Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

Bengaluru Tech Summit 2020

Bengaluru Tech Summit 2020

View Brand Publisher

ಹೇಗೆ ಬೆಂಗಳೂರು ಟೆಕ್‌ ಸಮ್ಮಿಟ್‌ 2020 ಎಕ್ಸಿಬಿಷನ್‌ ಸ್ಟಾರ್ಟಪ್‌ಗಳಿಗೆ ಜಾಗತಿಕ ಗ್ರಾಹಕರನ್ನು ತಲುಪಲು ಮತ್ತು ಸಹಭಾಗಿತ್ವ ಬೆಳೆಸಿಕೊಳ್ಳಲು ಉತ್ತಮ ಅವಕಾಶವಾಗಿದೆ

ಹೇಗೆ ಬೆಂಗಳೂರು ಟೆಕ್‌ ಸಮ್ಮಿಟ್‌ 2020 ಎಕ್ಸಿಬಿಷನ್‌ ಸ್ಟಾರ್ಟಪ್‌ಗಳಿಗೆ ಜಾಗತಿಕ ಗ್ರಾಹಕರನ್ನು ತಲುಪಲು ಮತ್ತು ಸಹಭಾಗಿತ್ವ ಬೆಳೆಸಿಕೊಳ್ಳಲು ಉತ್ತಮ ಅವಕಾಶವಾಗಿದೆ

Thursday October 29, 2020 , 3 min Read

ದೇಶದ ದೊಡ್ಡ ಸಮ್ಮೇಳನಗಳಲ್ಲಿ ಒಂದಾದ ಬೆಂಗಳೂರು ಟೆಕ್‌ ಸಮ್ಮಿಟ್‌(ಬಿಟಿಎಸ್‌)ಗೆ ಇನ್ನೂ ಒಂದೆ ತಿಂಗಳು ಬಾಕಿ ಇದೆ.


ಮಾಹಿತಿ ತಂತ್ರಜ್ಞಾನ ಬಯೋಟೆಕ್ನಾಲಜಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್‌ ಇಲಾಖೆ ಕರ್ನಾಟಕ ಸರ್ಕಾರ ಆಯೋಜಿಸುವ ಬಿಟಿಎಸ್‌ ಈ ವರ್ಷ ವರ್ಚುಅಲ್‌ ಆಗಿ ನಡೆಯಲಿದ್ದು ನವೆಂಬರ್‌ 19 2020 ರಿಂದ ನವೆಂಬರ್‌ 21 ರವರೆಗೆ ಮೂರು ದಿನಗಳ ಕಾಲ ಇರಲಿದೆ. ಬಿಟಿಎಸ್‌ನ 23 ನೇ ಆವೃತ್ತಿಯಲ್ಲಿ ಸಾಂಕ್ರಾಮಿಕ-ನಂತರದ ಜಗತ್ತಿನಲ್ಲಿನ ವ್ಯವಹಾರಗಳು, ಸರ್ಕಾರಗಳು, ಅಕಾಡೆಮಿಗಳು ಮತ್ತು ನಾವೀನ್ಯಕಾರರಿಗೆ ಸಂವಾದ ಮತ್ತು ಸಹಯೋಗವನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸಿದೆ.


