ಮಕ್ಕಳ ನೃತ್ಯದಲ್ಲಿ ಕನಸು ನನಸಾಗಿಸಿಕೊಳ್ತಿರೋ ಮೀರಾ
ಪೂರ್ವಿಕಾ
ಸಮಾಜದಲ್ಲಿನ ತೊಡಕುಗಳನ್ನ ಬದಲಾಯಿಸಬೇಕು ಅನ್ನೋದು ಎಲ್ಲರ ಮನಸ್ಸಿನಲ್ಲೂ ಇದ್ದೇ ಇರುತ್ತೆ. ಆದ್ರೆ ಅದಕ್ಕೆ ಸರಿಯಾದ ವೇದಿಕೆ ಸಿಗೋದಿಲ್ಲ. ಆದ್ರೆ ತಮ್ಮದೇ ತನದಲ್ಲಿ ಸಮಾಜದ ಅಳಕುಗಳನ್ನ ಬದಲಾಯಿಸಬೇಕು ಅನ್ನೋ ನಿಟ್ಟಿನಲ್ಲಿ ಪ್ರಾರಂಭವಾಗಿದ್ದೆ ಚಿತ್ರನಾಟ್ಯ ನೃತ್ಯಶಾಲೆ.
ಕಲೆಯಲ್ಲರಿಗಾಗಿ ಕಲೆ ಬದಲಾವಣೆಗಾಗಿ ಅನ್ನೋ ಉದ್ದೇಶವನ್ನಿಟ್ಟುಕೊಂಡು ಪ್ರಾರಂಭ ಮಾಡಿರೋ ಚಿತ್ರನಾಟ್ಯ ನೃತ್ಯ ಶಾಲೆ ಪ್ರಾರಂಭದಲ್ಲಿ ಒಂದೇ ಒಂದು ವಿದ್ಯಾರ್ಥಿಯಿಂದ ಪ್ರಾರಂಭವಾಯ್ತು. ಆದ್ರೆ ಇಂದು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರನಾಟ್ಯ ನೃತ್ಯ ಶಾಲೆ ಅಡಿಯಲ್ಲಿ ಭರತನಾಟ್ಯವನ್ನ ಅಭ್ಯಾಸ ಮಾಡುತ್ತಿದ್ದಾರೆ.
ಬದುಕು ಬಂಗಾರವಾಯ್ತು, SHE ಯಿಂದ ಜೀವನ ಸರಾಗವಾಯ್ತು
1991 ರಲ್ಲಿ ಎಲ್ ಜಿ ಮೀರಾ ಇಂತದೊಂದು ಪ್ರಯತ್ನಕ್ಕೆ ಕೈ ಹಾಕಿದ್ರು. ನೃತ್ಯ ಕಲಿಯೋದ್ರ ಜೊತೆಗೆ ಖಾಸಗಿ ಕಾರ್ಯಕ್ರಮಗಳನ್ನ ನೀಡೋ ಚಿತ್ರನಾಟ್ಯ ತಂಡ ತಮ್ಮ ನೃತ್ಯದಲ್ಲಿ ಸಮಾಜದಲ್ಲಿರೋ ತೊಡಕುಗಳನ್ನು ಹೊರ ಹಾಕುವ ಪ್ರಯತ್ನ ಮಾಡುತ್ತಿದೆ. ಸಮಾಜದ ಪಿಡುಗುಗಳನ್ನು ಕೂಡ ನೃತ್ಯದ ಮೂಲಕ ಜನರಿಗೆ ತಿಳಿಸುತ್ತಾರೆ. ಇನ್ನೂ 25 ವರ್ಷಗಳಿಂದ ಕಲಾ ಸೇವೆ ಮಾಡುತ್ತಾ ಬಂದಿರೋ ಎಲ್ ಜಿ ಮೀರಾ ಅವ್ರು ಯಾವುದೇ ನಿರೀಕ್ಷೆಗಳನ್ನ ಬಯಸದೆ ಈ ನೃತ್ಯ ಶಾಲೆಯನ್ನ ನಡೆಸುತ್ತಿದ್ದಾರೆ. ನೃತ್ಯ ಕಲಿಯಲು ಇಲ್ಲಿ ಬೇಕಿರೋದು ಶ್ರದ್ದೆಯಷ್ಟೆ ಬಿಟ್ಟು ಮತ್ತೇನು ಇಲ್ಲ. ಅದೆಷ್ಟೇ ಮಕ್ಕಳಿಗೆ ಒಂದು ರೂಪಾಯಿ ಹಣವನ್ನ ಪಡೆಯದೆ ನೃತ್ಯ ಕಲಿಸಿದ ಕೀರ್ತಿ ಎಲ್ ಜಿ ಮೀರಾ ಅವ್ರಿಗೆ ಸಲ್ಲುತ್ತೆ. ಆದ್ರೆ ಕಲೆಗೆ ಎಂದಿಗೂ ಬೆಲೆ ಕೊಡಬೇಕು ಆದ್ದರಿಂದ ನಿಮ್ಮ ಕೈಲಾದಷ್ಟು ಬೆಲೆ ಕಟ್ಟಿ ಅನ್ನೂದು ಮೀರಾ ಅವ್ರ ಮಾತು.
