ವೀಕೆಂಡ್ಗೂ ಒಂದೇ ದರ, ವೀಕ್ಡೇಸ್ನಲ್ಲೂ ಅದೇ ರೇಟ್..!
ಟೀಮ್ ವೈ.ಎಸ್. ಕನ್ನಡ
ಬುಲೆಟ್ ಓಡಿಸಬೇಕು... ಹಾರ್ಲೆ ಡೆವಿಡ್ಸನ್ ಬೈಕ್ ಮೇಲೆ ಒಂದ್ಸಾರಿ ರೈಡ್ ಮಾಡ್ಬೇಕು. ಆದ್ರೆ ಜೇಬಲ್ಲಿರುವ ದುಡ್ಡು ಅದಕ್ಕೆಲ್ಲಾ ದಾರಿ ಮಾಡಿಕೊಡುವುದಿಲ್ಲ. ಹಾಗಂತ ಬೈಕ್ ಖರೀದಿ ಮಾಡಿಯೇ ರೈಡ್ ಮಾಡ್ಬೇಕು ಅನ್ನೋ ಕಾಲ ಮುಗಿದಿದೆ. ಈಗೇನಿದ್ರೂ ಬಾಡಿಗೆಯ ಬೈಕ್ ಓಡಿಸುವ ಕಾಲ. ಆದ್ರೆ ಈಗ ಬಾಡಿಗೆ ಬೈಕ್ ಕೂಡ ವಾರಪೂರ್ತಿ ಒಂದೇ ರೇಟ್ನಲ್ಲಿ ಸಿಗುತ್ತಿದೆ.
ಸಿಲಿಕಾನ್ ಸಿಟಿ ಮಂದಿಗೆ ವಿಕೇಂಡ್ ಬಂತೆಂದರೆ ಲಾಂಗ್ ರೈಡ್ ಹೋಗುವುದು ಒಂದು ಕ್ರೇಜ್ ಆಗಿದೆ. ಅದರಲ್ಲೂ ದುಬಾರಿ ಬೈಕ್ನಲ್ಲಿ ಹೋಗಲು ಎಲ್ಲರೂ ತಯಾರಿ ನಡೆಸುತ್ತಾರೆ. ಎಲ್ಲರ ಬಳಿಯೂ ದುಬಾರಿ ಬೈಕ್ ಇರುವುದಿಲ್ಲ. ಅಂಥವರಿಗಾಗಿ ಬಾಡಿಗೆಗೆ ಬೈಕ್ಗಳನ್ನು ಕೊಡಲು ಬೆಂಗಳೂರಿನಲ್ಲಿ ಸಾಕಷ್ಟು ಕಂಪನಿಗಳು ಇವೆ, ಆದರೆ ಅಲ್ಲಿ ವೀಕೆಂಡ್ನಲ್ಲಿ ಒಂದು ರೇಟ್, ವೀಕ್ ಡೇಸ್ನಲ್ಲಿ ಒಂದು ರೇಟ್, ಆದರೆ ಇಲ್ಲೊಬ್ಬರು ಎಲ್ಲ ದಿನಗಳಲ್ಲೂ ಒಂದೇ ರೀತಿಯ ಬಾಡಿಗೆ ದರದಲ್ಲಿ ಬೆಂಗಳೂರಿಗರಿಗೆ ಬೈಕ್ ಒದಗಿಸುತ್ತಿದ್ದಾರೆ.