ಈ ಕಾರ್ಯಕ್ರಮದಲ್ಲಿ ಜಾಗತಿಕ ನಾಯಕರು, ಪ್ರಭಾವಿಗಳು ಮತ್ತು ಕಂಪನಿಗಳು ಪಾಲ್ಗೊಳ್ಳಲಿದ್ದು, ಭವಿಷ್ಯದ ಬಗ್ಗೆ ದೃಷ್ಠಿ ಬೀರಲಿದ್ದಾರೆ. ಚರ್ಚೆಗೆ ಅವಕಾಶ ನೀಡುವ ಮತ್ತು ಕ್ರಾಂತಿಕಾರಿ ತಂತ್ರಜ್ಞಾನವನ್ನು ಪ್ರೋತ್ಸಾಹಿಸುವ ವೇದಿಕೆಯಾದ ಬಿಟಿಎಸ್‌ ಸ್ಟಾರ್ಟಪ್‌ಗಳು, ಎಮ್‌ಎಸ್‌ಎಮ್‌ಇಗಳು ಮತ್ತು ಆವಿಷ್ಕಾರಿಗಳಿಗೆ ಹೊಸ ಉತ್ಪನ್ನಗಳನ್ನು ಜಾಗತಿಕ ಗ್ರಾಹಕರ ಮುಂದೆ ಪ್ರದರ್ಶಿಸಲು ಅವಕಾಶ ನೀಡುತ್ತದೆ. ಬಿಟಿಎಸ್‌ನ ಪ್ರಮುಖ ಆಕರ್ಷಣೆಯೆಂದರೆ ಎಕ್ಸಿಬಿಷನ್‌.


ಬಿಟಿಎಸ್‌ ಎಕ್ಸಿಬಿಷನ್‌ನಲ್ಲಿನ ಸ್ಟಾರ್ಟಪ್‌ ಪೆವಿಲಿಯನ್‌ ಐಟಿ ಬಿಟಿ ಮತ್ತು ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿನ ಸ್ಟಾರ್ಟಪ್‌ಗಳಿಗೆ ರೋಚಕವಾಗಿರಲಿದೆ. ಇಲ್ಲಿ ಸ್ಟಾರ್ಟಪ್‌ ಇಂಡಿಯಾ ಉದ್ಯೋಗಗಳು, ಇನ್ಕ್ಯೂಬೇಟರ್‌ಗಳು ಮತ್ತು ನಾವೀನ್ಯಕಾರರು ಸೇರಿದಂತೆ ಇತರರು ಇರಲಿದ್ದಾರೆ. ನಾವೀನ್ಯ ಸ್ಟಾರ್ಟಪ್‌ಗಳನ್ನು ಗುರುತಿಸುವ ಕರ್ನಾಟಕ ಸರ್ಕಾರದ ಎಲಿವೆಟ್‌ 100 ನ ವಿಜಯಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ಟಾರ್ಟಪ್‌ಗಳು ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಪ್ರದರ್ಶಿಸುವುದಕ್ಕೆ ಇಲ್ಲಿ ಅವಕಾಶವಿರುವುದಲ್ಲದೆ ಇತರ ಸ್ಟಾರ್ಟಪ್‌ಗಳು, ಕಾರ್ಪೋರೆಟ್‌ಗಳು, ಉದ್ಯಮ ಸಂಘಗಳು ಮತ್ತು ಆವಿಷ್ಕಾರಿಗಳೊಂದಿಗೆ ಸಂಪರ್ಕ ಜಾಲ ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ವರ್ಷ ವರ್ಚುಅಲ್‌ ಆಗಿ ನಡೆಯಲಿರುವ ಬಿಟಿಎಸ್‌ ವರ್ಚುಅಲ್‌ ಬೂಥ್‌ಗಳು, ವಿಡಿಯೋ ಕಾಲ್‌, ಲೈವ್‌ ಚಾಟ್‌ ಮತ್ತು ಬಿ2ಬಿ ಮೀಟಿಂಗ್‌ಗಳ ಮೂಲಕ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಇವು ಭೌತಿಕ ಸಭೆಯ ಅನುಕರಣೆಯಾಗಿದ್ದರು, ಅದಕ್ಕಿಂತ ಜಾಸ್ತಿ ಹೊತ್ತು ಇರಲಿದ್ದು ಜಾಗತಿಕ ಪ್ರೇಕ್ಷಕರನ್ನು ತಲುಪುತ್ತದೆ.


