ಸಾಂಪ್ರದಾಯಿಕ ಕಾರ್‌ಗಳನ್ನು ವಿದ್ಯುತ್‌ಚಾಲಿತ ಕಾರ್‌ಗಳನ್ನಾಗಿ ಪರಿವರ್ತಿಸುತ್ತಿದೆ ಹೈದರಬಾದಿನ ಭಾರತ್‌ಮೊಬಿ
ಇದು ನಿಮ್ಮ ಪೆಟ್ರೋಲ್ ಅಥವಾ ಡಿಸೆಲ್ ಕಾರನ್ನು, ವಿದ್ಯುತ್‌ಚಾಲಿತವಾಗಿ ಮಾಡುತ್ತದೆ. ಭಾರತ ಸರಕಾರವೂ ವಿದ್ಯುತ್ ಚಾಲಿತ ವಾಹನಗಳಿಗೆ ಬೆಂಬಲ ನೀಡುತ್ತಿರುವುದರಿಂದ, ಈ ಉದ್ಯಮವು ಈಗ ಉತ್ಪಾದನಾ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅಗಣಿತ ಪ್ರಮಾಣದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವು ಪ್ರತಿ ಜೀವಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಾಯುಮಾಲಿನ್ಯವಾಗುವುದಕ್ಕೆ ಮುಖ್ಯ ಕಾರಣ ವಾಹನಗಳ ಹೊರಸೂಸುವಿಕೆ. ವಾಹನದಿಂದಾಗುವ ಮಾಲಿನ್ಯವನ್ನು ತಡೆಯಬೇಕೆಂದರೆ, ಅದಕ್ಕೆ ಪರ್ಯಾಯವಾದ ವಿದ್ಯುತ್‌ಚಾಲಿತ ವಾಹನಗಳನ್ನು ಬಳಸುವುದು ಮುಖ್ಯ. ಆದರೆ ಸಾಮಾನ್ಯ ಕಾರ್‌ಗಳಿಗಿಂತ, ವಿದ್ಯುತ್‌ಚಾಲಿತ ಕಾರ್‌ಗಳು ದುಬಾರಿಯಾದ್ದರಿಂದ ಅದನ್ನು ಕೊಳ್ಳಲು ಜನರು ಮುಂದೆ ಬರುತ್ತಿಲ್ಲ.
ಈ ಸಮಸ್ಯೆಯನ್ನು ಪರಿಹರಿಸಲು ಭಾರತ್‌ಮೊಬಿ ಎಂಬ ನವೋದ್ಯಮವೊಂದು ಆರಂಭವಾಗಿದೆ. ಅದು, ನಿಮ್ಮ ಪೆಟ್ರೋಲ್ ಅಥವಾ ಡಿಸೆಲ್ ಕಾರನ್ನು, ವಿದ್ಯುತ್ ಚಾಲಿತವಾಗಿ ಮಾಡುತ್ತದೆ. ಭಾರತ ಸರಕಾರವೂ ವಿದ್ಯುತ್ ಚಾಲಿತ ವಾಹನಗಳಿಗೆ ಬೆಂಬಲ ನೀಡುತ್ತಿರುವುದರಿಂದ, ಈ ಉದ್ಯಮವು ಈಗ ಉತ್ಪಾದನಾ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.
ದೆಹಲಿಯಲ್ಲಿನ ವಾಯುಮಾಲಿನ್ಯಕ್ಕೆ ಸುಸ್ಥಿರ ಪರಿಹಾರವನ್ನು ಒದಗಿಸುವ ಉಪಕ್ರಮ ಎಂದು ಹೇಳಿಕೊಂಡ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಔದ್ಯೋಗಿಕ ಸಂಸ್ಥೆಯು ಗುರುವಾರ ಇವಿ ಪರಿವರ್ತನೆಯ ತಂತ್ರಜ್ಞಾನವನ್ನು ಬಿಡುಗಡೆ ಮಾಡಿದೆ.
