ನಮ್ಮ ದೇಶವನ್ನು ಪ್ರಪಂಚದ ಉತ್ತಮ ಸ್ಥಳವನ್ನಾಗಿಸಲು ಪ್ರಯತ್ನಿಸಿದ 5 ಹೆಮ್ಮೆಯ ಮಕ್ಕಳ ಕಥೆ

ಒಡಿಶಾದ 17 ವರ್ಷದ ಲಲಿತಾ ಪ್ರಸಿದಾ, ತ್ಯಾಜ್ಯ ನೀರನ್ನು ಸ್ವಚ್ಛಗೊಳಿಸಲು ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲು ಜೋಳದ ಜೊಂಡನ್ನು ಬಳಸುತ್ತಿರುವಲ್ಲಿ ಅಥವಾ ರಾಜಸ್ಥಾನದ ಹಳ್ಳಿಗಳಲ್ಲಿ ಜನನ ನೋಂದಣಿಯನ್ನು ನಿರ್ವಹಿಸುತ್ತಿರುವ ಓಂ ಪ್ರಕಾಶ್ ಗುರ್ಜರ್ ಆಗಿರಲಿ ಬದಲಾವಣೆಗಳು ನಮ್ಮಿಂದಲೇ ಆರಂಭವಾಗುತ್ತವೆ ಎಂಬುದನ್ನು ಈ ಮಕ್ಕಳು ತೋರಿಸಿದ್ದಾರೆ.

ನಮ್ಮ ದೇಶವನ್ನು ಪ್ರಪಂಚದ ಉತ್ತಮ ಸ್ಥಳವನ್ನಾಗಿಸಲು ಪ್ರಯತ್ನಿಸಿದ 5 ಹೆಮ್ಮೆಯ ಮಕ್ಕಳ ಕಥೆ

Thursday November 14, 2019,

4 min Read

ಸೈನ್ಸ್ ಡೈರೆಕ್ಟ್ ನಡೆಸಿದ ಅಧ್ಯಯನದ ಪ್ರಕಾರ, ಪರಿಸರ, ಮಾನವ ಆರೋಗ್ಯ, ಸುರಕ್ಷತೆ ಮತ್ತು ಶಿಕ್ಷಣದ ವಿಷಯದಲ್ಲಿ ಮಕ್ಕಳು ಮತ್ತು ಯುವಕರೇ ಹೊಸ ಬದಲಾವಣೆಯ ವಕ್ತಾರರು‌. ಅದರಲ್ಲೂ 15 ರಿಂದ 24 ವರ್ಷದೊಳಗಿನ ಯುವಕರು ಗರಿಷ್ಠ ಸಾಮಾಜಿಕ ಬದಲಾವಣೆಯನ್ನು ಉಂಟುಮಾಡಬಹುದು.


ಸಾಮಾನ್ಯವಾಗಿ ಮಕ್ಕಳು ಬಾಲ್ಯವನ್ನು ಶಾಲೆ, ಆಟ, ಸ್ನೇಹ ಮತ್ತು ಕಾಳಜಿಯಿಲ್ಲದ ವರ್ತನೆಯಲ್ಲೇ ಕಳೆಯುತ್ತಾರೆ ಆದರೆ, ಕೆಲವು ಮಕ್ಕಳು ಬಾಲ್ಯದಲ್ಲಿ ಭಿನ್ನವಾಗಿ ಏನನ್ನೋ ಮಾಡುತ್ತಾರೆ.

ಸಮಾಜವನ್ನು ವಾಸಿಸಲು ಉತ್ತಮ ಸ್ಥಳವನ್ನಾಗಿ ಪರಿವರ್ತಿಸುತ್ತಿರುವ ಐದು ಮಕ್ಕಳ ಕಥೆಗಳು ನಿಮ್ಮ ಮುಂದೆ.


