ಸ್ಮಾರ್ಟ್ ಜನರಿಗೆ ಹಣ ಮಾಡುವ ಸ್ಮಾರ್ಟ್ ತಾಣ ‘ಯೂಟ್ಯೂಬ್’

ಎನ್​.ಎಸ್​.ರವಿ

ಸ್ಮಾರ್ಟ್ ಜನರಿಗೆ ಹಣ ಮಾಡುವ ಸ್ಮಾರ್ಟ್ ತಾಣ ‘ಯೂಟ್ಯೂಬ್’

Friday January 08, 2016,

3 min Read

ಹಣ ಮಾಡಲು ಅನೇಕ ಮಾರ್ಗಗಳಿವೆ. ಆದರೆ ಸ್ಮಾರ್ಟ್ ಆಗಿರುವ ಜನರಿಗೆ ಹಣ ಮಾಡಲು ಸ್ಮಾರ್ಟ್ ವಿಧಾನವೊಂದಿದೆ. ಅದೇ ಯೂಟ್ಯೂಬ್. ನಮ್ಮ ದೇಶದಲ್ಲಿರುವ ಕೋಟ್ಯಾಂತರ ಜನರು ಯೂಟ್ಯೂಬ್​ನ್ನು ಸಿನಿಮಾ, ಹಾಡು ಹೀಗೆ ವಿವಿಧ ಅಭಿರುಚಿಯ ವಿಡಿಯೋ ತುಣಕುಗಳನ್ನು ನೋಡಲು ಯೂಟ್ಯೂಬ್ ಬಳಸುತ್ತಾರೆ. ಇದಕ್ಕಾಗಿ ಎಷ್ಟೋ ಇಂಟರ್​ನೆಟ್ ಡಾಟಾ ಹಾಳು ಮಾಡಿಕೊಳ್ತಾರೆ. ಯೂಟ್ಯೂಬ್​ಗಾಗಿ ಹಣ ಖರ್ಚು ಮಾಡುವವರೇ ಜಾಸ್ತಿ. ಆದರೆ ಸರಿಯಾಗಿ ಯೂಟ್ಯೂಬ್ ಬಳಸಿಕೊಂಡರೆ ನೀವೂ ಕೂಡ ಪ್ರತಿ ತಿಂಗಳು ನಿಮ್ಮ ಪ್ರತಿಭೆಗೆ ತಕ್ಕಷ್ಟು ಹಣವನ್ನು ಗಳಿಸಬಹುದು.

ಯೂಟ್ಯೂಬ್ ಕೇವಲ ಮನರಂಜನೆಯ ತಾಣವಲ್ಲ ಈಗ ಅನೇಕ ಜನರ ಆದಾಯದ ಮೂಲ ಕೂಡ ಹೌದು. ಈಗೇನಿದ್ದರೂ ಇಂಟರ್ನೆಟ್ ಜಮಾನ. ಅಂತರ್ಜಾಲದಲ್ಲೇ ಬಹುತೇಕ ವ್ಯವಹಾರಗಳು ನಡೆಯುತ್ತವೆ. ಇದರ ಅರಿವಿರುವ ಕೆಲವೇ ಕೆಲವು ಜನರು ಕೋಟಿಗಟ್ಟಲೇ ಹಣ ಗಳಿಸುತ್ತಿದ್ದಾರೆ. ಆದರೆ ನೀವು ಸಹ ಯೂಟ್ಯೂಬ್​ನಿಂದ ಮನೆಯಲ್ಲೇ ಕುಳಿತು ಲಕ್ಷಗಟ್ಟಲೇ ದುಡಿಯಬಹುದು. ಈಗಾಗ್ಲೇ ಸ್ಮಾರ್ಟ್​ಫೋನ್ ಬಳಸುತ್ತಿರುವ ಕಾಲೇಜು ಯುವಕರು, ಮನೆಯಲ್ಲಿರುವ ಗೃಹಣಿಯರು ಹಣಗಳಿಸಲು ಇದು ಅತ್ಯಂತ ಸಹಾಯಕಾರಿಯಾಗಿದೆ..

