ಗಣಿತ ತಜ್ಞೆ ಶಕುಂತಲಾ ದೇವಿಯ ದಾಖಲೆಯನ್ನು ಮುರಿದ ಹೈದರಾಬಾದ್ನ 21 ವರ್ಷದ ಯುವಕ
ಲಂಡನ್ನಲ್ಲಿ ನಡೆದ ಮಿಂಟ್ ಸ್ಪೋರ್ಟ್ಸ್ ಒಲಿಂಪಿಯಾಡ್ನಲ್ಲಿ ಚಿನ್ನದ ಪದಕ ಗೆದ್ದ ನಂತರ, ನೀಲಕಂಠ ಭಾನು ಪ್ರಕಾಶ್ ಅವರು ಶಕುಂತಲಾ ದೇವಿಯ ದಾಖಲೆಯನ್ನು ಮುರಿದು ಅತಿ ವೇಗವಾಗಿ ಲೆಕ್ಕಾಚಾರ ಮಾಡುವ ಮಾನವನಾಗಿ ಹೊರಹೊಮ್ಮಿದ್ದಾರೆ.
ಗಿನ್ನೀಸ್ ದಾಖಲೆ ಬರೆದ 40 ವರ್ಷಗಳ ನಂತರ ವಿಶ್ವದಲ್ಲೆ ಅತಿ ವೇಗವಾಗಿ ಲೆಕ್ಕಚಾರ ಮಾಡುವ ಮಾನವ ಎಂಬ ಬಿರುದನ್ನು ಕಳೆದ ತಿಂಗಳು ಶಕುಂತಲಾ ದೇವಿಯವರಿಗೆ ನೀಡಿ ಗೌರವಿಸಿದರು.
ಇದೆಲ್ಲದರ ನಡುವೆ ಹೈದರಾಬಾದ್ನ 21 ರ ನೀಲಕಂಠ ಭಾನು ಪ್ರಕಾಶ ಅವರು ಕೂಡಾ ಅತಿ ವೇಗವಾಗಿ ಲೆಕ್ಕಚಾರ ಮಾಡುವ ಮಾನವನಾಗಿ ಹೊರಹೊಮ್ಮಿದ್ದಾರೆ. ಸೇಂಟ್ ಸ್ಟೀಫನ್ಸ್ ಕಾಲೇಜಿನ ಪದವೀಧರರಾದ ಭಾನು ಪ್ರಕಾಶ್ ಲಂಡನ್ನಲ್ಲಿ ನಡೆದ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ (ಎಂಎಸ್ಒ) ನಲ್ಲಿ ನಡೆದ ಮೆಂಟಲ್ ಕ್ಯಾಲ್ಕುಲೇಷನ್ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಪ್ರಥಮ ಬಾರಿಗೆ ಚಿನ್ನದ ಪದಕ ಗೆದ್ದು ಕೊಟ್ಟಿದ್ದಾರೆ.
“57 ವರ್ಷದವರೆಗಿನ 13 ದೇಶಗಳ 29 ಸ್ಪರ್ಧಿಗಳನ್ನು ಸೋಲಿಸಿ 65 ಅಂಕಗಳ ಸ್ಪಷ್ಟ ಅಂತರದೊಂದಿಗೆ ನಾನು ಚಿನ್ನದ ಪದಕ ಗೆದ್ದಿದ್ದೇನೆ. ನನ್ನ ವೇಗ ನೋಡಿ ತೀರ್ಪುಗಾರರು ಮಂತ್ರಮುಗ್ಧರಾಗಿದ್ದರು; ನನ್ನ ನಿಖರತೆಯನ್ನು ದೃಢಿಕರಿಸಲು ಅವರು ಹೆಚ್ಚಿನ ಲೆಕ್ಕಾಚಾರಗಳನ್ನು ನೀಡಬೇಕಾಯಿತು,” ಎಂದು ನೀಲಕಂಠ ಭಾನು ಪ್ರಕಾಶ ಎಎನ್ಐ ಗೆ ಹೇಳಿದರು.