ಅನೋಯರಾ ಖತುನ್

ಪಶ್ಚಿಮ ಬಂಗಾಳದ ಅನೋಯರಾ ಖತುನ್ ಎಂಬ 21 ವರ್ಷದ ಬಾಲಕಿ, ಬೆಳೆಯುತ್ತಲೇ ಸವಾಲಿನ ಸ್ಥಿತಿ ಎದುರಿಸಿದವರು. ಜೀವನಕ್ಕಾಗಿ ಬಾಲ್ಯದಲ್ಲಿ ಕಳ್ಳಸಾಗಣೆಯಾಗಿದ್ದವರು. ಅವರ ಜೀವನವು ಸುಲಭವಾಗಿರಲಿಲ್ಲ. ಆದರೆ, ಅವರ ಆ ಅನುಭವವನ್ನು ತನ್ನ ಜೀವನ ದಾರಿಯಲ್ಲಿ ತೆಗೆದುಕೊಂಡು, ಇತರ ಯಾವುದೇ ಮಕ್ಕಳು ಅದೇ ಅಗ್ನಿ ಪರೀಕ್ಷೆಗೆ ಒಳಗಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಹೋರಾಟಗಾರಳಾಗಿ, ಅನೋಯರಾ, ಇಂದು ಸಮಾಜದಲ್ಲಿ ಮಕ್ಕಳ ಸುಧಾರಣೆಗಾಗಿ ಹೋರಾಡುತ್ತಾರೆ. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಹಾಗೂ ಮಾನವ ಕಳ್ಳಸಾಗಣೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅವರ ಪ್ರಯತ್ನಗಳು ಗಮನಾರ್ಹ ಪರಿಣಾಮವನ್ನು ಬೀರಿವೆ. ಈ ಅಪಾಯಗಳನ್ನು ಹೇಗೆ ಪರಿಹರಿಸುವುದು ಹಾಗೂ ನಿವಾರಿಸುವುದು ಎಂಬುದರ ಕುರಿತು ಆಗಾಗ್ಗೆ ತಮ್ಮ ಹಳ್ಳಿಯಲ್ಲಿ ತಿಳುವಳಿಕೆ ಸೆಷನ್ ಹಾಗೂ ಜಾಗೃತಿ ಡ್ರೈವ್‌ಗಳನ್ನು ನಡೆಸುತ್ತಿದ್ದಾರೆ.


ಅನೋಯರಾ ಖತುನ್ (ಚಿತ್ರಕೃಪೆ: ಇಂಫೈನೆಟ್ ಫೈರ್)


ಎರಡು ಬಾರಿ ಇವರನ್ನು ವಿಶ್ವಸಂಸ್ಥೆಯಲ್ಲಿ ಮಾತನಾಡಲು ಆಹ್ವಾನಿಸಲಾಗಿತ್ತು. ಅವರು ವಿಶ್ವಸಂಸ್ಥೆಯ ಎಂಟನೇ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಮತ್ತು ಇವರ ಕಾರ್ಯದಿಂದ ಪ್ರೇರಿತರಾದ ಮೆಲಿಂಡಾ ಗೇಟ್ಸ್ ಅವರನ್ನು ಭೇಟಿಯಾದರು. 2010 ರಲ್ಲಿ ಬಾನ್ ಕಿ ಮೂನ್ ವಿಶ್ವದಾದ್ಯಂತ ಮಕ್ಕಳ, ಹದಿಹರೆಯದವರ ಆರೋಗ್ಯ ಹಾಗೂ ಸಾವಿಗೆ ದೂಡಲ್ಪಡುವ ಮಹಿಳೆಯರನ್ನು ಸುಧಾರಿಸುವ ಗುರಿಯೊಂದಿಗೆ ಪ್ರಾರಂಭಿಸಿದ 'ಎವೆರಿ ವುಮೆನ್ ಎವೆರಿ ಚೈಲ್ಡ್' ಆಂದೋಲನಕ್ಕೂ ಸಹ ಅನೋಯರಾ ಕೊಡುಗೆ ನೀಡಿದ್ದಾರೆ.


