ಜೀವನದಲ್ಲಿ ಏನು ಇಲ್ಲ ಅಂದುಕೊಂಡವ್ರೇ ಇಂದು ಹಲವರಿಗೆ ಮಾದರಿ..
ಪೂರ್ವಿಕಾ
ಜೋನಾಥನ್ ಮೈಕೆಲ್ 25 ವರ್ಷ ವಯಸ್ಸಿನಲ್ಲೇ ಜನರಿಗೆ ಸ್ಫೂರ್ತಿ ಹಾಗೂ ಲೀಡರ್‍ಶಿಪ್ ಕ್ವಾಲಿಟಿಯನ್ನ ತುಂಬಲು ಮುಂದಾದವರು. ಬದುಕು ಕಲಿಸಿದ ಪಾಠದಿಂದ ಲೀಡರ್‍ಶಿಪ್ ಅಂದ್ರೆ ಏನು..? ಅದು ಜನರಿಗೆ ಹೇಗೆ ಉಪಯೋಗವಾಗುತ್ತೆ ಅನ್ನೋದನ್ನ ಅನುಭವದಿಂದ ಕಲಿತು ಅದನ್ನ ಮತ್ತೊಬ್ಬರಿಗೆ ಕಲಿಸೋದಕ್ಕೆ ಮುಂದಾದ ಹುಡುಗ. ಜೋನಾಥ್ ಸ್ವತಃ ಜೀವನದಲ್ಲಿಯೂ ಪಾರದರ್ಶಕತೆಯಿಂದಾಗಿ ಇದ್ದವರು. ಜೀವನದ ಪಯಣದಲ್ಲಿ ಸಿಕ್ಕ ಹಲವಾರು ಜನರಲ್ಲಿ ಕಲಿತ ಪಾಠದಿಂದ ಇಂದು ಸ್ವಾವಲಂಭಿಯಾಗಿ ಬದುಕುತ್ತೇನೆ ಜೀವನ ಮಾಡುತ್ತೇನೆ ಅಂತ ನಿರ್ಧಾರ ಮಾಡುವವರಿಗಾಗಿ ಜೆಎಂ ಅನ್ನೋ ಡಿಸೈನಿಂಗ್ ಸ್ಕೂಲ್ ಓಪನ್ ಮಾಡಿ ಸೈ ಅನ್ನಿಸಿಕೊಂಡು ಅದೆಷ್ಟೋ ಜನರಿಗೆ ಸ್ವಾವಲಂಭನೆಯಾಗಿ ಕೆಲಸ ಮಾಡಲು ಸಹಾಯ ಹಸ್ತ ಚಾಚಿದವರು.
ಜೆಎಂ ಸ್ಕೂಲ್ ಆಫ್ ಡಿಸೈನರ್ ಟೈಲರಿಂಗ್. ಇರೋ ಕೆಲವೇ ಕೆಲವು ಸಮಯದಲ್ಲಿ ಸ್ವಂತ ಉದ್ಯೋಗ ರೂಪಿಸಿಕೊಂಡು ಸಮಾಜದಲ್ಲಿ ತಮ್ಮ ಕಾಲ ಮೇಲೆ ತಾವೇ ನಿಂತುಕೊಳ್ಳಬೇಕು ಅಂತ ಕಾದಿರೋರಿಗಾಗಿ ಹುಟ್ಟಿಕೊಂಡಿರೋ ಸಂಸ್ಥೆ. ಇದರ ಸಂಸ್ಥಾಪಕ ಜೋನಾಥನ್ ಮೈಕೆಲ್ ಜೀವನದಲ್ಲಿ ಏನು ಇಲ್ಲ ಅಂತ ಅಂದುಕೊಂಡಿದ್ದ ಮೈಕೆಲ್ ತನ್ನಂತೆ ಏನಾದ್ರು ಸಾಧಿಸಬೇಕು ಅಂತ ಇರುವವರಿಗಾಗಿ ಹುಟ್ಟಿಹಾಕಿದ ಸಂಸ್ಥೆ ಇದು.ಇತ್ತೀಚಿನ ದಿನಗಳಲ್ಲಿ ಕ್ಲೋತ್ ಡಿಸೈನಿಂಗ್ ಗಾಗಿ ಸಾಕಷ್ಟು ಬೇಡಿಕೆ ಇದೆ. ಅದ್ರಲ್ಲೂ ವೆಸ್ಟ್ರನ್ ,ಬ್ರೈಡಲ್ ,ಇಂಡಿಯನ್ ಟ್ರೇಡಿಷನಲ್ ಡ್ರೆಸ್ಗಳನ್ನ ಡಿಸೈನ್ ಮಾಡಿ ಸ್ಟಿಚ್ ಮಾಡೋದು ಅಂದ್ರೆ ಜನರಿಗೆ ತುಂಬಾನೇ ಇಂಟ್ರಸ್ಟಿಂಗ್ ..ಇನ್ನು ಇದು ಸ್ವಂತ ಉದ್ಯೋಗ ಮಾಡಲು ಬೆಸ್ಟ್ ಥಿಂಗ್ ಅಂತ ತಿಳಿದ ಜೋನಾಥ್ ಡಿಸೈನಿಂಗ್ ಹಾಗೂ ಸ್ಟಿಚ್ಚಿಂಗ್ ಕ್ಲಾಸ್ ಅನ್ನ ಪ್ರಾರಂಭ ಮಾಡಿದ್ರು. ಇದರಲ್ಲಿ ಸಾಕಷ್ಟು ಮಹಿಳೆಯರು ಹಾಗೂ ಪುರುಷರು ಕೆಲಸ ಕಲಿತು ಇಂದು ತಮ್ಮದೇ ಆದ ಬ್ಯೂಟಿಕ್ ಓಪನ್ ಮಾಡಿ ತಮ್ಮ ಜೀವನವನ್ನ ತಾವು ರೂಪಿಸಿಕೊಂಡಿದ್ದಾರೆ..
