Bengaluru Tech Summit 2020

Bengaluru Tech Summit 2020

ಸಾಂಕ್ರಾಮಿಕದ ನಂತರದ ಜಗತ್ತಿನಲ್ಲಿರುವ ಸವಾಲುಗಳನ್ನು ಎದುರಿಸಲು ನಾವೀನ್ಯತೆಗಳ ಮೇಲೆ ಬೆಳಕು ಚೆಲ್ಲಲಿರುವ ಬೆಂಗಳೂರು ಟೆಕ್‌ ಸಮ್ಮಿಟ್‌ 2020

ಸಾಂಕ್ರಾಮಿಕದ ನಂತರದ ಜಗತ್ತಿನಲ್ಲಿರುವ ಸವಾಲುಗಳನ್ನು ಎದುರಿಸಲು ನಾವೀನ್ಯತೆಗಳ ಮೇಲೆ ಬೆಳಕು ಚೆಲ್ಲಲಿರುವ ಬೆಂಗಳೂರು ಟೆಕ್‌ ಸಮ್ಮಿಟ್‌ 2020

Friday October 23, 2020,

5 min Read

ಮಾಹಿತಿ ತಂತ್ರಜ್ಞಾನ(ಐಟಿ) ಮತ್ತು ಬಯೋಟೆಕ್ನಾಲಜಿ(ಬಿಟಿ)ಯ ಕೇಂದ್ರವಾಗಿರುವ ಬೆಂಗಳೂರು ಭಾರತದ ಸಿಲಿಕಾನ್‌ ವ್ಯಾಲಿ, ಆರ್‌ & ಡಿ ಎಂದೆ ಖ್ಯಾತಿ ಪಡೆದಿದೆ. ರಾಜ್ಯದ ಅನುಕೂಲಕರ ವಾತಾವರಣ, ಹೂಡಿಕೆಗಳನ್ನು ಸೆಳೆಯುವುದರ ಮೇಲಿನ ಗಮನ ಹಲವು ಅಂತರಾಷ್ಟ್ರೀಯ ಕಂಪನಿಗಳನ್ನು, ನಮ್ಮ ನೆಲದ ಉದ್ಯಮಗಳು ಮತ್ತು ಸ್ಟಾರ್ಟಪ್‌ಗಳನ್ನು ನಗರಕ್ಕೆ ಕರೆತಂದಿದೆ. ನಾವೀನ್ಯತೆ ಮತ್ತು ಆರ್ & ಡಿ ಕೇಂದ್ರಗಳ ಸ್ಥಾಪನೆ ಐಟಿ ಬಿಟಿ ಕ್ಷೇತ್ರದಲ್ಲಿ ಕರ್ನಾಟಕದ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಬೆಂಗಳೂರು ಟೆಕ್‌ ಸಮ್ಮಿಟ್‌(ಬಿಟಿಎಸ್‌)ನ ಸಹಾಯದಿಂದ ರಾಜ್ಯವು ನಾವೀನ್ಯತೆಯನ್ನು ಸಾಧಿಸಿ, ತಂತ್ರಜ್ಞಾನ ಮತ್ತು ನಾವೀನ್ಯತೆಯ ನಡುವಿನ ಅಂತರವನ್ನು ಕಡಿಮೆ ಮಾಡಿ, ಸಹಯೋಗವನ್ನು ಹೆಚ್ಚಿಸಲು ವೇದಿಕೆಯನ್ನು ಒದಗಿಸಿಕೊಟ್ಟಿದೆ.


ಐಸಿಟಿ, ಎಲೆಕ್ಟ್ರಾನಿಕ್ಸ್‌ ಮತ್ತು ಬಯೋಟೆಕ್ನಾಲಜಿ ಕ್ಷೇತ್ರದಲ್ಲಿನ ಮುಖ್ಯ ಘಟನೆಗಳಿಗೆ ಬೆಂಗಳೂರು ಟೆಕ್‌ ಸಮ್ಮಿಟ್‌ ಸಾಕ್ಷಿಯಾಗಿದ್ದು, ಅಗ್ರ ಟೆಕ್‌ ಕಂಪನಿಗಳು, ಸ್ಟಾರ್ಟಪ್‌ಗಳು, ಟೆಕ್ನೊಕ್ರಾಟ್‌ಗಳು, ಯುವ ಶೋಧಕರು, ನೀತಿ ನಿರೂಪಕರು, ಹೂಡಿಕೆದಾರರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಳ್ಳಲೆಬೇಕಾದಂತಹ ಮುಖ್ಯ ಕಾರ್ಯಕ್ರಮವಾಗಿ ಬಿಟಿಎಸ್‌ ಮಾರ್ಪಟ್ಟಿದೆ.


