ಶೂನ್ಯ ಹೂಡಿಕೆಯೊಂದಿಗೆ ಉದ್ಯಮ ಆರಂಭಿಸುವುದು ಹೇಗೆ?
ಟೀಮ್ ವೈ.ಎಸ್.ಕನ್ನಡ
ಸ್ವಂತ ಉದ್ಯಮ ಆರಂಭಿಸಲು ನಿಮ್ಮ ಬಳಿ ಹಣವಿಲ್ಲವೇ? ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆರ್ಥಿಕ ಸುರಕ್ಷತೆಯ ಜೊತೆಗೆ ಸ್ವಾವಲಂಬಿಯಾಗಿರಲು ಬಯಸ್ತಾರೆ. ವಿದ್ಯಾರ್ಥಿಗಳು, ಗೃಹಿಣಿಯರಿಂದ ಹಿಡಿದು ಎಲ್ಲರೂ ತಮ್ಮದೇ ಆದ ಗತಿಯಲ್ಲಿ ಸ್ವಾತಂತ್ರ್ಯ ಮತ್ತು ನಮ್ಯತೆಯನ್ನು ನೀಡುವ ಸ್ವಂತ ಉದ್ಯಮ ಆರಂಭಿಸಲು ಇಚ್ಛಿಸುತ್ತಾರೆ. ಉದ್ಯಮ ಆರಂಭಿಸುವುದು ಮತ್ತು ಅದನ್ನು ಮುನ್ನಡೆಸುವುದು ಶ್ರೀಮಂತರಾಗುವುದಕ್ಕಿಂತಲೂ ಹೆಚ್ಚಿನ ಸಾಧನೆ. ಸಮಾಜಕ್ಕೆ ಕೊಡುಗೆಗಳನ್ನು ನೀಡುತ್ತಲೇ ನಿಮ್ಮ ಆಸಕ್ತಿ ಮತ್ತು ಕನಸನ್ನು ಸಾಕಾರಗೊಳಿಸಿಕೊಳ್ಳಲು ಇರುವ ಉತ್ತಮ ಅವಕಾಶ.
ಇತ್ತೀಚಿನ ದಿನಗಳಲ್ಲಿ ಉದ್ಯಮ ಆರಂಭಿಸುವುದೆಂದರೆ ಕೇಕ್ ಮೇಲಿನ ನಡಿಗೆಯಂತಾಗಿದೆ. ನಿಮ್ಮ ಬಳಿ ಹಣವಿಲ್ಲದೇ ಇದ್ರೂ ಸಮರ್ಪಣಾ ಭಾವ ಮತ್ತು ಉತ್ಸಾಹವಿದ್ರೆ ಮುಂದೆ ಸಾಗಬಹುದು. ಕಠಿಣ ಪರಿಶ್ರಮ ವಹಿಸಲು ನೀವು ಸಿದ್ಧರಿದ್ರೆ, ವೈಫಲ್ಯಗಳಿಂದ ಪಾಠ ಕಲಿತಿದ್ರೆ ಯಾವುದೇ ಹೂಡಿಕೆಯಿಲ್ಲದೆ ಸ್ವಂತ ಉದ್ಯಮ ಆರಂಭಿಸಲು ಕೆಲ ಟಿಪ್ಸ್ ಇಲ್ಲಿದೆ.
ಸಾಮಾಜಿಕ ತಾಣಗಳೊಂದಿಗೆ ಆರಂಭಿಸಿ
ಇದು ಸಹಜ ಆಯ್ಕೆ ಎನಿಸಬಹುದು, ಆದ್ರೆ ದೀರ್ಘಕಾಲದವರೆಗೂ ಇದರಿಂದ ನಿಮಗೆ ಪ್ರಯೋಜನವಾಗಲಿದೆ. ವಿಷಯಗಳನ್ನು ಸರಿಯಾದ ರೀತಿಯಲ್ಲಿ ಹೇಗೆ ರೂಪಿಸಬೇಕು ಎಂಬುದನ್ನು ಅರಿಯಬಹುದು. ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ತಾಣಗಳು ಸಾಕಷ್ಟು ಜನರನ್ನು ತಲುಪುತ್ತವೆ. ನಿಮ್ಮ ಮಾರುಕಟ್ಟೆಯ ಗುರಿಯನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಪೋಸ್ಟ್ ಮಾಡಿದ್ರೆ ಉದ್ಯಮಕ್ಕೆ ಅದ್ಭುತ ಆರಂಭ ಸಿಗಲಿದೆ. ನಿರೀಕ್ಷೆಗಿಂತಲೂ ಬೇಗ ನೀವು ಹಣ ಗಳಿಸಲಾರಂಭಿಸುತ್ತೀರಾ. ಜನರಲ್ಲಿ ಆಸಕ್ತಿ ಹುಟ್ಟುವ ರೀತಿಯಲ್ಲಿ, ಅವರನ್ನು ತಲುಪುವ ರೀತಿಯಲ್ಲಿ ನಿಮ್ಮ ಉತ್ಪನ್ನಗಳು, ಸೇವೆಗಳು ಮತ್ತು ಆಫರ್ಗಳ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಬೇಕಷ್ಟೆ.
