ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಆಧರಿತ ಶಿಕ್ಷಣಕ್ಕೆ ಅಡಿಪಾಯ ಹಾಕುತ್ತಿರುವ ದಿಟ್ಟ ಮಹಿಳೆ

ಲೆನೊವೊನ ನ್ಯೂ ರಿಯಾಲಿಟಿ ಪ್ರಾಜೆಕ್ಟ್‌ನ 10 ಪ್ರಭಾವಿ ಮಹಿಳೆಯರಲ್ಲಿ ಹುಬ್ಬಳ್ಳಿಯ ಅಶ್ವಿನಿ ದೊಡ್ಡಲಿಂಗಪ್ಪನವರ್‌ ಕೂಡಾ ಒಬ್ಬಳು. ಅಶ್ವಿನಿ ಕರ್ನಾಟಕದ ಸರಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಆಧರಿತ ಶಿಕ್ಷಣಕ್ಕೆ ಅಡಿಪಾಯ ಹಾಕುತ್ತಿದ್ದಾಳೆ.

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಆಧರಿತ ಶಿಕ್ಷಣಕ್ಕೆ ಅಡಿಪಾಯ ಹಾಕುತ್ತಿರುವ ದಿಟ್ಟ ಮಹಿಳೆ

Wednesday October 21, 2020,

4 min Read

ಅಶ್ವಿನಿ ದೊಡ್ಡಲಿಂಗಪ್ಪನವರ್‌ 15 ವರ್ಷದವಳಾಗಿದ್ದಾಗಲೆ ಅವಳ ಮನೆಯಲ್ಲಿ ಪೋಷಕರು ಮದುವೆಯ ಮಾತೆತ್ತಿದರು. ಹುಬ್ಬಳ್ಳಿಯ ಕುರುಗೋವಿನ್‌ಕೊಪ್ಪದವಳಾದ ಅಶ್ವಿನಿಗೆ ಕಾಲೇಜು ಮುಗಿಸುವುದು, ಮೇಘಶಾಲಾ ಟ್ರಸ್ಟ್‌ ಸೇರಿ ಸಮಾಜದಲ್ಲಿ ಬದಲಾವಣೆ ತರುವುದು ದೊಡ್ಡ ಕಷ್ಟದ ಕೆಲಸವಾಗಿತ್ತು. ಒಂದೊಂದು ಹಂತದಲ್ಲೂ ಹಲವು ಅಡೆತಡೆಗಳಿದ್ದವು, ಹಳೆ ರೂಢಿಗಳನ್ನು ಮುರಿದು ಹೊಸ ಯೋಚನೆಗಳನ್ನು ಬಿತ್ತಬೇಕಿತ್ತು.


ಕೇವಲ ಎರಡೂವರೆ ವರ್ಷದಲ್ಲಿ 23ರ ಆಶ್ವಿನಿಯ ಈ ಪ್ರಯಾಣ ಕೋವಿಡ್‌-19 ಕಾಲದಲ್ಲಿ ತಂತ್ರಜ್ಞಾನ ಬಳಸಿಕೊಂಡು ಜಗತ್ತನ್ನು ಬದಲಿಸುತ್ತಿರುವ 10 ವಿಶಿಷ್ಟ ಮಹಿಳೆಯರಿಗೆ ವೇದಿಕೆ ನೀಡುವ ಲೆನೊವೊನ ನ್ಯೂ ರಿಯಾಲಿಟಿ ಪ್ರಾಜೆಕ್ಟ್‌ನಲ್ಲಿ ಮೂಡಿ ಬಂದಿರುವುದು ವಿಶೇಷ.


ವಿಶ್ವಸಂಸ್ಥೆಯ ಗರ್ಲ್‌ ಅಪ್‌ ಫೌಂಡೇಶನ್‌ ಮತ್ತು ಅಂತರಾಷ್ಟ್ರೀಯ ಚಲನ ಚಿತ್ರಕಾರ ಅವಾ ದುವೆರ್ನೆಯ್‌ ಅವರ ಸಹಕಾರದೊಂದಿಗೆ ಫಿಲ್‌ ಹಾರ್ಪರ್‌ ನಿರ್ದೇಶನದ 360 ಡಿಗ್ರಿ ವಿಆರ್‌ ಚಿತ್ರವು ಅಶ್ವಿನಿಯ ಕತೆ, ಅವಳಕಷ್ಟ ಮತ್ತು ಹೇಗೆ ಅವರಳು ತನ್ನೂರಿನ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾಳೆಂಬುದನ್ನು ಬಿಚ್ಚಿಡುತ್ತದೆ.