image


ನೀವು ಸೆರೆಹಿಡಿಯುವ ಯಾವುದೇ ಒಂದು ಉತ್ತಮ ವಿಡೀಯೋವನ್ನು ಉತ್ತಮ ಕ್ಯಾಪ್ಶನ್ ಕೊಟ್ಟು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿದ್ರೆ ಸಾಕೂ ನಿಮ್ಮ ಆದಾಯದ ರನ್ನಿಂಗ್​ಮೀಟರ್ ಶುರುವಾಗಿ ಬಿಡುತ್ತೆ. ನೀವು ಒಮ್ಮೆ ವಿಡಿಯೋ ಅಪಲೋಡ್ ಮಾಡಿದ್ರೆ, ಯುಟ್ಯೂಬ್ ಇರುವ ತನಕ ಪ್ರತಿ ಲೈಕ್, ವ್ಯೂವ್ ಕಮೆಂಟ್​​ಗೆ ಇಷ್ಟು ಎಂದು ಪ್ರತಿ ತಿಂಗಳು ಅಥವಾ ಯೂಟ್ಯೂಟ್​​ನ ಟಾರ್ಗೆಟ್ ರೀಚ್ ಆಗುತ್ತಿದ್ದಂತೆ ನಿಮ್ಮ ಪಾಲಿನ ಹಣ ನಿಮ್ಮ ಅಕೌಂಟ್​​ಗೆ ಬಂದು ಬಿದ್ದಿರುತ್ತದೆ.

ಯೂಟ್ಯೂಬ್'ನಲ್ಲಿ PewDiePi ಎನ್ನುವ ಚಾನೆಲ್ ನಡೆಸುವ ಫೆಲಿಕ್ಸ್ ಎಂಬಾತನ ಕಮಾಯಿ ತಿಂಗಳಿಗೆ ಸುಮಾರು ಎಂಟೂವರೆ ಲಕ್ಷ ರುಪಾಯಿ ಇದೆಯಂತೆ. ಬ್ರಿಟನ್ ದೇಶದ ಪೋರ್ಟ್ಸ್'ಮೌತ್ ನಗರದ ಜೋಸೆಫ್ ಗರೆಟ್ ಎಂಬಾತ ಯೂಟ್ಯೂಬ್'ನಲ್ಲಿ Stampylonghead ಎಂಬ ಚಾನೆಲ್ ಹೊಂದಿದ್ದಾನೆ. ಈತ ಪ್ರತೀ ತಿಂಗಳು ಸುಮಾರು ಐದೂವರೆ ಕೋಟಿ ರುಪಾಯಿ ಹಣ ಗಳಿಸುತ್ತಾನೆ. ಇನ್ನೂ ಭಾರತದಲ್ಲೂ Beingindian ಹಾಟ್ಸ್ಟಾರ್, ಅನೇಕ ವಿಡಿಯೋ ಕಂಪನಿಗಳು ಹಣ ಮಾಡುತ್ತಿವೆ.

image


ಹೌದು ಸಿನಿಮಾ ರೈಟ್ಸ್ ಪಡೆಯುವ ವಿಡಿಯೋ ಕ್ಯಾಸೆಟ್ ಕಂಪನಿಗಳು, ಈಗ ಚಲನಚಿತ್ರದ ಹಲವು ಹಿಟ್ ಹಾಡುಗಳನ್ನು ಮತ್ತು ಸಂಪೂರ್ಣ ಸಿನಿಮಾವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡುತ್ತಿದ್ದಾರೆ. ಇದರಿಂದ ಆಯಾ ಕಂಪನಿಗಳು ಹಣ ಸಂಪಾದನೆ ಮಾಡುತ್ತಿದ್ದಾರೆ. ಯಾವುದೇ ವಿಡಿಯೋ ಅಪ್ಲೋಡ್ ಮಾಡಿದ್ರು ಅದು ನಿಮ್ಮ ಸ್ವಂತದ್ದಾಗಿರಬೇಕು. ಒಂದ್ವೇಳೆ ಅದು ಕದ್ದ ವಿಡಿಯೋ ಆಗಿದ್ದಲ್ಲಿ ಥರ್ಡ್ ಪಾರ್ಟಿ ಮ್ಯಾಚ್ ಎಂದು ಬರುವ ಜೊತೆಗೆ ಆ ದೃಶ್ಯಕ್ಕೆ ಯಾವ ರೀತಿ ಹಣ ಕೂಡ ಬರುವುದಿಲ್ಲ.

