ಕ್ಯಾನ್ಸರ್ ವಿರುದ್ಧದ ಯುದ್ಧದಲ್ಲಿ ಈ ಇಬ್ಬರು ಮಹಿಳೆಯರು ಕುಟುಂಬ ಮತ್ತು ಸ್ನೇಹಿತರ ಬೆಂಬಲವನ್ನು ಪಡೆದ ಬಗೆ
ಕ್ಯಾನ್ಸರ್ ಮಾರಕ ರೋಗದಿಂದ ಬದುಕಿ ಬಂದ ಕುಲ್ವಿಂದರ್ ಲಾಂಬಾ ಮತ್ತು ಸತೀಂದರ್ ಕೌರ್ ರಾಯತ್ ಅವರ ನಿಜ ಜೀವನದ ಕಥೆಗಳು, ಈ ಕ್ಯಾನ್ಸರ್ ವಿರುದ್ಧದ ಯುದ್ಧವನ್ನು ಗೆಲ್ಲುವಲ್ಲಿ ಬಲವಾದ ಇಚ್ಚಾಶಕ್ತಿ ಮತ್ತು ಕುಟುಂಬದ ಬೆಂಬಲ ಹೀಗೆ ಸಹಾಯವಾಗುತ್ತದೆ ಎಂದು ತೋರಿಸುತ್ತದೆ.
ಕ್ಯಾನ್ಸರ್ ಎಂಬ ಪದವು ಹೆಚ್ಚಿನವರಲ್ಲಿ ಭೀತಿಯನ್ನು ಹುಟ್ಟಿಸುತ್ತದೆ. ಹಲವು ವರ್ಷಗಳಲ್ಲಿ ವೈದ್ಯಕೀಯ ಸಂಶೋಧನೆಯಲ್ಲಿ ಒಳ್ಳೆಯ ಪ್ರಗತಿಯ ಹೊರತಾಗಿಯೂ, ಕ್ಯಾನ್ಸರ್ ಗುಣಪಡಿಸಲಾಗದ ರೋಗ ಎಂದು ನಾವು ಇನ್ನೂ ಭಾವಿಸುತ್ತೇವೆ. ಆಶ್ಚರ್ಯಕರವಾಗಿ, ಕ್ಯಾನ್ಸರ್ ರೋಗದಿಂದ ಬದುಕುವವರ ಪ್ರಮಾಣವು ನಾವೆಲ್ಲರೂ ಊಹಿಸಿದ್ದಕ್ಕಿಂತ ಇಂದು ಹೆಚ್ಚಾಗಿದೆ.
ಎಲ್ಲಾ ಕ್ಯಾನ್ಸರ್ ಗಳಲ್ಲಿ, ಸ್ತನ ಕ್ಯಾನ್ಸರ್ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ವರದಿಗಳು ಹೇಳುತ್ತವೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಸುಮಾರು 1.6 ಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಆದಾಗ್ಯೂ, ಆಕ್ರಮಣಕಾರಿ ಸ್ತನ ಕ್ಯಾನ್ಸರ್ ಹೊಂದಿರುವ ಮಹಿಳೆಯರಿಗೆ ಸರಾಸರಿ ಐದು ವರ್ಷಗಳ ಬದುಕುಳಿಯುವಿಕೆಯ ಪ್ರಮಾಣವು 90 ಪ್ರತಿಶತದಷ್ಟಿದ್ದರೆ, ಇದು 10 ವರ್ಷಗಳವರಿಗೆ 83 ಪ್ರತಿಶತದಷ್ಟಿದೆ.
