14ರ ಹರೆಯದಲ್ಲೇ ವಿಮಾನ ತಯಾರಿಸುವ ಸಾಹಸದಲ್ಲಿ ಜೂನಿಯರ್ ಐನ್ ಸ್ಟೀನ್...!
ಟೀಮ್ ವೈ.ಎಸ್. ಕನ್ನಡ
ನಿಮಗೆ ನಿದ್ರೆ ಮಾಡಲು ಸಾಧ್ಯವಾಗ್ತಿಲ್ವಾ.. ಎಷ್ಟೇ ಪ್ರಯತ್ನ ಪಟ್ರೂ ನಿದ್ದೆ ನಿಮ್ಮಿಂದ ದೂರವಾಗ್ತಲೇ ಇದ್ಯಾ.. ಹಾಗಾದ್ರೆ ಭೌತಶಾಸ್ತ್ರದಲ್ಲಿ ಕೊಂಚ ತೊಡಗಿಸಿಕೊಳ್ಳಿ, ಖಂಡಿತ ನಿಮಗೆ ನಿದ್ರೆ ಬಂದೆ ಬರುತ್ತೆ. ಹೀಗಂತ ತುಂಟತನದಲ್ಲಿ ಹೇಳುವ ಸಬ್ರೀನಾ ಪಸ್ಟರ್ಸ್ಕೀ ಭವಿಷ್ಯ ಅಲ್ಬರ್ಟ್ ಐನ್ ಸ್ಟೀನ್ ಅಂತ ಹಾರ್ವಾರ್ಡ್ ವಿಶ್ವವಿದ್ಯಾಲಯದಿಂದ ಗುರುತಿಸಿಕೊಂಡಿರೋದು ವಿಶೇಷ. ಈಕೆ ಕಾರು ಕಲಿಯದಿದ್ರೂ ವಿಮಾನಗಳನ್ನ ಹಾರಿಸಿರುವ ದಿಟ್ಟೆ ಈಕೆ. ಈಕೆಯ ಬಳಿ ಸ್ಮಾರ್ಟ್ ಫೋನ್ ಗಳಿಲ್ಲ, ಸೋಶಿಯಲ್ ಮೀಡಿಯಾಗಳ ಹುಚ್ಚುಗಳಿಲ್ಲ.. ಫೇಸ್ ಬುಕ್, ಇಂಟಗ್ರಾಮ್, ಲಿಡ್ಕನ್ ಅಥವಾ ಟ್ವಿಟ್ಟರ್ ಗಳ ಹಿಂದೆ ಯಾವತ್ತೂ ಬಿದ್ದವಳಲ್ಲ. ಆದ್ರೆ ಇವಳೇ ಒಂದು ಸ್ವಂತ ವೆಬ್ ಸೈಟನ್ನ ಹುಟ್ಟು ಹಾಕಿದ್ದು ಅದರೊಂದಿಗೆ ತನ್ನ ಒಡನಾಟವನ್ನ ಕಾಯ್ದುಕೊಂಡಿದ್ದಾಳೆ. ಫಿಸಿಕ್ಸ್ ಗರ್ಲ್ ಅನ್ನೋ ಹೆಸರಿನಲ್ಲಿರುವ ಈಕೆ ವೆಬ್ ಸೈಟ್ ನಲ್ಲಿ ಈಕೆ ತನ್ನ ಹೊಸ ಅನ್ವೇಷಣೆಗಳನ್ನ ಪ್ರಕಟಿಸುತ್ತಿರುತ್ತಾಳೆ. ತಾನು ಕಂಡುಹಿಡಿದ ಹಾಗೂ ನಡೆಸಿದ ಹೊಸ ಪ್ರಯೋಗಗಳ ಬಗ್ಗೆ ವಿವರಿಸುತ್ತಾಳೆ.
