Brands
YSTV
Discover
Events
Newsletter
More

Follow Us

twitterfacebookinstagramyoutube
Kannada

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

Videos

1160 ಕೊರೊನಾ ವೈರಸ್‌ ಪ್ರಕರಣಗಳಿಗೆ ಕಾರಣಳಾದ 65 ವರ್ಷದ ಪೇಷಂಟ್‌ ನಂಬರ್‌ 31!

ಲಾಕ್‌ಡೌನ್‌ ಸಮಯದಲ್ಲಿ ಸೋಷಿಯಲ್‌ ಡಿಸ್ಟೆಂಸಿಂಗ್ ಎಷ್ಟು ಮುಖ್ಯವೆಂದು ತಿಳಿಸುತ್ತದೆ ಪೇಷಂಟ್‌ 31 ಪ್ರಕರಣ! ಭಾರತದ ಬೀದಿಬೀದಿಗಳಲ್ಲಿ, ಲಾಕ್‌ಡೌನ್‌ ಇದ್ದರೂ ಊರು ತಿರುಗುತ್ತಾ, ವೈರಸ್‌ ಹರಡಲು ಕಾರಣವಾಗುತ್ತಿರುವ, ಇನ್ನೂ ಎಚ್ಚೆತ್ತುಕೊಳ್ಳದ ಜನತೆ ಈ ಪೇಷಂಟ್‌ 31 ಬಗ್ಗೆ ತಿಳಿದುಕೊಳ್ಳಬೇಕು.

1160 ಕೊರೊನಾ ವೈರಸ್‌ ಪ್ರಕರಣಗಳಿಗೆ ಕಾರಣಳಾದ 65 ವರ್ಷದ ಪೇಷಂಟ್‌ ನಂಬರ್‌ 31!

Thursday March 26, 2020,

2 min Read

ದಕ್ಷಿಣ ಕೊರಿಯಾ ಮುಂದುವರೆದ ರಾಷ್ಟ್ರ. ಅಲ್ಲಿನ ವೈದ್ಯಕೀಯ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಸಾಧನೆ ಮಾಡಿರುವಂತಹದ್ದು. ಆ ರಾಷ್ಟ್ರದವರು ಕೊರೊನಾ ಮಹಾಮಾರಿಯನ್ನೂ ಹರಡದಂತೆ ನೋಡಿಕೊಂಡಿದ್ದರು. ಆ ಕಾರಣದಿಂದಾಗಿಯೇ, ಪಕ್ಕದಲ್ಲಿಯೇ ಚೀನಾ ಇದ್ದರೂ, ದಕ್ಷಿಣ ಕೊರಿಯಾ ಮೊದಲು ಕಂಡದ್ದು ಕೇವಲ 30 ಕೊರೊನಾ ಕೇಸ್‌ಗಳನ್ನು. ಹಾಗಾಗಿಯೇ ಜಗತ್ತೇ ದಕ್ಷಿಣ ಕೊರಿಯಾವನ್ನು ಪ್ರಶಂಸಿಸಿತ್ತು. ಆದರೆ ಅಂತಹ ಮುಂದುವರೆದ ರಾಷ್ಟ್ರದಲ್ಲೀಗ, 25ನೇ ಮಾರ್ಚ್‌ ಹೊತ್ತಿಗೆ 9137 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. ಅವರಲ್ಲಿ 126 ಜನ ಮರಣ ಹೊಂದಿದ್ದು, 3730 ಜನ ಗುಣಮುಖರಾಗಿದ್ದಾರೆ ಹಾಗೂ 5218 ಜನ ಇನ್ನೂ ಕೊರೊನಾ ಪೀಡತರಾಗಿಯೇ ಇದ್ದಾರೆ.


ದಕ್ಷಿಣ ಕೊರಿಯಾದಲ್ಲಿ ಮೊದಲ ಕೊರೊನಾ ಪ್ರಕರಣ ಧೃಡಪಟ್ಟದ್ದು ಜನವರಿ 20 ರಂದು. ಅದೂ ಸಹ ಚೀನಾದ, ಅದರಲ್ಲೂ ಕೊರೊನಾ ಜನಿಸಿತೆನ್ನಲಾದ ವುಹಾನ್‌ ಪ್ರಾಂತ್ಯದಿಂದ ದ.ಕೋರಿಯಾದ ಸಿಯೋಲ್‌ಗೆ ಬಂದ ಮಹಿಳೆಯಲ್ಲಿ ಪತ್ತೆಯಾದದ್ದು. ಈ ಘಟನೆಯ ನಂತರದ ನಾಲ್ಕು ವಾರಗಳಲ್ಲಿ, ದಕ್ಷಿಣ ಕೊರಿಯಾವು ಕೇವಲ 30 ಜನರನ್ನು ಬಿಟ್ಟರೆ ಮತ್ಯಾರೂ ವೈರಸ್‌ಗೆ ತುತ್ತಾಗದಂತೆ ತಪ್ಪಿಸುವಲ್ಲಿ ಯಶಸ್ವಿಯಾಯಿತು. ಆದರೆ ಇವೆಲ್ಲವನ್ನೂ ಬುಡಮೇಲು ಮಾಡಿದ್ದು, “ಪೇಷಂಟ್‌ ನಂಬರ್‌ 31” ಅಂದರೆ, ದ.ಕೊರಿಯಾದ 31ನೇ ಕೊರೊನಾ ಪೀಡಿತ ಮಹಿಳೆ.