ಸ್ವಂತ ಕಾಲಿನ ಮೇಲೆ ನಿಲ್ಲುವ ತುಡಿತ

ವಿಡಿಯೋ ಚಿತ್ರಿಕರಿಸುತ್ತಿರುವ ಅಶ್ವಿನಿ


ಕಷ್ಟ ಪಟ್ಟು ಪೋಷಕರ ಮನವೋಲಿಸಿ ಅಶ್ವಿನಿ ತನ್ನ ಹಳ್ಳಿಯ ಸಮೀಪದ ಪಟ್ಟಣದಲ್ಲಿ ಇಂಗ್ಲೀಷ್‌ ಲಿಟರೆಚರ್‌ನಲ್ಲಿ 2017 ರಲ್ಲಿ ಬಿಎ ಮುಗಿಸಿದಳು. ಆದರೆ ನೌಕರಿ ಮಾಡಲು ಬೇಕಾದ ಕೌಶಲ್ಯಗಳು ಅವಳಲ್ಲಿ ಇರಲಿಲ್ಲ ಎಂದು ತಿಳಿಯಿತು. ಆ ಸಮಯದಲ್ಲೂ ಅವಳ ಪೋಷಕರು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು.


ತುಂಬಾ ಚರ್ಚೆಗಳು, ವಾದ ವಿವಾದಗಳ ನಂತರ ಅವರನ್ನು ಒಪ್ಪಿಸಿ ಅಶ್ವಿನಿ ಕೇವಲ 5,000 ರೂಯನ್ನು ತಮ್ಮ ಜೇಬಿನಲ್ಲಿಟ್ಟುಕೊಂಡು ದೇಶಪಾಂಡೆ ಫೌಂಡೇಶನ್‌ನಲ್ಲಿ 4 ತಿಂಗಳ ಕೋರ್ಸ್‌ ಮಾಡಲು ಸಿದ್ಧಳಾದಳು. ಆ ಹಣ ಕೋರ್ಸ್‌ನ ಶುಲ್ಕ ಮತ್ತು ಹಾಸ್ಟೆಲ್‌ ನಲ್ಲಿ ಇರುವುದಕ್ಕೆ ಸಾಲದಾಗಿತ್ತು.


ಅಶ್ವಿನಿ ಹಳೆಯದನ್ನು ನೆನಯುತ್ತಾ, “ನನ್ನ ಪೋಷಕರಿಗೆ ಹುಡುಗಿಯರ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುವುದು ಹಾಳು ಎಂದು ನಂಬಿದವರು. ಆದರೆ ನಾನು ನಿರ್ಧರಿಸಿದ್ದೆ. ನಾನು ಅಧಿಕಾರಿಗಳನ್ನು ಸಂಪರ್ಕಿಸಿ ನನ್ನ ಬಳಿ ಇಷ್ಟು ಹಣವಿದೆ, ಕೇವಲ ಎರಡು ತಿಂಗಳಲ್ಲಿ ನಾನು ಪೂರ್ತಿ ಕೋರ್ಸ್‌ ಮುಗಿಸುತ್ತೇನೆ ಎಂದೆ. ಅವರು ಒಪ್ಪಿದರು, ನಾನು ಸೀನಿಯರ್‌ ಬ್ಯಾಚ್‌ ಸೇರಿಕೊಂಡು ಕಂಪ್ಯೂಟರ್‌, ಇಂಗ್ಲೀಷ್‌ ಮಾತನಾಡುವುದನ್ನು ಮತ್ತು ಇತರ ಸಾಫ್ಟ್‌ ಸ್ಕಿಲ್ಸ್‌ಗಳನ್ನು ಕಲಿತೆ,” ಎಂದಳು.


