ಮುಂದಿನ ಹಣಕಾಸು ವರ್ಷದಲ್ಲಿ ಪಿಎಂಕೆವಿವೈ ಯೋಜನೆಯ 3ನೇ ಹಂತವನ್ನು ಆರಂಭಿಸಲು ಯೋಚಿಸಿದ ಸರ್ಕಾರ
ಪ್ರಧಾನ್ ಮಂತ್ರಿ ಕೌಶಲ ವಿಕಾಸ ಯೋಜನೆ ಕೌಶಲ್ಯಗಳ ಮಾನ್ಯತೆ ಮತ್ತು ಪ್ರಮಾಣೀಕರಣಕ್ಕಾಗಿ ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಉಪಕ್ರಮ ಯೋಜನೆಯಾಗಿದೆ.
ಬರುವ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ(ಪಿಎಂಕೆವಿವೈ)ಯ ಮೂರನೇ ಹಂತವನ್ನು ಪ್ರಾರಂಭಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಮಹೇಂದ್ರನಾಥ್ ಪಾಂಡೆ ಹೇಳಿದ್ದಾರೆ.
ಸರ್ಕಾರವು 2015ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು. 2020ರ ವೇಳೆಗೆ ಒಂದು ಕೋಟಿ ಜನರು ಕೌಶಲ್ಯಗಳನ್ನು ರೂಢಿಸಿಕೊಳ್ಳಲು 2016ರಲ್ಲಿ ಮತ್ತೆ ಅದನ್ನು ನವೀಕರಿಸಲಾಯಿತು.
ಪಿಎಂಕೆವಿವೈ 2.0 ಎಂದು ಕರೆಯಲ್ಪಡುವ ಪರಿಷ್ಕರಿಸಿದ ಯೋಜನೆಯು ಅನುದಾನ ಆಧಾರಿತ ಮಾದರಿಯಾಗಿ ಮಾರ್ಪಾಡು ಹೊಂದಿತು. ಇಲ್ಲಿ ತರಬೇತಿ ಮತ್ತು ಮೌಲ್ಯಮಾಪನ ವೆಚ್ಚವನ್ನು ಸಾಮಾನ್ಯ ಮಾನದಂಡಗಳಿಗೆ ಅನುಗುಣವಾಗಿ ತರಬೇತಿ ನೀಡುವವರಿಗೆ ಮತ್ತು ಮೌಲ್ಯಮಾಪನ ಸಂಸ್ಥೆಗಳಿಗೆ ನೇರವಾಗಿ ಪಾವತಿ ಮಾಡಲಾಗುತ್ತದೆ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ನವೆಂಬರ್ 11ರವರೆಗೆ ಪಿಎಂಕೆವಿವೈ ಯೋಜನೆಯ ಅಡಿಯಲ್ಲಿ ದೇಶಾದ್ಯಂತ 69 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ.
ಇನ್ನೂ 30%ರಷ್ಟು ಗುರಿಯನ್ನು ಈಡೇರಿಸಲಾಗದ ಕಾರಣ ಯೋಜನೆಯು ಇನ್ನೂ ವಿಸ್ತೃತವಾಗುತ್ತದೆಯೆ ಎಂದು ಕೇಳಿದಾಗ,
"ನಾವು ನಡೆಯುತ್ತಿರುವ ಈ ಯೋಜನೆಯಲ್ಲಿ 90% ಗುರಿಯನ್ನು ತಲುಪುತ್ತೇವೆ. ಯುವಜನತೆಗೆ ಕೌಶಲ್ಯಪರಿಪೂರ್ಣತೆ ಮತ್ತು ತರಬೇತಿ ನೀಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಇದೀಗ ನಾವು ಪಿಎಂಕೆವಿವೈ-III ನೊಂದಿಗೆ ಬರಲಿದ್ದೇವೆ" ಎಂದು ಪಿಟಿಐಗೆ ತಿಳಿಸಿದ್ದಾರೆ.
ಪಿಎಂಕೆವಿವೈ-3 ದೊಡ್ಡ ಮತ್ತು ವಿಸ್ತೃತ ಅಂಶಗಳನ್ನು ಒಳಗೊಂಡಿದ್ದು, ಅದಕ್ಕಾಗಿ ಅದನ್ನು ಮಾರ್ಚ್ 2020ರ ಪ್ರಾರಂಭಿಸಲಾಗುವುದು ಎಂದು ಪಾಂಡೆ ಹೇಳಿದರು.
ಅದು ಅಧಿಕೃತವಾಗಿ ಘೋಷಣೆಯಾದಾಗ ಅದನ್ನು ಹಂಚಿಕೊಳ್ಳಲಾಗುವುದು ಎಂದು ಹೊಸ ಹಂತದ ಅಂಕಿ-ಅಂಶಗಳನ್ನು ಪಾಂಡೆ ಹಂಚಿಕೊಂಡಿಲ್ಲ.
ಅಪ್ರೆಂಟಿಸ್‌ಶಿಪ್ ಗೆ ಹೆಚ್ಚು ಒತ್ತು ನೀಡಬೇಕೆಂದು ಸಚಿವರು ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯದವರನ್ನು ಕೋರಿದ್ದಾರೆ.
"ನನ್ನ ಸಚಿವಾಲಯದ ಮೂಲಕ ಸಹಾಯ ಹಾಗೂ ಭರವಸೆಯನ್ನು ನೀಡುತ್ತೇನೆ. ಕಂಪನಿಗಳು ಮುಂದೆ ನಿಂತು ಶಿಷ್ಯವೃತ್ತಿಯನ್ನು ನೀಡಿ ಸಂಘಟಿಸಿ ಹಾಗೂ ಉತ್ತೇಜಿಸಬೇಕು" ಎಂದು ಪಾಂಡೆ ಹೇಳುತ್ತಾರೆ.
ಈ ತಿಂಗಳ ಅಂತ್ಯದ ಮೊದಲು ವಿವಿಧ ವಲಯಗಳಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ(ಸಿಪಿಎಸ್ಇ) ವ್ಯವಸ್ಥಾಪಕ ನಿರ್ದೇಶಕರನ್ನು ಅಪ್ರೆಂಟಿಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆಯ ರಾಜ್ಯ ಸಚಿವ ಆರ್.ಕೆ.ಸಿಂಗ್ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ ಎಂದು ಪಾಂಡೆ ಹೇಳಿದರು.
ಇತ್ತೀಚೆಗೆ, ಭಾರತದಲ್ಲಿ ಕೇವಲ 4 ಲಕ್ಷ ಅಪ್ರೆಂಟಿಸ್‌ಗಳು ಇದ್ದು, ಅದರಲ್ಲಿ 2 ಲಕ್ಷದಷ್ಟು ಜನ ಸಾರ್ವಜನಿಕ ವಲಯದ ಉದ್ಯಮಗಳಲ್ಲಿದ್ದಾರೆ.
ಚೀನಾ (2 ಕೋಟಿ) ಮತ್ತು ಜಪಾನ್ (1 ಕೋಟಿ) ನಂತಹ ದೇಶಗಳಿಗೆ ಹೋಲಿಸಿದರೆ ಈ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ.
ಸಿಪಿಎಸ್ಇಗಳಿಗೆ ಅಪ್ರೆಂಟಿಸ್ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲು ತಿಳಿಸಲಾಗಿದೆ.