1943 ರಲ್ಲಿ ಬಂಗಾಳದಲ್ಲಿ ಬರಗಾಲವಿರಲಿಲ್ಲ, ಕ್ಷಾಮ ಬಂದದ್ದು ಬ್ರಿಟನ್ ಪ್ರಧಾನಿ ಚರ್ಚಿಲ್‌ನ ರಾಜ್ಯನೀತಿಗಳಿಂದ

15th Aug 2019
  • +0
Share on
close
  • +0
Share on
close
Share on
close

ವಾಸ್ತವವಾಗಿ ಕ್ಷಾಮ ಸಮಯದಲ್ಲಿ ವಿನ್ಸ್ಟನ್ ಚರ್ಚಿಲ್ ಕೈಗೊಂಡ ವಿವಿಧ ಕ್ರಮಗಳು ದುರುದ್ದೇಶಪೂರಿತವಾಗಿತ್ತು. ಇದು 4 ದಶಲಕ್ಷ ಜನರನ್ನು ಕೊಂದ ಹತ್ಯಾಕಾಂಡಕ್ಕೆ ಸಂಪೂರ್ಣವಾಗಿ ಸಾಕ್ಷಿಯಾಯಿತಲ್ಲದೆ ಕೃಷಿ ಜನಸಂಖ್ಯೆಯ ಮೇಲೆ ಭಾರಿ ದುಷ್ಪರಿಣಾಮ ಬೀರಿದ ಕಾರಣ ದಶಕಗಳ ಕಾಲ ಆಘತಕ್ಕೊಳಗಾಗಿತ್ತು.


q

1876-78ರ ಕ್ಷಾಮಕ್ಕೆ ತುತ್ತಾದವರ ಚಿತ್ರಪಟ. ಚಿತ್ರ ಕೃಪೆ : ವ್ಯಾಲ್ಲಸ್ ಹೂಪರ್.


ಪ್ರತಿವರ್ಷ ಸ್ವಾತಂತ್ರ್ಯೋತ್ಸವದ ದಿನದಂದು, ರಾಷ್ಟ್ರವು ತನ್ನ ವಸಾಹತುಶಾಹಿ ಇತಿಹಾಸದಲ್ಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಣಿಸಿಕೊಂಡ ವೀರರಿಗೆ ಕೃತಜ್ಞತೆಯನ್ನು ಸಲ್ಲಿಸಲು ಸಿದ್ಧವಾಗುತ್ತದೆ. ಈ ವರ್ಷವೂ ಸಹ ಅದಕ್ಕಿಂತ ಭಿನ್ನವಾಗಿಲ್ಲ. ಆದಾಗ್ಯೂ ಸ್ವಾತಂತ್ರ್ಯ ಬಂದು 72 ವರ್ಷಗಳ ನಂತರವು ಭಾರತದ ಇತಿಹಾಸದಲ್ಲಿ ನಡೆದ ಭಯಾನಕವಾಗಿ ಉಳಿದುಹೋದ ಹಾಗೂ ಇನ್ನೂ ಉತ್ಖನನ ನಡೆಸಿ ಹಾಗೂ ಪುನರ್‌ಪರಿಶೀಲಿಸಬೇಕಾದ ರಾಜಕೀಯ ಸೂಕ್ಷ್ಮವಾದ ನಿರ್ಣಾಯಕ ದುರಂತ ಘಟನೆಯನ್ನು ನೆನಪಿಸಿಕೊಳ್ಳುವ ಕಾಲ ಬಂದಿದೆ. ಆದಾಗ್ಯೂ 1943 ರ ಬಂಗಾಳದ ಕ್ಷಾಮವು ಆಗಾಗ್ಗೆ ಚರ್ಚೆಗೊಳಪಟ್ಟ ರಾಷ್ಟ್ರೀಯ ದುರಂತವಾಗಿದ್ದು, ಇತಿಹಾಸದಲ್ಲಿ ಯಾವಾಗಲೂ ಕಾರ್ಯನಿರ್ವಹಿಸುವ ಮಾಧ್ಯಮ-ರಾಜಕೀಯದ ಸಂಕೀರ್ಣತೆಯ ಉದಾಹರಣೆಯಾಗಿದೆ.