ಕೋರ್ಸ್‌ ಮುಗಿದೊಡನೆ ಅಶ್ವಿನಿಗೆ ಲಾಭೋದ್ದೇಶವಿಲ್ಲದ ಶಿಕ್ಷಣ ಕ್ಷೇತ್ರದ ಮೇಘಾಲಯ ಟ್ರಸ್ಟ್‌ನಲ್ಲಿ ನೌಕರಿ ಸಿಕ್ಕಿತು.


“ಅಶ್ವಿನಿ ಹೇಗೆ ಸಂದರ್ಶನಕ್ಕೆ ಬಂದಳು ಎಂಬುದು ಬಹಳ ವಿಶಿಷ್ಟವಾಗಿದೆ. ನಾನೇನಾದರೂ ಮಾಡಲೇಬೇಕು, ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಲೆಬೇಕು ಎಂದು ಅವಳು ಪದೆ ಪದೆ ಹೇಳುತ್ತಿದ್ದಳು. ಅವಳ ದೃಢನಿಶ್ಚಯ ನಮ್ಮನ್ನು ಗೆದ್ದಿತು,” ಎನ್ನುತ್ತಾರೆ ಮೆಘಶಾಲಾದ ಅಂತರಾಷ್ಟ್ರೀಯ ಕಾರ್ಯಕಲಾಪಗಳ ಪ್ರಮುಖರಾದ ಜೈಮಾಲಾ ಕನ್ನನ್‌.


ಅಂದು ಅಶ್ವಿನಿ ದೃಢವಾಗಿರದಿದ್ದರೆ ಬೆಂಗಳೂರಿಗೆ ಕೊನೆಯ ಸುತ್ತಿನ ಸಂದರ್ಶನಕ್ಕೆ ಬರಲಾಗುತ್ತಿರಲಿಲ್ಲ. ಅವಳ ಮನೆಯವರನ್ನು ಒಪ್ಪಿಸಲು ಅಶ್ವಿನಿ ಊಟ ಬಿಟ್ಟು ಸತ್ಯಾಗ್ರಹ ಮಾಡಿದಳು, ಕೊನೆಗೆ ತನ್ನ ಆಧಾರ ಸ್ಥಂಬದಂತಿರುವ ಅನ್ನನ ಮಾತಿಗೆ ಮನೆಯವರು ಒಪ್ಪಿದರು ಕಳಿಸಿದರು.


ಶಿಕ್ಷಣದಲ್ಲಿ ತಂತ್ರಜ್ಞಾನ

ಪ್ರಾರಂಭದಲ್ಲಿ ಅಶ್ವಿನಿಯನ್ನು ಹುಬ್ಬಳ್ಳಿಯಲ್ಲಿ ನಿಯೋಜಿಸಲಾಯಿತು, ಅಲ್ಲಿ ಇಬ್ಬರು ಗಂಡಸರೊಂದಿಗೆ ಕಚೇರಿಯಲ್ಲಿ ಕೆಲಸ ಮಾಡಿ, ಪಿಜಿಯಲ್ಲಿ ಉಳಿಯಬೇಕಾಯಿತು. ಅಲ್ಲಿನ ಯೋಜನೆ ಮುಗಿದ ನಂತರ ಬೆಂಗಳೂರಿಗೆ ವರ್ಗವಾಗಿ ಇತರೆ ಉಪಕ್ರಮಗಳ ಮೇಲೆ ಕೆಲಸ ಮಾಡತೊಡಗಿದಳು.


ಮೇಘಶಾಲಾದ ಅನುಷ್ಠಾನ ಸಹಾಯಕಿಯಾಗಿರುವ ಅಶ್ವಿನಿ ತಿಂಗಳಲ್ಲಿ ಹಲವಾರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಉತ್ತಮ ತರಗತಿ ಅನುಭವ ನೀಡುವುದಕ್ಕಾಗಿ 1 ರಿಂದ 8 ನೇ ತರಗತಿ ಶಿಕ್ಷಕರಿಗೆ ತಂತ್ರಜ್ಞಾನ ಅಳವಡಿಸಿಕೊಳ್ಳುವುದನ್ನು ತಿಳಿಸಿಕೊಡುತ್ತಾಳೆ. ಟ್ರಸ್ಟ್‌ ಈಶಾನ್ಯ ಭಾಗದಲ್ಲಿ ಮನಿಪುರ್‌, ಸಿಕ್ಕಿಂ ಮತ್ತು ಮೇಘಾಲಯದ ಸರ್ಕಾರದೊಂದಿಗೆ ಕೆಲಸ ಮಾಡುತ್ತದೆ.