ಈ ವಿಷಯಗಳು ಭರವಸೆಯಂತೆ ಕಾಣುತ್ತದೆಯಾದರೂ, ಒಬ್ಬರು ಕ್ಯಾನ್ಸರ್ ನಿಂದ ಹೇಗೆ ಬದುಕುಳಿಯುತ್ತಾರೆ? ಅನಾರೋಗ್ಯದ ಕುರಿತು ಸಂದೇಶಗಳನ್ನು ಮತ್ತು ಭರವಸೆಯ ಮಾತುಗಳನ್ನು ಒಟ್ಟುಗೂಡಿಸುವ ಕ್ಯಾನ್ಸರ್ ರೋಗಿಗಳ ಆನ್‌ಲೈನ್ ಸಮುದಾಯವಾದ ವಾಯ್ಸ್ ಆಫ್ ಕ್ಯಾನ್ಸರ್ ಪೆಶಂಟ್ಸ್ ಭಾರತದಲ್ಲಿ ಹಲವಾರು ಕ್ಯಾನ್ಸರ್ ರೋಗಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಮತ್ತು ದೃಢ ನಿಶ್ಚಯದಿಂದ ಬದುಕುಳಿದ ಕೆಲವರನ್ನು ಗುರುತಿಸಿದ್ದಾರೆ. ಸ್ತನ ಕ್ಯಾನ್ಸರ್ ನಿಂದ ಬದುಕುಳಿದವರ ಎರಡು ನಿಜ ಜೀವನದ ಕಥೆಗಳು ಇಲ್ಲಿವೆ.
ತಪ್ಪು ರೋಗನಿರ್ಣಯದ ಭೀತಿಯನ್ನು ಕುಲ್ವಿಂದರ್ ಲಾಂಬಾ ಹೇಗೆ ಜಯಿಸಿದರು?
ಎರಡು ದಶಕಗಳ ಹಿಂದೆ, ಕುಲ್ವಿಂದರ್ ಲಾಂಬಾ ಮಧ್ಯವಯಸ್ಕ ತಾಯಿಯಾಗಿದ್ದಾಗ, ಅವರ ಸ್ತನದಲ್ಲಿ ಕಡಲೆ ಗಾತ್ರದ ಉಂಡೆಯಂತಹದು ಇರುವುದು ತಿಳಿಯಿತು, ನಂತರ ಅವರು ತಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸಿದರು. ಆ ಉಂಡೆಯನ್ನು ಶಸ್ತ್ರಚಿಕಿತ್ಸೆ ನಡೆಸಿ ತೆಗೆದುಹಾಕಲಾಯಿತು, ಮತ್ತು ಮಾದರಿಗಳನ್ನು ಲ್ಯಾಬ್ ಪರೀಕ್ಷೆಗಳಿಗೆ ಕಳುಹಿಸಲಾಯಿತು. ಫಲಿತಾಂಶಗಳು ಬಂದಾಗ, ಅದು ಕ್ಯಾನ್ಸರ್ ಅಲ್ಲ ಎಂದು ಆಕೆಯ ವೈದ್ಯರು ಭರವಸೆ ನೀಡಿದರು. ಆದರೆ ಕೆಲವು ತಿಂಗಳುಗಳ ನಂತರ, ಮತ್ತೊಂದು ಉಂಡೆ ಕಾಣಿಸಿಕೊಂಡಿತು, ಮತ್ತು ಅವರು ಇದರಿಂದ ಗಾಬರಿಗೊಂಡರು. ಈ ಸಮಯದಲ್ಲಿ, ಅವರು ಕ್ಯಾನ್ಸರ್ ತಜ್ಞರನ್ನು ಸಂಪರ್ಕಿಸಿದರು, ಆಗ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿತು.