ಬಂಗಾಳದಲ್ಲಿ ಕ್ಷಾಮ ಉಂಟಾದ ಸಂದರ್ಭದಲ್ಲಿ ಬ್ರಿಟನ್ ವಹಿಸಿದ ಪಾತ್ರವು ವಿವಾದಾಸ್ಪದವಾಗಿದೆ. ತನ್ನ ಯುರೋಕೇಂದ್ರಿತ ಹಟೋತ್ಸಾಹದಿಂದ ಕೂಡಿದ್ದ ವಿನ್ಸ್ಟನ್ ಚರ್ಚಿಲ್ ಬಂಗಾಳದ ಜನರ ನಾಶಕ್ಕೆ ಕಾರಣನಾದವನು ಎಂಬುದನ್ನು ಅರ್ಥಶಾಸ್ತ್ರಜ್ಞರು ಹಾಗೂ ಇತಿಹಾಸಕಾರರು ಗ್ರಹಿಸಿದ್ದಾರೆ, ಆದರೆ, ಬಹುಶಃ ಚರ್ಚಿಲ್ ಈ ಅಪಾದನೆಯಿಂದ ತಪ್ಪಿಸಿಕೊಳ್ಳುತ್ತಾನೆ. ಜಾನ್ ಹಿಕ್ಮನ್, ಆರ್ವೆಲಿಯನ್ ರೆಕ್ಟಿಫಿಕೇಶನ್ಸ್ : ಚರ್ಚಿಲ್‌ನ ಪ್ರಸಿದ್ಧ ಜೀವನ ಚರಿತ್ರೆ ಹಾಗೂ 1943 ರ ಬಂಗಾಳ ಹೀಗೆ ಹೇಳುತ್ತದೆ,


"ಪಾಶ್ಚಿಮಾತ್ಯ ಇತಿಹಾಸಕಾರರು ಕಮ್ಯುನಿಸ್ಟ್ ನಾಯಕರನ್ನು ಸಾಮೂಹಿಕ ದೌರ್ಜನ್ಯದೊಂದಿಗೆ ಸಂಯೋಜಿಸಲು ಬಯಸಿದರೂ, ಅವರು ಬಹುಶಃ ಪಾಶ್ಚಿಮಾತ್ಯ ನಾಗರಿಕತೆಯೊಂದಿಗೆ ಬಲವಾಗಿ ಸಂಬಂಧ ಹೊಂದಿರುವ ವ್ಯಕ್ತಿಯನ್ನು ಮತ್ತು ಎರಡನೆಯ ಮಹಾಯುದ್ಧದ ವೀರರಲ್ಲಿ ಒಬ್ಬನನ್ನು ಅವನದೇ ಅಸಹ್ಯ ಹಾಗೂ ದುರಂತ ಕೃತ್ಯಗಳಿಂದ ಹೋಲಿಸುವುದಕ್ಕೆ ಹಿಂಜರಿಯುತ್ತಾರೆ."


ಕ

1943 ರಲ್ಲಿ ಬ್ರಿಟಿಷ್ ಭಾರತದ ಬಂಗಾಳ ಪ್ರಾಂತ್ಯದಲ್ಲಿ ಬರಗಾಲದಿಂದ ಸುಮಾರು 4 ದಶಲಕ್ಷ ಜನರು ಸಾವನ್ನಪ್ಪಿದರು. ಚಿತ್ರ ಕೃಪೆ: ವಿಕಿಪೀಡಿಯಾ ಕಾಮನ್ಸ್

ಆದರೂ, ಅಂದಿನ ಭಾರತದ ವೈಸ್‌ರಾಯ್ ಆಗಿದ್ದ ಲಾರ್ಡ್ ವೇವೆಲ್ "ನಿರ್ಲಕ್ಷ್ಯ, ಪ್ರತಿಕೂಲ ಮತ್ತು ತಿರಸ್ಕಾರ" ಎಂದು ಪರಿಗಣಿಸಿದ್ದ ತಂತ್ರಗಳಿಂದಾಗಿ ಚರ್ಚಿಲ್ ಬಂಗಾಳದ ಕ್ಷಾಮಕ್ಕೆ ಕಾರಣನಾಗಿದ್ದಾನೆ.


ವಾಸ್ತವವಾಗಿ, ಬರಗಾಲದ ಹಿನ್ನೆಲೆಯಲ್ಲಿ ಕೈಗೊಂಡ ವಿವಿಧ ಕ್ರಮಗಳು ದುರುದ್ದೇಶಪೂರಿತ ಹಾಗೂ 4 ದಶಲಕ್ಷ ಜನರನ್ನು ಕೊಂದ ಹತ್ಯಾಕಾಂಡಕ್ಕೆ ಸಂಪೂರ್ಣವಾಗಿ ಕಾರಣವಾಗಿದ್ದ ಅದು ಕೃಷಿ ಜನಸಂಖ್ಯೆಯ ಮೇಲೆ ಭಾರಿ ದುಷ್ಪರಿಣಾಮ ಬೀರಿದ ಕಾರಣ ಅದು ದಶಕಗಳ ಕಾಲ ಆಘಾತಕ್ಕೊಳಗಾಗಿತ್ತು.