“ಅಶ್ವಿನಿಯಂತಹ ಅನುಷ್ಠಾನ ಸಹಾಯಕಿಯರು ಶಾಲೆಗಳಿಗೆ ಭೇಟಿ ನೀಡಿ, ಶಿಕ್ಷಕರನ್ನು ಗಮನಿಸಿ ಅವರಿಗೆ ಪ್ರತಿಕ್ರಿಯೆ ನೀಡಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಜಿಲ್ಲಾ ಅಧಿಕಾರಿಗಳಿಗೂ ಅವರು ವರದಿಗಳನ್ನು ಪ್ರಸ್ತುತಪಡಿಸುತ್ತಾರೆ. ಶಿಕ್ಷಕರಿಗೆ ವರ್ಷದಲ್ಲಿ ಮೂರರಿಂದ ನಾಲ್ಕು ಬಾರಿ ಡಿಜಿಟಲ್‌ ಪಾಠದ ಹಿಂದಿನ ಶಿಕ್ಷಣ ಶಾಸ್ತ್ರವನ್ನು ಮತ್ತು ಏಕೆ ಅದನ್ನು ಅಳವಡಿಸಿಕೊಳ್ಳಬೇಕು, ಹೇಗೆ ಆ್ಯಪ್ ಮತ್ತು ಸಂಪನ್ಮೂಲಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಬೇಕೆಂಬ ತರಬೇತಿ ನೀಡಲಾಗುತ್ತದೆ,” ಎಂದರು ಜೈಮಾಲಾ.


ಈ ಪ್ರಯಾಣದಲ್ಲಿ ನಾನೊಬ್ಬಳು ಮನುಷ್ಯಳಾಗಿ ತುಂಬಾ ಕಲಿತುಕೊಂಡಿದ್ದೇನೆ ಎನ್ನುತ್ತಾಳೆ ಅಶ್ವಿನಿ, “ಮೊದಲಸಾರಿ ನಾನು ಶಿಕ್ಷಕರು, ಸರಕಾರಿ ಅಧಿಕಾರಿಗಳು ಹೀಗೆ ಅಪರಿಚಿತರೊಂದಿಗೆ ಮಾತನಾಡುತ್ತಿದ್ದೆ. ಅದಲ್ಲದೆ ನಾನು ಮೊದಲ ಬಾರಿ ನನ್ನ ಕುಟುಂಬವನ್ನು, ಹಳ್ಳಿಯನ್ನು ಬಿಟ್ಟು ದೂರವಿದ್ದೆ. ನಾನು ಎಲ್ಲೆಲ್ಲಿಯೋ ಅಲೆದು ಶಾಲೆಗಳನ್ನು ಹುಡುಕಿ, ಪಾಠವನ್ನು ಅನುಷ್ಠಾನಗೊಳಿಸುತ್ತಿದ್ದೆ. ನಾನೆಲ್ಲೆ ಹೋದರೂ ಬದುಕಬಹುದು ಎಂಬ ಭರವಸೆಯನ್ನು ಇದು ಕಲಿಸಿಕೊಟ್ಟಿದೆ,“ ಎನ್ನುತ್ತಾಳೆ ಅಶ್ವಿನಿ.


ಸಾಧರಣವಾಗಿ ಅಶ್ವಿನಿ ತಿಂಗಳಿಗೆ ಒಂದು ಸಾರಿ ಒಮ್ಮೊಮ್ಮೆ ಎರಡು ಸಾರಿ ಸುಮಾರು 25 ಶಾಲೆಗಳಿಗೆ ಭೇಟಿ ನೀಡುತ್ತಾಳೆ.


