನೌಕಾಪಡೆಯ ಮುಖ್ಯಸ್ಥ ವೈಸ್ ಅಡ್ಮಿರಲ್ ಎ. ಕೆ. ಚಾವ್ಲಾ ಅವರಿಂದ ಕ್ವಾಲಿಫಿಕೇಶನ್ ವಿಂಗ್ಸ್ʼ ಪಡೆದರು.


"ಇದಕ್ಕಾಗಿ ನಾನು ಬಹಳ ಸಮಯದಿಂದ ಹಂಬಲಿಸುತ್ತಿದ್ದೇನೆ. ಮತ್ತು ಇದು ನನಗೆ ಹೆಮ್ಮೆಯ ಕ್ಷಣ"

ಎಂದು ಅವರು ಹೇಳಿದರು. ಕಾರ್ಯಾಚರಣೆಯ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅವರು ಭಾರತೀಯ ನೌಕಾಪಡೆಗೆ ಮೊದಲ ಮಹಿಳಾ ಪೈಲಟ್ ಆಗಿ ಸೇರಿದರು. ಬಿಹಾರದ ಮುಜಾಫರ್ನಿಂದ ಶಿವಾಂಗಿ ನೇವಲ್ ಡಾರ್ನಿಯರ್ ಕಣ್ಗಾವಲು ವಿಮಾನವನ್ನು ಹಾರಿಸಲಿದ್ದಾರೆ.

ಟ




ತಮ್ಮ ತರಬೇತಿಯ ಭಾಗವಾಗಿ, ಶಿವಾಂಗಿ ಪಿಲಾಟಸ್ ಪಿಸಿ 7 ಎಂಕೆ II, ಎಎಫ್‌ಎಯನ್ನು ಹಾರಿಸಿದ್ದಾರೆ ಮತ್ತು ಕೊಚ್ಚಿಯಲ್ಲಿ ಭಾರತೀಯ ನೌಕಾಪಡೆಯೊಂದಿಗೆ ಡಾರ್ನಿಯರ್ ಕನ್ವರ್ಷನ್ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.


ಮ್ಯಾರಿಟೈಮ್ ರೆಕಾನೈಸನ್ಸ್ (ಎಮ್ಆರ್) ವಿಮಾನದಲ್ಲಿ ಸಂಪೂರ್ಣ ಕಾರ್ಯಾಚರಣೆಯ ಪೈಲಟ್ ಆಗಲು ಐಎನ್ಎಸ್ ಗರುಡಾದ ಡಾರ್ನಿಯರ್ ಸ್ಕ್ವಾಡ್ರನ್ ಐಎನ್ಎಎಸ್ 550 ನಲ್ಲಿ ತಮ್ಮ ತರಬೇತಿಯನ್ನು ಶಿವಾಂಗಿ ಮುಂದುವರೆಸಲಿದ್ದಾರೆ.


ತಮ್ಮ ಬಾಲ್ಯದ ನೆನಪನ್ನು, ಪೈಲೆಟ್ ಆಗುವ ಕನಸನ್ನು ಮಾಧ್ಯಮದವರೊಂದಿಗೆ ಹಂಚಿಕೊಳ್ಳುತ್ತಾ, ಶಿವಾಂಗಿ ತಾವು ಬಿಹಾರದ ತಮ್ಮ ಅಜ್ಜಿಯ ಮನೆಯಲ್ಲಿ ಇರುವಾಗ ಮಂತ್ರಿಗಳು ಪ್ರಯಾಣಿಸುವ ಚಾಪರ್ ಹೆಲಿಕಾಪ್ಟರ್ ನ ಲ್ಯಾಂಡಿಂಗ್ ಅನ್ನು ನೋಡಿ ರೋಮಾಂಚಿತಗೊಳ್ಳುತ್ತಿದ್ದರು. ಈ ಘಟನೆಗಳು ಶಿವಾಂಗಿ ಅವರಲ್ಲಿ ಪೈಲೆಟ್ ಆಗುವ ಕನಸನ್ನು ಬಿತ್ತಿದ್ದವು ಎಂದರು.


ಈ ರೀತಿಯ ಹೆಲಿಕಾಪ್ಟರ್ ನೋಡಲು ಹಳ್ಳಿಯ ಪ್ರದೇಶದ ಎಲ್ಲ ಜನರು ಜಮಾಯಿಸುತ್ತಿದ್ದರು ಮತ್ತು ಅವರಲ್ಲಿ ಒಬ್ಬರನ್ನು ಶಿವಾಂಗಿ ಸದಾ ನೆನಪಿಸಿಕೊಳ್ಳುತ್ತಾರೆ, ಅವರೇ ಹೆಲಿಕಾಪ್ಟರ್ ಅನ್ನು ಹಾರಿಸುವ ವ್ಯಕ್ತಿ. ಈ ಪೈಲೆಟ್ ನಿಂದಲೇ ಅವರು ‘ಪ್ರೇರಿತ' ರಾದರು.