ಮೈಕ್ ಡೇವಿಸ್, 'ಲೇಟ್ ವಿಕ್ಟೋರಿಯನ್ ಹೊಲೊಕಾಸ್ಟ್ಸ್‌’ ನಲ್ಲಿ, ಬ್ರಿಟಿಷ್ ಆಡಳಿತದ 120 ವರ್ಷಗಳಲ್ಲಿ 31 ಗಂಭೀರ ಕ್ಷಾಮಗಳು ಸಂಭವಿಸಿವೆ ಎಂದು ಬ್ರಿಟಿಷ್ ಆಡಳಿತಕ್ಕು ಮುಂಚಿನ 2,000 ವರ್ಷಗಳಲ್ಲಿ 17 ಬರಗಾಲಗಳು ಸಂಭವಿಸಿದ್ದವೆಂದು ತುಲನೆ ಮಾಡಿದಾಗ ತಿಳಿಯಿತು ಎಂದು ಹೇಳಿದ್ದಾನೆ. ಈ ವಾಸ್ತವವನ್ನು ತಿಳಿದ ನಂತರ, ಬರಗಾಲ ಗೋಚರಿಸುವ ಕಾರಣಗಳನ್ನು ತ್ವರಿತವಾಗಿ ನೋಡುವುದು ನಮಗೆ ಕಡ್ಡಾಯವಾಗಿದೆ.


ಸಿಡ್ನಿ ಡಿ ಬೈಲಿ,'ಪೋಸ್ಟ್ ಮಾರ್ಟಮ್ ಆನ್ ಬೆಂಗಾಳ್’ ನಲ್ಲಿ, 'ಬೆಳೆ ವೈಫಲ್ಯ, ಚಂಡಮಾರುತ, ಬೆಳೆ ರೋಗ ಹಾಗೂ ಬರ್ಮಾದಿಂದ ಆಮದು ಕಡಿಮೆಯಾಗಿದ್ದರಿಂದ ಮತ್ತು ಹಲವು ಸಂದರ್ಭಗಳ ಸಂಯೋಜನೆಯು ಆಹಾರದ ಕೊರತೆಗೆ ಕಾರಣವಾಯಿತು ಎಂಬುದು ಸ್ಪಷ್ಟವಾಗಿದೆ' ಎಂದು ಬರೆದಿದ್ದಾರೆ.


ಪತ್ರಕರ್ತೆ ಹಾಗೂ ಲೇಖಕಿ ಮಧುಶ್ರೀ ಮುಖರ್ಜಿ ತಮ್ಮ 'ಚರ್ಚಿಲ್ಸ್ ಸಿಕ್ರೆಟ್ ವಾರ್' ನಲ್ಲಿ, ಕ್ಷಾಮದ ಸಂಪೂರ್ಣ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಹಾಗೂ ಬ್ರಿಟನ್ನಿನ ವಕ್ರ ರಾಜ್ಯ ನೀತಿಗಳನ್ನು ಅನುಸರಿಸಿದ ಮೂಕ ಬ್ಲಿಟ್ಜ್ಕ್ರಿಗ್‌‌ನನ್ನು (ಮಿಂಚಿನಂತ ಯುದ್ಧ) ತರ್ಕಬದ್ಧವಾಗಿ ವಿವರಿಸಿದ್ದಾರೆ. 1942 ರಲ್ಲಿ ಗಣನೀಯ ಪ್ರಮಾಣದ ಬೆಳೆಗಳನ್ನು ಹೊಂದಿದ್ದರೂ, ಮುಂದಿನ ವರ್ಷ ಇಂಡೋ-ಗಂಗೆ ಬಯಲಿನ ಬೃಹತ್ ಪ್ರದೇಶಗಳು ಬರಗಾಲಕ್ಕೆ ತುತ್ತಾದವು, ಅಲ್ಲಿನಿಂದ ಬಂಗಾಳಕ್ಕೆ ಕೆಡುಕು ಶುರುವಾಯಿತು.