ಯೂಟ್ಯೂಬ್​ಗೆ ನೀವು ಹೊಸಬರಾಗಿದ್ದರೆ ಮೊದಲಿಗೆ ನೀವು ಮಾಡಬೇಕಿರುವುದಿಷ್ಟು...

1) ಯೂಟ್ಯೂಬ್ ಖಾತೆ ತೆರೆಯಿರಿ

2) ಗೂಗಲ್ ಆ್ಯಡ್​ಸೆನ್ಸ್​​ ಅಕೌಂಟನ್ನ ಆಕ್ಟಿವೇಟ್ ಮಾಡಿ ನಿಮ್ಮ ಯೂಟ್ಯೂಬ್ ಖಾತೆಗೆ ಲಿಂಕ್ ಮಾಡಿ

3) ನೀವೇ ಸ್ವಂತವಾಗಿ ಶೂಟ್ ಮಾಡಿರುವ ವಿಷುವಲ್ ಬಳಸಿಕೊಂಡು ತಯಾರಾಗಿರುವ ವಿಡಿಯೋಗಳನ್ನ ಯೂಟ್ಯೂಬ್'ಗೆ ಅಪ್ಲೋಡ್ ಮಾಡಿ. ಬೇರೆಯವರ ವಿಡಿಯೋಗಳನ್ನ ಡೌನ್'ಲೋಡ್ ಮಾಡಿ ಎಡಿಟ್ ಮಾಡಿದ ವಿಡಿಯೋಗಳನ್ನ ಯೂಟ್ಯೂಬ್'ಗೆ ಹಾಕಿದರೆ ಕಾಪಿರೈಟ್ ಸಮಸ್ಯೆ ಬಂದು ನಿಮ್ಮ ಖಾತೆಯೇ ರದ್ದಾಗುವ ಅಪಾಯವಿರುತ್ತದೆ. ಹೀಗಾಗಿ, ನಿಮ್ಮದೇ ಎಕ್ಸ್​ಕ್ಲೂಸಿವ್ ಎನಿಸುವಂತಹ ವಿಡಿಯೋಗಳನ್ನ ಮಾತ್ರ ಯೂಟ್ಯೂಬ್​ಗೆ ಹಾಕುವುದು ಕಡ್ಡಾಯ.

4) ನಿಮ್ಮ ವಿಡಿಯೋವನ್ನ ಮಾನಿಟೈಸೇಶನ್ ಮಾಡಿ

ಜಾಹೀರಾತಿನ ವಿಧಿವಿಧಾನ

ಮಾನಿಟೈಸ್ ಮಾಡಿದರೆ ನಿಮ್ಮ ಯೂಟ್ಯೂಬ್ ಚಾನೆಲ್​ಗೆ ಜಾಹೀರಾತು ಬಂದೇ ಬರುತ್ತದೆ. ಆದರೆ, ಯಾವ ತರಹದ ಜಾಹೀರಾತು ಮತ್ತು ಅದರ ದರ ಇವುಗಳು ಬೇರೆ ಬೇರೆ ಅಂಶಗಳಿಂದ ನಿರ್ಧಾರಿತವಾಗಿರುತ್ತವೆ. ನಿಮ್ಮ ಚಾನೆಲ್​ಗೆ ಇರುವ ಸಬ್​ಸ್ಕ್ರೈಬರ್​​ಗಳು, ನಿಮ್ಮ ಚಾನೆಲ್​ನ ಜನಪ್ರಿಯತೆ, ನಿರ್ದಿಷ್ಟ ವಿಡಿಯೋದ ಜನಪ್ರಿಯತೆ ಹೀಗೆ ಹಲವಾರು ಅಂಶಗಳು ಜಾಹೀರಾತಿನ ಆಯ್ಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ, ಕೆಲ ಯೂಟ್ಯೂಬ್ ಚಾನೆಲ್​ಗಳು ಬೆರಳೆಣಿಕೆಯಷ್ಟೇ ವಿಡಿಯೋ ಹಾಕಿದರೂ ಒಳ್ಳೆಯ ಬೆಲೆಯ ಜಾಹೀರಾತುಗಳನ್ನ ಪಡೆಯುತ್ತವೆ.

