ಮಾಯವಾಗುವ ಮೆಸೆಜ್‌ಗಳನ್ನು ಪರಿಚಯಿಸುತ್ತಿರುವ ವಾಟ್ಸ್ಯಾಪ್
ವಾಟ್ಸ್ಯಾಪ್ “ಡಿಸಪ್ಪಿಯರಿಂಗ್ ಮೆಸೆಜ್‌ಸ” ಎಂಬ ಹೊಸ ಫಿಚರ್ ಅನ್ನು ಬಿಡುಗಡೆ ಮಾಡಲಿದ್ದು, ಅದರಿಂದ ಮೆಸೆಜ್‌ಗಳು ನಿರ್ದಿಷ್ಟ ಅವಧಿಯ ನಂತರ ಅಳಿಸಿಹೋಗುತ್ತವೆ.
ನಾವೆಲ್ಲರೂ ಪ್ರತಿದಿನ ಎಷ್ಟೋ ವಾಟ್ಸ್ಯಾಪ್ ಸಂದೇಶಗಳನ್ನು ಕಳಿಸುತ್ತೇವೆ. ಆದರೆ ಅವೆಲ್ಲವೂ ಯಾವಾಗಲೂ ನಮ್ಮ ಮೊಬೈಲ್‌ನ ಚಾಟ್‌ನಲ್ಲಿ ಖಾಯಂ ಆಗಿ ಇರಬೇಕೆ? ನಮ್ಮ ಮಾತಗಳು ದಿನಗಳೆದಂತೆ ಮರೆತು ಹೋಗುವಂತೆ ನಾವು ಕಳುಹಿಸಿದ ವಾಟ್ಸ್ಯಾಪ್ ಮೆಸೆಜ್‌ಗಳು ಎಲ್ಲೂ ದಾಖಲಾಗದೆ ಮಾಯವಾಗಿ ಹೋದರೆ ಹೇಗಿರುತ್ತದೆ?
ಇದೆ ವಾಟ್ಸ್ಯಾಪ್ ಬಿಡುಗಡೆಮಾಡುತ್ತಿರುವ ಹೊಸ ಫಿಚರ್. ಹೌದು “ಡಿಸಪ್ಪಿಯರಿಂಗ್ ಮೆಸೆಜ್‌ಸ” ಎಂಬ ಆಯ್ಕೆಯನ್ನು ಆನ್ ಮಾಡಿದರೆ ನೀವು ಕಳುಹಿಸಿದ ಮೆಸೆಜ್‌ಗಳು 7 ದಿನಗಳ ನಂತರ ಮಾಯವಾಗುತ್ತವೆ ಅಂದರೆ ಅಳಿಸಿಹೋಗುತ್ತವೆ. ಈ ಹಿಂದೆ ಕಳುಹಿಸಿದ ಅಥವಾ ಬಂದ ಮೆಸೆಜ್‌ಗಳಿಗೆ ಇದು ಅನ್ವಯವಾಗುವುದಿಲ್ಲ. ಈ ಫಿಚರ್ ಆನ್ ಮಾಡಿಕೊಂಡರೆ ಮಾತ್ರ ನೀವು ಕಳುಹಿಸಿದ ಮೆಸೆಜ್‌ಗಳು 7 ದಿನಗಳ ನಂತರ ಅಳಿಸಿಹೋಗುತ್ತವೆ.
ವೈಯಕ್ತಿಕ ಚಾಟ್‌ನಲ್ಲಿ ಯಾರೊಬ್ಬರು ಈ ಫಿಚರ್ ಆನ್ ಮಾಡಿಕೊಳ್ಳಬಹುದು, ಗ್ರೂಪ್‌ನಲ್ಲಿ ಗ್ರೂಪ್ ಅಡ್ಮಿನ್‌ಗೆ ಮಾತ್ರ ಈ ಅವಕಾಶವಿದೆ.
ಆದರೆ ಈ ವೈಶಿಷ್ಟ್ಯದಲ್ಲಿ ಕೆಲವು ತೊಡಕುಗಳಿವೆ. ನೀವು ಕಳುಹಿಸಿದ ಮೆಸೆಜ್ ಅಳಿಸಿಹೋಗುವ ಮೊದಲು ಅದರ ಸ್ಕ್ರೀನ್ ಶಾಟ್, ಫೋಟೊ ತೆಗೆದುಕೊಳ್ಳಬಹುದು ಅಥವಾ ಮತ್ತೊಬ್ಬರಿಗೆ ಫಾರ್‌ವರ್ಡ್ ಮಾಡಬಹುದು. ಅಥವಾ ಅದನ್ನು ಕಾಪಿಮಾಡಿಕೊಂಡು ಎಲ್ಲಿಯಾದರೂ ಸೇವ್ ಮಾಡಿಟ್ಟುಕೊಳ್ಳಬಹುದು. ಹಾಗಾಗಿ ಈ ಫಿಚರ್ ಅನ್ನು ನಂಬಿಯುಳ್ಳವರೊಂದಿಗೆ ಮಾತ್ರ ಬಳಸುವುದು ಒಳಿತು.
ಈ ತಿಂಗಳಿನಿಂದ ಎಲ್ಲ ಬಳಕೆದಾರರಿಗೂ ಈ ಫಿಚರ್ ಲಭ್ಯವಾಗಲಿದ್ದು, “ಡಿಸಪ್ಪಿಯರಿಂಗ್ ಮೆಸೆಜ್‌ಸ” ಆಯ್ಕೆಯನ್ನು ಆನ್ ಮಾಡುವ ಮೂಲಕ ಇದನ್ನು ಬಳಸಬಹುದು.
ಇತರೆ ಜನಪ್ರಿಯ ಮೆಸೆಜಿಂಗ್ ಆ್ಯಪ್ಗಳಿಗೆ ಹೋಲಿಸಿದರೆ ಈ ಫಿಚರ್ ಹೊಸದಲ್ಲ. ಇದು ಟೆಲೆಗ್ರಾಂ, ಸ್ನಾಪ್‌ಚಾಟ್, ಇನ್ಸ್ಟಾಗ್ರಾಂ ಮತ್ತು ಇತರೆ ತಾಣಗಳಲ್ಲಿ ಹಿಂದಿನಿಂದಲೆ ಲಭ್ಯವಿದೆ.
ಕೆಲ ದಿನಗಳ ಹಿಂದೆ ವಾಟ್ಸ್ಯಾಪ್ ಚಾಟ್ ನೋಟಿಫಿಕೇಶನ್‌ಗಳನ್ನು ಅನಿರ್ದಿಷ್ಟಾವಧಿಯವರೆಗೆ ಮ್ಯೂಟ್ ಮಾಡುವ ಫಿಚರ್‌ಅನ್ನು ಬಿಡುಗಡೆಮಾಡಿತ್ತು. ಅದಕ್ಕೂ ಮೊದಲು ಹೆಚ್ಚೆಂದರೆ ಕೇವಲ 1 ವರ್ಷದವರೆಗೆ ನೋಟಿಫಿಕೇಶನ್‌ಗಳನ್ನು ಮ್ಯೂಟ್ ಮಾಡಬಹುದಿತ್ತು.