‘ಮಕ್ಕಳನ್ನು ಉಳಿಸಿ’ ಸಹಯೋಗದೊಂದಿಗೆ, ಇವರು ಸುಮಾರು 35 ಬಾಲ್ಯವಿವಾಹಗಳನ್ನು ಯಶಸ್ವಿಯಾಗಿ ತಡೆಯಲು ಸಾಧ್ಯವಾಯಿತು. 200 ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣವನ್ನು ಒದಗಿಸಲು ಸಹಾಯ ಮಾಡಿದರು ಹಾಗೂ ಅವರ ಕುಟುಂಬಗಳೊಂದಿಗೆ ಕಳ್ಳಸಾಗಣೆಗೆ ಒಳಗಾದ 180 ಸಂತ್ರಸ್ತರನ್ನು ಮತ್ತೆ ಒಂದುಗೂಡಿಸಿದ್ದಾರೆ ವರದಿ ವುಮೆನ್‌ ಆಫ್ ಕರೆಜ್.


ನಾನು ಮಕ್ಕಳ ಹಕ್ಕುಗಳಿಗಾಗಿ ವಕಾಲತ್ತು ವಹಿಸಲು ಇಚ್ಛಿಸುತ್ತೇನೆ. ಕೂಲಿ ಹಾಗೂ ವಿವಾಹದ ಹೆಸರಿನಲ್ಲಿ ಕಳ್ಳಸಾಗಣೆ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ನಾನೇ ಒಮ್ಮೆ ಕಳ್ಳಸಾಗಣೆಗೆ ಬಲಿಯಾಗಿದ್ದೆ, ಅದೆಷ್ಟು ನೋವಿನಿಂದ ಕೂಡಿದೆ ಎಂದು ನನಗೆ ತಿಳಿದಿದೆ ” ಎಂದು ಅನೋಯರಾ ಇಂಡಿಪೆಂಡೆಂಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.



ಲಿಸಿಪ್ರಿಯಾ ಕಂಗುಜಮ್

ಏಳು ವರ್ಷದ ಲಿಸಿಪ್ರಿಯಾ ಕಂಗುಜಮ್ ಅನೇಕರಿಗೆ ಸ್ಫೂರ್ತಿ. ನೈಸರ್ಗಿಕ ವಿಪತ್ತುಗಳ ತಡೆಗಟ್ಟುವಿಕೆ ಮತ್ತು ಅವುಗಳ ನಿರ್ವಹಣೆಗಾಗಿ ಮಣಿಪುರದ 2 ನೇ ತರಗತಿ ವಿದ್ಯಾರ್ಥಿನಿ ಲಿಸಿಪ್ರಿಯಾ ಹೋರಾಟ ಮಾಡುತ್ತಿದ್ದಾಳೆ. ಪ್ರಸ್ತುತ, ಅವಳು ನವದೆಹಲಿಯ ಅಂತರರಾಷ್ಟ್ರೀಯ ಯುವ ಸಮಿತಿ (ಐವೈಸಿ) ಯಲ್ಲಿ ಮಕ್ಕಳ ವಿಪತ್ತು ಅಪಾಯಗಳನ್ನು ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ.


ವಿಪತ್ತು ನಿರ್ವಹಣಾ ವಿಚಾರವಾಗಿ ಮಾತನಾಡಿದ ಅವಳು, "ಭೂಕಂಪಗಳು, ಪ್ರವಾಹಗಳು ಹಾಗೂ ಸುನಾಮಿಯಿಂದ ಜನರು ಬಳಲುತ್ತಿರುವುದು ಹಾಗೂ ಸಾಯುತ್ತಿರುವುದನ್ನು ಟಿವಿಯಲ್ಲಿ ನೋಡಿದಾಗ ನಾನು ಭಯಭೀತಳಾಗಿದ್ದೇನು. ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಳ್ಳುವುದನ್ನು ಅಥವಾ ವಿಪತ್ತುಗಳ ಅಪಾಯಗಳಿಂದ ಜನರು ನಿರಾಶ್ರಿತರಾಗುವುದನ್ನು ನೋಡಿದಾಗ ನಾನು ಅಳುತ್ತೇನೆ. ನಮ್ಮೆಲ್ಲರಿಗೂ ಉತ್ತಮ ಜಗತ್ತನ್ನು ಸೃಷ್ಟಿಸಿಕೊಳ್ಳಲು ಪ್ರತಿಯೊಬ್ಬರೂ ತಮ್ಮ ಕೈ, ಮನಸ್ಸು ಹಾಗೂ ಆಸಕ್ತಿಗಳನ್ನು ಒಗ್ಗೂಡಿಸಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ," ವರದಿ ಇಂಡಿಯನ್ ವೂಮೆನ್ ಬ್ಲಾಗ್ .