23 ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಬೆಂಗಳೂರು ಟೆಕ್‌ ಸಮ್ಮಿಟ್‌ ಈ ವರ್ಷ ವರ್ಚುಅಲ್‌ ರೀತಿಯಲ್ಲಿ ನಡೆಯಲಿದ್ದು ‘ನೆಕ್ಸ್ಟ್‌ ಇಸ್‌ ನ್ಯೂʼ ಎಂಬ ಥೀಮ್‌ನೊಂದಿಗೆ ನವೆಂಬರ್‌ 19 2020 ರಿಂದ 21 ರವರೆಗೆ ನಡೆಯಲಿದೆ. ಈ ಶೃಂಗ ಸಭೆಯಲ್ಲಿ ಎಂದಿನಂತೆ, ಸಮ್ಮೇಳನ, ಪ್ರದರ್ಶನಗಳು, ನಾವೀನ್ಯತೆ ಪ್ರದರ್ಶನಗಳು, ಜಾಗತಿಕ ನಾವೀನ್ಯತೆ ಮೈತ್ರಿಗಳು, ಕಾರ್ಯಾಗಾರಗಳು, ಉತ್ಪನ್ನಗಳ ಬಿಡುಗಡೆ, ರಸಪ್ರಶ್ನೆಗಳು, ಪ್ರಶಸ್ತಿಗಳು ಮತ್ತು ಪೋಸ್ಟರ್ ಪ್ರದರ್ಶನಗಳು ಇರಲಿವೆ. ಈ ವರ್ಷದ ಸಭೆ ಸಾಂಕ್ರಾಮಿಕದ ನಂತರದ ಜಗತ್ತಿನಲ್ಲಿನ ಸವಾಲುಗಳ ಮತ್ತು ಅವಕಾಶಗಳ ಮೇಲೆ ಕೇಂದ್ರಿತವಾಗಿದೆ.


ಬೆಂಗಳೂರು ಟೆಕ್‌ ಸಮ್ಮಿಟ್‌ 2020 ರ ಪ್ರಮುಖ ಆಕರ್ಷಣೆಗಳು

ಕಾನ್ಫರೆನ್ಸ್‌ (ಸಮ್ಮೇಳನ): ಇದು ಜಾಗತಿಕ ಜ್ಞಾನದ ಸಂಗಮ

ಜಗತ್ತಿನ ವಿವಿಧ ಕ್ಷೇತ್ರಗಳ ಉತ್ತಮ ತಜ್ಞರು ಸಾಂಕ್ರಾಮಿಕದ ನಂತರದ ಯುಗದಲ್ಲಿ ಜೀವನ ಮತ್ತು ಉದ್ಯಮಗಳ ಮೇಲೆ ಪ್ರಭಾವ ಬೀರುವ ಹಲವು ಸಮಸ್ಯೆಗಳ ಸೂಕ್ಷ್ಮಗಳನ್ನು ಹಂಚಿಕೊಳ್ಳಲಿದ್ದಾರೆ. ಬಿಟಿಎಸ್‌ ಸಮ್ಮೇಳನದ ವೈಶಿಷ್ಟ್ಯವೆಂದರೆ ಅಲ್ಲಿ ಐಟಿ, ಬಿಟಿ, ಗ್ಲೋಬಲ್‌ ಇನ್ನೋವೆಷನ್‌ ಅಲೈಯನ್ಸ್ (ಜಿಐಎ) ಮತ್ತು ಸ್ಟಾರ್ಟಪ್‌ಗಳು ಹೀಗೆ ನಾಲ್ಕು ವಿಧಗಳಲ್ಲಿ ಚರ್ಚೆಗೆ ಮುಕ್ತ ಅವಕಾಶವಿದ್ದು ಕ್ರಾಂತಿಕಾರಿ ತಂತ್ರಜ್ಞಾನವನ್ನು ಪ್ರೋತ್ಸಾಹಿಸುತ್ತದೆ. ಈ ವರ್ಷ ಸಮ್ಮೇಳನದಲ್ಲಿ 250 ಸ್ಪೀಕರ್‌ಗಳು ಪಾಲ್ಗೊಳ್ಳಲಿದ್ದು ತಾಂತ್ರಿಕ ಪ್ರವೃತ್ತಿಗಳು ಮತ್ತು ಭವಿಷ್ಯದ ಸಿದ್ಧತೆಯ ಕುರಿತು ಪರಿಣಾಮಕಾರಿ ಸಂವಾದಗಳಿಗೆ ದಾರಿ ಮಾಡಿಕೊಡುವಂತಹ ಸೂಕ್ಷ್ಮಗಳು, ಆಲೋಚನೆಗಳು ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ.


