ಹಿಂದುಳಿದವರ ‘ಉನ್ನತಿ’ಗಾಗಿ ಪರಿಶ್ರಮ : ಯುವಕರ ಬದುಕಿಗೊಂದು ಆಶಾಕಿರಣ ಎಸ್ ಜಿಬಿಎಸ್ ಫೌಂಡೇಶನ್
ಬಿಆರ್ಪಿ ಉಜಿರೆ
ಆರ್ಥಿಕವಾಗಿ ಹಿಂದುಳಿದ ಯುವಕರು ಅದಷ್ಟೇ ಪ್ರತಿಭಾನ್ವಿತರಾಗಿದ್ರೂ ಬದುಕಿನಲ್ಲಿ ಸಾಧಿಸುವುದಕ್ಕೆ ಅವರಿಗೆ ಸೂಕ್ತ ವೇದಿಕೆ ಸಿಗುವುದು ತೀರಾ ಅಪರೂಪ. ಓದೋದಿಕ್ಕೆ ಮನಸ್ಸಿದ್ರೂ, ವಿವಿಧ ಕೆಲಸಗಳನ್ನ ಮಾಡುವ ಕೌಶಲ್ಯಗಳಿದ್ರೂ ಅವರಿಗೆ ಮಾರ್ಗದರ್ಶನವೂ ಇಲ್ಲ, ಅವಕಾಶಗಳೂ ಇರೋದಿಲ್ಲ. ಇಂತಹ ಯುವಕರನ್ನ ಗುರುತಿಸಿ ಅವರಿಗೆ ಸೂಕ್ತ ತರಬೇತಿಗಳನ್ನ ಕೆಲವು ಎನ್ ಜಿಓಗಳು ಮಾಡ್ತಾ ಇದ್ರೂ ತಮ್ಮ ಟಾರ್ಗೇಟ್ ರೀಚ್ ಆಗಿರೋದು ತೀರಾ ಕಮ್ಮಿ. ಆದ್ರೆ ಬೆಂಗಳೂರಿನ ಎಸ್ ಜಿಬಿಎಸ್ ಉನ್ನತಿ ಫೌಂಡೇಶನ್ ಆರ್ಥಿಕವಾಗಿ ದುರ್ಬಲವಾಗಿರುವ ಯುವ ಪ್ರತಿಭೆಗಳ ಬದುಕಿಗೆ ಆಶಾಕಿರಣವಾಗಿದೆ. ಹಿಂದುಳಿದ ಯುವ ಪ್ರತಿಭೆಗಳನ್ನ ಗುರುತಿಸಿ ಅವರಿಗೆ ಸೂಕ್ತ ತರಬೇತಿಗಳನ್ನ ನೀಡಿ ಸಮಾಜ ಮುಖ್ಯವಾಹಿನಿಗೆ ತರಲು ಉನ್ನತಿ ಫೌಂಡೇಶನ್ ಶ್ರಮಿಸುತ್ತಿದೆ.
ಎಸ್ ಜಿಬಿಎಸ್ ಹಲವು ಗುರಿಗಳನ್ನ ಇಟ್ಟುಕೊಂಡು ತರಬೇತಿ ಕಾರ್ಯಕ್ರಮಗಳನ್ನ ಆಯೋಜಿಸುತ್ತಿದೆ. ತನ್ನ ಸಂಸ್ಥೆಯಲ್ಲೇ ವಿವಿಧ ಗ್ರೂಪ್ ಗಳನ್ನ ಮಾಡಿಕೊಂಡು ತರಬೇತಿಯಲ್ಲಿ ವೈವಿಧ್ಯತೆಯನ್ನ ಹೊಂದಿದೆ. ಉನ್ನತಿ ಎಂಬ ಕಾರ್ಯಕ್ರಮದಡಿ ನಿರುದ್ಯೋಗಿ ಹಾಗೂ ಹಿಂದುಳಿದ ವರ್ಗದವರಿಗೆ ವರ್ಷದ ಆಯ್ದ ದಿನಗಳಲ್ಲಿ ತರಬೇತಿ, ಶಿಕ್ಷಾ ಎನ್ನುವ ಹೆಸರಿನಲ್ಲಿ ಪ್ರೈಮರಿ ಎಜುಕೇಶನ್, ಉತ್ಸವ್ ಹೆಸರಿನಲ್ಲಿ ಸಂಪ್ರದಾಯ, ಕಲೆ ಹಾಗೂ ಸಂಸ್ಕೃತಿಗಳ ಬಗ್ಗೆ ತರಬೇತಿ, ಸಮಸ್ತ ಅನ್ನೋ ಕಾರ್ಯಕ್ರಮದಡಿ ವಿವಿಧ ಸರ್ವೀಸ್ ಗಳ ಬಗ್ಗೆ ತರಬೇತಿ ನೀಡುತ್ತಿದೆ. ಈಗಾಗಲೇ 6000 ಯುವಕರಿಗೆ ತರಬೇತಿ ನೀಡುವುದರ ಜೊತೆಗೆ ಅವರಿಗೆಲ್ಲಾರಿಗೂ ಉದ್ಯೋಗಗಳನ್ನೂ ಕೊಡಿಸಿರುವುದು ಉನ್ನತಿಯ ಹೆಗ್ಗಳಿಕೆ.
