ಸುಸ್ಥಿರ ನೀರಾವರಿ ಪದ್ಧತಿಯನ್ನು ಅಭಿವೃದ್ಧಿಪಡಿಸಿದ ಒಡಿಶಾದ ರೈತ
ಒಡಿಶಾದ ಹಳ್ಳಿಯೊಂದರ ರೈತರೊಬ್ಬರು ಅಭಿವೃದ್ಧಿಪಡಿಸಿರುವ ಜಲ ಚಕ್ರ ಯಾವುದೇ ವಿದ್ಯುತ್‌ನ ಸಹಾಯವಿಲ್ಲದೆ 3 ಎಕರೆ ಭೂಮಿಗೆ ನೀರುಣಿಸುತ್ತದೆ.
ಒಡಿಶಾದ ಬದಮ್ತಾಲಿಯಾ ಹಳ್ಳಿಯ ರೈತರೊಬ್ಬರು ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕೋಲು ಬಳಸಿ ಜಲ ಚಕ್ರವನ್ನು ತಯಾರಿಸಿದ್ದಾರೆ. ಇದರ ವಿಶೇಷತೆಯೆನೆಂದರೆ ಇದು ವಿದ್ಯುತ್ ಶಕ್ತಿ ಬಳಸದೆ ಕಾರ್ಯ ನಿರ್ವಹಿಸುತ್ತದೆ.
ಇಳಿಜಾರಿನಲ್ಲಿ ನೀರು ಹರಿಯುತ್ತದೆ ಎಂಬ ಮೂಲಭೂತ ಗುರುತ್ವಾಕರ್ಷಣೆ ನಿಯಮವನ್ನು ಆಧರಿಸಿ ಜಲ ಚಕ್ರವನ್ನು ನಿರ್ಮಿಸಿದೆ ಎನ್ನುತ್ತಾರೆ ಎರಡನೇ ತರಗತಿಗೆ ಶಾಲೆ ಬಿಟ್ಟ ಒಡಿಶಾದ ಮಹುರ್ ತಿಪರಿಯಾ ಎಂಬ ರೈತ. ಪ್ಲಾಸ್ಟಿಕ್ ಬಾಟಲಿಗಳು, ಬಾಂಬೂ, ಕಟ್ಟಿಗೆ ಹಲಗೆ, ಎರಡು ಕಬ್ಬಿಣದ ಬೀಮ್‌ಗಳು ಮತ್ತು ಕಬ್ಬಿಣದ ರಾಡ್ ಬಳಸಿ ತಯಾರಿಸಿದ ಚಕ್ರ ಈಗ ಎಲ್ಲರ ಗಮನ ಸೆಳೆಯುತ್ತಿದೆ.
10 ಅಡಿಯ ಜಲಚಕ್ರ ಕಂಟಖೈರಿ ನದಿಯ ದಡದಲ್ಲಿದ್ದು, ಅದನ್ನು ನೀರಿನ ಮಟ್ಟ ಹೆಚ್ಚಿರುವ ತಾಣದಲ್ಲಿ ಕೂರಿಸಲಾಗಿದ್ದು, ಅದರಿಂದ ಗುರುತ್ವಾಕರ್ಷಣೆ 40 ಕಟ್ಟಿಗೆಯ ಬ್ಲೇಡ್‌ಗಳಿಗೆ ಕಟ್ಟಿರುವ ಪ್ಲಾಸ್ಟಿಕ್ ಬಾಟಲಿಗಳತ್ತ ಹೊರಳಿ ಚಕ್ರವನ್ನು ತಿರುಗಿಸುತ್ತದೆ.
ಇಳಿಜಾರಿನಲ್ಲಿ ಬಾಂಬೂ ಇಡಲಾಗಿದ್ದು, ನೀರಿನ ಅಲೆಗಳಿಂದ ಚಕ್ರ ತಿರುಗಿ ನೀರು ಬಾಟಲಿಗಳಲ್ಲಿ ತುಂಬುತ್ತದೆ. ಸರ್ಕಾರದಿಂದ ಸಹಾಯಯಾಚಿಸಿ ಮಾಡಿದ ಹಲವು ಪ್ರಯತ್ನಗಳು ಕೈಗೂಡದೆ ಇದ್ದಾಗ ತಿಪಿರಿಯಾ ಇದನ್ನು ತಯಾರಿಸಿದ್ದಾರೆ ಎಂದು ಎಎನ್‌ಐಗೆ ತಿಳಿಸಿದ್ದಾರೆ.
“ನಾನೊಬ್ಬ ಬಡವ, ನನ್ನ ಬಳಿ ಹಣವಿಲ್ಲ. ಸರ್ಕಾರಕ್ಕೆ ಸಹಾಯ ಮಾಡಿ ಎಂದು ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದೇನೆ, ಆದರೆ ಯಾರೂ ಬಂದಿಲ್ಲ. ಹಾಗಾಗಿ ನನ್ನ ಬುದ್ದಿ ಉಪಯೋಗಿಸಿ ಈ ಯಂತ್ರವನ್ನು ಅಭಿವೃದ್ಧಿಪಡಿಸಲು ನಾನು ನಿರ್ಧರಿಸಿದೆ,” ಎನ್ನುತ್ತಾರೆ ಅವರು.
ಜಲಚಕ್ರ ತಿರುಗಿದಾಗ ಇಡೀ ಜಮೀನಿಗೆ ಜೋಡಿಸಿರುವ ಬಾಂಬೂನಿಂದ ನೀರು ಹೋಗುತ್ತದೆ. ಇದನ್ನು ನಿರ್ಮಿಸಲು ಒಂದು ತಿಂಗಳ ಸಮಯ ತಗುಲಿದ್ದು, 15 ದಿನಗಳಿಂದ ಕಾರ್ಯರಂಭ ಮಾಡಿದೆ.
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ ತಿಪರಿಯಾ ಅವರ ಈ ಯಂತ್ರ ಪಕ್ಕದ ಜಮೀನುಗಳಿಗೆ ಸಹಾಯ ಮಾಡುತ್ತಿದೆ ಮತ್ತು ಗಣರಾಜ್ಯೋತ್ಸವದಂದು ತೋಟಗಾರಿಕಾ ವಿಭಾಗದಲ್ಲಿ ಕರಂಜಿಯಾ ಸಬ್-ಕಲೆಕ್ಟರ್ ರಜನಿಕಾಂತಾ ಬಿಸ್ವಾಲ್ ಅವರಿಂದ ಸನ್ಮಾನ ಆಯೋಜಿಸಲಾಗುತ್ತಿದೆ.