ಪೇಷಂಟ್‌ ನಂಬರ್‌ 31 ಎಂದು ನಾಮಾಂಕಿತವಾಗಿರುವ 65 ವರ್ಷದ ಈ ಮಹಿಳೆಗೆ ಕೊರೊನಾ ಹೇಗೆ ತಗುಲಿತು ಎಂಬುದು ತಿಳಿದು ಬಂದಿಲ್ಲ. ಈಕೆ ಆಸ್ಪತ್ರೆ ಸೇರಿದ್ದು, ಫೆಬ್ರವರಿ 6 ರಂದು. ಅದೂ ಒಂದು ಅಪಘಾತದ ಪ್ರಕರಣದಲ್ಲಿ. ಆಕೆ ಆಸ್ಪತ್ರೆಯಲ್ಲಿ ಇದ್ದಾಗಲೇ, ಎರಡು ಬಾರಿ ಅಂದರೆ, ಫೆ.9 ಹಾಗೂ ಫೆ.16ರಂದು ಶಿಂಚೆಂಜಿ ಚರ್ಚ್‌ ಆಫ್‌ ಜೀಸಸ್‌ನಲ್ಲಿ ನಡೆದ ಬೃಹತ್‌ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಳು. ಈ ಮಧ್ಯೆ, ಫೆ.15ರಂದು, ಆಸ್ಪತ್ರೆಯ ವೈದ್ಯರು ಆಕೆಗೆ ಜ್ವರವಿದ್ದ ಕಾರಣ, ಕೊರೊನ ಪರೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದರು. ಆದರೆ ಆಕೆ, ತಾನು ಎಲ್ಲೂ ಹೊರದೇಶದ ಪ್ರವಾಸ ಮಾಡಿಲ್ಲವೆಂದೂ, ತನಗೆ ಕೊರನಾ ಬರುವುದು ಸಾಧ್ಯವೇ ಇಲ್ವೆಂದು ಹೇಳಿ ಪರೀಕ್ಷೆಗೆ ಒಪ್ಪಿರಲಿಲ್ಲ ಹಾಗೂ ಅದೇ ಮಧ್ಯಾಹ್ನ ತನ್ನ ಪರಿಚದವರೊಟ್ಟಿಗೆ ಹೊಟೆಲೊಂದಕ್ಕೆ ತೆರಳಿದ್ದಳು. ಆದರೆ ರೋಗ ಲಕ್ಷಣಗಳು ಎದ್ದು ಕಾಣುತ್ತಲೇ, ಫೆ.17ರಂದು ಆಕೆ ಬೇರೊಂದು ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಳು. ಮರುದಿನ ಬಂದ ವರದಿಯಲ್ಲಿ ಆಕೆಗೆ ಕೊರೊನ ಇರುವುದು ಪತ್ತೆಯಾಯಿತು ಮತ್ತು ಈ ಪೇಷಂಟ್‌ 31ರ ಕಾರಣದಿಂದಾಗಿ ಅವಳೊಟ್ಟಿಗೆ ಚರ್ಚಿನಲ್ಲಿ ಭಾಗಿಯಾದ ಸಾವಿರಾರು ಜನರಿಗೆ ಅದರ ನಂತರದ ವಾರದಲ್ಲೇ ಕೊರೊನಾ ಇದೆ ಎಂಬುದು ತಿಳಿದು ಬಂತು.


ಶಿಂಚಿಯೆಂಜೆ ಚರ್ಚ್‌ (ಚಿತ್ರ: ಇಂಡಿಯಾ ಟುಡೆ)
ಬಫೆಟ್ ರೆಸ್ಟೋರೆಂಟ್‌ನಿಂದ ಹಿಡಿದು ಕೊರಿಯನ್ ಶೈಲಿಯ ಸಾರ್ವಜನಿಕ ಸ್ನಾನ ಮತ್ತು ನಂತರ ಎರಡು ಬಾರಿ ಚರ್ಚ್‌ಗೆ ಭೇಟಿ ಕೊಟ್ಟಿರುವ ಪೇಷಂಟ್‌ 31 ಸುಮಾರು 1,160 ಜನರೊಂದಿಗೆ ಸಂಪರ್ಕಕ್ಕೆ ಬಂದಿದ್ದಾಳೆಂದು ಅಂದಾಜಿಸಲಾಗಿದೆ.