ಈ ವರ್ಷ ಬಿಟಿಎಸ್‌ ಎಕ್ಸಿಬಿಟರ್‌ಗಳನ್ನು ವಿವಿಧ ತಂತ್ರಜ್ಞಾನ ಕ್ಷೇತ್ರಗಳ 4,000 ಕ್ಕೂ ಅಧಿಕ ನೋಂದಾಯಿತ ಉದ್ಯಮ ಪ್ರತಿನಿಧಿಗಳ ಜತೆಗೆ ಸಂಪರ್ಕ ಕಲ್ಪಿಸಲಿದ್ದು ಜತೆಗೆ 20,000 ಕ್ಕೂ ಅಧಿಕ ಪ್ರೇಕ್ಷಕರು ಸಮ್ಮೇಳವನ್ನು ವೀಕ್ಷಿಸಲಿದ್ದಾರೆ. ಈ ಸಮ್ಮೇಳನದಲ್ಲಿ ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರು, ಶಿಕ್ಷಣ ತಜ್ಞರು, ನಾವೀನ್ಯಕಾರರು, ನೀತಿ ನಿರೂಪಕರು, ಸರ್ಕಾರಿ ಅಧಿಕಾರಿಗಳು, ಆರ್ & ಡಿ ಮುಖ್ಯಸ್ಥರು, ಅಕ್ಸೆಲರೆಟರ್‌ಗಳು, ಇನ್ಕ್ಯುಬೇಟರ್ಗಳು ಮತ್ತು ವೆಂಚರ್‌ ಕ್ಯಾಪಿಟಲಿಸ್ಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ, ಪ್ರದರ್ಶನವು ಅವರ ಗಮನವನ್ನು ಸೆಳೆಯುವ ಅತ್ಯುತ್ತಮ ಅವಕಾಶವಾಗಿದೆ.


ಬಿಟಿಎಸ್ ಎಕ್ಸಿಬಿಷನ್‌ನಲ್ಲಿ ಸ್ಟಾರ್ಟ್ಅಪ್ಗಳು ಏಕೆ ಭಾಗವಹಿಸಬೇಕೆಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ.

ಉದ್ಯಮದ ಪ್ರವೃತ್ತಿಗಳು ಮತ್ತು ಬದಲಾವಣೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಿರಿ

100 ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಈ ವರ್ಷ ಬಿಟಿಎಸ್‌ ಎಕ್ಸಿಬಿಷನ್‌ನಲ್ಲಿ ಪಾಲ್ಗೋಳ್ಳುವ ನಿರೀಕ್ಷೆಯಿದೆ. ಜತೆಗೆ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್, ಇಂಡಿಯಾ ಇನ್ನೋವೇಶನ್ ಅಲೈಯನ್ಸ್, ಕಾರ್ಪೊರೇಟ್ಸ್ ಮತ್ತು ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್‌ನಂತಹ ವಿವಿಧ ರಂಗದ ಪ್ರದರ್ಶಕರು, ಜತೆಗೆ ತಂತ್ರಜ್ಞಾನ ಕೇಂದ್ರಿತ ಪೆವಿಲಿಯನ್‌ಗಳಾದ ಐಟಿ, ಬಿಟಿ, ಎಲೆಕ್ಟ್ರಾನಿಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ಕೃತಕ ಬುದ್ಧಿಮತ್ತೆ (ಎಐ) ಮತ್ತು ಮೆಷಿನ್ ಲರ್ನಿಂಗ್ (ಎಂಎಲ್), ಆಗ್ಮೆಂಟೆಡ್ ರಿಯಾಲಿಟಿ (ಎಆರ್ ಮತ್ತು ವಿಆರ್), ಸ್ಮಾರ್ಟ್‌ಟೆಕ್, ಹೆಲ್ತ್‌ಟೆಕ್, ಫಿನ್‌ಟೆಕ್, ಮೆಡ್‌ಟೆಕ್, ಎಡುಟೆಕ್, ರೊಬೊಟಿಕ್ಸ್ ಮತ್ತು ಡ್ರೋನ್, ಗೇಮಿಂಗ್, ಈ ಕ್ಷೇತ್ರದ ಆವಿಷ್ಕಾರಗಳತ್ತ ಗಮನ ಹರಿಸಲಿದೆ. ಉದ್ಯಮದ ಪ್ರಮುಖ ಪ್ರವೃತ್ತಿಗಳು ಯಾವುವು ಮತ್ತು ಭವಿಷ್ಯದಲ್ಲಿ ಮಹತ್ವದ್ದಾಗುವ ಹೊಸ ಉತ್ಪನ್ನಗಳು ಮತ್ತು ಸಂಪನ್ಮೂಲಗಳನ್ನು ನೋಡಲು ಇದು ಸ್ಟಾರ್ಟಪ್‌ಗಳಿಗೆ ಅನುವು ಮಾಡಿಕೊಡುತ್ತದೆ.