ಮಾಲಿನ್ಯ ಮುಕ್ತ ಭಾರತಕ್ಕೆ ಕೊಡುಗೆ ನೀಡುವ ಪ್ರತಿಯೊಬ್ಬ ವ್ಯಕ್ತಿಯ ಸಾಮರ್ಥ್ಯದಲ್ಲಿ ಇವಿ ರೆಟ್ರೊಫಿಟಿಂಗ್ ಅಥವಾ ಪರಿವರ್ತನೆಗಳು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಸ್ಟಾರ್ಟ್‌ಅಪ್ ಭಾರತ್‌ಮೊಬಿ ಹೇಳಿದೆ.
ಇದರ ಕುರಿತು ಮಾತನಾಡುತ್ತಾ ಸಹ-ಸಂಸ್ಥಾಪಕ ಅಕ್ಬರ್‌ಬೈಗ್,
"ಈಗ ನೀವು ಒಂದು ಹನಿ ಇಂಧನವಿಲ್ಲದೆ ನಿಮ್ಮ ಸ್ವಂತ ಕಾರನ್ನು ಓಡಿಸಬಹುದು. ರೆಟ್ರೊಫಿಟಿಂಗ್ ಕಿಟ್‌ನೊಂದಿಗೆ ನಿಮ್ಮ ಕಾರು ಮಾಲಿನ್ಯ ರಹಿತ, ಗೇರ್‌ಲೆಸ್, ಶಬ್ದವಿಲ್ಲದ ವಾಹನವಾಗುತ್ತದೆ. ಇದು ನಿಮ್ಮನ್ನು ಕಠಿಣ ಹೊರಸೂಸುವಿಕೆಯ ಮಾನದಂಡಗಳಿಂದ ತಪ್ಪಿಸುತ್ತದೆ. ಈ ತಂತ್ರಜ್ಞಾನವು ಶಕ್ತಿಯ ಸುರಕ್ಷತೆಯನ್ನು ಹೆಚ್ಚಿಸುತ್ತದೆ, ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಯುತ್ತದೆ. ಈ ಕಿಟ್ ವ್ಯಾಪಕ ಶ್ರೇಣಿಯ ಕಾರುಗಳೊಂದಿಗೆ ಸಂಪೂರ್ಣವಾಗಿ ಹೊಂದುತ್ತದೆ ಮತ್ತು ಸುಗಮ, ಪರಿಣಾಮಕಾರಿ ಮತ್ತು ಇಂಧನ ಮುಕ್ತ ಡ್ರೈವ್ ನೀಡುತ್ತದೆ," ಎಂದರು.
ಕಂಪನಿಯು ಇವಿ ಪರಿವರ್ತನೆಯ ಪ್ರಮಾಣಿತ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ ಮತ್ತು ಇದು ಅನೇಕ ವಾಹನಗಳನ್ನು ವಿದ್ಯುದ್ದೀಕರಿಸಬಲ್ಲದು ಎಂದು ಭಾರತ್‌ಮೊಬಿ ಸಹ ಸಂಸ್ಥಾಪಕ ಅಶರ್ ಅಹ್ಮದ್ ಶೇಖ್ ಹೇಳಿದರು.
ಪೆಟ್ರೋಲ್ ಅಥವಾ ಡೀಸೆಲ್‌ನಲ್ಲಿ ಚಲಿಸುವ ಕಾರುಗಳಂತೆ ಯಾವುದೇ ಹಾನಿಕಾರಕ ಹೊರಸೂಸುವಿಕೆಯನ್ನು ಮಾಡದೆ, ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ಮೂಲಕ ಸುಸ್ಥಿರವಾದ ಉತ್ಪಾದಕ ಮತ್ತು ಪರಿಸರ ಸ್ನೇಹಿ ವಾಹನಗಳನ್ನು ಅಭಿವೃದ್ಧಿಪಡಿಸುವುದು ಭಾರತ್‌ಮೊಬಿಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಕಂಪನಿಯ ಕಿಟ್‌ಗಳನ್ನು ARAI ಮತ್ತು ICAT ನಿಂದ ಪ್ರಮಾಣೀಕರಿಸಲಾಗಿದೆ ಮತ್ತು ಅನುಮೋದಿಸಲಾಗಿದೆ.