ವುಡ್ಹೆಡ್ ಆಯೋಗದ ಪ್ರಕಾರ, ಬರಗಾಲ ಮತ್ತು ನಂತರದ ಸಾಂಕ್ರಾಮಿಕ ರೋಗಗಳು ದೇಶದ ಈ ಭಾಗದಲ್ಲಿ 1.5 ದಶಲಕ್ಷಕ್ಕೂ ಹೆಚ್ಚು ಭಾರತೀಯರನ್ನು ಕೊಂದವು ಎನ್ನುತ್ತದೆಯಾದರೂ, ಅಂಕೆಗಳು ದಾಖಲೆಗಳಲ್ಲಿ ವ್ಯತ್ಯಾಸವಾಗುತ್ತವೆ.


ಬಂಗಾಳದ ಕ್ಷಾಮವನ್ನು “ಆಡಳಿತದ ಹಿತಕ್ಕಾಗಿ ನಡೆಸಲಾಯಿತು” ಎಂದು ಹೇಳಿಕೊಂಡ ಬ್ರಿಟಿಷ್ ಸರ್ಕಾರ, ಚರ್ಚಿಲ್, ಬಂಗಾಳದ ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆಗಿಂತ ಮುಖ್ಯವಾದ್ದು ಎಂದು ಭಾವಿಸಿದ್ದ ಆಹಾರ ಧಾನ್ಯಗಳ ಸರಬರಾಜನ್ನು ಗ್ರೀಸ್ ಮತ್ತು ಯುಗೊಸ್ಲಾವಿಯಕ್ಕೆ ತಿರುಗಿಸಿತು.


ಮಧುಶ್ರೀ ಮುಖರ್ಜಿ ಅವರ ಪುಸ್ತಕವನ್ನು ವಿಮರ್ಶಿಸುವ ಪ್ರಕ್ರಿಯೆಯಲ್ಲಿ, ಶಶಿ ತರೂರ್,


"ದ್ವೀಪವು ಅದೇ ಕಷ್ಟವನ್ನು ಅನುಭವಿಸದಿದ್ದರೂ ಸಹ, ಭಾರತದ ಕೆಲವು ಧಾನ್ಯಗಳನ್ನು ಅಲ್ಲಿನ ಅಗತ್ಯಗಳನ್ನು ಪೂರೈಸಲು ಸಿಲೋನ್‌ಗೆ (ಈಗ ಶ್ರೀಲಂಕಾ) ರಫ್ತು ಮಾಡಲಾಯಿತು; ಆಸ್ಟ್ರೇಲಿಯನ್ ಗೋಧಿಯನ್ನು ಹಿಂದಿನ ಭಾರತೀಯ ನಗರಗಳಿಂದ( ಹಸಿವಿನಿಂದ ಸತ್ತವರ ದೇಹಗಳು ಬೀದಿಗಳಲ್ಲಿ ಕಸದ ರಾಶಿಯಲ್ಲಿ ಬಿದ್ದಿದ್ದ ನಗರಗಳು) ಮೆಡಿಟರೇನಿಯನ್ ಮತ್ತು ಬಾಲ್ಕನ್‌ಗಳಲ್ಲಿನ ಡಿಪೋಗಳಿಗೆ ಸಾಗಿಸಲಾಯಿತು. ಹಾಗೂ ಅಮೇರಿಕಾದ ಹಾಗೂ ಕೆನಡದ ಆಹಾರದ ನೆರವಿನ ಹಸ್ತವನ್ನು ನಿರಾಕರಿಸಲಾಯಿತು. ಭಾರತಕ್ಕೆ ತನ್ನದೇ ಮೀಸಲು ಹಣವನ್ನು ಉಪಯೋಗಿಸಲು ನಿರಾಕರಿಸಲಾಗಿತ್ತು ಅಥವಾ ಆಹಾರವನ್ನು ಆಮದು ಮಾಡಿಕೊಳ್ಳಲು ತನ್ನ ಹಡಗುಗಳನ್ನೂ ಬಳಸಲು ಬಿಡಲಿಲ್ಲ."