ಎಕ್ಸಿಬಿಷನ್‌ (ಪ್ರದರ್ಶನ): ನಾವೀನ್ಯತೆಯನ್ನು ಪ್ರದರ್ಶಿಸಲು ಮತ್ತು ಫಲಪ್ರದ ಸಹಯೋಗವನ್ನು ರಚಿಸಿಕೊಳ್ಳಲಿರುವ ಮಾರ್ಗ

ಬಿಟಿಎಸ್‌ ಎಕ್ಸಿಬಿಷನ್‌ ಕಂಪನಿಗಳಿಗೆ ತಮ್ಮ ತಂತ್ರಜ್ಞಾನಗಳು, ಪರಿಹಾರಗಳು, ಉತ್ಪನ್ನಗಳು, ಸೇವೆಗಳು ಮತ್ತು ಆವಿಷ್ಕಾರಗಳನ್ನು ಪ್ರದರ್ಶಿಸಿ ಉದ್ಯಮ ಅವಕಾಶ ಕಲ್ಪಿಸಿಕೊಡುತ್ತದೆ. ಈ ವರ್ಷ ವರ್ಚುಅಲ್‌ ಆಗಿ ನಡೆಯಲಿರುವ ಬಿಟಿಎಸ್‌ ವರ್ಚುಅಲ್‌ ಬೂಥ್‌ಗಳು, ವಿಡಿಯೋ ಕಾಲ್‌, ಲೈವ್‌ ಚಾಟ್‌ ಮತ್ತು ಬಿ2ಬಿ ಮೀಟಿಂಗ್‌ಗಳ ಮೂಲಕ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಇವು ಭೌತಿಕ ಸಭೆಯ ಅನುಕರಣೆಯಾಗಿದ್ದರು, ಅದಕ್ಕಿಂತ ಜಾಸ್ತಿ ಹೊತ್ತು ಇರಲಿವೆ. ಪ್ರದರ್ಶನವು ಐಟಿ, ಬಯೋಟೆಕ್, ಸ್ಟಾರ್ಟ್ಅಪ್ ಮತ್ತು ಎಂಎಸ್ಎಂಇಗಳು, ಆರ್ & ಡಿ (ಲ್ಯಾಬ್ ಟು ಮಾರ್ಕೆಟ್), ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ (ಕಂಟ್ರಿ ಪಾರ್ಟ್ನರ್ಸ್), ಇಂಡಿಯಾ ಇನ್ನೋವೇಶನ್ ಅಲೈಯನ್ಸ್ (ಸ್ಟೇಟ್ಸ್ ಪಾರ್ಟ್ನರ್ಸ್), ಸರ್ಕಾರ ಸೇರಿದಂತೆ ವಿವಿಧ ಉದ್ಯಮಗಳನ್ನು ಕೇಂದ್ರೀಕರಿಸಿದೆ. ನೀವು ಐಟಿ, ಎಲೆಕ್ಟ್ರಾನಿಕ್ಸ್‌ ಮತ್ತು ಬಯೋಟೆಕ್ನಾಲಜಿ ಕ್ಷೇತ್ರದವರಾಗಿದ್ದರೆ ಎಕ್ಸಿಬಿಷನ್‌ ನಿಮಗೆ ಹಲವು ಬ್ರ್ಯಾಂಡ್‌ಗಳು, ದೊಡ್ಡ ಕಾರ್ಪೋರೆಟ್‌ಗಳು, ಸಂಘಗಳು ಮತ್ತು ಸ್ಟಾರ್ಟಪ್‌ಗಳೊಂದಿಗೆ ಸಂಪರ್ಕ ಬೆಸೆದುಕೊಳ್ಳಲು ಅವಕಾಶ ನೀಡುತ್ತದೆ.


