ಸಾಂತಾ ಕ್ಲಾಸ್ ವೇಷ ಧರಿಸಿ ಅನಾಥ ಮಕ್ಕಳಿಗೆ ಮುದ ನೀಡಿದ ವಿರಾಟ ಕೊಹ್ಲಿ

ಕೋಲ್ಕತ್ತಾದ ಆಶ್ರಯ ಮನೆಯೊಂದರ ಮಕ್ಕಳಿಗೆ ನಾಯಕ ವಿರಾಟ್ ಕೊಹ್ಲಿ ಸಾಂತಾ ಕ್ಲಾಸ್ ಆಗಿ ಉಡುಗೊರೆಗಳನ್ನು ನೀಡಿ ತಮ್ಮ ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ.

ಸಾಂತಾ ಕ್ಲಾಸ್ ವೇಷ ಧರಿಸಿ ಅನಾಥ ಮಕ್ಕಳಿಗೆ ಮುದ ನೀಡಿದ ವಿರಾಟ ಕೊಹ್ಲಿ

Saturday December 21, 2019,

1 min Read

ಕ್ರಿಕೆಟ್ ಅನ್ನು ಒಂದು ಧರ್ಮದಂತೆ ಕಾಣುವ ಭಾರತೀಯರ ಸಂತೋಷಕ್ಕೆ ಹಲವಾರು ಭಾರಿ ಕಾರಣೀಕರ್ತರಾಗಿರುವ ಭಾರತ ಕ್ರಿಕೆಟ್ ತಂಡದ ನಾಯಕನಾದ ವಿರಾಟ್ ಕೊಹ್ಲಿ, ಸಾಮಾನ್ಯವಾಗಿ ನೀಲಿ ಬಣ್ಣದ ಜರ್ಸಿಯಲ್ಲಿ ಮಿಂಚುವ ಬದಲು ಈ ಬಾರಿ ಸಾಂತಾ ಕ್ಲಾಸ್ ವೇಷ ಧರಿಸಿ ಮಕ್ಕಳ ಆಸೆಗಳನ್ನು ಈಡೇರಿಸಿದರು.


ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಶೈಲಿಯ ಆಟದಿಂದ ಹೆಸರುವಾಸಿಯಾದ ವಿರಾಟ ಕೊಹ್ಲಿ ಕ್ರಿಸ್ಸ್ಮಸ್ ಹಬ್ಬದ ಸಂದರ್ಭದಲ್ಲಿ ಇತ್ತೀಚಿಗೆ ಕೋಲ್ಕತ್ತಾದ ಅನಾಥ ಆಶ್ರಯ ಮನೆಯಲ್ಲಿ ಸಾಂತಾ ಕ್ಲಾಸ್ ವೇಷ ಧರಿಸಿ ಮಕ್ಕಳು ಆಶಿಸಿದ ಉಡುಗರೆಗಳನ್ನು ನೀಡಿದರು, ಪ್ರಸ್ತುತ ಭಾರತ ಮತ್ತು ವೆಸ್ಟ್ ಇಂಡೀಸ್ ಏಕ ದಿನದ ಪಂದ್ಯಗಳಲ್ಲಿ ವ್ಯಸ್ತವಾಗಿರುವ ಕೊಹ್ಲಿ ಬಿಡುವುಮಾಡಿಕೊಂಡು ತುಸು ಸಮಯವನ್ನು ಮಕ್ಕಳ ಜೊತೆ ಕಳೆಯುವ ಮುಖಾಂತರ ಎಂದಿನಿಂತೆ ತಮ್ಮ ಉದಾರತೆಯನ್ನು ಮೆರೆದಿದ್ದಾರೆ.


ಸಾಂತಾ ಕ್ಲಾಸ್‌ ವೇಷದಲ್ಲಿ ವಿರಾಟ ಕೊಹ್ಲಿ (ಚಿತ್ರಕೃಪೆ: ಸ್ಟಾರ್ ಸ್ಪೋರ್ಟ್ಸ್ ಟ್ವಿಟರ್)



ಸ್ಟಾರ್ ಸ್ಪೋರ್ಟ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಕ್ಕಳು ತಮ್ಮ ಆದರ್ಶ ವ್ಯಕ್ತಿಗಳಾದ ಸಚಿನ, ಧೋನಿ, ರೊನೊಲ್ಡೊ ಮತ್ತು ಕೊಹ್ಲಿ ಅಂತಹವರನ್ನು ಭೇಟಿಮಾಡುವ ಇಂಗಿತವನ್ನು ವ್ಯಕ್ತಪಡಿಸದ್ದರು. ಇದನ್ನು ಐಪ್ಯಾಡನ್ನಲ್ಲಿ ನೋಡಿದ ಕೊಹ್ಲಿ ಸಾಂತಾ ಕ್ಲಾಸ್ಸ್ ವೇಷ ಧರಿಸಿ ಮಕ್ಕಳಲ್ಲಿ ಉಡುಗೊರೆಗಳನ್ನು ಹಂಚಿದರು ನಂತರ ಮಕ್ಕಳಿಗೆ ವಿರಾಟ ಕೊಹ್ಲಿಯವರನ್ನು ಭೇಟಿಯಾಗಲು ಆಶಿಸುತ್ತೀರಾ ಎಂದು ಕೇಳಿದರು, ಎಲ್ಲ ಮಕ್ಕಳು ಒಕ್ಕೊರಲಿನಿಂದ ಹೌದು ಎಂದಾಗ ತಮ್ಮ ನಕಲಿ ಗಡ್ಡವನ್ನು ತೆಗೆದುಹಾಕಿ ತಮ್ಮ ನಿಜರೂಪವನ್ನು ತೋರಿಸಿದರು.

ತಮ್ಮ ಮುಂದೆ ನಡೆದ ವಿಸ್ಮಯನ್ನು ನಂಬಲಾರದೆ ಮೂಕವಿಸ್ಮಿತರಾದ ಮಕ್ಕಳು ಓಡಿಹೋಗಿ ಅವರನ್ನು ತಬ್ಬಿಕೊಂಡರು. "ಈ ಕ್ಷಣಗಳು ನನಗೆ ತುಂಬಾ ವಿಶೇಷವಾದವು. ಈ ಎಲ್ಲಾ ಮಕ್ಕಳು ವರ್ಷಪೂರ್ತಿ ನಮ್ಮನ್ನು ಹುರಿದುಂಬಿಸುತ್ತಾರೆ. ಈ ಎಲ್ಲ ಮಕ್ಕಳನ್ನು ಖುಷಿಪಡುಸುವಲ್ಲಿ ಸಂತುಷ್ಟನಾದೆ. ಮೆರ್ರಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಶುಭಾಶಯಗಳು," ಎಂದು ಕೊಹ್ಲಿ ಅವರು ಹರ್ಷ ವ್ಯಕ್ತಪಡಿಸಿದರು.