ಅಮೆರಿಕದಲ್ಲಿ ಮಾತ್ರ ಹಣ ವರ್ಗಾವಣೆಗೆ ಶುಲ್ಕ, ಭಾರತಕ್ಕಲ್ಲ: ಗೂಗಲ್ ಪೇ ಸ್ಪಷ್ಟಣೆ
ಭಾರತೀಯ ಬಳಕೆದಾರರು ಗೂಗಲ್ ಪೇನಲ್ಲಿ ಹಣ ವರ್ಗಾವಣೆ ಮಾಡಲು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಾಗಿಲ್ಲ, ಮತ್ತು ಅಮೆರಿಕದ ಬಳಕೆದಾರರಿಗೆ ಮಾತ್ರ ಶುಲ್ಕ ಅನ್ವಯವಾಗಲಿದೆ ಎಂದು ಗೂಗಲ್ ಸ್ಪಷ್ಟಣೆ ನೀಡಿದೆ.
ಭಾರತೀಯ ಬಳಕೆದಾರರು ಗೂಗಲ್ ಪೇನಲ್ಲಿ ಹಣ ವರ್ಗಾವಣೆ ಮಾಡಲು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಾಗಿಲ್ಲ, ಅಮೆರಿಕದ ಬಳಕೆದಾರರಿಗೆ ಮಾತ್ರ ಶುಲ್ಕ ಅನ್ವಯವಾಗುತ್ತದೆ ಎಂದು ಗೂಗಲ್ ಬುಧವಾರ ಸ್ಪಷ್ಟಣೆ ನೀಡಿದೆ.
ಕಳೆದ ವಾರ ಗೂಗಲ್ ಮುಂದಿನ ವರ್ಷ ಹೊಸ ವಿನ್ಯಾಸದೊಂದಿಗೆ ಅಂಡ್ರಾಯ್ಡ್ ಮತ್ತು ಐಒಎಸ್‌ಗೆ ಗೂಗಲ್ ಪೇ ಬರಲಿದೆ ಮತ್ತು ವೆಬ್ ಬ್ರೌಸರ್‌ನಲ್ಲಿ ಬಳಕೆದಾರರು ಸೇವೆಗಳನ್ನು ಪಡೆಯಲಾಗುವುದಿಲ್ಲ ಎಂದು ಘೋಷಿಸಿತ್ತು. ಇದು ಅಮೆರಿಕದಲ್ಲಿ ಮೊದಲು ಪ್ರಾರಂಭವಾಗಲಿದೆ.
ವರದಿಗಳು ಗೂಗಲ್ ಪೇ ತ್ವರಿತ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಿದೆ ಎಂದು ಹೇಳಿದ್ದವು.
“ಈ ಶುಲ್ಕವು ಅಮೆರಿಕಕ್ಕೆ ಮಾತ್ರ ಸೀಮಿತವಾಗಿದ್ದು, ಭಾರತೀಯ ಗೂಗಲ್ ಪೇ ಅಥವಾ ಗೂಗಲ್ ಪೇ ಫಾರ್ ಬ್ಯುಸಿನೆಸ್ ಆ್ಯಪ್ಗಳಿಗೆ ಅನ್ವಯವಾಗುವುದಿಲ್ಲ,” ಎಂದು ಗೂಗಲ್ ಪೇ ವಕ್ತಾರರು ತಿಳಿಸಿದ್ದಾರೆ.
ಸೆಪ್ಟೆಂಬರ್ 2019ರ ವರೆಗಿನ ದತ್ತಾಂಶದ ಪ್ರಕಾರ ಭಾರತದಲ್ಲಿ 67 ಮಿಲಿಯನ್ ಗೂಗಲ್ ಪೇ ಬಳಕೆದಾರರಿದ್ದು, ಅದರ ಒಟ್ಟು ವಾರ್ಷಿಕ ಪಾವತಿಯ ಮೌಲ್ಯ $110 ಬಿಲಿಯನ್ ಆಗಿದೆ.
ಗೂಗಲ್ ಪೇ ಫಾರ್ ಬಿಸಿನೆಸ್ ಜೂನ್ 2020 ರಲ್ಲಿ ಮೂರು ಮಿಲಿಯನ್ ವ್ಯಾಪಾರಿಗಳನ್ನು ಹೊಂದಿದೆ ಎಂದು ಘೋಷಿಸಿತ್ತು. ಇದು ಭಾರತದಲ್ಲಿ ಪಾವತಿಯ ವಿಧಗಳಾಗಿ ಯುಪಿಐ ಮತ್ತು ಟೋಕನೈಸ್ಡ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬೆಂಬಲಿಸುತ್ತದೆ.
ಗೂಗಲ್ ಪೇ ಭಾರತದಲ್ಲಿ ಪೇಟಿಎಮ್ ಮತ್ತು ವಾಲ್ಮಾರ್ಟ್ ಒಡೆತನದ ಫೋನ್‌ಪೇ ಮತ್ತು ಅಮೆಜಾನ್ ಪೇ ಅಂತಹ ಆ್ಯಪ್ಗಳೊಂದಿಗೆ ಸ್ಪರ್ಧಿಸುತ್ತದೆ.
ಕಳೆದ ಅಕ್ಟೋಬರ್‌ನಲ್ಲಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಚಂದಾದಾರಿಕೆ ಹೊಂದಿರುವ ಆ್ಯಪ್ಗಳ ಮೇಲೆ 30 ಪ್ರತಿಶತ ಕಮಿಷನ್ ವಿಧಿಸುವ ವಿವಾದಾತ್ಮಕ ನಿರ್ಧಾರವನ್ನು ಭಾರತದಲ್ಲಿ ಏಪ್ರಿಲ್ 2022 ರವರೆಗೆ ಮುಂದೂಡಿತ್ತು.