ನೀವೆನಾದರೂ ಸ್ಟಾರ್ಟಪ್‌ ಅಥವಾ ಉದ್ಯಮ ಹೊಂದಿದ್ದರೆ, ನಿಮ್ಮ ಕೊಡುಗೆಗಳನ್ನು ಪ್ರಸ್ತುತಪಡಿಸಲು, ಸಹಭಾಗಿತ್ವ ಹೊಂದಲು ಮತ್ತು ನಿಮ್ಮ ಉದ್ಯಮವನ್ನು ವೃದ್ಧಿಸಲು ಬಿಟಿಎಸ್‌ ಎಕ್ಸಿಬಿಷನ್‌ ಒಂದು ಒಳ್ಳೆಯ ಅವಕಾಶ. ಇಲ್ಲಿ ಇನ್ನಷ್ಟು ತಿಳಿಯಿರಿ.


ಗ್ಲೋಬಲ್‌ ಇನ್ನೋವೆಷನ್‌ ಅಲೈಯನ್ಸ್‌ ಝೋನ್‌ (ಜಿಐಎ)

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್‌, ಐಟಿ, ಬಿಟಿ ಮತ್ತು ಎಸ್‌ & ಟಿ ಇಲಾಖೆ ಜಾಗತಿಕ ತಂತ್ರಜ್ಞಾನ ಮತ್ತು ಇನ್ನೋವೆಷನ್‌ ಹಬ್‌ಗಳೊಂದಿಗೆ ಸೇರಿ ಗ್ಲೋಬಲ್‌ ಇನ್ನೋವೆಷನ್‌ ಅಲೈಯನ್ಸ್‌ ಅನ್ನು ಅಭಿವೃದ್ಧಿಪಡಿಸಿದೆ. ಬಿಟಿಎಸ್‌ನಲ್ಲಿ ಪಾಲುದಾರರು ಐಟಿ, ಬಯೋಟೆಕ್‌, ಹೆಲ್ಥ್‌ಕೇರ್‌ ಕ್ಷೇತ್ರಗಳ ಸೆಷನ್‌ಗಳನ್ನು ಸಂಗ್ರಹಿಸಿ ಬಿಟಿಎಸ್‌ನಲ್ಲಿ ತಮ್ಮ ತಮ್ಮ ದೇಶದ ಕ್ರಾಂತಿಕಾರಿ ತಂತ್ರಜ್ಞಾನಗಳು ಮತ್ತು ಶಕ್ತಿಯನ್ನು ಪ್ರದರ್ಶಿಸುತ್ತಾರೆ.‌ ಜಿಐಎ ಎಕ್ಸಿಬಿಷನ್‌ ಝೋನ್‌ ಜಾಗತಿಕ ಮಟ್ಟದ ಅಗ್ರ ಸ್ಟಾರ್ಟಪ್‌ ಹಬ್‌ಗಳ ನೂತನ ಆವಿಷ್ಕಾರಗಳನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ.