50 ದಿನಗಳ ಮ್ಯಾಜಿಕ್..
ಉನ್ನತಿ ಎಸ್ ಜಿಬಿಎಸ್ ಫೌಂಡೇಶನ್ ನ ತರಬೇತಿ ಅವಧಿ 50 ದಿನಗಳು. ನಗರ ಹಾಗೂ ಗ್ರಾಮೀಣ ಪ್ರದೇಶದ ಹಿಂದುಳಿದ ಹಾಗೂ 18 ವರ್ಷ ತುಂಬಿದ ಯುವಕರು ಇಲ್ಲಿ ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ. ಇಲ್ಲಿ ಮೊದಲು ಲೈಫ್ ಸ್ಕಿಲ್ಸ್, ಕಂಪ್ಯೂಟರ್ ಸ್ಕಿಲ್ಸ್ ಹಾಗೂ ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಗಳನ್ನ ತೆಗೆದುಕೊಳ್ಳಲಾಗುತ್ತೆ. ಬಳಿಕ ಕೌನ್ಸಿಲಿಂಗ್ ಗಳನ್ನ ನಡೆಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನ ತುಂಬಲಾಗುತ್ತೆ. ಕೆಲವು ದಿನಗಳ ನಂತರ ಕಮ್ಯುನಿಕೇಷನ್ ಸ್ಕಿಲ್ಸ್ ಗಳನ್ನ ಅಭ್ಯರ್ಥಿಗಳಿಗೆ ಕಲಿಸಲಾಗುತ್ತದೆ. ಇದಾದ ನಂತ್ರ ಅವರಲ್ಲಿ ಅಡಗಿರುವ ಕೌಶಲ್ಯಗಳನ್ನ ಗುರುತಿಸಿ ಸರಿ ಹೊಂದುವ ಉದ್ಯೋಗಕ್ಕೆ ತಕ್ಕಂತೆ ತರಬೇತಿಗಳನ್ನ ನೀಡಲಾಗುತ್ತೆ.
“ ನಮ್ಮ ಸುತ್ತಲು ಹಲವು ಸುಪ್ತ ಪ್ರತಿಭೆಗಳಿವೆ. ಆದ್ರೆ ಅವುಗಳು ಅರಳಿ ಸೂಕ್ತ ಸ್ಥಾನಗಳಿಗೇರಲು ಅಗತ್ಯ ಬೆಂಬಲಗಳು ಬೇಕಷ್ಟೆ. ಈ ನಿಟ್ಟಿನಲ್ಲಿ ಎಸ್ ಜಿಬಿಎಸ್ ಫೌಂಡೇಶನ್ ಶ್ರಮಿಸುತ್ತಿದ್ದು ಹಲವು ನಿರುದ್ಯೋಗಿಗಳಿಗೆ ಬದುಕಿನ ದಾರಿ ತೋರಿಸಿದೆ. ” - ರಮೇಶ್ ಸ್ವಾಮಿ, ಉನ್ನತಿ ಎಸ್ ಜಿಬಿಎಸ್ ಫೌಂಡೇಶನ್
ವಿವಿಧ ಹಂತಗಳಲ್ಲಿ ‘ಉನ್ನತಿ’ಯ ತರಬೇತಿ
ಮೊದಲ ಹಂತದ ತರಬೇತಿ ಕಾರ್ಯಕ್ರಮ ಮುಗಿದ ಬಳಿಕ ಅಭ್ಯರ್ಥಿಗಳಿಗೆ ಬೇರೆ ಬೇರೆ ಹಂತದಗಳಲ್ಲಿ ಟ್ರೈನಿಂಗ್ ನೀಡಲಾಗುತ್ತೆ. ಇದ್ರಲ್ಲಿ ವೈಯುಕ್ತಿಕ ಹಂತ ಮೊದಲನೆಯದು. ಇಲ್ಲಿ ಅಭ್ಯರ್ಥಿಗಳ ವರ್ತನೆಗಳ ರೂಪಾಂತರ ಮಾಡಿ ಆತ್ಮವಿಶ್ವಾಸವನ್ನ ತುಂಬಲಾಗುತ್ತೆ. ಉತ್ತಮ ಭವಿಷ್ಯದ ಕನಸು - ಗುರಿ, ಧನಾತ್ಮಕ ಚಿಂತನೆಗಳು, ಹೊರಜಗತ್ತಿನಲ್ಲಿರುವ ಅವಕಾಶಗಳ ಬಗ್ಗೆ ಅರಿವು ಮೂಡಿಸಲಾಗುತ್ತೆ. ಜೊತೆಗೆ ಆರ್ಥಿಕ ಸಂವೇದನೆ ಹಾಗೂ ಪ್ಲಾನಿಂಗ್, ಸಬಲೀಕರಣ ಹಾಗೂ ನಾಯಕತ್ವ ಗುಣಗಳ ಬಗ್ಗೆಯೂ ತಿಳಿಸಲಾಗುತ್ತದೆ. ಎರಡನೇ ಹಂತದಲ್ಲಿ ಸ್ವಯಂ ಆರ್ಥಿಕ ಸಬಲೀಕರಣ, ಉತ್ತಮ ಖರೀದಿಯ ಬಗ್ಗೆ ಜಾಗೃತಿ, ಸ್ಟಾಂಡರ್ಡ್ ಆಫ್ ಲಿವಿಂಗ್, ಆಹಾರ - ಶಿಕ್ಷಣ – ಹೆಲ್ತ್ ಕೇರ್ ಬಗ್ಗೆ ಮಾಹಿತಿ ಹಾಗೂ ಎಕಾನಮಿ ಸೆಕ್ಟರ್ ಬಗ್ಗೆ ವಿವರಿಸಲಾಗುತ್ತದೆ.
ಮೂರನೇ ಹಂತದಲ್ಲಿ ಸಾಮಾಜಿಕ ತರಬೇತಿಗಳನ್ನ ನೀಡಲಾಗುತ್ತದೆ. ಅಭ್ಯರ್ಥಿಗಳು ಸಾಮಾಜಿಕವ ಭಾಗವಾಗಿರುವುದು ಹೇಗೆ, ಆದಾಯದ ಮೂಲ ಹುಡುಕುವುದು ಹೇಗೆ, ಇನ್ನೊಬ್ಬರಿಗೆ ರೋಲ್ ಮಾಡೆಲ್ ಆಗಿರುವುದು ಹೇಗೆ ಅನ್ನುವುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ತರಬೇತಿಯ ನಾಲ್ಕನೇ ಭಾಗವಾಗಿ ಕೆಲಸ ಮಾಡುವ ವಾತಾವರಣಕ್ಕೆ ಹೊಂದಿಕೊಳ್ಳುವುದು ಹೇಗೆ ಅನ್ನೋದನ್ನ ಕಲಿಸಲಾಗುತ್ತದೆ. ಅದ್ರಲ್ಲೂ ಕೆಲಸಕ್ಕೆ ಬೇಕಾದ ಕೌಶಲ್ಯವೃದ್ಧಿ, ಉತ್ತಮ ಪರ್ಫಾಮ್, ಸಂಸ್ಥೆಯಲ್ಲಿ ಗುರುತಿಸಿಕೊಳ್ಳುವಿಕೆ ಹಾಗೂ ಮಾಡುವ ಕೆಲಸವನ್ನ ಎಂಜಾಯ್ ಮಾಡುತ್ತಾ ಇನ್ನಷ್ಟು ಪರಿಪಕ್ವರಾಗುವ ಬಗೆಯನ್ನ ವಿವರಿಸಲಾಗುತ್ತದೆ. ಕೊನೆಯ ಹಂತವಾಗಿ ಮ್ಯಾನ್ ಪವರನ್ನ ಹುಟ್ಟುಹಾಕುವುದು, ಶ್ರಮಕ್ಕೆ ತಕ್ಕಂತೆ ರಿಸಲ್ಟ್ ಪಡೆಯುವಿಕೆ ಹಾಗೂ ಮಲ್ಟಿಪಲ್ ಟ್ಯಾಲೆಂಟ್ ಗಳನ್ನ ರೂಢಿಸಿಕೊಳ್ಳುವ ಬಗೆಯನ್ನು ಅಭ್ಯರ್ಥಿಗಳಿಗೆ ಕಲಿಸಲಾಗುತ್ತದೆ.
