ಆವೃತ್ತಿಗಳು
Kannada

ಕಿರಿಕಿರಿ ಮುಕ್ತವಾಗಲಿದೆ ಬೆಂಗಳೂರು ಟ್ರಾಫಿಕ್- ಇದು ನಮ್ಮ ಮೆಟ್ರೋದ ಮ್ಯಾಜಿಕ್​​

ಟೀಮ್​ ವೈ.ಎಸ್​. ಕನ್ನಡ

YourStory Kannada
27th Jun 2016
Add to
Shares
2
Comments
Share This
Add to
Shares
2
Comments
Share

ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿದ್ದ ಬೆಂಗಳೂರು ಜನಕ್ಕೆ ನಮ್ಮ ಮೆಟ್ರೋ ವರದಾನವಾಗಿ ಪರಿಣಮಿಸಿದೆ. ಈಗಾಗಲೇ ಒಂದನೇ ಹಂತದಲ್ಲಿ 5 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗದಲ್ಲಿ ಸಂಚರಿಸುತ್ತಿರುವ ನಮ್ಮ ಮೆಟ್ರೋ, ಎರಡನೇ ಹಂತದ ಕಾಮಾಗಾರಿಗೆ ಸಜ್ಜಾಗಿದೆ. ಇದರಿಂದ ಸಂಪೂರ್ಣ ಬೆಂಗಳೂರನ್ನು ಟ್ರಾಫಿಕ್ ಮುಕ್ತ ಮಾಡಲು ನಮ್ಮ ಮೆಟ್ರೊ ಶ್ರಮಿಸುತ್ತಿದೆ. ಸಿಲಿಕಾನ್ ಸಿಟಿ ಆದಷ್ಟೂ ಬೇಗ ಹಲವು ದೊಡ್ಡ-ದೊಡ್ಡ ಉದ್ಯಮಿಗಳನ್ನು, ದೊಡ್ಡ ಕೈಗಾರಿಕೆಗಳನ್ನು ಸೆಳೆಯುವಲ್ಲಿ ಸಫಲವಾಗಲಿದ್ದು. ಬೆಂಗಳೂರು ಜನರ ಸುಗಮ ಸಂಚಾರಕ್ಕೆ ಮೆಟ್ರೊ ಕಾರಣವಾಗಲಿದೆ.

image


ಮೆಟ್ರೋ ಯೋಜನೆ ರಾಜಧಾನಿಗೆ ಕಾಲಿಟ್ಟು ಎಂಟು ವರ್ಷವಾಗಿದೆ. ದೇಶದ ಎರಡನೇ ಉದ್ದದ ಮೆಟ್ರೋ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಮೆಟ್ರೋ, ಇದೀಗ ಎರಡನೇ ಹಂತದ 72 ಕಿಲೋ ಮೀಟರ್ ಉದ್ದದ ಕಾಮಗಾರಿಗೆ ಕೈ ಹಾಕಿದೆ. ಬರೋಬ್ಬರಿ 26,405 ಕೋಟಿ ರೂಪಾಯಿ ವೆಚ್ಚದಲ್ಲಿ ಮಾರ್ಗ ನಿರ್ಮಾಣಕ್ಕೆ ಸ್ಕೆಚ್ ರೆಡಿಯಾಗಿದ್ದು, ಬೆಂಗಳೂರು ಜನತೆಗೆ ಮತ್ತಷ್ಟು ಅದ್ಭುತ ಸೇವೆ ನೀಡಲು ನಮ್ಮ ಮೆಟ್ರೊ ಮುಂದಾಗಿದೆ.

ಹೇಗಿದೆ ಮೆಟ್ರೋ ಪ್ಲಾನ್​..?