image


ನಿಮ್ಮ ವಿಡಿಯೋಗೆ ಜಾಹೀರಾತು ಬಂದಾಕ್ಷಣ ಹಣ ಬರುವ ಖಾತ್ರಿ ಇಲ್ಲ. ನಿಮ್ಮ ವಿಡಿಯೋ ವೀಕ್ಷಣೆ ಮಾಡುವ ಜನರು ಆ ಜಾಹೀರಾತನ್ನ ಕ್ಲಿಕ್ ಮಾಡಿದರೆ ಮಾತ್ರ ಹಣ ಸಿಗುತ್ತದೆ. ಇದಕ್ಕೆಂದೇ ಯೂಟ್ಯೂಬ್ CPM ಎಂಬ ಫಾರ್ಮುಲಾ ಹೊಂದಿದೆ. ಪ್ರತೀ ಸಾವಿರ ಜಾಹೀರಾತು ವೀಕ್ಷಣೆಗೆ ಇಂತಿಷ್ಟು ಎಂದು ದರವನ್ನ ಫಿಕ್ಸ್ ಮಾಡಲಾಗುತ್ತದೆ. ಇದು, ಸುಮಾರು 50 ರುಪಾಯಿಯಿಂದ 500 ರುಪಾಯಿಯವರೆಗೂ ಇರಬಹುದು.

ಯೂಟ್ಯೂಬ್​​ನಲ್ಲಿ ನಾವು ಅಕೌಂಟ್ ಕ್ರಿಯೇಟ್ ಮಾಡಿ ವಿಡಿಯೋಗಳನ್ನ ಅಪ್ಲೋಡ್ ಮಾಡಿದರೆ ಯೂಟ್ಯೂಬ್​ನಿಂದಲೇ ಒಂದಷ್ಟು ಜಾಹೀರಾತುಗಳು ನಿಮ್ಮ ವಿಡಿಯೋಗೆ ಸಿಕ್ಕುತ್ತವೆ. ಈ ಜಾಹೀರಾತಿನಿಂದ ಬರುವ ಆದಾಯ ಯೂಟ್ಯೂಬ್ ಮತ್ತು ನಿಮ್ಮ ನಡುವೆ ಹಂಚಿಕೆಯಾಗುತ್ತದೆ. ಜಾಹೀರಾತಿನ ಪ್ರಮಾಣ ಮತ್ತು ಬೆಲೆ ನಿಮ್ಮ ಚಾನೆಲ್​ನ ಜನಪ್ರಿಯತೆ ಮತ್ತು ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ..

ಹೆಚ್ಚು ಕ್ರೀಯಾಶೀಲರಾಗಿರುವವರು ಯೂಟ್ಯೂಬ್​ನಲ್ಲಿ ಅದ್ಭುತ ವಿಡಿಯೋಗಳನ್ನು ಹಾಕಿ ಹಣಮಾಡಬಹುದು. ಮನೆಮದ್ದು, ಫಿಟ್ನೆಸ್ ಮಂತ್ರ, ಹೊಸ-ಹೊಸ ತಿಂಡಿ ತಿನಿಸುಗಳ ಪರಿಚಯ ಮಾಡಿಕೊಡುವುದು. ನಿಮ್ಮದೆ ಹಾಡು ಸಂಗೀತ, ನೃತ್ಯ ಹೀಗೆ ಹಲವು ರೀತಿ ಹಣ ಮಾಡಬಹುದು. ಇದಕ್ಕೆ ವೃತ್ತಿಪರ ಕ್ಯಾಮರ ಬೇಕು ಅಂತೇನಿಲ್ಲ. ನೀವು ಉತ್ತಮ ಸ್ಮಾರ್ಟ್​ಫೋನ್ ಹೊಂದಿದ್ದರೆ ಸಾಕು. ಉತ್ತಮ ದೃಶ್ಯಗಳನ್ನು ಸೆರೆಹಿಡಿಯುವ ಕಲೆ ನಿಮ್ಮಗೆ ಗೊತ್ತಿದ್ದಲ್ಲಿ ನೀವು ಕೈತುಂಬಾ ಹಣಗಳಿಸಬಹುದು. ಸ್ವಲ್ಪ ಸ್ಮಾರ್ಟ್ ಆಗಿ ಥಿಂಕ್ ಮಾಡಿದ್ರೆ ಸಾಕೂ..