ಡೇಗೂ ಪ್ರಾಂತ್ಯದ ಅಧಿಕಾರಿಗಳು, ಈಗ ಅವರೆಲ್ಲರ ಪ್ರವಾಸದ ವಿವರವನ್ನು ಕಲೆ ಹಾಕಿ, ಮುಂದಾಗುವುದರ ಕುರಿತು ಯೋಚಿಸುತ್ತಿದ್ದಾರೆ.


ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಆಗ್ನೇಯ ನಗರ ಡೇಗು ಮತ್ತು ಉತ್ತರ ಜಿಯೊಂಗ್‌ಸಾಂಗ್ ಪ್ರಾಂತ್ಯದ ಕೆಲವು ಭಾಗಗಳನ್ನು "ವಿಶೇಷ ವಿಪತ್ತು ವಲಯಗಳು" ಎಂದು ಘೋಷಿಸಿದ್ದಾರೆ.


ದಕ್ಷಿಣ ಕೊರಿಯಾವು ಸಾಂಕ್ರಾಮಿಕ ಕಾಯಿಲೆಯಿಂದ ಪ್ರದೇಶವನ್ನು ವಿಪತ್ತು ವಲಯವೆಂದು ಘೋಷಿಸಿದ್ದು ಇದೇ ಮೊದಲು. ಸರ್ಕಾರವು ಪುನಃಸ್ಥಾಪನೆ ವೆಚ್ಚದ 50% ವರೆಗೆ ಸಬ್ಸಿಡಿ ನೀಡಬಹುದು ಮತ್ತು ನಿವಾಸಿಗಳಿಗೆ ತೆರಿಗೆ ಮತ್ತು ಉಪಯುಕ್ತತೆ ಪಾವತಿಗಳಿಂದ ವಿನಾಯಿತಿ ನೀಡುತ್ತದೆ.


ಕೆಸಿಡಿಸಿ ಉಪನಿರ್ದೇಶಕ ಕ್ವಾನ್ ಜುನ್-ವೂಕ್ ಮಾತನಾಡಿ,

“ಹೊಸ ಪ್ರಕರಣಗಳಲ್ಲಿ ದೇಶವು ಕೆಳಮುಖ ಪ್ರವೃತ್ತಿಯನ್ನು ಅನುಭವಿಸುತ್ತಿದೆ. ಚರ್ಚ್ ಸದಸ್ಯರಿಗೆ ಸಂಬಂಧಿಸಿದ ಹೆಚ್ಚಿನ ಸಾಮೂಹಿಕ ಸೋಂಕಿನ ಪ್ರಕರಣಗಳನ್ನು ಗುರುತಿಸಿದ ನಂತರ ಪ್ರಕರಣಗಳ ಕುಸಿತವು ಕಂಡುಬರುತ್ತದೆ,” ಎಂದರು


ಪೇಷಂಟ್ 31 ಚೀನಾದೊಂದಿಗೆ ಯಾವುದೇ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲವಾದರೂ ಕೊರೊನಾಗೆ ಹೇಗೆ ಸೋಂಕಿತರಾದರೆಂದು ಅಧಿಕಾರಿಗಳು ಚಿಂತೆಗೀಡಾಗಿದ್ದಾರೆ. ಈಗ ನಡೆದಿರುವ ಹೊಸ ಬೆಳವಣಿಗೆಯ ಪ್ರಕಾರ, ಈಶಾನ್ಯ ಚೀನಾದಲ್ಲಿ ಕೊರಿಯನ್ನರೊಂದಿಗೆ ಇವಾಂಜೆಲಿಕಲ್ ಕಾರ್ಯಾಚರಣೆಗಳನ್ನು ನಡೆಸಲು ಚರ್ಚ್ ಸದಸ್ಯರು ಒಪ್ಪಿಕೊಂಡಿದ್ದರು ಹಾಗೂ ಅವರಲ್ಲಿ ಕೆಲವರನ್ನು ದಕ್ಷಿಣ ಕೊರಿಯಾಕ್ಕೆ ಆಹ್ವಾನಿಸಲಾಗಿತ್ತು.


ಚಿಯೊಂಗ್ಡೊ ಆಸ್ಪತ್ರೆಯಲ್ಲಿ ಚರ್ಚ್‌ಗೆ ಹೋಗುವವರು ಮತ್ತು ಸೋಂಕುಗಳ ಹೆಚ್ಚಳಕ್ಕೆ ಸಂಬಂಧಿಸಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ, ಅಲ್ಲಿ ಅನೇಕರು ಸೋಂಕಿಗೆ ಒಳಗಾಗಿದ್ದಾರೆ, ಹೆಚ್ಚಾಗಿ ಮಾನಸಿಕ ಅಸ್ವಸ್ಥತೆಯ ರೋಗಿಗಳಿದ್ದಾರೆ. ಕೊರೊನಾವೈರಸ್‌ನಿಂದ ದಕ್ಷಿಣ ಕೊರಿಯಾದ 126ನೇ ಜೀವ ಬಲಿಯಾದದ್ದು ಈಗ ಅಧಿಕೃತವಾಗಿ ದಾಖಲಾಗಿದೆ.