ಭಾರತ್‌ಮೊಬಿ ಈಗಾಗಲೇ ಸುಮಾರು 25 ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್‌ಗಳನ್ನು ಯಶಸ್ವಿಯಾಗಿ ಪರಿವರ್ತಿಸಿದೆ, ಮತ್ತು ಅವು ವಿಂಟೇಜ್ ಮಾದರಿಗಳಲ್ಲಿಯೂ ಕಾರ್ಯನಿರ್ವಹಿಸುತ್ತಿವೆ. ಅವರು ಪ್ರಸ್ತುತ ನಿರ್ವಹಿಸುತ್ತಿರುವ ಯೋಜನೆಗಳಲ್ಲಿ ಫೋರ್ಡ್ ಮುಸ್ತಾಂಗ್ 1969 ಮಾದರಿಯೂ ಒಂದಾಗಿದೆ ಎಂದು ಶೇಖ್ ಬಹಿರಂಗಪಡಿಸಿದರು.
ಅದರ ಕುರಿತು ಮಾತನಾಡುತ್ತ ಅವರು,
“ಸಾಂಪ್ರದಾಯಿಕ ಪೆಟ್ರೋಲ್ / ಡೀಸೆಲ್ ಕಾರುಗಳನ್ನು ಶೂನ್ಯ-ಹೊರಸೂಸುವ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ಮೂಲಕ ನಾವು ಪರಿಸರಕ್ಕೆ ಕೊಡುಗೆ ನೀಡಬಹುದು. ನಾವು ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್‌ಗಳನ್ನು ಪರಿವರ್ತಿಸಿದ್ದೇವೆ. ನಮ್ಮ ಕಿಟ್ ಘಟಕಗಳು ಪ್ರಮಾಣೀಕರಿಸಲ್ಪಟ್ಟಿವೆ ಮತ್ತು ಗ್ರಾಹಕರಿಗೆ ಸ್ವೀಕಾರಾರ್ಹ ಶ್ರೇಣಿಯನ್ನು ಒದಗಿಸಲು ನಾವು ಅದೇ ಕಿಟ್‌ನೊಂದಿಗೆ ಇತರ ಹಲವು ಮಾದರಿಗಳನ್ನು ಮರುಪರಿಶೀಲಿಸಬಹುದು. ನಮ್ಮ ಹಿತೈಷಿಗಳಿಂದ ನಮಗೆ ದೊರೆತ ಪ್ರತಿಕ್ರಿಯೆಯಿಂದ ನಾವು ತುಂಬಿಹೋಗಿದ್ದೇವೆ ಮತ್ತು ಸಂಚಾರ ದಟ್ಟಣೆ, ಗಾಳಿಯನ್ನು ಪರಿಹರಿಸಲು ಸರ್ಕಾರದ ಬೆಂಬಲದೊಂದಿಗೆ ಇವಿ ಅಳವಡಿಕೆಯನ್ನು ವೇಗವಾಗಿ ಮಾಡುವಲ್ಲಿ ನಮ್ಮ ಅನುಭವ ಮತ್ತು ನಾವು ರಚಿಸಬಹುದಾದ ಸಂಭಾವ್ಯ ಪರಿಣಾಮವನ್ನು ಹಂಚಿಕೊಳ್ಳಲು ಉತ್ಸುಕರಾಗಿದ್ದೇವೆ,” ಎಂದು ಅವರು ಹೇಳಿದರು.