“ಉನ್ನತಿ ಎಸ್ ಜಿಬಿಎಸ್ ಫೌಂಡೇಶನ್ ನನ್ನ ಬದುಕನ್ನ ಬದಲಾಯಿಸಿದೆ. ಗೊಂದಲದಲ್ಲಿದ್ದ ನನಗೆ ಉನ್ನತಿಯಲ್ಲಿ ಸಿಕ್ಕ ತರಬೇತಿ ಬಹಳಷ್ಟು ಉಪಯುಕ್ತವಾಗಿದೆ. ಆತ್ಮವಿಶ್ವಾಸವೇ ಇಲ್ಲದಂತಾಗಿದ್ದ ನನಗೆ ಬಲ ತುಂಬಿ ಒಳಗಿದ್ದ ಕೌಶಲ್ಯವನ್ನು ಹೆಚ್ಚಿಸಿ ಬದುಕುವ ಕಲೆಯನ್ನು ಹೇಳಿಕೊಟ್ಟಿದೆ. ಹೀಗಾಗಿ ಉನ್ನತಿ ಸಂಸ್ಥೆಗೆ ನಾನು ಅಭಾರಿಯಾಗಿದ್ದೇನೆ” ಮೋಹನ್ ಕುಮಾರ್, ಉನ್ನತಿಯಲ್ಲಿ ತರಬೇತಿ ಪಡೆದ ಅಭ್ಯರ್ಥಿ.
ಸಾಮಾಜಿಕ ಕಳಕಳಿಯೊಂದಿಗೆ 1978ರಲ್ಲೇ ಎಸ್ ಜಿಬಿಎಸ್ ಸ್ಥಾಪನೆಯಾಗಿದ್ರೂ, 1993ರಲ್ಲಿ ಉನ್ನತಿ ಎಸ್ ಜಿಬಿಎಸ್ ಫೌಂಡೇಶನ್ ಅಧಿಕೃತವಾಗಿ ಅಸ್ಥಿತ್ವಕ್ಕೆ ಬಂತು. ಕೇವಲ ಶೇಕಡಾ 5ರಷ್ಟು ಮಾತ್ರ ರಿಜಿಸ್ಟ್ರೇಷನ್ ಫೀಸನ್ನ ಪಡೆಯುವ ಈ ಸಂಸ್ಥೆ ಉಳಿದ ಎಲ್ಲಾ ತರಬೇತಿಗಳನ್ನ ಉಚಿತವಾಗಿ ನೀಡುತ್ತಿದೆ. ಭಾರತದಲ್ಲಿ ಈಗಾಗಲೇ 13 ಕೇಂದ್ರಗಳನ್ನ ಹೊಂದಿರುವ ಉನ್ನತಿಯ 5 ಬ್ರಾಂಚ್ ಗಳನ್ನ ಎನ್ ಜಿಓಗಳು ನಿರ್ವಹಿಸುತ್ತಿವೆ. ಎಸ್ ಯುಎಫ್ ಈಗಾಗಲೇ ಇನ್ನಷ್ಟು ಕೇಂದ್ರಗಳನ್ನ ತೆರೆಯುವಂತೆ ಉನ್ನತಿಗೆ ಪ್ರಪೋಸಲ್ ಸಲ್ಲಿಸಿದೆ. ಪ್ರತೀ ವರ್ಷ 300ರಷ್ಟು ಅಭ್ಯರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದು, ವರ್ಷಕ್ಕೆ 18 ಲಕ್ಷ ರೂಪಾಯಿ ತರಬೇತಿಗಾಗಿ ವ್ಯಯಿಸಲಾಗುತ್ತಿದೆ. ಇವುಗಳನ್ನ ವಿವಿಧ ಸಂಘ ಸಂಸ್ಥೆಗಳು, ಎನ್ ಜಿಓಗಳು ನಿರ್ವಹಿಸುತ್ತಿದ್ದು, ಸರ್ಕಾರದಿಂದ ತೆರಿಗೆ ವಿನಾಯಿತಿಯೂ ಸಿಕ್ಕಿದೆ. ಹೀಗೆ ಹಿಂದುಳಿದ ಯುವಕರಲ್ಲಿ ಸ್ಫೂರ್ತಿ ತುಂಬಿ ಅವರ ಬದುಕಿಗೆ ಉತ್ಸಾಹ ತುಂಬುತ್ತಿರುವ ಉನ್ನತಿ ಎಸ್ ಜಿಬಿಎಸ್ ಫೌಂಡೇಶನ್ ಗೆ ಯುವರ್ ಸ್ಟೋರಿಯ ಹ್ಯಾಟ್ಸಫ್.