ಇದರ ಹೊರತಾಗಿ "ಊಹಾಪೋಹಗಳು, ಸಂಗ್ರಹಣೆ ಮತ್ತು ಕಪ್ಪು-ಮಾರುಕಟ್ಟೆ ಚಟುವಟಿಕೆಗಳು ವ್ಯಾಪಕವಾಗಿ ಹರಡಿದ್ದವು. ಆಗಾಗ್ಗೆ ಧಾನ್ಯ ವ್ಯಾಪಾರಿಗಳು ಶಾಸನಬದ್ಧ ಗರಿಷ್ಠ ಬೆಲೆಯ ಮಿತಿಯಲ್ಲಿ ಕಾರ್ಯನಿರ್ವಹಿಸಲು ನಿರಾಕರಿಸಿದರು. ಸಾರ್ವಜನಿಕರಲ್ಲಿ ಒಂದು ಗುಂಪು ಅಪಾರ ಲಾಭವನ್ನು ಗಳಿಸುತ್ತಿದ್ದರೆ, ಇತರರು ಹಸಿವಿನಿಂದ ಬಳಲುತ್ತಿದ್ದರು. ಭ್ರಷ್ಟಾಚಾರ ವ್ಯಾಪಕವಾಗಿ ಹರಡಿತ್ತು". ಚರ್ಚಿಲ್ ಅವರ “ಸಾರ್ಚ್ಡ್ ಭೂಮಿಯ ನೀತಿಯನ್ನು ಅನುಸರಿಸಿ ಬಂಗಾಳದ ಬರಗಾಲವು ಭಾರಿ ಆಯಾಮಗಳನ್ನು ತೆಗೆದುಕೊಂಡಿತು. ಕುಖ್ಯಾತ ನಿರಾಕರಣೆ ನೀತಿ ಎಂದು ಕರೆಯಲ್ಪಡುವ ಇದು ಬಂಗಾಳದ ಸುತ್ತಮುತ್ತ ಯಾವುದೇ ಹಡಗುಗಳು ಅಥವಾ ಸಣ್ಣ ಹಡಗುಗಳನ್ನು ಅನುಮತಿಸಲು ನಿರಾಕರಿಸಿತು. ಇದರಿಂದಾಗಿ ಜಪಾನಿನ ಸೈನಿಕರು ಭಾರತೀಯ ಭೂಮಿಯ ಬಂಗಾಳದ ಭಾಗವನ್ನು ಅತಿಕ್ರಮಿಸಲು ಸಾಧ್ಯವಾಗಲಿಲ್ಲ. ಬಂಗಾಳದ ಹಡಗು ಹಾಗೂ ದೋಣಿಗಳನ್ನು ನಾಶಪಡಿಸಲಾಯಿತು.


ಜಪಾನಿನ ಸೈನಿಕರು ಈ ಸ್ಥಳದಲ್ಲಿ ಮೊಕ್ಕಾಂ ಹೂಡಬಹುದು ಎಂದು ಭಾವಿಸುವುದನ್ನು ತಡೆಯಲು ಬಂಗಾಳದ ಭತ್ತದ ಬೆಳೆಗಳನ್ನು (ಯುರೋಪ್ ಮತ್ತು ಬ್ರಿಟನ್‌ಗೆ ಸಹ ಕಳುಹಿಸಲಾಗಿದೆ) ವಶಪಡಿಸಿಕೊಂಡು ನಾಶಪಡಿಸಲಾಯಿತು.


ಪ್ರಾಂತ್ಯದಾದ್ಯಂತ (ಬಂಗಾಳ) ಮಸೂರ, ಸಕ್ಕರೆ ಕಲ್ಲಿದ್ದಲು ಮತ್ತು ಬೆಂಕಿ ಕಡ್ಡಿಗಳ ಕೊರತೆಯಿಂದಾಗಿ ಅಕ್ಕಿಯ ಅಡುಗೆ ಮತ್ತು ಬಳಕೆಯನ್ನು ಹೆಚ್ಚು ಕಷ್ಟಕರವಾಗಿಸಿದ ಸೀಮೆಎಣ್ಣೆಯ ಕೊರತೆಯು, ಬಂಗಾಳದ ದುರ್ಭಿಖೋ(ಕ್ಷಾಮ)ವನ್ನು ಹಿಂದೆಂದೂ ಕಂಡಿರದಷ್ಟು ಭೀಕರವಾಗಿಸಿತು, ಆದರೆ ವಸಾಹತುಶಾಹಿ ನಾಯಕ ಈ ಸಂಪೂರ್ಣ ವಿನಾಶದ ಚಿತ್ರವು ನಿಧಾನವಾಗಿ ಚಲಿಸುವದನ್ನು ವೀಕ್ಷಿಸುತ್ತಿದ್ದ. ವಾಸ್ತವದಲ್ಲಿ, ಬ್ರಿಟನ್‌ನಲ್ಲಿ ಯುದ್ಧದ ಸಮಯದಲ್ಲಿ ಪಡಿತರವನ್ನು ಪಡೆಯುವುದು ದುರಾಚಾರ ಎಂದು ಪರಿಗಣಿಸಲಾಗಿತ್ತು. ಇದು ಸ್ವಯಂ ವಿರೋಧಾಭಾಸವಾಗಿದ್ದು ಹಾಗೂ ಸ್ಪಷ್ಟ ಅಪರಾಧವಾಗಿದೆ‌.