ತಮ್ಮ ಹೆತ್ತವರು ತಮಗೆ ನೀಡುತ್ತಾ ಬಂದಿರುವ ಪ್ರೋತ್ಸಾಹವನ್ನು ನೆನೆದು ಶಿವಾಂಗಿ ಹೀಗೆ ಹೇಳುತ್ತಾರೆ, "ನಿಜ ಹೇಳಬೇಕೆಂದರೆ, ಅವರು ನನ್ನ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ” ಎಂದು ಹೇಳಿದರು.


ನೌಕಾಪಡೆಯ ದಿನಾಚರಣೆಯಗಿಂತ ಎರಡು ದಿನಗಳ ಮುಂಚೆಯೇ ಸೇನೆಯಲ್ಲಿ ಸೇರ್ಪಡೆಗೊಂಡ ಶಿವಾಂಗಿ, ನೌಕಾಪಡೆಯ ಸಿಬ್ಬಂದಿ ಮತ್ತು ಅರ್ಹ ಫ್ಲೈಯಿಂಗ್ ಬೋಧಕರಿಗೆ (ಕ್ಯೂಎಫ್‌ಐ) ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಅವರು ಯಾವಾಗಲೂ ನನ್ನನ್ನು ಪ್ರೋತ್ಸಾಹಿಸಿದ್ದಾರೆ ಎಂದು ಅವರು ಹೇಳಿದರು.


ಅವರ ಸಾಧನೆಗೆ ಭಾರತೀಯ ನೌಕಾಪಡೆ ಅಭಿನಂದನೆ ಸಲ್ಲಿಸಿದೆ.


ಅವರ ಜೊತೆಗೆ, 7 ನೇ ಡಾರ್ನಿಯರ್ ಕನ್ವರ್ಷನ್ ಕೋರ್ಸ್‌ನ (ಡಿಒಸಿಸಿ) ಇಬ್ಬರು ಕಲಿಕಾ ಅಧಿಕಾರಿಗಳು ಸಹ ಡಾರ್ನಿಯರ್ ಪೈಲಟ್‌ಗಳಾಗಿ ಅರ್ಹತೆ ಪಡೆದರು ಮತ್ತು ಸರಳ ಮತ್ತು ಗಂಭೀರ ಸಮಾರಂಭದಲ್ಲಿ ಅವರಿಗೆ ಗೋಲ್ಡನ್ ವಿಂಗ್ಸ್ ನೀಡಲಾಯಿತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.


ಸಮಾರಂಭದ ಮುಖ್ಯ ಅತಿಥಿಯಾಗಿ ವೈಸ್ ಅಡ್ಮಿರಲ್ ಎ. ಕೆ. ಚಾವ್ಲಾ ಅವರು ವಿಂಗ್ಸ್ ಅನ್ನು ವಿಭಾಗದ ಅಧಿಕಾರಿಗಳಿಗೆ ಪ್ರಸ್ತುತಪಡಿಸಿದರು, ಇದು ನೌಕಾ ವಿಮಾನಯಾನಕಾರರಾಗಿ ಅವರ ಅರ್ಹತೆಯನ್ನು ಸೂಚಿಸುತ್ತದೆ.


ಒಟ್ಟಾರೆ ಅರ್ಹತೆಯ ಕ್ರಮದಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಎಫ್‌ಒಸಿ-ಇನ್-ಸಿ ಸೌತ್ ರೋಲಿಂಗ್ ಟ್ರೋಫಿಯನ್ನು ಲೆಫ್ಟಿನೆಂಟ್ ಶಿವಂ ಪಾಂಡೆ ಅವರಿಗೆ ನೀಡಲಾಯಿತು ಎಂದು ಅವರು ಹೇಳಿದರು.


ವಿಂಗ್ಸ್ ಪ್ರಶಸ್ತಿಯು ವಾಯುಪಡೆಯ ಅಕಾಡೆಮಿ (ಎಎಫ್‌ಎ), ಡುಂಡಿಗಲ್ ಮತ್ತು ಇಂಡಿಯನ್ ನೇವಲ್ ಏರ್ ಸ್ಕ್ವಾಡ್ರನ್ (ಐಎನ್‌ಎಎಸ್) 550, ಕೊಚ್ಚಿಯ ಐಎನ್‌ಎಸ್ ಗರುಡಾದಲ್ಲಿ ಒಂದು ವರ್ಷದ ಹಾರಾಟ ತರಬೇತಿಯ ಪರಾಕಾಷ್ಠೆಯನ್ನು ಸೂಚಿಸುತ್ತದೆ.


ಇಲ್ಲಿಂದ, ಈ ಪೈಲಟ್‌ಗಳು ಕಾರ್ಯಾಚರಣೆಯ ಕಡಲ ದಳಕ್ಕೆ ಸೇರುವ ಮೊದಲು, ಜನವರಿ 2020 ರ ಮಧ್ಯದಿಂದ ಐಎನ್‌ಎಎಸ್ 550 ರಲ್ಲಿ ಡಾರ್ನಿಯರ್ ಆಪರೇಶನಲ್ ಫ್ಲೈಯಿಂಗ್ ಟ್ರೈನಿಂಗ್ ಕೋರ್ಸ್‌ಗೆ ಸೇರುತ್ತಾರೆ.