ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದ ಬೆಂಗಳೂರಿನ ಇರಾ ಕುಂಬ್ಳೆ

ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಕಿಡ್ಸ್ ಫಿಲ್ಮ್ ಫೆಸ್ಟಿವಲ್ (ಐಕೆಎಫ್ಎಫ್)ನ ಜೂನಿಯರ್ ವಿಭಾಗದಲ್ಲಿ ಬೆಂಗಳೂರಿನ ಇರಾ ಕುಂಬ್ಳೆ ತನ್ನ ಟಾಂಟಿಯಾ ಭಿಲ್ ಎಂಬ ಕಿರುಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದ ಬೆಂಗಳೂರಿನ ಇರಾ ಕುಂಬ್ಳೆ

Tuesday November 19, 2019,

2 min Read

ಟಾಂಟಿಯಾ ಭಿಲ್ ಒಂದು ಶಿಕ್ಷಣ ಮತ್ತು ಮಕ್ಕಳ ಕಿರುಚಿತ್ರವಾಗಿದೆ. ಇದು ತನ್ನ ಸ್ನೇಹಿತರ ಬ್ಯಾಗ್‌ ಗಳಿಂದ ಪೆನ್ನುಗಳನ್ನು ಕದಿಯುವ ಹುಡುಗನ ಕಥೆ ಹೇಳುತ್ತದೆ. ಪೆನ್ನುಗಳನ್ನು ಕದಿಯುವ ಹುಡುಗನ ಸ್ನೇಹಿತರಿಗೆ ಈತನೇ ತಮ್ಮ ಪೆನ್ನುಗಳನ್ನು ಕದ್ದಿದ್ದು ಎಂಬುದು ತಿಳಿದು ಆತನ ಮೇಲೆ ಸ್ನೇಹಿತರು ಕೋಪಗೊಳ್ಳುತ್ತಾರೆ. ಒಂದು ದಿನ ಪೆನ್ನುಗಳನ್ನು ಕದ್ದ ಹುಡುಗನನ್ನು ಹಿಂಬಾಸುತ್ತಾರೆ. ಆಗ ಅವರಿಗೊಂದು ದೊಡ್ಡ ಆಶ್ಚರ್ಯವೇ ಕಾದಿರುತ್ತದೆ. 


ಅದೇನೆಂದರೆ ಪೆನ್ನು ಕದ್ದ ಹುಡುಗ ಒಂದು ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಹುಡುಗನಿಗೆ ತಾನು ಕದ್ದ ಪೆನ್ನುಗಳನ್ನು ಕೊಡುತ್ತಿರುವುದನ್ನು ನೋಡುತ್ತಾರೆ. ಅವರೂ ಸಹ ಈ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಹುಡುಗನು ತಮ್ಮಂತೆಯೇ ಶಿಕ್ಷಣ ಪಡೆಯಬೇಕೆಂದು ಬಯಸುತ್ತಾರೆ. ಸ್ನೇಹಿತರೆಲ್ಲರೂ ಸೇರಿ ತಮ್ಮ ಶಾಲೆಯ ಪ್ರಾಂಶುಪಾಲರಿಗೆ ನಡೆದ ಘಟನೆ ಬಗ್ಗೆ ತಿಳಿಸುತ್ತಾರೆ. ಮರುದಿನ ಆ ಪೆನ್ನು ಕದ್ದ ಹುಡುಗ ಶಾಲೆಗೆ ಬರುವ ಹೊತ್ತಿಗೆ ತರಗತಿಯಲ್ಲಿ ಹೊಸ ವಿದ್ಯಾರ್ಥಿ ಇರುತ್ತಾನೆ. ಅದೇ ಆ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಹುಡುಗ. ಹೀಗೆ ಈ ಚಿತ್ರ ಶಿಕ್ಷಣದ ಮಹತ್ವವನ್ನು ಹೇಳುತ್ತದೆ


ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂಬ ಆಶೆಯುಳ್ಳ ಈ ಕಿರುಚಿತ್ರ ಮಾಡಿರುವ ಇರಾ ನನ್ನ ಪ್ರಯತ್ನ ಫಲಿಸಿತು. ನಾವು ಪಟ್ಟ ಶ್ರಮ ವ್ಯರ್ಥವಾಗಲಿಲ್ಲ ಎಂದು ತಮ್ಮ ಸಂತೋಷ ಹಂಚಿಕೊಂಡರು.


ಇರಾ ಬೆಂಗಳೂರಿನ ಎಸ್ ಕದಂಬಿ ವಿದ್ಯಾ ಕೇಂದ್ರದಲ್ಲಿ ೬ ನೇ ತರಗತಿಯಲ್ಲಿ ಓದುತ್ತಿದ್ದು ನಮ್ಮ ಶಾಲೆಗೆ ಕಳೆದ ವರ್ಷ 2019 ನೇ ಕಿಡ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಬಹುದೇ? ಎಂಬ ಪತ್ರ ಐಕೆಎಫ್ಎಫ್ ನಿಂದ ಬಂದಿತ್ತು. ನನ್ನ ಪ್ರಬಂಧಗಳು ಹಾಗೂ ಕವಿತೆಗಳನ್ನು ನೋಡಿ ನನ್ನ ಬರವಣಿಗೆ ಕೌಶಲ್ಯವನ್ನು ಗಮನಿಸಿದ ಶಿಕ್ಷಕರು ಹಾಗೂ ಪ್ರಾಂಶುಪಾಲರು ನಾನು ಈ ಕಿರುಚಿತ್ರಕ್ಕೆ ಕಥೆ ಬರೆಯಬಹುದೇ ಎಂದು ಕೇಳಿದ್ದರು. ನಾನು ಒಪ್ಪಿಕೊಂಡಿದ್ದೆ. 