ಲಿಸಿಪ್ರಿಯಾ ಕಂಗುಜಮ್ (ಚಿತ್ರಕೃಪೆ: ವಿಶೆಶ್)


2018 ರಲ್ಲಿ ಮಂಗೋಲಿಯನ್ ರಾಜಧಾನಿ ಉಲಾನ್‌ಬತಾರ್‌‌ನ, ವಿಪತ್ತು ಅಪಾಯಗಳ ಕಡಿತದ ವಿಚಾರದ ಮೇಲೆ ಏರ್ಪಡಿಸಿದ್ದ ಏಷಿಯನ್ ಮಿನಿಸ್ಟ್ರಿಯಲ್ ಸಮ್ಮೇಳನಕ್ಕೆ ಇವರನ್ನು ಆಹ್ವಾನಿಸಲಾಯಿತು. 2019 ರ ಆರಂಭದಲ್ಲಿ ವಿಶ್ವಸಂಸ್ಥೆಯು ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಡೆಸಿದ ವಿಪತ್ತು ಅಪಾಯವನ್ನು ಕಡಿಮೆ ಮಾಡುವ ಜಾಗತಿಕ ವೇದಿಕೆಯ ಆರನೇ ಅಧಿವೇಶನಕ್ಕೆ ಹಾಜರಾಗುವಂತೆ ಕೇಳಿಕೊಂಡಿತ್ತು ಈ ಸಮ್ಮೇಳನದಲ್ಲಿ 140 ಕ್ಕೂ ಹೆಚ್ಚು ದೇಶಗಳಿಂದ 3,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.


ಲಲಿತಾ ಪ್ರಸಿದಾ ಶ್ರೀಪಾದ ಶ್ರೀಸಾಯಿ

ಒಡಿಶಾದ 17 ವರ್ಷದ ಬಾಲಕಿ, ಜೋಳದ ಜೊಂಡನ್ನು ಬಳಸಿ ತ್ಯಾಜ್ಯ ನೀರನ್ನು ಸ್ವಚ್ಛಗೊಳಿಸಲು ವೆಚ್ಚ-ಪರಿಣಾಮಕಾರಿ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. 2015 ರಲ್ಲಿ ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿ ನಡೆದ ಗೂಗಲ್ ವಿಜ್ಞಾನ ಮೇಳದಲ್ಲಿ ಲಲಿತಾ 'ಕಮ್ಯುನಿಟಿ ಇಂಪ್ಯಾಕ್ಟ್ ಪ್ರಶಸ್ತಿ’ ಗೆದ್ದರು. ತ್ಯಾಜ್ಯ ನೀರು ಅವಳ ಜೋಳದ ಜೊಂಡಿನ ಶುದ್ಧೀಕರಣ ಸಾಧನದ ವಿವಿಧ ಪದರಗಳ ಮೂಲಕ ಹರಿಯುವ ಮೂಲಕ ಸ್ವಚ್ಛಗೊಳ್ಳುತ್ತದೆ. ಇದು ವೆಚ್ಚ-ಪರಿಣಾಮಕಾರಿ ಮತ್ತು ಸರಳ ತಂತ್ರವಾಗಿದ್ದು ಕೊಳಗಳು, ಜಲಾಶಯಗಳು ಮತ್ತು ನೀರಿನ ಟ್ಯಾಂಕ್‌ಗಳಲ್ಲಿನ ಮಾಲಿನ್ಯಕಾರಕಗಳನ್ನು ನಿಭಾಯಿಸಲು ಇದು ಉಪಯುಕ್ತವಾಗಿದೆ. ಈ ಯೋಜನೆಗೆ 10,000 ರೂ ಮೊತ್ತವು ಬಹುಮಾನವಾಗಿ‌ ಲಭಿಸಿತು. ಆಕೆ ಈ ಯೋಜನೆಯನ್ನು ನಿರ್ಮಿಸಲು ಗೂಗಲ್‌ನಿಂದ ಮಾರ್ಗದರ್ಶನ ಪಡೆದಿದ್ದಾಳೆ.