2ನೇ ಹಂತದ ಮುಂದುವರಿದ ಮಾರ್ಗಗಳು ಹಲವು ಭಾಗದ ಜನರಿಗೆ ಅನುಕೂಲಕಾರವಾಗಲಿದೆ. ನಾಯಂಡಹಳ್ಳಿ ಜಂಕ್ಷನ್ ಟು ಕೆಂಗೇರಿವರೆಗೂ ಮಾರ್ಗ ವಿಸ್ತರಿಸಲಾಗಿದೆ. 6.4 ಕಿಲೋ ಮೀಟರ್ ಉದ್ದದ ಮಾರ್ಗ ಇದಾಗಿದ್ದು ,ಇದಕ್ಕೆ 1,867.95 ಕೋಟಿ ರೂಪಾಯಿ ವೆಚ್ಚ ಮಾಡಲಾವುದು. ಇನ್ನು ಈ ಮಾರ್ಗದಲ್ಲಿ 5 ಎಲಿವೇಟರ್ ನಿಲ್ದಾಣಗಳಿವೆ. ಬಳಿಕ ಬೈಯಪ್ಪನಹಳ್ಳಿ ಟು ವೈಟ್​ಫೀಲ್ಡ್ ಮಾರ್ಗ ನಡುವೆ 15.5 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗ ನಿರ್ಮಿಸಲಾಗ್ತಿದ್ದು, ಈ ಮಾರ್ಗ ನಿರ್ಮಾಣಕ್ಕೆ 4,845 ಕೋಟಿ ರೂಪಾಯಿ ವೆಚ್ಚಮಾಡಲಾಗುತ್ತಿದೆ. ಈ ಮಾರ್ಗದಲ್ಲಿ 14 ನಿಲ್ದಾಣಗಳಿವೆ. ನಾಗಸಂದ್ರ ಟು ತುಮಕೂರು ರಸ್ತೆಯ ಬಿ.ಐ.ಇ.ಸಿ ವರೆಗೂ ಮತ್ತೊಂದು ಮಾರ್ಗ ಮುಂದುವರಿಯುತ್ತಿದ್ದು ಇದು 3.7 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗವಾಗಿದೆ. 1,168.22 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಈ ಮಾರ್ಗದಲ್ಲಿ 3 ನಿಲ್ದಾಣಗಳಿವೆ. ಕೊನೆಯ ಮಾರ್ಗ ಕೋಣನಕೊಂಟೆ ಕ್ರಾಸ್ ಟು ನೈಸ್ ರಸ್ತೆ, ಇದು 6.2 ಕಿ.ಮೀ ಉದ್ದದ್ದಾಗಿದೆ. ಇದಕ್ಕೆ 1,765.88 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು 5 ನಿಲ್ದಾಣಗಳು ಈ ಮಾರ್ಗದಲ್ಲಿ ಸಿಗುತ್ತವೆ.

ಇದನ್ನು ಓದಿ: ಮಾರ್ಕ್ಸ್​ಕಾರ್ಡ್​ಗೆ ಡಿಜಿಟಲ್ ಸ್ಪರ್ಶದ ಮೆರುಗು - ಬಿಟ್ಟುಬಿಡಿ ನಕಲಿ ಅಂಕಪಟ್ಟಿಯ ಕೊರಗು

ಇನ್ನು ಎರಡನೇ ಹಂತದ ಮೆಟ್ರೋ ಕಾಮಗಾರಿಯಲ್ಲಿಯ ಎರಡು ಹೊಸ ಮೆಟ್ರೋ ಮಾರ್ಗಗಳನ್ನ ನಿರ್ಮಿಸಲಾಗ್ತಿದೆ. ಇದ್ರಲ್ಲಿ ಒಂದು ಮಾರ್ಗಕ್ಕೆ ಸುರಂಗ ಮಾರ್ಗವನ್ನೂ ನಿರ್ಮಿಸಲಾಗ್ತಿದೆ. ದಿನನಿತ್ಯ ಟ್ರಾಫಿಕ್ ಸಮಸ್ಯೆಯಿಂದ ಬಳಲಿ ಬೆಂಡಾಗುತ್ತಿರುವ ಬೆಂಗಳೂರು ಜನತೆಗೆ ನಮ್ಮ ಮೆಟ್ರೊ ಹಲವು ರೀತಿಯಲ್ಲಿ ಉಪಯೋಗಕಾರಿಯಾಗಿದೆ.

image


ಸುರಂಗದಲ್ಲೇ ಮೆಟ್ರೋ ಮ್ಯಾಜಿಕ್​..!