ಇದನ್ನು ಓದಿ: ಆನ್ಲೈನ್ನಲ್ಲಿ ಪೂಜಾ ಸಾಮಗ್ರಿ: ದೇಶ ವಿದೇಶದಲ್ಲೂ ಸತೀಶ್ ಸ್ಟೋರ್ಸ್ನ ಕಮಾಲ್
ಸಬ್ರೀನಾ ಪಸ್ಟರ್ಸ್ಕೀ ಕ್ಯೂಬನ್ – ಅಮೆರಿಕನ್ ಜನರೇಷನ್ ಗೆ ಸೇರಿದಾಕೆ. 1993ರಲ್ಲಿ ಚಿಕಾಗೋದಲ್ಲಿ ಜನಿಸಿರುವ ಸಬ್ರೀನಾ ಪಸ್ಟರ್ಸ್ಕೀ ಎಡಿಸನ್ ಪ್ರಾಂತ್ಯದಲ್ಲಿ ಬೆಳೆದವಳು. 2010ರಲ್ಲಿ ಈಕೆ ಗಣಿತ ಹಾಗೂ ವಿಜ್ಞಾನ ಅಕಾಡೆಮಿಯನ್ನ ಪೂರ್ಣಗೊಳಿಸಿದ್ದಾಳೆ. ವಿಶೇಷ ಅಂದ್ರೆ ಸಬ್ರೀನಾಗೆ ವಿಮಾನ ಹಾಗೂ ಅವುಗಳ ತಂತ್ರಜ್ಞಾನದ ಬಗ್ಗೆ ಇನ್ನಿಲ್ಲದ ಆಸಕ್ತಿ. ಹಾಗಂತ ಕೇವಲ ಅದನ್ನ ಅಧ್ಯಯನಕ್ಕಷ್ಟೇ ಸೀಮಿತಗೊಳಿಸಿಕೊಂಡಿಲ್ಲ. ಬದಲಾಗಿ ವಿಮಾನಗಳನ್ನ ಹಾರಿಸುವುದರಲ್ಲೂ ವಿಶೇಷ ಪರಿಣತಿ ಸಾಧಿಸಿದ್ದಾಳೆ. 2003 ರಿಂದ 2006ರ ನಡುವೆ ಆಕಾಶದಲ್ಲಿ ಹಲವು ಬಾರಿ ಹಾರಾಟ ನಡೆಸಿದ್ದಾಳೆ. ಆದ್ರೆ ಅವಳ ಆಸಕ್ತಿ ಇಲ್ಲಿಗೇ ನಿಂತಿಲ್ಲ. ಹಾರಾಡಿ ಅದ್ರ ಸುಂದರ ಅನುಭವನ್ನ ಪಡೆದ ಸಬ್ರೀನಾ ಪಸ್ಟರ್ಸ್ಕೀ ಇದೀಗ ಮೊದಲ ಕೈಟ್ ವಿಮಾನವನ್ನ ನಿರ್ಮಿಸುವ ಸಾಹಸಕ್ಕೆ ಮುಂದಾಗಿದ್ದಾಳೆ… ಎಂಐಟಿಯಲ್ಲೂ ಪದವಿ ಹಾಗೂ ಹರ್ವಾಡ್ ನಲ್ಲಿ ಪಿಹೆಚ್ ಡಿ ಅಧ್ಯಯನ ನಡೆಸುತ್ತಿರುವ ಈಕೆಗೆ ಫಿಸಿಕ್ಸ್ ನ ಅತ್ಯಂತ ಕ್ಲಿಸ್ಟಕರ ಪ್ರಶ್ನೆಗಳನ್ನ ಹಾಗೂ ಸಮಸ್ಯೆಗಳನ್ನ ಬಿಡಿಸುವುದು ಅಂದ್ರೆ ಇನ್ನಿಲ್ಲದ ಉತ್ಸಾಹ.
ಹೀಗೆ ಭೌತಶಾಸ್ತ್ರದಲ್ಲಿ ಅಪೂರ್ವ ಆಸಕ್ತಿ ಹೊಂದಿರುವ ಸಬ್ರೀನಾ ಪಸ್ಟರ್ಸ್ಕೀ ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಿಂಗಲ್ ಎಂಜಿನ್ ವಿಮಾನ ನಿರ್ಮಾಣ ಕಾರ್ಯದತ್ತ ಆಸಕ್ತಿ ತೋರಿದ್ಲು. ಆಕೆ ಮೊದಲ ಬಾರಿ ವಿಮಾನ ತಯಾರಿಸುವ ಬಗ್ಗೆ ಯೋಚಿಸಿದ್ದು ಹಾಗೂ ಯೋಜಿಸಿದ್ದು ತನ್ನ 14ನೇ ವರ್ಷದಲ್ಲಿ ಅನ್ನೋದು ವಿಶೇಷ. ಇನ್ನು ಸಬ್ರೀನಾ ಪಸ್ಟರ್ಸ್ಕೀ ತಯಾರಿಸಲು ಇಚ್ಛಿಸಿರುವ ವಿಮಾನದ ಮಾದರಿ ಹಾಗೂ ಅದರ ಲಕ್ಷಣಗಳನ್ನ ಈಗಾಗಲೇ ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದಾಳೆ. ಆಕೆಯ ವಿಮಾನ ತಯಾರಿಕೆಯ ವಿಡಿಯೋವನ್ನ ನೋಡಿರುವ ಎಂಐಟಿ ಪ್ರೊಫೆಸರ್ ಗಳಾದ ಅಲೆನ್ ಹೆಗ್ಗಾರ್ಟಿ ಹಾಗೂ ಎರ್ಲಾ ಮುರ್ಮಾನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