ಹೌದು, ಎನ್.ಕಶ್ಯಪ್ ಎಂಬುವವರು ಬೆಂಗಳೂರಿನಲ್ಲಿ ಅನೇಕ ಕಡೆ ಬೈಕ್, ಕಾರು ಬಾಡಿಗೆ ಕೊಡುವುದನ್ನು ನೋಡಿದ್ದರು. ಆದರೆ ಸೋಮವಾರದಿಂದ ಗುರುವಾರ ತನಕ ಒಂದು ರೇಟ್, ವಾರದ ಕೊನೆಯಲ್ಲಿ ಅಂದ್ರೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಒಂದು ರೇಟ್ ಇರುವುದನ್ನು ಅವರು ಗಮನಿಸಿದ್ದರು. ಇದರಿಂದ ಸಾಕಷ್ಟು ಯುವಕರು ತಮ್ಮ ಲಾಂಗ್ ರೈಡ್ ಆಸೆಯನ್ನು ಕೈಬಿಡುತ್ತಿದ್ದರು. ಇದನ್ನು ಗಮನಿಸಿದ ಕಶ್ಯಪ್ ಎಲ್ಲಾ ದಿನ ಅಂದರೆ ಸೋಮವಾರದಿಂದ ಭಾನುವಾರದ ತನಕ ಒಂದೇ ದರ ಇರುವ ಬೈಕ್ನ್ನು ಯುವಕರಿಗೆ ಯಾಕೆ ನೀಡಬಾರದು ಎಂದು ಯೋಚಿಸಿದಾಗ ಹುಟ್ಟಿಕೊಂಡಿದ್ದೆ ‘ಸ್ವಿಚ್ ರೈಡ್ಸ್ ಡಾಟ್ ಇನ್’(switchrides.in) ಬೆಂಗಳೂರಿನ ಆರ್ಟಿ ನಗರದಲ್ಲಿ ಕೆಲ ದಿನಗಳ ಹಿಂದೆ ಆರಂಭವಾಗಿರುವ ಈ ಸ್ವಿಚ್ ರೈಡ್ಸ್ ಡಾಟ್ ಇನ್ಗೆ(switchrides.in) ನೀವು ಲಾಗ್ ಇನ್ ಆದರೆ ನಿಮಗೆ ಹೊಸದೊಂದು ಲೋಕವೇ ತೆರೆದುಕೊಳ್ಳೂತ್ತದೆ.
ಸ್ವಿಚ್ ರೈಡ್ಸ್ ಸೇವೆ ಹೇಗೆ..?
ಸ್ವಿಚ್ ರೈಡ್ಸ್ ಸೇವೆ ಪಡೆಯಲು ನೀವು ಆನ್ಲೈನ್ನಲ್ಲಿ ಬೈಕ್ ಬುಕ್ ಮಾಡಿದರೆ ನಿಮ್ಮ ವಿಳಾಸವನ್ನು ಅದರಲ್ಲಿ ನಮೂದಿಸಬೇಕು. ನೀವು ಬಾಡಿಗೆಗೆ ಪಡೆದ ಬೈಕ್ಗಳ ಹೆಲ್ಮೆಟ್ಗಳಿಗೆ ಹೆಚ್ಚುವರಿ ಹಣ ಕಟ್ಟಬೇಕಿಲ್ಲ, ಪ್ರತಿ ಗಾಡಿ ಪಡೆಯುವಾಗಲೂ ಬ್ರೇಕ್ ಆಯಿಲ್, ಗೇರ್ ಇತ್ಯಾದಿಗಳ ಕಂಡೀಶನ್ ಪರಿಶೀಲಿಸಲು ಸ್ಥಳದಲ್ಲಿಯೇ ಒಬ್ಬ ಮೆಕಾನಿಕ್ ಇರುತ್ತಾರೆ. ಇನ್ನು ವಾಹನಗಳು ಪ್ರಯಾಣಿಸುತ್ತಿರುವಾಗ ಏನಾದರೂ ತೊಂದರೆ ಆದರೆ, ಸ್ವಿಚ್ ರೈಡ್ ಕಂಪನಿ ಬೈಕ್ಗಳ ನಿರ್ವಹಣೆಗಾಗಿ ರೆಸ್ಕ್ಯೂ ಅಸಿಸ್ಟ್ ಎಂಬ ಮತ್ತೊಂದು ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಅಲ್ಲಿನ ನೌಕರರು ನೀವಿದ್ದಲ್ಲಿಗೆ ಬಂದು ಸಮಸ್ಯೆ ಇರುವ ಬೈಕ್ನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಾರೆ. ಇದು ವಾರದ ಏಳು ದಿನಗಳು ಮತ್ತು ೨೪*7 ಗಂಟೆಗಳ ಕೆಲಸ ಮಾಡುತ್ತದೆ.