ಈ ಯೋಜನೆಯ ಭಾಗವಾಗಿ, ಲಲಿತಾ ಹೀರುವಿಕೆಯ ತತ್ವವನ್ನು ಅನ್ವಯಿಸುವ ಮೂಲಕ ದೇಶೀಯ ಹಾಗೂ ಕೈಗಾರಿಕಾ ತ್ಯಾಜ್ಯದಿಂದ ನೀರನ್ನು ಶುದ್ಧೀಕರಿಸಲು ತ್ಯಾಜ್ಯ ಕಾರ್ನ್ ಕಾಬ್‌ಗಳನ್ನು ಬಳಸಿದಳು ಹಾಗೂ ತನ್ನ ಪ್ರಯೋಗದಲ್ಲಿ, ಜೋಳದ ಜೊಂಡಿನ ಸಾಧನವು ಸಾಲ್ಟ್ ಆಕ್ಸೈಡ್, ಡಿಟರ್ಜೆಂಟ್, ಸಸ್ಪೆಂಡೆಡ್‌ ಪಾರ್ಟಿಕಲ್ಸ್, ಬಣ್ಣಗಳು, ಎಣ್ಣೆ, ಗ್ರೀಸ್ ಮತ್ತು ಕೆಲವು ಭಾರ ಲೋಹಗಳಂತಹ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳಲು ಸಮರ್ಥವಾಗಿದೆ ಎಂಬುದನ್ನು ಲಲಿತಾ ಕಂಡುಕೊಂಡಳು.


ಎನ್‌ಡಿ ಟಿವಿಯೊಂದಿಗೆ ಮಾತನಾಡಿದ ಲಲಿತಾ,


ನಾನು ಹತ್ತಿರದ ಹಳ್ಳಿಗಳಿಗೆ ಭೇಟಿ ನೀಡಿ, ಅವರ ಜೀವನಶೈಲಿಯನ್ನು ಗಮನಿಸಲು ಇಷ್ಟಪಡುತ್ತೇನೆ. ಗ್ರಾಮಸ್ಥರ ಜೀವನಶೈಲಿ ಕೃಷಿಯ ಸುತ್ತ ಇದ್ದು, ಅವರು ಅನೇಕ ಬಗೆಯ ಬೆಳೆಗಳನ್ನು ಬೆಳೆಯುತ್ತಿದೆ. ಇದು ವಿಜ್ಞಾನದ ಮೇಲೆ ಕೇಂದ್ರೀಕರಿಸಲು ಆಸಕ್ತಿಯನ್ನು ಬೆಳೆಸಿತು ಅಲ್ಲದೇ, ಹೊಸದನ್ನು ಅಭಿವೃದ್ಧಿಪಡಿಸಲು ನನ್ನನ್ನು ಉತ್ತೇಜಿಸಿತು” ಎಂದರು.



ಓಂ ಪ್ರಕಾಶ್ ಗುರ್ಜಾರ್

ರಾಜಸ್ಥಾನ ಮೂಲದ ಓಂ ಪ್ರಕಾಶ್ ಗುರ್ಜರ್ ತನ್ನ 5ನೇ ವಯಸ್ಸಿನಲ್ಲಿಯೇ ಕುಟುಂಬದಿಂದ ದೂರ ಹೋಗಿ ಬಾಲ ಕಾರ್ಮಿಕರಾಗಿ ಹೊಲಗಳಲ್ಲಿ ಕೆಲಸ ಮಾಡುವಂತೆ ಮಾಡಲಾಯಿತು. ಬಚ್ಪನ್ ಬಚಾವೊ ಆಂದೋಲನದ ಕಾರ್ಯಚಟುವಟಿಕೆಯಿಂದ ರಕ್ಷಿಸಲ್ಪಟ್ಟ ಈತ, ಬಾಲ‌ಕಾರ್ಮಿಕ‌ ಪದ್ಧತಿಯನ್ನು‌ ಸಂಪೂರ್ಣವಾಗಿ‌ ನಿಷೇಧಿಸಿದ್ದ ಮಕ್ಕಳ ಸ್ನೇಹಿ ಹಳ್ಳಿಗಳಲ್ಲಿ (ಬಾಲ್ ಮಿತ್ರಾ ಗ್ರಾಮ್ಸ್ನ್) ಸಂಪರ್ಕವನ್ನು ಪಡೆದರು.