ಬಿಡುವಿದ್ದಾಗ ಕಲಿಯಿರಿ ಜೀವನ ರೂಪಿಸಿಕೊಳ್ಳಿ
ಜೆ ಎಂ ಸ್ಕೂಲ್ ಆಫ್ ಡಿಸೈನರ್ ಟೈಲರಿಂಗ್ ನಲ್ಲಿ ಯಾರು ಬೇಕಾದ್ರು ಡಿಸೈಂಗ್ ಹಾಗೂ ಸ್ಟಿಚ್ಚಿಂಗ್ ಅನ್ನ ಕಲಿತುಕೊಳ್ಳಬಹುದು. ನಿಮ್ಮ ಪ್ರತಿನಿತ್ಯದ ಕೆಲಸದ ಮಧ್ಯೆ ನೀವು ಬಿಡುವಿದ್ದಾಗ ಅಥವಾ ವಾರಾಂತ್ಯದಲ್ಲಿ ಬಿಡುವಿನ ಸಮಯ ಮಾಡಿಕೊಂಡು ತರಗತಿಯಲ್ಲಿ ಟ್ರೈನಿಂಗ್ ಪಡೆಯಬಹುದು. ಇನ್ನು ನಿಮ್ಮ ಸ್ಥಿತಿಗೆ ತಕ್ಕಂತೆ ಇಲ್ಲಿ ಶುಲ್ಕವನ್ನ ನಿಗದಿ ಮಾಡಲಾಗಿದೆ. ಆರು ಹಂತದಲ್ಲಿ ಕ್ಲಾಸ್ ಗಳು ನಡೆಯಲಿದ್ದು ಎರಡು ವಾರದಿಂದ ಹಿಡಿದು 6 ತಿಂಗಳ ಕೋರ್ಸ್ಗಳು ಕೂಡ ಇಲ್ಲಿ ನಡೆಯುತ್ತವೆ. ಎರಡು ವಾರದ ಕ್ಲಾಸ್ಗಳಲ್ಲಿ ಬೇಸಿಕ್ ಡಿಸೈನ್ ಹಾಗೂ ಸ್ಟಿಚ್ ಅನ್ನ ಕಲಿಸಲಾಗುತ್ತೆ ಅದೇ ರೀತಿ 6 ತಿಂಗಳ ಕ್ಲಾಸ್ ನಲ್ಲಿ ಎಲ್ಲಾ ರೀತಿಯ ಡಿಸೈನ್ ಗಳನ್ನ ಹಾಗೂ ಸ್ಟಿಚ್ಚಿಂಗ್ ಅನ್ನ ಕಲಿಸಲಾಗುತ್ತೆ. ಇನ್ನು ಆನ್ಲೈನ್ ಕ್ಲಾಸ್ಗಳು ಕೂಡ ಜೆ ಎಂ ಸ್ಕೂಲ್ ಆಫ್ ಡಿಸೈನರ್ ಟೈಲರಿಂಗ್ ನಲ್ಲಿ ನಡೆಸಲಾಗುತ್ತೆ. ಒಮ್ಮೆ ಅಪ್ಲಿಕೇಷನ್ ಗಳನ್ನ ಫಿಲ್ ಮಾಡಿ ಲಾಗಿ ಇನ್ ಮಾಡಿದ್ರೆ ಅವ್ರೇ ನಿಮ್ಮನ್ನ ಕಾಂಟೆಕ್ಟ್ ಮಾಡಿ ಜೆ ಎಂ ಸ್ಕೂಲ್ ಆಫ್ ಡಿಸೈನರ್ ಟೈಲರಿಂಗ್ ಬಗ್ಗೆ ಮಾಹಿತಿ ನೀಡುತ್ತಾರೆ. ವಾಣಿಜ್ಯೊದ್ಯಮದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಜೋನಾಥ್ ಇದ್ರಲ್ಲೇ ಹೇಗಾದ್ರು ಜನರಿಗೆ ಸಹಾಯ ಮಾಡ್ಬೇಕು ಅಂತ ಈ ಸ್ಕೂಲ್ ಅನ್ನ ಓಪನ್ ಮಾಡಿದ್ದಾರೆ. ಇದರಿಂದ ಸಾಕಷ್ಟು ಜನ ಸಹಾಯ ಪಡೆದು ತಮ್ಮ ಡ್ರೆಸ್ ಗಳನ್ನ ತಾವೇ ಡಿಸೈನ್ ಮಾಡಿಕೊಳ್ಳೊದು ಮಾತ್ರವಲ್ಲದೆ ಬೇರೆಯವ್ರಿಗೂ ಕೂಡ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಜೀವನದಲ್ಲಿ ಲೀಡರ್ ಶಿಪ್ ಇಟ್ಕೊಂಡು ಏನೂ ಮಾಡಲು ಸಾಧ್ಯವಿಲ್ಲ ಅಂತ ಅಂದುಕೊಂಡಿದ್ದ ಜೋನಾಥನ್ ಇಂದು ಸಾಕಷ್ಟು ಜನರಲ್ಲಿ ಲೀಡರ್ ಶಿಪ್ ಕ್ವಾಲಿಟಿಯನ್ನ ತುಂಬೋದ್ರ ಜೊತೆಗೆ ಅವ್ರ ಜೀವನ ರೂಪಿಸೋದ್ರಲ್ಲಿ ಸಹಾಯಕನಾಗಿರೋದು ವಿಶೇಷ.