ದಿ ಇಂಡಿಯನ್‌ ಯಂಗ್‌ ಇನ್ನೋವೆಟಿವ್‌ ಅಲೈಯನ್ಸ್‌ (ಐಐಎ) ಝೋನ್‌

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್‌, ಐಟಿ, ಬಿಟಿ ಮತ್ತು ಎಸ್‌ & ಟಿ ಇಲಾಖೆಯ ಮತ್ತೊಂದು ಉಪಕ್ರಮವಾದ ಇಂಡಿಯನ್‌ ಯಂಗ್‌ ಇನ್ನೋವೆಟಿವ್‌ ಅಲೈಯನ್ಸ್‌ ಭಾರತದ ಪ್ರಮುಖ ರಾಜ್ಯಗಳ, ಕೈಗಾರಿಕೆಗಳ ಮತ್ತು ಸಂಘ ಸಂಸ್ಥೆಗಳ ನಡುವೆ ಜಂಟಿ ಅಭಿವೃದ್ಧಿ, ತಂತ್ರಜ್ಞಾನದ ವರ್ಗಾವಣೆ ಮತ್ತು ಜಂಟಿ ಉದ್ಯಮಗಳ ಮೂಲಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಅಲೈಯನ್ಸ್ ಅಂತರವನ್ನು ಮುಚ್ಚಿ, ಒಟ್ಟಾರೆ ತಂತ್ರಜ್ಞಾನ ಮತ್ತು ಆವಿಷ್ಕಾರ ಪರಿಸರವನ್ನು ಅಭಿವೃದ್ಧಿಪಡಿಸುವ ಮತ್ತು ಇತರ ದೇಶಗಳಿಂದ ಉದ್ಯಮ ಅವಕಾಶಗಳನ್ನು ಸೆಳೆಯುವ ಗುರಿ ಹೊಂದಿದೆ. ಇಂಡಿಯನ್ ಇನ್ನೋವೇಶನ್ ಅಲೈಯನ್ಸ್ (ಐಐಎ) ಪ್ರಗತಿಪರ ಮತ್ತು ಕೈಗಾರಿಕಾ ಸ್ನೇಹಿ ನೀತಿಗಳು ಮತ್ತು ಸೆಂಟರ್‌ ಆಪ್‌ ಎಕ್ಸೆಲೆನ್ಸ್‌ (ಸಿಒಇಗಳು), ಸ್ಟಾರ್ಟ್ಅಪ್ ಇತ್ಯಾದಿಗಳ ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸುತ್ತದೆ ಮತ್ತು ಅವುಗಳಿಗೆ ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ಉತ್ತಮ ಮನ್ನಣೆ ಪಡೆಯಲು ಅವಕಾಶ ಕಲ್ಪಿಸುತ್ತದೆ.


ಬಯೋಪಾರ್ಟ್ನರಿಂಗ್‌

ಜಾಗತಿಕ ಬಯೋಟೆಕ್‌ ಪಾರ್ಟ್ನರ್‌ಗಳಿಗೆ ನೆಟ್‌ವರ್ಕಿಂಗ್‌ ಅವಕಾಶ ನೀಡುವುದು ಈ ವರ್ಷದ ಬಿಟಿಎಸ್‌ನ ಪ್ರಮುಖ ಆಕರ್ಷಣೆಯಾಗಿದೆ. ಇದೆ ಮೊದಲ ಬಾರಿಗೆ 3 ದಿನಗಳ ಇಂಡಿಯಾ ಬಯೋ@ಬಿಟಿಎಸ್‌ ಇನೊವಾ ಸಾಫ್ಟ್‌ವೆರ್‌ ಅಭಿವೃದ್ಧಿಪಡಿಸಿರುವ ಸುಧಾರಿತ ಮೀಟಿಂಗ್‌ ಷೆಡ್ಯೂಲರ್‌ ವೇದಿಕೆಯನ್ನು ಪರಿಚಯಿಸುತ್ತಿದೆ. ಈ ವೇದಿಕೆ ಪಾಲ್ಗೋಳ್ಳುವವರಿಗೆ ಆಹ್ವಾನಿತ ಕಂಪನಿಗಳನ್ನು ಹುಡುಕಲು, ಆಮಂತ್ರಣಗಳನ್ನು ಸ್ವೀಕರಿಸಲು ಮತ್ತು ವರ್ಚುಅಲ್‌ ಆಗಿ ಮೀಟಿಂಗ್‌ ನಡೆಸಲು ಅವಕಾಶ ನೀಡುತ್ತದೆ. ಇನೊವಾ ಸಾಫ್ಟ್‌ವೆರ್‌ ಜಾಗತಿಕವಾಗಿ ಪ್ರಮುಖ ಬಯೋಟೆಕ್‌ ಶೋಗಳಲ್ಲಿ ಕೆಲಸ ಮಾಡಿದ್ದು, ಭಾರತದಲ್ಲಿ ಇದು ಅವರ ಮೊದಲ ದೊಡ್ಡ ಬಯೋಟೆಕ್‌ ಇವೆಂಟ್‌ ಆಗಿದೆ.


