ಗುರುತು ಸಿಗದ ಶವವನ್ನು 2 ಕಿ.ಮೀ. ಸಾಗಿಸಿ ಅಂತಿಮ ಸಂಸ್ಕಾರ ನೆರವೆರಿಸಲು ಸಹಾಯ ಮಾಡಿದ ಮಹಿಳಾ ಎಸ್‌ಐ
ಗುರುತುಸಿಗದ ಶವದ ಬಗ್ಗೆ ತಿಳಿದ ಎಸ್‌ಐ ಸಿರಿಷಾ ಅದರ ಅಂತ್ಯ ಸಂಸ್ಕಾರಕ್ಕೆ ನೆರವಾಗಿ ಮಾನವೀಯತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆಂಧ್ರಪ್ರದೇಶದ ಸಬ್ ಇನ್ಸ್ಪೆಕ್ಟರ್ ಕಾಸಿಬುಗ್ಗಾ ಸಿರಿಷಾ ತಮ್ಮ ವಿಶಿಷ್ಟ ಕೆಲಸದಿಂದ ಜನರ ಮನ ಗೆಲ್ಲುತ್ತಿದ್ದಾರೆ. ಸೋಮವಾರ ಸ್ರಿಕಕುಲಂ ಜಿಲ್ಲೆಯ ಸಿರಿಷಾ ಅವರಿಗೆ ಪಾಲಸಾ ಮಹಾನಗರ ಪಾಲಿಕೆಯ ಅಡವಿ ಕೊಟ್ಟುರೂ ಹಳ್ಳಿಯಲ್ಲಿ ಗುರುತು ಸಿಗದ ವೃದ್ಧರ ಶವವೊಂದು ಬಿದ್ದಿದೆ ಎಂಬ ಸುದ್ದಿ ತಿಳಿಯಿತು. ಸ್ಥಳಕ್ಕೆ ತಲುಪಿದ ಅವರಿಗೆ ಆ ವೃದ್ಧ ಬೀಕ್ಷುಕನೆಂದು, ಅವರು ಎಲ್ಲಿಂದ ಬಂದಿದ್ದಾರೆ, ಏನೂ, ಯಾರೂ ಎಂಬುದು ಯಾರಿಗೂ ಗೊತ್ತಿಲ್ಲವೆಂದು ತಿಳಿಯಿತು.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಸಿರಿಷಾ ಆ ಶವವನ್ನು ಹೊತ್ತು ಸಾಗಿ ಅಂತಿಮ ಸಂಸ್ಕಾರಕ್ಕಾಗಿ ಲಲಿತಾ ಚಾರಿಟೇಬಲ್ ಟ್ರಸ್ಟ್‌ಗೆ ಒಪ್ಪಿಸಿದ್ದಾರೆ. ಶವವನ್ನು ಹೊತ್ತೊಯ್ಯಲು ತಾವು ನೇಮಿಸಿದ್ದವರು ಶವ ಮುಟ್ಟಲು ನಿರಾಕರಿಸಿದ ಕಾರಣ ಅವರು ಟ್ರಸ್ಟ್‌ನ ಸಹಾಯ ಪಡೆದರು.
ಸ್ಥಳೀಯರು ಶವದ ಅಂತಿಮ ಸಂಸ್ಕಾರ ಮಾಡಲು ಅಥವಾ ಅದನ್ನು ಹೊತ್ತೊಯ್ಯಲು ನಿರಾಕರಿಸಿದರು. ಆಗ ಸಿರಿಷಾ ತಾವೇ ಟ್ರಸ್ಟ್‌ನ ಒಬ್ಬರು ಸ್ವಯಂಸೇವಕರ ಸಹಾಯದೊಂದಿಗೆ ಶವವನ್ನು ಭತ್ತದ ಗದ್ದೆಯಿಂದ ಎರಡು ಕಿ.ಮೀ, ದೂರ ಎತ್ತಕೊಂಡು ಹೋಗಲು ಮುಂದಾದರು. ಆ ಪ್ರದೇಶದಲ್ಲಿ ಯಾವುದೇ ವಾಹನಗಳು ಬರದಂತಹ ಸ್ಥಿತಿಯಲ್ಲಿ ರಸ್ತೆಯಿದೆ.
ಸ್ಥಳೀಯ ಸುದ್ದಿ ಸಂಸ್ಥೆ ನ್ಯೂಸ್ ಮೀಟರ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದ್ದು, ಪೊಲೀಸ್ ಅಧಿಕಾರಿಯ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಫಾರ್ಮಸಿ ಓದಿಕೊಂಡಿರುವ ಎಸ್‌ಐ ಇದೆ ಮೊದಲ ಬಾರಿಗೆ ಇಂತಹ ಕೆಲಸ ಮಾಡಿದವರಲ್ಲ. ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಕಾರ್ಯಕ್ಕಾಗಿ ಸಿರಿಷಾ ತಮ್ಮ ಸರ್ಕಾರಿ ವೇತನದಿಂದ ದೇಣಿಗೆ ನೀಡುತ್ತಿದ್ದಾರೆ.
ಘಟನೆಯ ಬಗ್ಗೆ ತಿಳಿದು ಪೊಲೀಸ್ ವರಿಷ್ಠಾಧಿಕಾರಿ ಅಮಿತ ಬರ್ಧಾರ ಮತ್ತು ಪೊಲೀಸ್ ಮಹಾನಿರ್ದೇಶಕರಾದ ಗೌತಮ್ ಸಾವನ್ ಸಿರಿಷಾ ಅವರ ಮಾನವೀಯತೆಯನ್ನು ಶ್ಲಾಘಿಸಿದ್ದಾರೆ.