ಹೊಸ ಮಾರುಕಟ್ಟೆಗಳಿಗೆ ವಿಸ್ತರಿಸಲು ಅವಕಾಶಗಳನ್ನು ಅನ್ವೇಷಣೆ

ಎಕ್ಸಿಬಿಷನ್‌ನಲ್ಲಿ ಕೇವಲ ಟೆಕ್ ಉತ್ಸಾಹಿಗಳಿರುವುದಲ್ಲದೆ ದೇಶೀಯ ಮತ್ತು ಜಾಗತಿಕ ಪರಿಸರ ವ್ಯವಸ್ಥೆಯಿಂದ ಉದ್ಯಮಗಳು ಮತ್ತು ಉದ್ಯಮ ಸಂಘಗಳಿಂದ ಪ್ರಭಾವಶಾಲಿ ನಿರ್ಧಾರ ತೆಗೆದುಕೊಳ್ಳುವವರು ಇರುತ್ತಾರೆ. ಇದು ನಿಮ್ಮ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು, ಸಂಭಾವ್ಯ ಗ್ರಾಹಕರು ಮತ್ತು ಪರಿಸರ ವ್ಯವಸ್ಥೆಯ ಮಧ್ಯಸ್ಥಗಾರರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಬೇರೆ ಬೇರೆ ಪ್ರದೇಶಗಳಲ್ಲಿ ನಿಮ್ಮ ಹೆಜ್ಜೆಗುರುತನ್ನು ವಿಸ್ತರಿಸಲು ಸೂಕ್ತವಾದ ವೇದಿಕೆಯಾಗಿದೆ.


ತ್ವರಿತ ಪ್ರತಿಕ್ರಿಯೆ ಪಡೆಯಿರಿ

ಸ್ಟಾರ್ಟಪ್‌ಗಳು ದೊಡ್ಡ ಪರಿಸರ ವ್ಯವಸ್ಥೆಯೊಂದಿಗೆ ಸಂವಹನ ನಡೆಸಿದಾಗ, ಉತ್ಪನ್ನದ ಬಗ್ಗೆ ನೈಜ-ಸಮಯದ ಪ್ರತಿಕ್ರಿಯೆಯನ್ನು ಪಡೆಯಲು ಇದು ಅವರಿಗೆ ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ಹೊಸ ವೈಶಿಷ್ಟ್ಯಗಳು ಉತ್ಪನ್ನದ ಅನುಭವವನ್ನು ಹೇಗೆ ಹೆಚ್ಚಿಸುತ್ತದೆ ಎನ್ನುವುದರಿಂದ ಗ್ರಾಹಕರ ಅವಶ್ಯಕತೆಗಳನ್ನು ನಿಕಟವಾಗಿ ಅರ್ಥಮಾಡಿಕೊಳ್ಳುವವರೆಗೆ, ಬಿಟಿಎಸ್ ಪ್ರದರ್ಶನದಲ್ಲಿ ಭಾಗವಹಿಸುವಿಕೆಯು ಬಹು ಪ್ರಯೋಜನಗಳನ್ನು ನೀಡುತ್ತದೆ.


