ಜಯದೇವ ಆಸ್ಪತ್ರೆ ಸಾಧನೆ: ಹೃದಯ ನಿಗಾ ಇಡುವ ಯಂತ್ರ ಅಳವಡಿಕೆ..!

ಕೃತಿಕಾ

ಜಯದೇವ ಆಸ್ಪತ್ರೆ ಸಾಧನೆ: ಹೃದಯ ನಿಗಾ ಇಡುವ ಯಂತ್ರ ಅಳವಡಿಕೆ..!

Tuesday February 16, 2016,

2 min Read

ಆರೋಗ್ಯ ಕ್ಷೇತ್ರದಲ್ಲಿ ಹಲವು ಮೈಲಿಗಲ್ಲುಗಳನ್ನು ಸಾಧಿಸಿರುವ ಬೆಂಗಳೂರಿನ ಜಯದೇವ ಜಯದೇವ ಇನ್ಸ್​ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕ್ಯೂಲರ್ ಸೈನ್ಸ್ ಆಂಡ್ ರಿಸರ್ಚ್ ಅಪರೂಪದ ಸಾಧನೆ ಮಾಡಿದೆ. ಹೃದಯ ನಿಗಾ ಇಡುವ ಉಪಕರಣವಾದ ಮೆಡ್ ಟ್ರಾನಿಕ್ ರಿವೀಲ್ ಲಿಂಕ್ ಇನ್ಸರ್ಟೇಬಲ್ ಕಾರ್ಡಿಯಾಕ್ ಮಾನಿಟರ್ (ಐಸಿಎಂ) ಸಿಸ್ಟಮ್ ಅನ್ನು ರೋಗಿಯ ದೇಹ ಸೇರಿಸಿದ ಭಾರತದ ಮೊದಲ ಆಸ್ಪತ್ರೆ ಎಂಬ ಖ್ಯಾತಿಗೆ ಜಯದೇವ ಆಸ್ಪತ್ರೆ ಪಾತ್ರವಾಗಿದೆ.

image


ಬೆಂಗಳೂರಿನ ಉದ್ಯಮಿ ಕಾಂತಿಲಾಲ್ (55) 6 ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಪರೀಕ್ಷಿಸಿದ ಜಯದೇವ ಆಸ್ಪತ್ರೆಯ ಡಾ. ಜಯಪ್ರಕಾಶ್ ಶೆಂಥರ್ ಮೆಡ್ರೀನಿಕ್ ರಿವೀಲ್ ಲಿಂಕ್ವಿಟಮ್ ಇನ್ಸರ್ಟೇಬಲ್ ಕಾರ್ಡಿಯಾಕ್ ಮಾನಿಟರ್ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವರ ದೇಹದೊಳಗೆ ಹೃದಯದ ಬಗ್ಗೆ ನಿಗಾ ವಹಿಸುವ ಯಂತ್ರವನ್ನು ಅಳವಡಿಸಲಾಗಿದೆ.

ಇದನ್ನು ಓದಿ

ನೀವೆಲ್ಲೋ.. ಅವರೆಲ್ಲೋ..! ಆದ್ರೆ ಇಬ್ಬರ ನಡುವೆ ಗ್ಯಾಪ್​ ಅನ್ನೋದೇ ಇಲ್ಲ..!

''ರಿವೀಲ್ ಲಿಂಕ್ ಐಸಿಎಂ ಎಂಬ ಯಂತ್ರವನ್ನು ಕಾಂತಿಲಾಲ್ ಅವರ ದೇಹದಲ್ಲಿ ಅಳವಡಿಸಲಾಗಿದೆ. ಈ ಪುಟ್ಟದಾದ ಯಂತ್ರ ರೋಗಿಯ ಹೃದಯವನ್ನು ಮೂರು ವರ್ಷಗಳ ಕಾಲ ಸತತವಾಗಿ ನಿಗಾ ಇಡಲು ಅವಕಾಶ ನೀಡುತ್ತದೆ. ಇದಲ್ಲದೆ, ಕೇರ್ ಲಿಂಕ್ ನೆಟ್​​ವರ್ಕ್ ಮೂಲಕ ಈ ಸಿಸ್ಟಮ್ ರಿಮೋಟ್ ಮಾನಿಟರಿಂಗ್ ಅನ್ನು ಒದಗಿಸುತ್ತದೆ. ಇದರಿಂದ ವೈದ್ಯರು ರೋಗಿಯ ಹೃದಯದ ಕಾರ್ಯ ಕುರಿತು ಎಚ್ಚರಿಕೆಯನ್ನು ಪಡೆಯಬಹುದು. ರಿವೀಲ್ ಲಿಂಕ್ ಐಸಿಎಂ ರೋಗಿಗಳು ಅನುಭವಿಸುವ ತಲೆ ತಿರುಗುವಿಕೆ, ನಾಡಿ, ಪ್ರಜ್ಞಾಶೂನ್ಯತೆ ಮತ್ತು ಎದೆ ನೋವಿನಂತಹ ಲಕ್ಷಣಗಳನ್ನು ಸೂಚಿಸುತ್ತದೆ. ಹೃದಯ ಸ್ತಂಭನ ಕುರಿತು ಕೂಡಾ ಎಚ್ಚರಿಸುತ್ತದೆ'' ಡಾ. ಶೆಂತರ್ ವಿವರಿಸುತ್ತಾರೆ.