ಮಕ್ಕಳ ಸುರಕ್ಷತೆ ಹಾಗೂ ಅವರ ಕಲ್ಯಾಣಕ್ಕಾಗಿ ಬಲವಂತದ ಗುಲಾಮಗಿರಿ, ಮಾನವ ಕಳ್ಳಸಾಗಣೆ ಹಾಗೂ ಬಲವಂತದ ಬಾಲ್ಯ ವಿವಾಹ ತಡೆಯುವಲ್ಲಿ ಪ್ರಯತ್ನ ಮಾಡಿತ 27 ವರ್ಷ ವಯಸ್ಸಿನ‌ ಓಂ‌ ಪ್ರಕಾಶ್ ಅಂತರರಾಷ್ಟ್ರೀಯ ಶಾಂತಿ ಬಹುಮಾನಕ್ಕೆ ಭಾಜನರಾದರು.


ಇಷ್ಟೆ ಅಲ್ಲದೆ ಓಂ ಪ್ರಕಾಶ್, ಹಳ್ಳಿಗಳಲ್ಲಿ ಶಿಶು ಜನನ ನೋಂದಣಿಯನ್ನು ನಿರಂತರವಾಗಿ ಪ್ರತಿಪಾದಿಸುತ್ತಿದ್ದಾರೆ. ಒಂದೇ ಒಂದು ಮಗು ಸಹಾ ತೊಂದರೆ ಅನುಭವಿಸಬಾರದೆಂಬುದನ್ನು ಅರಿತು ಜನನ ನೋಂದಣಿಯ ಮಹತ್ವದ ಕುರಿತು ಕುಟುಂಬಗಳಿಗೆ ಮಾಹಿತಿ ನೀಡುತ್ತಾರೆ. ಇಂತಹ ಮಹತ್ತರ ಬದಲಾವಣೆ ತರುವಲ್ಲಿ ಮಕ್ಕಳು ಹಾಗೂ ಅವರ ಪೋಷಕರ ಕಥೆಯು ಹೇಗೆ ಸ್ಪೂರ್ತಿಯಾಯಿತು ಎಂದು ಹಂಚಿಕೊಳ್ಳುತ್ತಾರೆ.


ಓಂ‌ ಪ್ರಕಾಶ್ ಗುರ್ಜಾರ್ (ಚಿತ್ರಕೃಪೆ: ಬ್ಲಾಕ್‌ಹೆರಿಟೇಜ್‌ಪಬ್ಲಿಕೇಶನ್)


ಓಂ‌ ಪ್ರಕಾಶ್ ಹಲವಾರು ಅಡೆತಡೆಗಳನ್ನು ಎದುರಿಸಿದರೂ, ಹಳ್ಳಿಗಳಲ್ಲಿನ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕಲ್ಪಿಸಲು, ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹಿಸುವ ಮೂಲಕ ಅವರು ನಿರಂತರವಾಗಿ ಕೆಲಸ ಮಾಡುತ್ತಲೇ ಇದ್ದಾರೆ. ಪ್ರಪಂಚದ ನೈಜತೆ ಬಗ್ಗೆ ಉತ್ತಮ ಮಾಹಿತಿ ಪಡೆಯಲು ಇದೇ ನನ್ನ ಮೊದಲ ಹೆಜ್ಜೆ ಎಂದು ಸಾಮಾಜಿಕ ಕಾರ್ಯಕರ್ತ ಓಂ ಪ್ರಕಾಶ್ ಭಾವಿಸುತ್ತಾರೆ.