ಲ್ಯಾಬ್‌ ಟು ಮಾರ್ಕೆಟ್‌

ಹತ್ತು ಲಕ್ಷ ವಿಜ್ಞಾನಿಗಳು ಭಾರತದ 265 ರಾಷ್ಟ್ರೀಯ ಸಂಶೋಧನಾ ಲ್ಯಾಬ್‌ಗಳಲ್ಲಿ ಅತ್ಯಾಧುನಿಕ ಸಂಶೋಧನೆ ಕೈಗೊಳ್ಳುತ್ತಿದ್ದು, ಕ್ರಾಂತಿಕಾರಿ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ಸಂಶೋಧನೆಯ ಬಹುಪಾಲು ವಾಣಿಜ್ಯವಾಗಿ ಮೌಲ್ಯಯುಳ್ಳ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ರಚಿಸುವ ಸಾಮರ್ಥ್ಯ ಹೊಂದಿದೆ. ಲ್ಯಾಬ್‌ ಟು ಮಾರ್ಕೆಟ್‌ ಈ ಸಾಮರ್ಥ್ಯವನ್ನು ಗುರುತಿಸುವ ಒಂದು ಹೊಸ ವೇದಿಕೆಯಾಗಿದ್ದು ಬೆಳೆವಣಿಗೆ ಹೂಡಿಕೆಗಳನ್ನು ಪ್ರೋತ್ಸಾಹಿಸುತ್ತದೆ. ಬಿಟಿಎಸ್‌ನಲ್ಲಿ, ಲ್ಯಾಬ್ ಟು ಮಾರ್ಕೆಟ್ ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳಿಗೆ ಉದ್ಯಮದ ಪ್ರತಿನಿಧಿಗಳು, ಸ್ಟಾರ್ಟಪ್‌ಗಳು ಮತ್ತು ಹೂಡಿಕೆದಾರರೊಂದಿಗೆ ಪರಸ್ಪರ ವೈಯಕ್ತಿಕ ಸಭೆಗಳನ್ನು ಪ್ರದರ್ಶಿಸಲು, ಪ್ರಸ್ತುತಪಡಿಸಲು ಮತ್ತು ನಡೆಸಲು ಮತ್ತು ಅವರ ಆವಿಷ್ಕಾರಗಳನ್ನು ಲ್ಯಾಬ್ ನಿಂದ ಮಾರುಕಟ್ಟೆಗೆ ಕೊಂಡೊಯ್ಯಲು ಅನುವು ಮಾಡಿಕೊಡುತ್ತದೆ.