ವೃತ್ತಿಯಲ್ಲಿ ಲೆಕ್ಚರರ್ ಆಗಿರೋ ಮೀರಾ ಮೂಲತ ಕೊಡಗಿನವ್ರು. ಇವ್ರ ಹೆಸರು ಸಾಕಷ್ಟು ಮಂದಿಗೆ ರಾಜ್ಯದಲ್ಲಿ ಪರಿಚಯವಿರುವುದೇ ಕಾರಣ ಪದವಿಯಲ್ಲಿ ಐಚ್ಚಿಕ ಕನ್ನಡ ಪುಸ್ತಕದಲ್ಲಿ ಇವರ ಹಸರನ್ನೇ ನೋಡಿರುತ್ತೇವೆ. ಇನ್ನೂ ಕವಿಯತ್ರಿ ಆಗಿರೋ ಮೀರಾ ಅವ್ರು ಸಾಕಷ್ಟು ಕತೆ,ಕವನಗಳು ಹಾಗೂ ಸಣ್ಣ ಕತೆಗಳನ್ನೂ ಬರೆದಿದ್ದಾರೆ. ಭರತನಾಟ್ಯದಲ್ಲಿ ವಿದ್ವತ್ ಮತ್ತು ರಾಜ್ಯಕ್ಕೆದ್ವಿತೀಯ ಶ್ರೇಯಾಂಕ ಪಡೆದ ಕೀರ್ತಿ ಇವ್ರಿಗಿದೆ. ಚಿನ್ನದ ಪದಕ ಪಡೆದಿರೋ ಮೀರಾ ಅವ್ರು 13 ವರ್ಷಗಳಿಂದ ನಿರಂತರವಾಗಿ ಭರತನಾಟ್ಯವನ್ನ ಮಕ್ಕಳಿಗೆ ಕಲಿಸುತ್ತಾ ಬಂದಿದ್ದಾರೆ. ಎಲ್ ಜಿ ಮೀರಾ ನಡೆಸುತ್ತಿರೋ ಚಿತ್ರನಾಟ್ಯ ನೃತ್ಯ ಶಾಲೆ ಸದ್ಯ ಬೆಂಗಳೂರಿನ ವಿಜಯನಗರದಲ್ಲಿದೆ.
ಸರ್ಕಾರಿ ಶಾಲೆಯಲ್ಲಿ ಪ್ರಾಧ್ಯಾಪಕರಾಗಿರೋ ಎಲ್ ಜಿ ಮೀರಾ ಅವ್ರಿಗೆ ಈಗಾಗ್ಲೆ ಸಾಕಷ್ಟು ಬಾರಿ ಬೇರೆ ಬೇರೆ ಊರುಗಳಿಗೆ ವರ್ಗಾವಣೆಯಾಗಿದೆ. ವರ್ಗಾವಣೆಯಾದಾಗಲೆಲ್ಲ ಮೀರಾ ಅವ್ರು ಮನೆ ಬದಲಾಯಿಸದೆ ಇದ್ದಲ್ಲೇ ಉಳಿದುಕೊಂಡಿದ್ದಾರೆ. ಕಾರಣ ತಮ್ಮ ಬಳಿ ನಾಟ್ಯ ಕಲಿಯುತ್ತಿರೋ ಮಕ್ಕಳಿಗೆ ತೊಂದರೆಯಾಗಬಾರದು ಅನ್ನೋದು ಉದ್ದೇಶ. ಇದೇ ಕಾರಣದಿಂದ ಅದೆಷ್ಟೇ ದೂರವಾದ್ರು ಕೂಡ ತಾವು ಪ್ರತಿನಿತ್ಯ ಪ್ರಯಾಣ ಮಾಡಿ ಬಂದು ನಂತ್ರ ಮಕ್ಕಳಿಗೆ ನೃತ್ಯ ಪಾಠವನ್ನ ಹೇಳಿಕೊಡ್ತಾರೆ. ತಾಯಿ ಆಸೆಯಂತೆ ತಮ್ಮ ನೃತ್ಯಶಾಲೆಯನ್ನು ಬೆಳೆಸಿಕೊಂಡು ಬರ್ತಿರೋ ಎಲ್ ಜಿ ಮೀರಾ ಅವ್ರ ಈ ಸಾಧನೆಗೆ ಕೈ ಜೋಡಿಸಿದ್ದು ರವಿಕುಮಾರ್ , ಎಲ್ ಜಿ ಗುರುರಾಜ್ ಈ ಮೂರು ಜನರು ಸೇರಿ ಕಟ್ಟಿರೋ ಚಿತ್ರನಾಟ್ಯ ಸಂಸ್ಥೆಗೆ ಇತ್ತೀಚಿಗಷ್ಟೆ 25 ರ ಸಂಭ್ರಮಾಚರಣೆ ಆಯ್ತು. ಕಲೆಯಿಂದಲೇ ಎಲ್ಲವನ್ನೂ ಬದಲಾಯಿಸಬೇಕು ಅನ್ನೋ ಇವರ ವಿಭಿನ್ನ ಪ್ರಯತ್ನ ಕಲಾಸಕ್ತರಿಗೆ ತುಂಬಾನೇ ಹತ್ತಿರವಾಗಿದೆ.