ಅಂದು ಭಾರತದ ಹೊಸ ವೈಸ್ರಾಯ್ ಆಗಿ ಶೀಘ್ರದಲ್ಲೇ ನೇಮಕಗೊಳ್ಳಲಿರುವ ಭಾರತದ ರಾಜ್ಯ ಕಾರ್ಯದರ್ಶಿ ಲಿಯೋಪೋಲ್ಡ್ ಅಮೆರಿ ಮತ್ತು ಫೀಲ್ಡ್ ಮಾರ್ಷಲ್ ಸರ್ ಆರ್ಚಿಬಾಲ್ಡ್ ವೇವೆಲ್ ಅವರು ವಸಾಹತು ಪ್ರದೇಶಕ್ಕೆ ಹೆಚ್ಚಿನ ಆಹಾರವನ್ನು ಹೇಗೆ ಸಾಗಿಸಬೇಕೆಂದು ಚರ್ಚಿಸುತ್ತಿದ್ದರೆ, ಅತ್ತ ಚರ್ಚಿಲ್ ತಮ್ಮದೇ ಹಾದಿ ಹಿಡಿದಿದ್ದರು. ಚರ್ಚಿಲ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನದ ಹೊರತಾಗಿಯೂ ವಸಾಹತುಶಾಹಿ ಪ್ರತಿನಿಧಿಗಳಿಂದ ಬಂಗಾಳ ಬರಗಾಲವನ್ನು ತಡೆಯಲಾಗಲಿಲ್ಲ.


ಕ

ಸೀಮೆಎಣ್ಣೆ, ಮಸೂರ, ಸಕ್ಕರೆ, ಕಲ್ಲಿದ್ದಲು ಮತ್ತು ಬೆಂಕಿ ಕಡ್ಡಿಗಳ ಕೊರತೆಯಿಂದಾಗಿ - ಅಕ್ಕಿ ಅಡುಗೆ ಮತ್ತು ಬಳಕೆ ಕಷ್ಟಕರವಾಯಿತು. ಚಿತ್ರ ಕೃಪೆ: ಕಲ್ಯಾಣಿ ಭಟ್ಟಾಚಾರ್ಯೀ ಮತ್ತು ಮನೋಜ್ ಸರ್ಬಾಧಿಕರ್.


ಸ್ವತಂತ್ರ ಪೂರ್ವ ಭಾರತದಲ್ಲಿ ಬರಗಾಲವು ನೈಸರ್ಗಿಕವಾಗಿ ಅಲ್ಲದೆ ಹೆಚ್ಚು ಮಾನವ ನಿರ್ಮಿತವಾಗಿತ್ತು. ಚರ್ಚಿಲ್ ಭಾರತೀಯರನ್ನು "ಮೊಲಗಳಂತೆ ಸಂತಾನೋತ್ಪತ್ತಿ" ಮಾಡುತ್ತಾರೆಂದೂ, ಹಾಗೂ "ಗಾಂಧಿ ಇನ್ನೂ ಸತ್ತಿಲ್ಲ" ವಾದ್ದರಿಂದ ಮತ್ತಷ್ಟು ಶಕ್ತಿಯುತವಾಗಿ ಬೆಳೆಯುತ್ತಿದ್ದಾರೆ ಎಂದು ಗ್ರಹಿಸಿದ್ದಾನೆ. ಭಾರತೀಯರ ಮೇಲಿನ ತನ್ನ ಕ್ರೌರ್ಯದ ಹೊರತಾಗಿಯೂ ಚರ್ಚಿಲ್, ಎರಡನೇ ಮಹಾಯುದ್ಧದಲ್ಲಿ ತನ್ನ ಬಹುಮುಖ್ಯ ನಾಯಕನ ಪಾತ್ರದಿಂದಾಗಿ ತನ್ನ ಘನತೆಯನ್ನು ಉಳಿಸಿಕೊಂಡಿದ್ದ.


ಇಷ್ಟು ದಿನ ಬಂಗಾಳದ ಕ್ಷಾಮಕ್ಕೆ ಹಾಗೂ 3 ದಶಲಕ್ಷದಷ್ಟು ಜನರ ಮಾರಣಹೋಮಕ್ಕೆ ಕಾರಣ ಬರಗಾಲವಲ್ಲವೆಂದೂ, ಅದಕ್ಕೆ ಕಾರಣ ಚರ್ಚಿಲ್‌ನ ನೀತಿಗಳೆಂದೂ ನಂಬಿದ್ದ ಇತಿಹಾಸಕಾರರ ಅಭಿಪ್ರಾಯಕ್ಕೆ ಪುಷ್ಟಿ ನೀಡುವಂತೆ ವರದಿಯೊಂದು ಬಂದಿದೆ.