ಪ್ರಶಸ್ತಿಗಳು

ಐಟಿ ಬಿಟಿ ಕ್ಷೇತ್ರಕ್ಕೆ ಕೊಡುಗೆ ನೀಡಿದ ಉದ್ಯಮಿಗಳನ್ನು ಶೃಂಗಸಭೆ ಹಲವು ಪ್ರಶಸ್ತಿಗಳನ್ನು ನೀಡುವ ಮೂಲಕ ಗುರುತಿಸುತ್ತದೆ. ಐಟಿ ಕಂಪನಿಗಳಿಗೆ ಎಸ್‌ಟಿಪಿಐ ಐಟಿ ರಫ್ತು ಪ್ರಶಸ್ತಿಗಳು, ಬಯೋಫಾರ್ಮಾ, ಬಯೋ ಇಂಡಸ್ಟ್ರಿ, ಬಯೋಆಗ್ರಿ, ಬಯೋ ಸರ್ವೀಸಸ್, ಮೆಡ್‌ಟೆಕ್ ಕ್ಷೇತ್ರಗಳಲ್ಲಿನ ಜೈವಿಕ ತಂತ್ರಜ್ಞಾನ ಸಂಸ್ಥೆಗಳಿಗೆ ಸ್ಮಾರ್ಟ್‌ಬಯೋ ಪ್ರಶಸ್ತಿಗಳು, ಹೆಚ್ಚು ಉದ್ಯೋಗ ಸೃಷ್ಟಿ ಅಥವಾ ಸಂಪತ್ತು ಸೃಷ್ಟಿ ಮತ್ತು ಸಾಮಾಜಿಕ ಪ್ರಭಾವ ಬೀರುವ ಸಾಮರ್ಥ್ಯವಿರುವ ಐಟಿ, ಬಯೋಟೆಕ್, ಮೆಡ್ ಟೆಕ್ ಕ್ಷೇತ್ರದಲ್ಲಿ ಹೊಸ ಉತ್ಪನ್ನಗಳನ್ನು, ಸೇವೆಗಳನ್ನು ನೀಡುತ್ತಿರುವ ಕರ್ನಾಟಕದ ಸ್ಟಾರ್ಟಪ್‌ಗಳು, ಉದ್ಯಮಗಳು ಮತ್ತು ಹೂಡಿಕೆದಾರರಿಗೆ ಬೆಂಗಳೂರು ಇಂಪಾಕ್ಟ್‌ ಅವಾರ್ಡ್‌ ನೀಡಲಾಗುತ್ತದೆ.


ರಸಪ್ರಶ್ನೆ ಸ್ಪರ್ಧೆಗಳು

ಬಿಟಿಎಸ್‌ನ ಮತ್ತೊಂದು ವಿಶೇಷತೆಯೆಂದರೆ ಟಾಟಾ ಕನ್ಸಲ್ಟನ್ಸಿ ಸರ್ವಿಸ್‌(ಟಿಸಿಎಸ್‌)ನ ಸಹಭಾಗಿತ್ವದಲ್ಲಿ ನಡೆಸುವ ರೂರಲ್‌ ಐಟಿ ಕ್ವಿಜ್‌ (ಗ್ರಾಮೀಣ ರಸಪ್ರಶ್ನೆ ಸ್ಪರ್ಧೆ). ಕಳೆದ ಎರಡು ದಶಕದಿಂದ ಈ ಯೋಜನೆ ತಳಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ(ಐಟಿ)ದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದೆ. ಈ ಸ್ಪರ್ಧೆಯಲ್ಲಿ ಭಾರತದಾದ್ಯಂತ 8 ರಿಂದ 12 ತರಗತಿಯ ವಿದ್ಯಾರ್ಥಿಗಳು ಪಾಲ್ಗೋಳ್ಳಬಹುದು.


ಬಿಟಿಎಸ್‌ನ ಮತ್ತೊಂದು ರಸಪ್ರಶ್ನೆ ಸ್ಪರ್ಧೆಯಾದ ಬಯೋ ಕ್ವಿಜ್‌ ವಿದ್ಯಾರ್ಥಿಗಳಲ್ಲಿ ಬಯೋಟೆಕ್ನಾಲಜಿಯ ಬಗ್ಗೆ ಅರಿವು ಮೂಡಿಸುತ್ತ, ಈ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆಯನ್ನು ತಿಳಿಸುವ ಗುರಿ ಹೊಂದಿದೆ. ಈ ಸ್ಪರ್ಧೆಗೆ ಮೊದಲು ಕರ್ನಾಟಕದ ಬಿ ಎಸ್‌ಸಿ, ಬಿ ಎಸ್‌ಸಿ-ಅಗ್ರಿ, ಬಿ ಇ-ಬಯೋಟೆಕ್ನಾಲಜಿ ಮತ್ತು ಬಿ ಫಾರ್ಮ್‌ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿತ್ತು. ಆದರೆ ಈ ವರ್ಷ ಹೊಸ ಶಿಕ್ಷಣ ನೀತಿಯ ಹುರುಪಿನೊಂದಿಗೆ ಬಯೋಕ್ವಿಜ್‌ 2020 ತನ್ನ ಸ್ಪರ್ಧೆಯನ್ನು ವಿಸ್ತರಿಸಿ 12ನೇ ತರಗತಿಯಿಂದಲೆ ವಿದ್ಯಾರ್ಥಿಗಳಿಗೆ ಅವರ ಅಧ್ಯಯನದ ವಿಶೇಷತೆಯ ಹೊರತಾಗಿಯೂ ಇದರಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟಿದೆ. ಬಯೋಕ್ವಿಜ್‌ ಮತ್ತು ರೂರಲ್‌ ಐಟಿ ಕ್ವಿಜ್‌ನ ಕೊನೆಯ ಘಟ್ಟವನ್ನು ಬಿಟಿಎಸ್‌ನಲ್ಲಿ ಲೈವ್‌ ಸ್ಟ್ರೀಮ್‌ ಮಾಡಲಾಗುವುದು.