ಖಾಸಗಿ ಶೋಗಳನ್ನು ನೀಡೋ ಚಿತ್ರನಾಟ್ಯ ತಂಡ ಭರತನಾಟ್ಯ,ಶಿಶುಗಳ ಗೀತೆ,ನೃತ್ಯ ರೂಪಕ,ಭಾವಗೀತೆ ನೃತ್ಯ,ನೃತ್ಯ ನಾಟಕ, ಕಾವ್ಯ ವಾಚನ ಹೀಗೆ ಹಲವಾರು ರೀತಿಯ ನೃತ್ಯಗಳನ್ನ ಪ್ರದರ್ಶನ ಮಾಡುತ್ತಾರೆ. ಇನ್ನು ಇತ್ತೀಚಿಗಷ್ಟೇ ಸಂಗೀತ ಶಾಲೆಯನ್ನ ಪ್ರಾರಂಭ ಮಾಡಿರೋ ಎಲ್ ಜಿ ಮೀರಾ ಅವ್ರು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉಪಯೋಗವಾಗೋ ಮತ್ತಷ್ಟು ರೀತಿಯ ಕಲೆಗಳನ್ನ ಅಭ್ಯಾಸ ಮಾಡಿಸೋ ಆಲೋಚನೆಯಲ್ಲಿದ್ದಾರೆ.
ಇನ್ನೂ ವಿಶೇಷ ಅಂದ್ರೆ ಚಿತ್ರನಾಟ್ಯ ಸಂಸ್ಥೆಯಲ್ಲಿ ನೃತ್ಯ ಕಲಿಯಲು ವಯಸ್ಸಿನ ಮಿತಿಯಿಲ್ಲ. ಈಗಾಗಲೆ 5 ವರ್ಷದ ಮಕ್ಕಳಿಂದ ಮೂವತ್ತು ವರ್ಷದ ಮಹಿಳೆಯರು ಕೂಡ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಖಾಸಗಿ ಕಾರ್ಯಕ್ರಮಗಳನ್ನೂ ನೀಡುವಾಗ ಎಲ್ಲಾ ನೃತ್ಯ ಶಾಲೆಗಳಂತೆ ಎಲ್ ಜಿ ಮೀರಾ ಮಕ್ಕಳ ಬಳಿ ಹಣ ಪಡೆಯುವುದಿಲ್ಲ. ತಮ್ಮದೆ ಹಣದಿಂದ ಮಕ್ಕಳಿಗೆ ಕಾಸ್ಟೂಮ್ಸ್ ಹಾಗೂ ಮೇಕಪ್ ಖರ್ಚು ಮಾಡಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡುತ್ತಾರೆ. ಅಷ್ಟೇ ಅಲ್ಲದೆ ಸಾರ್ವಜನಿಕರು ಆಹ್ವಾನ ನೀಡೋ ಕಾರ್ಯಕ್ರಮಗಳಿಗೆ ಅತಿ ಕಡಿಮೆ ಸಂಭಾವನೆ ಪಡೆದು ಅದ್ದೂರಿಯಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಡುತ್ತಾರೆ.
ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ಅಭಿವೃದ್ಧಿ ಪಡಿಸಿದ ಫಾರ್ಮುಸ್ಯುಟಿಕಲ್ ಕಂಪನಿ
ಟೇಸ್ಟಿ..ಟೇಸ್ಟಿ.. ರುಚಿ ರುಚಿ... ನಾಗಪುರದ ಆರೇಂಜ್ಗೆ ಸಿಲಿಕಾನ್ ಸಿಟಿಯಲ್ಲಿ ಡಿಮ್ಯಾಂಡ್..!
ಗುಜರಿ ವ್ಯಾಪಾರಕ್ಕೆ ಹೈಟೆಕ್ ಟಚ್..! www.kasadhathoutti.comನಲ್ಲಿ ಎಲ್ಲದಕ್ಕೂ ಪರಿಹಾರ..!