ಅಮೆರಿಕಾ ಹಾಗೂ ಭಾರತದ ತಜ್ಞರ ತಂಡವೊಂದು ನಡೆಸಿದ ಅಧ್ಯಯನದ ಪ್ರಕಾರ 1943 ರಲ್ಲಿ ಘಟಿಸಿದ ಕ್ಷಾಮಕ್ಕೆ ಅಂದಿನ ಬ್ರಿಟೀಷ್ ಸರಕಾರದ ನೀತಿಯೇ ಕಾರಣವೆಂದು ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್ ಎಂಬ ಜರ್ನಲ್‌ನಲ್ಲಿ ಪ್ರಕಟಿಸಿದ ತನ್ನ ವರದಿಯಲ್ಲಿ ತಿಳಿಸಿದೆ.


ಹವಾಮಾನ ದತ್ತಾಂಶವನ್ನು ಬಳಸಿ ಸಂಶೋಧನೆ ನಡೆಸಿದ ತಂಡವು, 1873 ಮತ್ತು 1943 ರ ನಡುವಿನಲ್ಲಿ ಘಟಿಸಿದ ಆರು ಪ್ರಮುಖ ಬರಗಾಲಗಳನ್ನು ಮಣ್ಣಿನಲ್ಲಿರುವ ತೇವಾಂಶದ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಸಂಶೋಧನೆ ನೆಡೆಸಿತು. ಮೊದಲ ಐದು ಕ್ಷಾಮಗಳು, ಅಂದರೆ 1873-74, 1876, 1877, 1896-'97, ಮತ್ತು 1899 ರಲ್ಲಿ ಬರಗಾಲವಿತ್ತೆಂದು, 1943 ರಲ್ಲಿ ಬಂಗಾಳದಲ್ಲಿ ಬರಗಾಲವಿರಲಿಲ್ಲ ಹಾಗೂ ಮಳೆಯ ಪ್ರಮಾಣವು ಸರಾಸರಿಗಿಂತ ಹೆಚ್ಚಿತ್ತು ಎಂಬುದನ್ನು ಕಂಡುಹಿಡಿದಿದೆ ಐಐಟಿ ಗಾಂಧಿನಗರದ ಸಂಶೋಧಕರ ತಂಡ.


"ನಾವು ಭಾರತದ ಬರಗಾಲದ ಸಂಪೂರ್ಣ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಅವು ಸಂಭವಿಸುವ ಸಾಧ್ಯತೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ." ಎಂದು ಐಐಟಿಯ ಸಹಾಯಕ ಪ್ರಾಧ್ಯಾಪಕರಾದ ವಿಮಲ್ ಮಿಶ್ರಾ ಹೇಳಿದರು ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.


ಬ್ರಿಟೀಷರ ಆಡಳಿತ ಅವಧಿಯಲ್ಲಿ ಕಾಣಿಸಿಕೊಂಡ ಕ್ಷಾಮಗಳು ಲಕ್ಷ ಲಕ್ಷ ಜನರನ್ನು ಬಲಿತೆಗೆದುಕೊಂಡಿವೆ. ನಾವು ಸಂಶೋಧನೆ ನಡೆಸಿದಾಗ - ಬರಗಾಲ ಹಾಗೂ ನೀತಿಗಳ ವೈಫಲ್ಯಗಳೇ ಕಾರಣವೆಂದು ತಿಳಿದುಬಂದಿದೆ ಹಾಗೂ 1943 ರ ಕ್ಷಾಮಕ್ಕೆ ಸರಕಾರದ ನೀತಿಗಳ ವೈಫಲ್ಯವೇ ಮುಖ್ಯ ಕಾರಣವೆಂದು ಹೇಳಿದ್ದಾರೆ ವಿಮಲ್ ಮಿಶ್ರಾ.