ಗಟ್ಟಿಯಾದ ಸಂಪರ್ಕ ಜಾಲವನ್ನು ಬೆಳೆಸಿಕೊಳ್ಳಿ

ಎಕ್ಸಿಬಿಷನ್‌ ಸಿಇಒಗಳು, ಸಿ-ಸೂಟ್ ಕಾರ್ಯನಿರ್ವಾಹಕರು, ಹೂಡಿಕೆದಾರರು, ಗ್ರಾಹಕರು ಮತ್ತು ಉದ್ಯಮ ಸಂಘಗಳಿಗೆ ಪರಿಚಯಿಸಲು ಸ್ಟಾರ್ಟ್‌ಅಪ್‌ಗಳನ್ನು ಶಕ್ತಗೊಳಿಸುತ್ತದೆ ಮತ್ತು ಅರ್ಥಪೂರ್ಣ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪರಿಣಾಮಕಾರಿ ಪಾಲುದಾರಿಕೆಗಳನ್ನು ನಿರ್ಮಿಸಲು ಮತ್ತು ಬಲಪಡಿಸಲು ಸಹಾಯಮಾಡುತ್ತದೆ.


ಸ್ಟಾರ್ಟಪ್‌ ಲೋಕದ ಪರಿಣಿತರ ಗಮನ ಸೆಳೆಯಿರಿ

ಉದ್ಯಮಿಗಳು ಏಂಜಲ್ ಹೂಡಿಕೆದಾರರು, ವೆಂಚರ್‌ ಕ್ಯಾಪಿಟಲಿಸ್ಟ್‌ಗಳು, ಮಾರ್ಗದರ್ಶಕರು ಮತ್ತು ಆಕ್ಸಲೆರೇಟರ್‌ಗಳೊಂದಿಗೆ ಸಂವಹನ ನಡೆಸಲು, ನವೀನ ಆವಿಷ್ಕಾರಗಳನ್ನು ಪ್ರದರ್ಶಿಸಲು ಬಿಟಿಎಸ್ ಪ್ರದರ್ಶನವು ಒಂದು ಉತ್ತಮ ಅವಕಾಶವಾಗಿದೆ.


ಒಟ್ಟಾರೆ ಹೇಳಬೇಕೆಂದರೆ ಇಷ್ಟು ವರ್ಷಗಳಲ್ಲಿ ಬಿಟಿಎಸ್‌ ಸ್ಟಾರ್ಟಪ್‌ಗಳಿಗೆ ತಮ್ಮ ಸಂಪರ್ಕ ಜಾಲವನ್ನು ವೃದ್ಧಿಸಿಕೊಳ್ಳುವದರ ಜತೆಗೆ ತಂತ್ರಜ್ಞಾನ ಮತ್ತು ಆವಿಷ್ಕಾರ ಪರಿಣಿತಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ.


ಇಷ್ಟು ವರ್ಷಗಳಲ್ಲಿ ಹಲವಾರು ಸ್ಟಾರ್ಟಪ್‌ಗಳು ಬಿಟಿಎಸ್‌ ಸ್ಟಾರ್ಟಪ್‌ ಪೆವಿಲಿಯನ್‌ನಲ್ಲಿ ಭಾಗವಹಿಸಲಿದ್ದು ಇದು ಅದರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.


ಬಿಟಿಎಸ್‌ ಎಕ್ಸಿಬಿಷನ್‌ನಂತಹ ಉತ್ತಮ ಅವಕಾಶಗಳನ್ನು ಸ್ಟಾರ್ಟಪ್‌ಗಳು ಸುಲಭವಾಗಿ ಬಳಸಿಕೊಳ್ಳಬೇಕೆಂಬ ದೃಷ್ಟಿಯಿಂದ ಸ್ಟಾರ್ಟಪ್‌ಗಳಿಗೆ ವಿಶೇಷ ದರಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ.


ಬಿಟಿಎಸ್ 2020 ನಲ್ಲಿ ನೀವು ಹೇಗೆ ಪ್ರದರ್ಶಿಸಬಹುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಸ್ಟಾರ್ಟ್ಅಪ್‌ಗಳು ಚಂದ್ರಚೂಡ್ ಅವರನ್ನು +91 99641 95859 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.