ಕೋವಿಡ್-19‌ ನಿಂದ ಈಗ ಮನೆಯಿಂದಲೆ ಕೆಲಸ ಮಾಡುತ್ತಿರುವ ಅಶ್ವಿನಿ ಶಿಕ್ಷಕರಿಗೆ ಆ್ಯಪ್ ಹೇಗೆ ಬಳಸಬೇಕು, ವಿಡಿಯೋ ಪಾಠಗಳನ್ನು ಹೇಗೆ ಮಾಡಿ ವಿದ್ಯಾರ್ಥಿಗಳಿಗೆ ಕಳಿಸಬೇಕು ಎಂಬುದನ್ನು ಆನ್‌ಲೈನ್‌ ಮುಖಾಂತರ ಕಲಿಸುತ್ತಿದ್ದಾಳೆ.


ಬದಲಾವಣೆ

ಅಶ್ವಿನಿಯ ಜೀವನದ ಮೇಲಿನ ವಿಡಿಯೋ ಇನ್ನೊಂದು ಮೈಲಿಗಲ್ಲಾಗಿದೆ.


“ಅದರ ಬಗ್ಗೆ ನನಗೆ ಗೋತ್ತಾದಾಗ ಭಯವಾಯ್ತು. ನಾನೇನಾದ್ರೂ ಸಾಹಸ ಮಾಡ್ಬೇಕಾಗುತ್ತೋ ಅಂತಾ ಹೆದರಿದ್ದೆ? ಅದಲ್ಲದೆ ಸಂಪ್ರದಾಯಸ್ಥರಾಗಿರುವ ನನ್ನ ಹಳ್ಳಿಯ ಜನ ಇದರಲ್ಲಿ ಪಾಲ್ಗೋಳ್ಳುತ್ತಾರೆಯೆ ಇದೆಲ್ಲ ಹೇಗೆ ಸಾಧ್ಯ ಎಂದು ನನಗೆ ಚಿಂತೆಯಾಗಿತ್ತು,” ಎಂದು ಹೇಳುತ್ತಾಳೆ ಅಶ್ವಿನಿ.


ಲೆನೊವೊನ ನ್ಯೂ ರಿಯಾಲಿಟಿಗಾಗಿ ಅಶ್ವಿನಿಯ ಚಿತ್ರವನ್ನು ನಿರ್ದೇಶಿಸಿದ ನಿರ್ದೇಶಕರಾದ ಫಿಲ್‌ ಹಾರ್ಪರ್‌ ಅವಳೊಂದಿಗೆ 15 ನಿಮಿಷ ಮಾತನಾಡಿದಾಗಲೆ ಅದೊಂದು ಒಳ್ಳೆಯ ಕತೆಯೆಂದು ನನಗನಸಿತು ಎನ್ನುತ್ತಾರೆ.


“ಅವಳ ಕತೆ ಭಾರತದ ತುಂಬಾ ಆರ್ಥಿಕ ಸಂಕಷ್ಟಗಳಿಂದ ಹೊರಬರಲಾರದೆ ಸಿಲುಕಿಕೊಂಡಿರುವ ಹಲವು ಯುವತಿಯರ ಕತೆಯನ್ನು ಬಿಂಬಿಸುತ್ತದೆ. ತನಗೆ ಎಷ್ಟೆ ಕಷ್ಟ ಅಡಚನೆಗಳು ಬಂದರೂ ಅವನ್ನೆಲ್ಲ ಎದುರಿಸಿ ಮುಂದೆ ಬಂದಿರುವುದೆ ಅವಳ ಕತೆಯನ್ನು ವಿಶೇಷವಾಗಿಸುತ್ತದೆ,” ಎಂದರು ಅವರು.


ಸಾಂಕ್ರಾಮಿಕದ ಕಾರಣದಿಂದ ಚಿತ್ರತಂಡ ಅವಳ ಹಳ್ಳಿಗೆ ಹೋಗದಾಯಿತು, ಇನ್ನೊಮ್ಮೆ ಪ್ರಯತ್ನಿಸಿದಾಗಲೂ ಲಾಕ್‌ಡೌನ್‌ನಿಂದ ಅದು ಸಾಧ್ಯವಾಗಲಿಲ್ಲ.


ಚಿತ್ರ ಮಾಡಲು ನೀಡಿದ ಗಡುವು ಮುಗಿಯತೊಡಗಿದ್ದರಿಂದ ಅಶ್ವಿನಿಯೊಂದಿಗೆ ಚರ್ಚಿಸಿ ಫಿಲ್‌ ಅವರು 360 ಡಿಗ್ರಿ ಕ್ಯಾಮೆರಾವನ್ನು ಆಕೆಗೆ ಕಳಿಸಿಕೊಟ್ಟು ಚಿತ್ರಿಕರಿಸುವಂತೆ ಹೇಳಿದರು.