ಬಯೋ ಪೊಸ್ಟರ್‌ - ಅನ್ವೇಷಣೆಯ ದಾರಿ

ಯುವ ಅನ್ವೇಷಕರಲ್ಲಿ ಖ್ಯಾತಿ ಪಡೆದಿರುವ ಬಯೋ ಪೋಸ್ಟರ್‌ ಬಯೋಟೆಕ್ನಾಲಜಿ ಮತ್ತು ಲೈಫ್‌ ಸೈನ್ಸ್‌ ಕ್ಷೇತ್ರದಲ್ಲಿ ಪರಿಣಾಮ ಬೀರುವಂತಹ ನಾವೀನ್ಯ ಯೋಚನೆಗಳನ್ನು, ಅಪ್ರತಿಮ ಸಂಶೋಧನೆಗಳನ್ನು ಮತ್ತು ಅಧ್ಯಯನಗಳನ್ನು ಪ್ರಸ್ತುತಪಡಿಸುತ್ತದೆ. ಅದು ಬಯೋಫಾರ್ಮಾ, ಅಗ್ರಿ ಬಯೋಟೆಕ್‌, ಮೆಡ್‌ಟೆಕ್‌ ಮತ್ತು ಬಯೋಸರ್ವಿಸಸ್‌ ಕ್ಷೇತ್ರದಲ್ಲಿನ ಸಂಶೋಧನೆಗಳನ್ನು ಸಾದರಪಡಿಸುತ್ತದೆ. ಈ ವರ್ಷದ ವಿಶೇಷ ಗಮನ ಸಾಂಕ್ರಾಮಿಕವನ್ನು ಲಸಿಕೆಗಳು, ಔಷಧಗಳು, ಪತ್ತೆ ಮಾಡುವಿಕೆ, ಚಿಕಿತ್ಸೆ, ರೋಗ ನಿರೋಧಕ ಶಕ್ತಿ ಮತ್ತು ಸೋಂಕು ತಾಗಿದ ನಂತರದ ಆರೈಕೆಯಿಂದ ಹೇಗೆ ಎದುರಿಸಬಹುದು ಎಂಬ ವಿಷಯದ ಮೇಲಿದೆ.


ಬಿಟಿಎಸ್‌ 2020ರಲ್ಲಿ ಜಗತ್ತಿನ ಉತ್ತಮ ತಜ್ಞರು ನಾಯಕರು ಮುಂಬರುವ ದಿನಗಳಲ್ಲಿ ನಮ್ಮ ಜೀವನವನ್ನು ಮತ್ತು ಉದ್ಯಮವನ್ನು ರೂಪಿಸುವ ಸಮಸ್ಯೆಗಳು ಮತ್ತು ಅಂಶಗಳ ಮೇಲಿನ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ. ಹೊಸ ಉತ್ಪನ್ನಗಳ ಅನಾವರಣ ಮತ್ತು ಅತ್ಯಾಧುನಿಕ ಯೋಚನೆಗಳು ಮತ್ತು ತಂತ್ರಜ್ಞಾನಗಳಿಂದ ಕೂಡಿರುವ ಬಿಟಿಎಸ್‌ ಯಾರೂ ಮಿಸ್‌ ಮಾಡಿಕೊಳ್ಳಬಾರದ ಶೃಂಗಸಭೆ.


ಇಲ್ಲಿ ನೋಂದಾಯಿಸಿಕೊಳ್ಳಿ.