‘2ನೇ ಹಂತದ ಹೊಸ ಮಾರ್ಗಗಳು ಕೂಡ ಜನನಿಬಿಡ ಪ್ರದೇಶದಲ್ಲಿ ಹಾದುಹೊಗುತ್ತಿವೆ. ಎರಡನೇ ಹಂತದ ವಿಶೇಷ ಮಾರ್ಗ ಗೊಟ್ಟಿಗೆರೆಯಿಂದ ನಾಗಾವಾರ, 21.2 ಕಿಲೋ ಮೀಟರ್ ಉದ್ದದಲ್ಲಿ ನಿರ್ಮಾಣವಾಗ್ತಿದೆ. ಈ ಮಾರ್ಗದಲ್ಲಿ 13.79 ಕಿಲೋ ಮೀಟರ್ ಸುರಂಗ ಮಾರ್ಗವಿರಲಿದ್ದು ಒಟ್ಟು 18 ನಿಲ್ದಾಣಗಳು ಈ ಮಾರ್ಗದಲ್ಲಿ ಸಿಗುತ್ತವೆ. ಅದರಲ್ಲಿ 12 ನಿಲ್ದಾಣಗಳು ಸುರಂಗ ಮಾರ್ಗದಲ್ಲಿ ನಿರ್ಮಾಣವಾಗಲಿವೆ. ಈ ಮಾರ್ಗಕ್ಕೆ ಬರೋಬ್ಬರಿ 11,014 ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ. ಇದರ ಜೊತೆಗೆ ಮತ್ತೊಂದು ಹೊಸಮಾರ್ಗ ಆರ್.ವಿ. ರಸ್ತೆ ಯಿಂದ ಬೊಮ್ಮಸಂದ್ರದವರೆಗೂ ನಿರ್ಮಾಣವಾಗಲಿದೆ. ಈ ಮಾರ್ಗ 18 ಕಿ.ಮೀ ಉದ್ದದ್ದಾಗಿದ್ದು 16 ನಿಲ್ದಾಣಗಳನ್ನೊಳಗೊಳ್ಳಲಿದೆ. ಈ ಮಾರ್ಗಕ್ಕೆ 5,744.09 ಕೋಟಿ ರೂಪಾಯಿ ವೆಚ್ಚಮಾಡಲಾಗುತ್ತದೆ. 

ಹೆಚ್ಚುತ್ತಿರುವ ಟ್ರಾಫಿಕ್ ನಿಯಂತ್ರಣಕ್ಕೆ ತರಲು ನಮ್ಮ ಮೆಟ್ರೊ ರೂಪಿಸಿರುವ ಯೋಜನೆ ಅದ್ಭುತವಾಗಿದೆ. ಒಟ್ಟಾರೆ ಮೆಟ್ರೋ ನಿಗಮ ಅಂದುಕೊಂಡಿರೋ ಹಾಗೇ ಈ ಮಾರ್ಗಗಳು ನಿರ್ಮಾಣಗೊಂಡ್ರೆ ಬೆಂಗಳೂರು ಟ್ರಾಫಿಕ್ ಮುಕ್ತ ನಗರವಾಗಲಿದೆ.

ಇದನ್ನು ಓದಿ:

1. ಯುವ ನಟರಿಗೆ ಹಾಟ್ ಫೇವರಿಟ್ ಆದ ಫಿಟ್ನೆಸ್ ಗುರು ಸೀನು ಮಾಸ್ಟರ್ 

2. ಮಳೆ ಬಂದ್ರೂ ಮ್ಯಾಚ್​ ನಿಲ್ಲಲ್ಲ...ಟಿಕೆಟ್​ ಕೊಂಡವರಿಗೆ ಟೆನ್ಷನ್​ ಇಲ್ಲ..!

3. 'ಖಾಂದಾನಿ ರಾಜಧಾನಿ'ಯಲ್ಲಿ ಟೇಸ್ಟ್​ ಮಾಡಿ ನೋಡಿ ಸ್ಪೆಷಲ್ ಅಡುಗೆ..!​​

Add to
Shares
2
Comments
Share This
Add to
Shares
2
Comments
Share
Report an issue
Authors

Related Tags