ಉಚಿತ ಮಾರಾಟ ವೇದಿಕೆ ಕಂಡುಕೊಳ್ಳಿ
ಉಚಿತವಾಗಿ ನಿಮ್ಮ ಉತ್ಪನ್ನಗಳನ್ನು ಪಟ್ಟಿ ಮಾಡಲು ಅನೇಕ ವೇದಿಕೆಗಳಿವೆ. ಮಾರ್ಕೆಟಿಂಗ್ಗಾಗಿ ಹಣ ವ್ಯಯಿಸದೇ ನೀವು ನಿಮ್ಮ ಬ್ರಾಂಡ್ನ ಮಾನ್ಯತೆ ಹೆಚ್ಚಿಸಿಕೊಳ್ಳಬಹುದು, ಅಂತಹ ಸೇವೆ ಈ ವೇದಿಕೆಗಳಲ್ಲಿ ಲಭ್ಯವಿದೆ. ಅಮೇಜಾನ್, ಇಬೇಯಂತಹ ಅನೇಕ ಅದ್ಭುತ ವೇದಿಕೆಗಳು ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಪ್ರತಿ ಮಾರಾಟದ ಮೇಲೂ ಕಮಿಷನ್ ರೂಪದಲ್ಲಿ ಅಲ್ಪ ಹಣವನ್ನಷ್ಟೆ ಅವರು ಚಾರ್ಜ್ ಮಾಡುತ್ತಾರೆ. ಆದ್ರೆ ಕಾಲಕಾಲಕ್ಕೆ ನಿಮ್ಮ ಉತ್ಪನ್ನಗಳು ಅಪ್ಡೇಟ್ ಆಗುತ್ತಿರಬೇಕು.
ನಿಮಗೆ ಬೇಕಾಗಿದ್ದನ್ನು ವಿನಿಮಯ ಮಾಡಿಕೊಳ್ಳಿ
ಹಣವಿಲ್ಲದೆ ಬ್ಯುಸಿನೆಸ್ ಮಾಡೋದು ಅಂದೆ ನಿಜಕ್ಕೂ ಕಷ್ಟ. ಆದ್ರೆ ಏಜೆನ್ಸಿಗಳೊಂದಿಗೆ ನೀವು ಹೊಂದಾಣಿಕೆ ಮಾಡಿಕೊಳ್ಳಬಹುದು ಮತ್ತು ನಿಮ್ಮ ಉತ್ಪನ್ನ ಮತ್ತು ಸೇವೆಗೆ ಬದಲಾಗಿ ಕಂಪನಿಗಳು ಉತ್ಪನ್ನಗಳ ಮಾರ್ಕೆಟಿಂಗ್ಗೆ ನೆರವಾಗಬಹುದು. ಸೆಲೆಬ್ರಿಟಿಗಳು ನಿಮ್ಮ ಬ್ರಾಂಡ್ ಅನ್ನು ಪ್ರಮೋಟ್ ಮಾಡಬೇಕೆಂದಾದಲ್ಲಿ, ಅವರಿಗೆ ಗಿಫ್ಟ್ ಆಗಿ ಉಡುಪುಗಳನ್ನು ಕಳುಹಿಸಿಕೊಡಿ.
ಕಡಿಮೆ ವೆಚ್ಚದ ಸೇವೆಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ
ಉದ್ಯಮದ ಬೆಳವಣಿಗೆ ಅಗತ್ಯವಿರುವ ಕೆಲವು ಸೇವೆಗಳಿಗೆ ದುರದೃಷ್ಟವಶಾತ್ ನೀವು ಹಣ ಪಾವತಿಸಲೇಬೇಕು. ಅತಿ ಕಡಿಮೆ ಮಾಸಿಕ ವೆಚ್ಚದಲ್ಲಿ ಲಭ್ಯವಿರುವ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಅಪ್ಲಿಕೇಶನ್ಗಳು ಮತ್ತು ಸಾಫ್ಟ್ವೇರ್ಗಳನ್ನು ಬಳಸಿಕೊಳ್ಳಿ. ಬ್ರಾಂಡ್ ಪ್ರಸ್ತುತಿ ವಸ್ತು ರಚಿಸಲು ಒಂದು ವಿನ್ಯಾಸ ತಂತ್ರಾಂಶ ಬೇಕಾದಲ್ಲಿ ಮಾಸಿಕ 5-10 ಡಾಲರ್ಗೆ ಲಭ್ಯವಿರುವ ವೆಬ್ ಆ್ಯಪ್ ಅನ್ನೇ ಆಯ್ದುಕೊಳ್ಳಿ. ಅಥವಾ ಪೋರ್ಟ್ಫೋಲಿಯೊ ನಿರ್ಮಾಣ ಮಾಡಿಕೊಳ್ಳಲು ಬಯಸುವ ಇಂಟರ್ನಿಯನ್ನು ನೇಮಕ ಮಾಡಿಕೊಳ್ಳಬಹುದು.
ಎಲ್ಲಕ್ಕಿಂತ ಮುಖ್ಯವಾಗಿ ಉದ್ಯಮ ಆರಂಭಿಸಲು ಆಸಕ್ತಿ ಬೇಕು. ಆಗ ಗುರಿ ತಲುಪದಂತೆ ನಿಮ್ಮನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ. ಬುದ್ಧಿವಂತಿಕೆ ಉಪಯೋಗಿಸಿ ಎಲ್ಲವನ್ನೂ ಒಗ್ಗೂಡಿಸಿದ್ರೆ ಸಾಕಷ್ಟು ಸಂಪನ್ಮೂಲ ಇಲ್ಲದೇ ಇದ್ರೂ ನೀವು ಉದ್ಯಮ ಮುನ್ನಡೆಸಬಹುದು.
ಇದನ್ನೂ ಓದಿ...