ಮೊದಲ ಪ್ರಯತ್ನದಲ್ಲೆ ಯುಪಿಎಸ್‌ಸಿಯಲ್ಲಿ ತೇರ್ಗಡೆ ಹೊಂದಿದ ರೈತನ ಮಗ

By Team YS Kannada|11th Feb 2021
ಮಹಾರಾಷ್ಟ್ರದ ಸೊಲ್ಲಾಪುರದ ರೈತನ ಮಗನಾದ ಶರನ್‌ ಗೋಪಿನಾಥ ಕಾಂಬಳೆ ಮೊದಲ ಪ್ರಯತ್ನದಲ್ಲೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಹಲವು ಆರ್ಥಿಕ ಸಮಸ್ಯೆಗಳ ನಡುವೆಯು 8ನೇ ಸ್ಥಾನ ಪಡೆದಿದ್ದಾರೆ.
Clap Icon0 claps
 • +0
  Clap Icon
Share on
close
Clap Icon0 claps
 • +0
  Clap Icon
Share on
close
Share on
close

2020 ಎಷ್ಟೇ ಕಷ್ಟಕೊಟ್ಟರು ಹಲವು ಕಥೆಗಳು ನಮಗೆ ಬದುಕಿನತ್ತ ತಿರುವುವಂತೆ ಮಾಡಲು ಪ್ರೇರೆಪಿಸಿವೆ. ಅಂತಹದ್ದೆ ಒಂದು ಕಥೆ ಶರನ್‌ ಗೋಪಿನಾಥ್‌ ಕಾಂಬಳೆ ಅವರದ್ದು. ಮಹಾರಾಷ್ಟ್ರದ ರೈತರೊಬ್ಬರ ಮಗನಾದ ಇವರು ಮೊದಲ ಪ್ರಯತ್ನದಲ್ಲೆ ಯುಪಿಎಸ್‌ಸಿನಲ್ಲಿ ಉತ್ತೀರ್ಣಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.


ಮಹಾರಾಷ್ಟ್ರದ ಸೊಲ್ಲಾಪುರದ ಬಕ್ಷಿ ತಾಲ್ಲೂಕಿನವರಾದ ಶರನ್‌ ಪರೀಕ್ಷೆಯಲ್ಲಿ ಎಂಟನೇ ಸ್ಥಾನ ಗಳಿಸಿದ್ದಾರೆ. ಈ ಸಾಧನೆಯನ್ನು ಹಳ್ಳಿಗರು ಹೆಮ್ಮೆಯಿಂದ ಸಂಭ್ರಮಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಅವರ ಈ ಸಾಧನೆಯ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ ಎನ್ನುತ್ತಾರೆ ಶರನ್‌. ತುಂಬಾ ಕಷ್ಟಪಟ್ಟು ಅವರ ಕುಟುಂಬ ಜೀವನ ನಡೆಸುತ್ತದೆ. ತಂದೆ ಗೋಪಿನಾಥ್‌ ಕಾಂಬಳೆ ಕೃಷಿ ಭೂಮಿಯಲ್ಲಿ ದುಡಿದು ನಾಲ್ಕು ಕಾಸು ಸಂಪಾದಿಸಿದರೆ, ತಾಯಿ ಸುಧಾಮತಿ ತರಕಾರಿ ಮಾರಿ ಜೀವನ ನಡೆಸುತ್ತಾರೆ ಎಂದು ದಿ ಲಾಜಿಕಲ್‌ ಇಂಡಿಯನ್‌ ವರದಿ ಮಾಡಿದೆ.


ಹಲವು ಆರ್ಥಿಕ ತೊಂದರೆಗಳ ಮಧ್ಯೆಯೂ ಶರನ್‌ ಅವರ ಕುಟುಂಬ ಅವರನ್ನು ಕಷ್ಟಪಟ್ಟು ಓದುವಂತೆ ಮಾಡಿದೆ.


“ನನ್ನ ಮಗ ಏನು ಸಾಧಿಸಿದ್ದಾನೆಂದು ನನಗೆ ತಿಳಿಯದು, ಆದರೆ ಅವನು ಮಾಡಿದ್ದು ಅವನನ್ನು ಮಾಸ್ಟರ್‌ ನನ್ನಾಗಿ ಮಾಡಿದೆ,” ಎಂದು ಗೋಪಿನಾಥ್‌ ಕಾಂಬಳೆ ಇಂಡಿಯಾ ಟುಡೇಗೆ ಹೇಳಿದರು.


ಶರನ್‌ ಅವರ ಕಿರಿಯ ಸಹೋದರ ಇತ್ತೀಚೆಗೆ ಬಿಟೆಕ್‌ ಮುಗಿಸಿ, ನೌಕರಿ ಹಿಡಿದು ಮನೆಗೆ ಸಹಾಯ ಮಾಡುತ್ತಿದ್ದಾನೆ. ಈ ಕಾರಣದಿಂದ ಶರನ್‌ ಅವರ ಓದು ಯಾವುದೇ ತೊಂದರೆಯಿಲ್ಲದೆ ಮುಂದೆ ಸಾಗಿತ್ತು.


ವರದಿಗಳ ಪ್ರಕಾರ 2018 ರಲ್ಲಿ ಶರನ್‌ ಬೆಂಗಳೂರಿನಲ್ಲಿರುವ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಪ್‌ ಸೈನ್ಸ್‌ನಲ್ಲಿ ಎಮ್‌ಟೆಕ್‌ ಮುಗಿಸಿದ್ದಾರೆ. ವರ್ಷಕ್ಕೆ 20 ಲಕ್ಷ ರೂ. ಸಂಬಳವಿರುವ ಕೆಲಸವನ್ನು ಖಾಸಗಿಯವರು ಕೊಡಲು ತಯಾರಿದ್ದರು ಅದನ್ನು ನಿರಾಕರಿಸಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಿದರು.

Clap Icon0 Shares
 • +0
  Clap Icon
Share on
close
Clap Icon0 Shares
 • +0
  Clap Icon
Share on
close
Share on
close