ಕೇರಳದ ಈ ಶಾಸಕರು ಜನರು ಹೂವಿನ ಹೂಗುಚ್ಚಗಳ ಬದಲು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲು ಹೇಳಿದ್ದಾರೆ

ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ವಿ. ಕೆ. ಪ್ರಸಂತ್ ಗೆ ಪುಸ್ತಕಗಳನ್ನು ಕಳುಹಿಸಿದ್ದಾರೆ. ಕೇವಲ ಮೂರು ದಿನಗಳಲ್ಲಿ ಕೇರಳದ ಶಾಸಕರು ಸುಮಾರು 3,000 ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ.

ಕೇರಳದ ಈ ಶಾಸಕರು ಜನರು ಹೂವಿನ ಹೂಗುಚ್ಚಗಳ ಬದಲು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲು ಹೇಳಿದ್ದಾರೆ

Saturday November 23, 2019,

2 min Read

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದಾಗ ಅಥವಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರತಿನಿಧಿಗಳು ಹೇಗೆ, ಯಾವ ತೆರನಾದ ಉಡುಗೊರೆಯನ್ನು ಸ್ವೀಕರಿಸುತ್ತಾರೆ ಎಂಬುದನ್ನು ನಾವು ನೋಡುತ್ತೇವೆ. ಹಲವಾರು ಹೂಮಾಲೆಗಳು, ಸ್ಮಾರಕಗಳು ಮತ್ತು ಅನೇಕ ಅಲಂಕಾರಿಕ ಉಡುಗೊರೆಗಳನ್ನು ನೀಡುವುದು ಸಾಮಾನ್ಯ ಅಭ್ಯಾಸವಾಗಿದೆ, ಮತ್ತು ಇದು ದಶಕಗಳಿಂದಲೂ ನಡೆದು ಬಂದಿದೆ.


ಅಂತಹ ಅಭ್ಯಾಸದ ಮಧ್ಯೆ, ಕೇರಳದ ಈ ಶಾಸಕರು ವಿಭಿನ್ನವಾಗಿ ಕಾಣುತ್ತಾರೆ. ವಿಕೆ ಪ್ರಸಂತ್ ಇತ್ತೀಚೆಗೆ ತಮ್ಮ ಬೆಂಬಲಿಗರಿಂದ ಯಾವುದೇ ಹೂಮಾಲೆ ಅಥವಾ ಉಡುಗೊರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದ್ದಾರೆ ಮತ್ತು ಬದಲಿಗೆ ಪುಸ್ತಕಗಳನ್ನು ನೀಡುವಂತೆ ವಿನಂತಿಸಿದ್ದಾರೆ. ಕಳೆದ ವಾರ, ಶಾಸಕರು ತಮ್ಮ ಫೇಸ್‌ಬುಕ್ ಪುಟದಲ್ಲಿ ಎಲ್ಲರಿಗೂ ಪುಸ್ತಕಗಳನ್ನು ನೀಡುವಂತೆ ಕೋರಿ ಪೋಸ್ಟ್ ಹಾಕಿದ್ದರು.


ಶಾಸಕ ವಿ.ಕೆ.ಪ್ರಸಂತ್ (ಚಿತ್ರಕೃಪೆ: ಫೇಸ್‌ಬುಕ್)




ದಿ ನ್ಯೂಸ್ ಮಿನಿಟ್ ನೊಂದಿಗೆ ಪ್ರತಿಕ್ರಿಯೆಯ ಬಗ್ಗೆ ಮಾತನಾಡುತ್ತಾ, ಪ್ರಸಂತ್,


“ಮರುದಿನ ಬೆಳಿಗ್ಗೆ ನಾನು ಕಂಡದ್ದು ಆಶ್ಚರ್ಯಕರವಾಗಿತ್ತು. ನಾವು ಮೂರು ದಿನಗಳಲ್ಲಿ 3,000 ಕ್ಕೂ ಹೆಚ್ಚು ಪುಸ್ತಕಗಳನ್ನು ಸ್ವೀಕರಿಸಿದ್ದೇವೆ. ಅಂತಹ ಸಣ್ಣ ಅವಧಿಯಲ್ಲಿ, ಅನೇಕ ಜನರು ಪುಸ್ತಕಗಳನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. ಅವರಿಗೆ ಮೊದಲೇ ತಿಳಿಸಿದ್ದರೆ, ನಾವು ಇನ್ನೂ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸಬಹುದಿತ್ತು.”


ಪುಸ್ತಕಗಳು ಎಲ್ಲ ವಯಸ್ಸಿನ ಜನರಿಂದ ಬಂದಿವೆ. ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅವರಿಗೆ ಪುಸ್ತಕಗಳನ್ನು ಕಳುಹಿಸಿದ್ದಾರೆ.


ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಾರ, ಈ ಪುಸ್ತಕಗಳನ್ನು ಕ್ಷೇತ್ರದ ವಿವಿಧ ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ನೀಡಲಾಗುವುದು.


ಶಾಲಾ ಗ್ರಂಥಾಲಯಗಳನ್ನು ಪ್ರಾರಂಭಿಸಲು ನಾನು ಏನಾದರೂ ಮಾಡಬಹುದೇ ಎಂದು ಕೇಳಲು ಇಲ್ಲಿನ ಕೆಲವು ಸರ್ಕಾರಿ ಶಾಲೆಗಳು ನನ್ನನ್ನು ಸಂಪರ್ಕಿಸಿದ್ದವು. ನಾವು ಈಗ ಸಂಗ್ರಹಿಸಿದ ಪುಸ್ತಕಗಳೊಂದಿಗೆ, ಮೂರು ಶಾಲೆಗಳಲ್ಲಿ ಗ್ರಂಥಾಲಯಗಳನ್ನು ಪ್ರಾರಂಭಿಸಬಹುದು” ಎನ್ನುತ್ತಾರೆ ಪ್ರಸಂತ್.


ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯಂತೆ ಶಾಸಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. 2017 ರಲ್ಲಿ, ಅವರು ಕೇರಳಕ್ಕೆ ಭೇಟಿ ನೀಡಿದಾಗ, ಅವರು ಪುಷ್ಪಗುಚ್ಚದ ಬದಲು ಪುಸ್ತಕವನ್ನು ಉಡುಗೊರೆಯಾಗಿ ನೀಡುವಂತೆ ಜನರನ್ನು ಕೋರಿದ್ದರು. ಇದನ್ನು ಅನುಸರಿಸಿ, ಭಾರತದಾದ್ಯಂತ ಪ್ರವಾಸಗಳಲ್ಲಿ ಪ್ರಧಾನ ಮಂತ್ರಿಗೆ ಯಾರೂ ಹೂಗುಚ್ಚಗಳನ್ನು ನೀಡಬಾರದು ಎಂದು ಗೃಹ ಸಚಿವಾಲಯ ಕಡ್ಡಾಯಗೊಳಿಸಿದೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.