"ನಾವು ಗಮನಿಸಿದ ಪ್ರಕಾರ 1935-45 ರ ಒಳಗೆ ಬಂಗಾಳದಲ್ಲಿ ಕ್ಷಾಮ ಬಂದಿತ್ತು, ಆದರೆ ಆ ಅವಧಿಯಲ್ಲಿ ಆ ಪ್ರದೇಶದಲ್ಲಿ ಬರಗಾಲವಿರಲಿಲ್ಲ ಎಂಬ ಸತ್ಯ ಸಂಶೋಧನೆಯಲ್ಲಿ ತಿಳಿದು ಬಂದಿದೆ. ಬ್ರಿಟಿಷ್ ಸಾಮ್ರಾಜ್ಯದ ಈಶಾನ್ಯ ಭಾಗವಾದ ಅವಧ್ ಪ್ರಾಂತ್ಯದ ಬಿಹಾರ್ ಹಾಗೂ ಬಂಗಾಳದಲ್ಲಿ ಘಟಿಸಿದ ಕ್ಷಾಮಗಳ ಕುರಿತು ಘನವಾದ ಶೋಧನೆ ನಡೆಸಿದ ನಮಗೆ ಬಂಗಾಳದ ಕ್ಷಾಮಕ್ಕೆ ಮುಖ್ಯ ಕಾರಣ ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಎರಡನೇ ವಿಶ್ವಯುದ್ಧಕ್ಕೆ ಸಂಬಂಧಿಸಿದ ಅಂಶಗಳಿಂದ ಸಂಭವಿಸಿತು ಎಂಬುದು ತಿಳಿದುಬಂದಿದೆ. ಅದರಲ್ಲಿ ಮಲೇರಿಯಾ, ಹಸಿವು ಹಾಗೂ ಅಪೌಷ್ಟಿಕತೆಯೂ ಕೂಡಿದೆ," ಎಂದು ವಿಮಲ್ ದಿ ಎಕನಾಮಿಕ್ ಟೈಮ್ಸ್ ಗೆ ಹೇಳಿದರು.


ತಜ್ಞರ ಪ್ರಕಾರ, 1942 ರಲ್ಲಿ ಬರ್ಮಾದ ಮೇಲೆ ಜಪಾನಿನ ಆಕ್ರಮಣದ ನಂತರ, ಭತ್ತದ ಆಮದು ನಿಂತುಹೋಯಿತು ಹಾಗೂ ಬಂಗಾಳದ ಮಾರುಕಟ್ಟೆ ಸರಬರಾಜು ಮತ್ತು ಸಾರಿಗೆ ವ್ಯವಸ್ಥೆಗಳು ಅಸ್ತವ್ಯಸ್ತಗೊಂಡವು. ಮಿಲಿಟರಿ, ಪೌರಕಾರ್ಮಿಕರು ಮತ್ತು ಇತರ "ಆದ್ಯತೆಯ ವರ್ಗಗಳಿಗೆ" ಪ್ರಮುಖ ಸಾಮಗ್ರಿಗಳ ವಿತರಣೆಗೆ ಬ್ರಿಟಿಷ್ ಸರ್ಕಾರ ಮುಖ್ಯ ಆದ್ಯತೆ ನೀಡಿತು.


ಭಾರತೀಯರು ಏಳು ದಶಕಗಳ ಹಿಂದೆ, ಬಂಗಾಳದ ಕ್ಷಾಮಕ್ಕೆ ಬಲಿಯಾದವರನ್ನು ವಿಭಿನ್ನ ಇತಿಹಾಸದ ಕೊಂಡಾಡದ ನಾಯಕರನ್ನಾಗಿಸಿದ್ದಾರೆ. ಇವರು ಬಂಗಾಳ ವಸಾಹತುಶಾಹಿಗಳ ಆಶಯಗಳಿಗೆ ಬೆಲೆತೆತ್ತರು, ಅಲ್ಲದೇ ಹಸಿವು ಹಾಗೂ ಅಪೌಷ್ಟಿಕತೆಯ ನೋವಿನಿಂದಾಗಿ ಬದುಕುಳಿಯಲು ಸಾಧ್ಯವಾಗಲಿಲ್ಲ, ಆದರೆ ವ್ಯಂಗ್ಯವಾಗಿ ಸಂವೇದನಾಶೀಲರಾಗಿ ಉಳಿಯುವಲ್ಲಿ ಯಶಸ್ವಿಯಾದರು.


ಅವರುಗಳ ಸಾವು ಸಾಮ್ರಾಜ್ಯಶಾಹಿಯ ಬಗ್ಗೆ ಇರುವ ಸ್ವಾರ್ಥ ಮತ್ತು ಕ್ರೂರತೆಯನ್ನು ಸೂಚಿಸುತ್ತದೆ.

  • +0
Share on
close
  • +0
Share on
close
Share on
close
Report an issue
Authors

Related Tags

Our Partner Events

Hustle across India