ಸ್ವಿಚ್ರೈಡ್ಸ್ ಕಚೇರಿ ಆರ್ಟಿ ನಗರದಲ್ಲಿದ್ದರೂ ಹೆಬ್ಬಾಳ, ಯಲಹಂಕ ನ್ಯೂ ಟೌನ್, ಸಹಕಾರ ನಗರ, ಸದಾಶಿವನಗರ, ಕೋರಮಂಗಲ, ಆಡುಗೋಡಿ, ಲಾವೆಲ್ಲೆ ರಸ್ತೆ, ಬನ್ನೇರುಘಟ್ಟ, ಬಿಟಿಎಂ ಲೇಔಟ್, ವಿದ್ಯಾರಣ್ಯಪುರ, ರಾಜಾಜಿನಗರ, ಇಂದಿರಾನಗರ, ಕಮ್ಮನಹಳ್ಳಿ, ಕಲ್ಯಾಣನಗರಗಳಲ್ಲಿ ಪಿಕಪ್ ಪಾಯಿಂಟ್ನ್ನು ಹೊಂದಿದೆ. ನಿಮಗೆ ಬೈಕ್ ಬೇಕಾದರೆ ಆನ್ಲೈನ್ ಮೂಲಕ ಬುಕ್ ಮಾಡಿ ಈ ಮೇಲಿರುವ ಯಾವುದೇ ಪ್ರದೇಶಕ್ಕೆ ಹೋಗಿ ಬೈಕ್ ಪಡೆಯಬಹುದು.
ಬೈಕ್ಗಳು ಎಷ್ಟಿವೆ..?
ಸದ್ಯ ಕಶ್ಯಪ್ ಅವರ ಸ್ವಿಚ್ ರೈಡ್ಸ್ ಬಳಿ 9 ಬೈಕ್ಗಳಿವೆ. ಸದ್ಯದಲ್ಲೇ ಇದನ್ನು 20ಕ್ಕೆ ಏರಿಸುವ ಪ್ಲಾನ್ ಇದೆ. ಮುಂದಿನ ದಿನಗಳಲ್ಲಿ ಪಿಕಪ್ಪಾಯಿಂಟ್ಗಳನ್ನು ಮತ್ತು ಸಿಬ್ಬಂದಿಗಳನ್ನು ಹೆಚ್ಚಿಸುವ ಐಡಿಯಾ ಅವರಲ್ಲಿದೆ.
ಜಿಪಿಎಸ್ ವ್ಯವಸ್ಥೆ
ಸ್ವಿಚ್ರೈಡ್ಸ್ನಲ್ಲಿರುವ ಬೈಕ್ಗಳಿಗೆ ಜಿಪಿಎಸ್ ವ್ಯವಸ್ಥೆ ಇರುವುದರಿಂದ ಯಾವುದೇ ಕಾರಣಕ್ಕೂ ಬೈಕ್ ಕಳ್ಳತನವಾಗುವುದಿಲ್ಲ. ಇನ್ನು ಬೈಕು ಪ್ರತೀ ಗಂಟೆಗೆ 90 ಕಿಲೋಮಿಟರ್ ದಾಟುತ್ತಿದ್ದಂತೆ ಕಂಪನಿಗೆ ಎಚ್ಚರಿಕೆಯ ಅಲರ್ಟ್ ಬರುತ್ತದೆ. ನೂರಕ್ಕೆ ಮೀರಿ ಬೈಕ್ ಚಲಾಯಿಸಿದರೆ ದಂಡ ಕಟ್ಟಬೇಕಾದ ಅನಿವಾರ್ಯತೆ ಗ್ರಾಹಕರಿಗೆ ಇರುತ್ತದೆ. ಸುರಕ್ಷತೆ ಮತ್ತು ಕಂಫರ್ಟ್ ಜೊತೆಗೆ ಗ್ರಾಹಕರಿಗೆ ಸ್ವಿಚ್ ರೈಡ್ಸ್ ದುಡ್ಡಿನ ಉಳಿತಾಯವನ್ನು ಕೂಡ ಮಾಡುತ್ತದೆ. ಹೀಗಾಗಿ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
1. ಕೆಎಸ್ಆರ್ಟಿಸಿಯಲ್ಲಿ"ಮಿಡಿಬಸ್" ಮ್ಯಾಜಿಕ್- ಸಾರಿಗೆ ಸಂಸ್ಥೆಗೆ ಹೊಸ ಕಿಕ್