“360 ಡಿಗ್ರಿ ಕ್ಯಾಮೆರಾ ಹೇಗೆ ಕೆಲಸ ಮಾಡುತ್ತದೆ ಎಂಬುದು ತಕ್ಷಣ ಗೋತ್ತಾಗುವುದಿಲ್ಲ. ಅಶ್ವಿನಿ ಜನರನ್ನು ಚಿತ್ರಸುವಾಗ ತಾನು ಅದರಲ್ಲಿಲ್ಲವೆಂದು ತಿಳಿದಿರುತ್ತಿದ್ದಳು ಆದರೆ ಅದು 360 ಡಿಗ್ರಿ ಕ್ಯಾಮೆರಾ ಆಗಿರುವುದರಿಂದ ಯಾವಾಗಲೂ ಅವಳು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ನಾನು ಝೂಂ ಕಾಲ್‌ ಮಾಡಿ ಹೇಗೆ ಅದನ್ನು ಬಳಸಬೇಕು, ಎಂತಹ ಶಾಟ್‌ಗಳನ್ನು ತೆಗೆದರೆ ಚೆನ್ನಾಗಿರುತ್ತೆ ಎಂದು ಹೇಳಿಕೊಟ್ಟೆ. ಅವಳು ತುಂಬಾ ಚೆನ್ನಾಗಿ ಚಿತ್ರಕರಿಸಿದ್ದಾಳೆ, ತೆಗೆದಿರುವ ಚಿತ್ರವೆ ಅದಕ್ಕೆ ಸಾಕ್ಷಿ,” ಎಂದರು ಫಿಲ್‌.


ಕೇವಲ ಎರಡೂವರೆ ವರ್ಷದಲ್ಲಿ ಅಶ್ವಿನಿಯ ಜೀವನ ಬದಲಾಗಿರುವುದಲ್ಲದೆ ಅವಳ ಪೋಷಕರು ಅವಳ ಬಗ್ಗೆ ಹೆಮ್ಮೆ ಪಡುವಂತಾಗಿದೆ. ಈಗ ಮದುವೆಯ ಮಾತುಗಳೆಲ್ಲವೂ ಮುಗಿದ ಹೋದಂತಾಗಿದೆ.


ಎಲ್ಲಕ್ಕಿಂತಲೂ ದೊಡ್ಡ ಬದಲಾವಣೆಯೆಂದರೆ ಹಳ್ಳಿಯ ಜನತೆಯ ನಡುವಳಿಕೆಯಲ್ಲಿ ಆದ ಬದಲಾವಣೆ. “ಮೊದಲು ಮೊಬೈಲ್‌ನಲ್ಲಿ ಏನಾದರೂ ನೋಡುವುದನ್ನು ತಪ್ಪೆನ್ನುತ್ತಿದ್ದರು. ಈಗ ನಾನು ಅದರಿಂದ ಏನೂ ಮಾಡುತ್ತೇನೆಂದು ಅವರಿಗೆ ಗೋತ್ತಾಗಿರುವುದರಿಂದ ನನ್ನನ್ನು ಗೌರವದಿಂದ ಕಾಣುತ್ತಾರೆ.”


ತನ್ನ ಹಳ್ಳಿಯ ಹುಡುಗಿಯರಿಗೆ ದೊಡ್ಡ ಕನಸು ಕಾಣುವಂತೆ ಅಶ್ವಿನಿ ಸ್ಪೂರ್ತಿನೀಡಿದ್ದಾಳೆ. “ಸಮಾಜದಲ್ಲಿ ಬದಲಾವಣೆ ತರಲು ಜಾಗೃತಿಯ ಅವಷ್ಯಕತೆಯಿದೆ, ಮುಂದೆ ಬಂದು ಮಾತನಾಡಬೇಕಾದದ್ದು ಹುಡುಗಿಯರ ಜವಾಬ್ದಾರಿ,” ಎನ್ನುತಾಳೆ ಅಶ್ವಿನಿ.