image


ಎದೆಯ ಎಡ ಮೇಲ್ಭಾಗದಲ್ಲಿ ಚರ್ಮದ ತುಸು ಅಡಿಯಲ್ಲಿ ಸೆಂಟಿಮೀಟರ್​ಗಿಂತ ಕಡಿಮೆಯ ಸಣ್ಣ ಛೇದನಗೈದು ರಿವೀಲ್ ಲಿಂಕ್ ಐಸಿಎಂ ಅನ್ನು ಒಳತೂರಿಸಲಾಗುತ್ತದೆ. ಒಮ್ಮೆ ಒಳತೂರಿಸಿದ ಮೇಲೆ ಬರಿಗಣ್ಣಿಗೆ ಅದು ಕಾಣಿಸುವುದಿಲ್ಲ. ಈ ಸಾಧನವನ್ನು ಸರಳ ವಿಧಾನದ ಮೂಲಕ ಒಳ ಸೇರಿಸಬಹುದಾಗಿದೆ. ವೈದ್ಯರು ಹಾಗೂ ರೋಗಿಗಳಿಬ್ಬರಿಗೂ ಸುಲಭವಾಗಿರುತ್ತದೆ. ಹೃದಯದಲ್ಲಿ ಆಗುವ ಬದಲಾವಣೆಗಳನ್ನು ಈ ಯಂತ್ರ ಗಮನಿಸಿ ವೈದ್ಯರು ಮತ್ತು ರೋಗಿಗಳಿಗೆ ಎಚ್ಚರಿಕೆ ನೀಡುತ್ತದೆ.

''ಕಳೆದ ಐದಾರು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ಯಾವಾಗ ಸಾವು ಬರುತ್ತದೋ ಎಂಬ ಭಯದಲ್ಲೇ ಕಾಲ ಕಳೆಯುವಂತಾಗಿತ್ತು. ಈಗ ಜಯದೇವ ಆಸ್ಪತ್ರೆ ವೈದ್ಯರು ಯಂತ್ರ ಅಳವಡಿಸಿದ್ದಾರೆ. ಇದರಿಂದ ಹೃದಯದಲ್ಲಿ ಸ್ವಲ್ಪ ಏರಿಳಿತವಾದರೂ ಮಾಹಿತಿ ನೀಡುತ್ತದೆ. ಇನ್ನು ಮುಂದೆ ನಿಶ್ಚಿಂತೆಯಿಂದ ಬದುಕಬಹುದು ಎಂದು ವಿಶ್ವಾಸ ಮೂಡಿದೆ'' ಅಂತಾರೆ ಉದ್ಯಮಿ ಕಾಂತಿಲಾಲ್.

ವಿದೇಶಗಳಲ್ಲಿ ಈ ಚಿಕಿತ್ಸಾ ವಿಧಾನ ಲಭ್ಯವಿದ್ದು ಭಾರತದಲ್ಲಿ ಮೊದಲ ಬಾರಿಗೆ ಹೃದಯವನ್ನು ನಿಗಾ ಇಡಲು ದೇಹದಲ್ಲಿ ಯಂತ್ರ ಅಳವಿಡಿಸಲಾಗಿದೆ.

ಇದನ್ನು ಓದಿ

1. ಡೇಂಜರ್​​..! ಭಯ ಇದ್ರೆ ಇಲ್ಲಿ ಹೋಗಲೇ ಬೇಡಿ..!

2. ಹೆಚ್ ಐವಿ ಪೀಡಿತರಿಗೆ ಮದುವೆ ಭಾಗ್ಯ _ ಸಂಗಾತಿ ಹುಡುಕಾಟಕ್ಕೆ ವೇದಿಕೆ `ಪಾಸಿಟಿವ್ ಶಾದಿ’

3. ಪುರುಷರ ಜಗತ್ತಿನಲ್ಲಿ ಮಹಿಳೆಯ ಕಾರುಬಾರು..!