ಅಕ್ರಿತ್ ಜಸ್ವಾಲ್

ಜಸ್ವಾಲ್, ವಿಶ್ವದ ಕಿರಿಯ ಶಸ್ತ್ರಚಿಕಿತ್ಸೆ ತಜ್ಞ ಎಂದರೆ ನೀವು ನಂಬಲಾರಿರಿ. ಹೌದು, ಈಗ ಈತನಿಗೆ 26 ವರ್ಷ. ತನ್ನ ಏಳನೇ ವಯಸ್ಸಿನಲ್ಲಿ ಬೆರಳು ಒಟ್ಟಿಗೆ ಅಂಟಿಕೊಂಡಿದ್ದ ಎಂಟು ವರ್ಷದ ಮಗುವಿಗೆ ಮೊದಲ ಶಸ್ತ್ರ ಚಿಕಿತ್ಸೆ ಮಾಡಿದ.


ಪಂಜಾಬ್ ಮೂಲದ ಅಕ್ರಿತ್ ಜಸ್ವಾಲ್, ತನ್ನ ಹಳ್ಳಿಯಲ್ಲಿ ವೈದ್ಯಕೀಯ ಪಂಡಿತ ಎಂಬ ಖ್ಯಾತಿಯನ್ನು ಹೊಂದಿದ್ದಾನೆ. ಈ ವಿಚಾರ ತಿಳಿದ ಒಂದು ಹುಡುಗಿಯ ಕುಟುಂಬದವರು ಅವನನ್ನು ಸಂಪರ್ಕಿಸಿ, ತಮ್ಮ ಮಗುವಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಪಡೆದರು.


ಅಕ್ರಿತ್ ಜಸ್ವಾಲ್ (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ಶಸ್ತ್ರಚಿಕಿತ್ಸೆಗೆ ಒಳಗಾದ ಹುಡುಗಿ ಅತ್ಯಂತ ಸುಟ್ಟಗಾಯಗಳಿಗೆ ಒಳಗಾಗಿದ್ದಳು ಹಾಗಾಗಿ ಅಕ್ರಿತ್, ಆಕೆಯ ಎರಡು ಬೆರಳುಗಳನ್ನು ಯಶಸ್ವಿಯಾಗಿ ಬೇರ್ಪಡಿಸಿ, ಆಕೆಯ ಜೀವನದ ಗುಣಮಟ್ಟವನ್ನು ಸುಧಾರಿಸಿದನು ಎಂದು ಮೆಡ್‌ಮಾಸ್ಟರ್ ವರದಿ ಮಾಡಿದೆ.


ಈ ವಿಧಾನವನ್ನು ಅನುಸರಿಸಿದ ಈತ ಮಹಾ ಮೇಧಾವಿ ಮಗು ಎಂದು ವಿಶ್ವದಾದ್ಯಂತ ಗುರುತಿಸಲ್ಪಟ್ಟರು ಹಾಗೂ ಓಪ್ರಾ ವಿನ್‌ಫ್ರೇ ಪ್ರದರ್ಶನದಲ್ಲಿ ಭಾಗವಹಿಸಿದ್ದರು.


ತಮ್ಮ ವೈದ್ಯಕೀಯ ಪಯಣವನ್ನು ಮುಂದುವರೆಸಲು ಹಾಗೂ ಕ್ಯಾನ್ಸರ್ ರೋಗಿಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಗುರಿಹೊಂದಿದ್ದ ಈತ, ತನ್ನ 11 ನೇ ವಯಸ್ಸಿನಲ್ಲಿಯೇ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಸ್ಥಾನ ಪಡೆದ ಭಾರತದ ಅತ್ಯಂತ ಕಿರಿಯ ವ್ಯಕ್ತಿ. ಅವರ ಸಾಧನೆಗಳ ಕುರಿತು ಮಾತನಾಡಲು ಲಂಡನ್‌ನ ಪ್ರತಿಷ್ಠಿತ ಇಂಪೀರಿಯಲ್ ಕಾಲೇಜು ಅವರನ್ನು ಆಹ್ವಾನಿಸಿತ್ತು, ವರದಿ ಮಾಂಬೀ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.