“ಅತಿ ವೇಗವಾಗಿ ಲೆಕ್ಕಚಾರ ಮಾಡುವ ಮಾನವನಾಗಿರುವುದರಿಂದ ನಾನು 4 ವಿಶ್ವ ದಾಖಲೆಗಳು ಮತ್ತು 50 ಲಿಂಕಾ ದಾಖಲೆಗಳನ್ನು ಹೊಂದಿದ್ದೇನೆ. ಕ್ಯಾಲ್ಕುಲೇಟರ್ಗಿಂತ ವೇಗವಾಗಿ ನಾನು ಲೆಕ್ಕ ಮಾಡುತ್ತೇನೆ. ಸ್ಕಾಟ್ ಫ್ಲಾನ್ಸ್ಬರ್ಗ್ ಮತ್ತು ಶಕುಂತಲಾ ದೇವಿಯವರಂತಹ ಗಣಿತ ತಜ್ಞರ ಇಂತಹ ದಾಖಲೆಗಳನ್ನು ಮುರಿಯುವುದು ರಾಷ್ಟ್ರದ ಹೆಮ್ಮೆಯ ವಿಚಾರವಾಗಿದೆ. ಜಾಗತಿಕ ಮಟ್ಟದ ಗಣಿತ ಕ್ಷೇತ್ರದಲ್ಲಿ ಭಾರತವನ್ನು ಉತ್ತಮ ಸ್ಥಾನದಲ್ಲಿರಿಸಲು ನನ್ನಿಂದ ಸಾಧ್ಯವಾದಷ್ಟು ಮಾಡಿದ್ದೇನೆ,” ಎಂದು ಅವರು ತಿಳಿಸಿದರು.
ಮಿಂಟ್ ಸ್ಪೋರ್ಟ್ಸ್ ಒಲಿಂಪಿಯಾಡ್ (ಎಂಎಸ್ಒ) ಮಾನಸಿಕ ಕೌಶಲ್ಯ ಮತ್ತು ಮನಸ್ಸಿನ ಕ್ರೀಡೆಗಳಿಗೆ ಸಂಬಂಧಪಟ್ಟ ಆಟಗಳಿಗೆ ಅತ್ಯಂತ ಪ್ರತಿಷ್ಠಿತ ಅಂತರರಾಷ್ಟ್ರೀಯ ಸ್ಪರ್ಧೆಯಾಗಿದ್ದು, ಪ್ರತಿವರ್ಷ ಲಂಡನ್ನಲ್ಲಿ ನಡೆಯುತ್ತದೆ. ಈ ವರ್ಷ, ಯುಕೆ, ಜರ್ಮನಿ, ಯುಎಇ, ಫ್ರಾನ್ಸ್, ಗ್ರೀಸ್ ಮತ್ತು ಲೆಬನಾನ್ ನಿಂದ 30 ಸ್ಪರ್ಧಿಗಳೊಂದಿಗೆ ಸ್ಪರ್ಧೆಯನ್ನು ಆನ್ಲೈನ್ನಲ್ಲಿ ನಡೆಸಲಾಯಿತು.
ಭಾರತದ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಟ್ವಿಟ್ಟರ್ ಮೂಲಕ ಈ ಯುವಕನನ್ನು ಅಭಿನಂದಿಸಿದ್ದಾರೆ –“ವಿಶ್ವದಲ್ಲೆ ಅತಿ ವೇಗವಾಗಿ ಲೆಕ್ಕಚಾರ ಮಾಡುವ ಮಾನವ ಎಂಬ ಬಿರುದನ್ನು ಪಡೆದ ಮತ್ತು ಇತ್ತೀಚೆಗೆ ಲಂಡನ್ನಲ್ಲಿ ನಡೆದ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ನ ಮೆಂಟಲ್ ಕ್ಯಾಲ್ಕುಲೇಷನ್ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನ ತಂದುಕೊಟ್ಟದ್ದಕ್ಕಾಗಿ ನೀಲಕಂಠ ಭಾನು ಪ್ರಕಾಶ್ ಅವರಿಗೆ ಅಭಿನಂದನೆಗಳು.”
“ಅವರು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಅವರ ಮುಂದಿನ ಭವಿಷ್ಯಕ್ಕೆ ನನ್ನ ಶುಭಹಾರೈಕೆಗಳು,” ಎಂದು ಅವರು ಟ್ವೀಟಿಸಿದ್ದಾರೆ.
ನ್ಯೂಸ್ 18 ರ ಪ್ರಕಾರ, ಭಾನು ಪ್ರಕಾಶ್ ಲಕ್ಷಾಂತರ ಭಾರತೀಯ ಮಕ್ಕಳನ್ನು ತಲುಪಿ ಗಣಿತ ವಿಷಯದ ಬಗ್ಗೆ ಪ್ರೀತಿಯನ್ನು ಮೂಡಿಸುವ ವಿಷನ್ ಮ್ಯಾಥ್ ಎಂಬ ಉಪಕ್ರಮವನ್ನು ಪ್ರಾರಂಭಿಸಲು ಆಶಿಸಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಉಪಕ್ರಮಕ್ಕೆ ಮುಂದಾಗುತ್ತಾರೆ ಎಂಬುದು ಅವರ ಆಶಯ. ಇದು ಭಾರತವನ್ನು "ಶ್ರೇಷ್ಠತೆಯ ಜಾಗತಿಕ ನಕ್ಷೆಯಲ್ಲಿ" ಮತ್ತೆ ತನ್ನ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ನಂಬಿದ್ದಾರೆ.