“ ನಾವು ಆಕೆಯ ಪ್ರತಿಭೆ ಹಾಗೂ ಸಾಮರ್ಥ್ಯವನ್ನ ನೋಡಿ ಬೆರಗಾದೆವು. ವಿಮಾನದ ಬಗ್ಗೆ ಆಕೆಗಿರುವ ಜ್ಞಾನ ಅತ್ಯದ್ಭುತ. ವಿಮಾನದಲ್ಲಿ ಪ್ರಯಾಣಿಸುವುದಕ್ಕೇ ಸಾಕಷ್ಟು ತಯಾರಿಗಳು ಬೇಕು. ಆದ್ರೆ ಈಕೆ ಎಲ್ಲವಕ್ಕೂ ತಯಾರಾಗಿ ವಿಮಾನವನ್ನ ನಿರ್ಮಿಸುವುದಕ್ಕೇ ಮುಂದಾಗಿರುವುದು ಅಚ್ಚರಿ. ಅಲ್ಲದೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಅವಳ ಸಾಹಸ ಅದ್ಭುತ ” ಅಂತ ಪ್ರೊಫೇಸರ್ ಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಬಹುತೇಕ ಹೈಸ್ಕೂಲ್ ಮಟ್ಟದಲ್ಲೇ ನಿರ್ಧಾರವಾಗುತ್ತದೆ. ಹಾಗೇ ಸಬ್ರೀನಾ ಪಸ್ಟರ್ಸ್ಕೀ ಕೂಡ ಹೈಸ್ಕೂಲ್ ಲೆವೆಲ್ ನಲ್ಲೇ ವಿಶೇಷವಾಗಿದ್ಲು. ವಿಮಾನ ಬ್ಯಾಟರಿ ಹಾಗೂ ಎಂಜಿನ್ ಗಳ ಬಗ್ಗೆ ಅಧ್ಯಯನ ನಡೆಸಿದ್ಲು.
“ ನನಗೆ ಆರಂಭದ ದಿನಗಳಿಂದಲೂ ಈ ಕೆಲಸ ತುಂಬಾ ಸವಾಲಿನದ್ದಾಗಿತ್ತು. ನಾನಿದನ್ನ ಶುರುಮಾಡಿದಾಗ ನನಗೆ ಕೇವಲ 12 ವರ್ಷ. ಅನುಭವದ ಅಗತ್ಯ ನನಗಿತ್ತು. ಆದ್ರೆ ಅವುಗಳು ಕೇವಲ ಟೆಕ್ಟ್ಸ್ ಬುಕ್ ಗಳಿಂದ ಮಾತ್ರ ಬರಲು ಸಾಧ್ಯವಿರಲಿಲ್ಲ ಅನ್ನೋದು ನನಗೆ ತಿಳಿದಿತ್ತು .”
ಅಂತ ಸಬ್ರೀನಾ ಪಸ್ಟರ್ಸ್ಕೀ ತನ್ನ ಆರಂಭದ ದಿನಗಳನ್ನ ನೆನಪಿಸಿಕೊಳ್ಳುತ್ತಾಳೆ. ಬಳಿಕ ತನ್ನ ಉದ್ದೇಶದ ಬಗ್ಗೆ ಸ್ಪಷ್ಟತೆ ತೋರಿದ ಆಕೆ ಸ್ಪೋರ್ಟ್ಸ್ ವಿಮಾನ ತಯಾರಿಕೆಗೆ ಸರ್ಟಿಫಿಕೇಟ್ ಪಡೆದಿರೋದು ವಿಶೇಷ.
ಇನ್ನು ಇಲ್ಲಿಗೇ ಈಕೆಯ ಸಾಧನೆ ಮುಗಿಯುವುದಿಲ್ಲ. ಅಮೆರಿಕಾದ ಫಿಸಿಕ್ಸ್ ತಂಡಕ್ಕೆ ನೇಮಕವಾಗಿರುವ 23 ಮಂದಿಯಲ್ಲಿ ಈಕೆಯೂ ಸೇರಿರುವುದು ವಿಶೇಷ. ಹೀಗೆ ಕೇವಲ 14 ವರ್ಷಗಳಲ್ಲೇ ವಿಮಾನ ಹಾಗೂ ಅದರ ತಂತ್ರಜ್ಞಾನದಲ್ಲಿ ನೈಪುಣ್ಯತೆ ತೋರಿಸಿರುವ ಸಬ್ರೀನಾ ಪಸ್ಟರ್ಸ್ಕೀ ಭವಿಷ್ಯದ ಐನ್ ಸ್ಟೀನ್ ಅನ್ನೋದ್ರಲ್ಲಿ ಅನುಮಾನವಿಲ್ಲ.
ಅನುವಾದ – ಸ್ವಾತಿ, ಉಜಿರೆ
1. ಹಕ್ಕಿಗಳ ಮಾಹಿತಿ ನೀಡುವ ‘ಹಕ್ಕಿ ಪ್ರಪಂಚ’