ಇರಾ ಕುಂಬ್ಳೆ (ಚಿತ್ರಕೃಪೆ: ಎಡೆಕ್ಸ್‌ ಲೈವ್)




ಮಕ್ಕಳ ಶಿಕ್ಷಣ ಹಕ್ಕಿ ಕಾಯ್ದೆಗೆ ಸಂಬಂಧಿಸಿದಂತಹ ಕಥೆಯನ್ನು ಮಾಡಬೇಕು ಅಂದುಕೊಂಡಿದ್ದೆ. ನನ್ನ ಅಪ್ಪನೊಂದಿಗೆ ಸುತ್ತಾಡಲು ಹೋದಾಗ ಒಂದು ಕಟ್ಟಡ ನಿರ್ಮಾಣ ಸ್ಥಳದಲ್ಲಿ ಪೋಷಕರೊಂದಿಗೆ ಒಬ್ಬ 10 ವರ್ಷದ ಹುಡುಗ ಕೆಲಸ ಮಾಡುತ್ತಿರುವುದನ್ನು ನೋಡಿದೆ. ಎಲ್ಲರ ಹಾಗೆ ಆತನೂ ಏಕೆ ಶಿಕ್ಷಣ ಪಡೆಯಲು ಆಗುತ್ತಿಲ್ಲವೆಂಬ ಯೋಚನೆಯಾಯಿತು. ಕಿರುಚಿತ್ರಕ್ಕೆ ಈ ಹುಡುಗನ ಕಥೆಯೇ ಮಾಡಲಿ ನಿರ್ಧರಿಸಿ ಈ ಕಿರುಚಿತ್ರ ಮಾಡಿದ್ದೇನೆ ಎನ್ನುತ್ತಾರೆ ಇರಾ, ವರದಿ ಎಡೆಕ್ಸ್ ಲೈವ್.


ಚಿತ್ರದಲ್ಲಿ ಪಾತ್ರವಾಗಿ ಇರಾ ಮತ್ತು ಅವಳೊಂದಿಗೆ ಅಧ್ಯಯನ ಮಾಡುತ್ತಿರುವ ಇತರ ಮಕ್ಕಳು ನಟಸಿದ್ದಾರೆ. ಶಾಲೆ ಮುಗಿದ ನಂತರ ಚಿತ್ರೀಕರಣ ಮಾಡುತ್ತಿದ್ದರಿಂದ ಶೂಟಿಂಗ್ ಪೂರ್ಣಗೊಳ್ಳಲು ಸುಮಾರು ಮೂರು ವಾರಗಳನ್ನು ತೆಗೆದುಕೊಂಡಿತು. ಪ್ರತಿಯೊಂದು ಮಕ್ಕಳು ಶಿಕ್ಷಣ ಪಡೆಯಲು ಹಕ್ಕುದಾರರು. ಬಡತನದಿಂದಾಗಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಕೂಡದು ಎಂಬುದನ್ನು ಈ ಕಿರುಚಿತ್ರ ಎಳೆಎಳೆಯಾಗಿ ಬಿಚ್ಚಿಡುತ್ತದೆ. 


ಅಂತರಾಷ್ಟ್ರೀಯ ಕಿಡ್ಸ್ ಫಿಲ್ಮ್ ಫೆಸ್ಟಿವಲ್ ( ಐಕೆಎಫ್ಎಫ್ ) ಚಲನಚಿತ್ರ ಉತ್ಸವವನ್ನು 2 ಮಿಲಿಯನ್ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ೪೦ ದೇಶಗಳಲ್ಲಿ ಕಿರುಚಿತ್ರ ಪ್ರದರ್ಶಿಸಲಾಗಿದೆ. ಐಕೆಎಫ್ಎಫ್ ಕರ್ನಾಟಕ ಸರ್ಕಾರದೊಂದಿಗೆ ಸೇರಿ ಸುಮಾರು 35 ಭಾಷೆಯಲ್ಲಿ 100 ಚಿತ್ರಗಳನ್ನು 3,500 ಸರ್ಕಾರಿ ಶಾಲೆಗಳಲ್ಲಿ ಹಾಗೂ ಕರ್ನಾಟಕ ಹೊರತು ಪಡಿಸಿ ತೆಲಂಗಾಣ ಮತ್ತು ಅಸ್ಸಾಂ ನ ಶಾಲೆಗಳಲ್ಲಿ ಚಲನಚಿತ್ರ ಪ್ರದರ್ಶಿಸಲಾಗಿದೆ, ವರದಿ ಟೈಮ್ಸ್ ಆಫ್ ಇಂಡಿಯಾ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.