ಕುಲ್ವಿಂದರ್ ಅವರಿಗೆ ಆಗ ಕೇವಲ 38 ವರ್ಷ, ಮತ್ತು ಅವರ ಮಕ್ಕಳು ಚಿಕ್ಕವರಿದ್ದರು. ಅವರು ಎಲ್ಲ ಭರವಸೆಯನ್ನು ಕಳೆದುಕೊಂಡಂತಾದರು ಮತ್ತು ಕೆಲವು ದಿನಗಳವರೆಗೆ ಕಣ್ಣೀರೆ ಅವರ ಸಂಗಾತಿಯಾಗಿತ್ತು, ಆದರೆ ಅಂತಿಮವಾಗಿ ಅವರು ತಮ್ಮ ಬುದ್ಧಿವಂತಿಕೆಯನ್ನು ಮತ್ತು ಧೈರ್ಯವನ್ನು ಒಟ್ಟುಗೂಡಿಸಿದರು. ಅವರ ಹಿಂದಿನ ರೋಗನಿರ್ಣಯವು ತಪ್ಪಾಗಿದ್ದರಿಂದ, ಅವರು ಈಗಾಗಲೇ ತಮ್ಮ ಅಮೂಲ್ಯ ಸಮಯವನ್ನು ಆರು ತಿಂಗಳು ವ್ಯರ್ಥ ಮಾಡಿದ್ದರು. ಹಾಗಾಗಿ ಸ್ತನ ತೆಗೆಯುವ ಶಸ್ತ್ರಚಿಕಿತ್ಸೆಗೆ ಹೋಗುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ.
ಹಲವು ತಿಂಗಳು ಕೀಮೋಥೆರಪಿ ಚಿಕಿತ್ಸೆ ತೆಗೆದುಕೊಂಡನಂತರ, ಅವರ ಜೀವನ ಕ್ರಮೇಣ ಸಹಜ ಸ್ಥಿತಿಗೆ ಮರಳಿತ್ತು. ಅವರು ಎಂಟು ವರ್ಷಗಳ ಕಾಲ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ಮತ್ತು, ಆ ಸಮಯದಲ್ಲಿ, ಅವರು ಸ್ವಯಂಸೇವಕರಾಗಿ ಇಂಡಿಯನ್ ಕ್ಯಾನ್ಸರ್ ಸೊಸೈಟಿಗೆ ಸೇರಿ ಅಲ್ಲಿ ಇತರ ಕ್ಯಾನ್ಸರ್ ರೋಗಿಗಳಿಗೆ ನೈತಿಕ ಬೆಂಬಲ ಮತ್ತು ಪ್ರಾಸ್ಥೆಸಿಸ್ ನೀಡುವ ಮೂಲಕ ಸಹಾಯ ಮಾಡಲು ಪ್ರಾರಂಭಿಸಿದರು.
ಸಮಯ ಕಳೆದಂತೆ ಅವರ ಆರೋಗ್ಯವು ಸುಧಾರಿಸಿತು. ಅವರ ಹೆಣ್ಣುಮಕ್ಕಳು ಇಬ್ಬರೂ ಮದುವೆಯಾದರು, ಮತ್ತು ಅವರ ಹಿರಿಯ ಮಗಳು ಕೆಲವೆ ತಿಂಗಳುಗಳಲ್ಲಿ ತಮ್ಮ ಮೊದಲ ಮಗುವ ನೀರೀಕ್ಷೆಯಲ್ಲಿದ್ದರು. ಆಗ ಅವರ ಸ್ತನದಲ್ಲಿ ನೋವು ಆರಂಭವಾಯಿತು. ವೈದ್ಯರು ಅವರ ಸ್ತನದಲ್ಲಿ ಅಸಹಜವಾದಾದನ್ನು ಅಲ್ಟ್ರಾಸೌಂಡ್ ಮೂಲಕ ಗುರುತಿಸಿದರು ಮತ್ತು ಶೀಘ್ರದಲ್ಲೇ, ಅವರಿಗೆ ಹಂತ 3 ರ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರಿಗೆ ಕೀಮೋಥೆರಪಿ ಚಿಕಿತ್ಸೆ ಪ್ರಾರಂಭವಾದವು, ಮತ್ತು ಕುಲ್ವಿಂದರ್ ಅನುಭವಿಸಿದ ಅದೇ ಸಂಕಟವನ್ನ ಅವರು ಅನುಭವಿಸಬೇಕಾಯಿತು.
ಅದೇನೇ ಇದ್ದರೂ, ಈಗ ಮೂರು ವರ್ಷಗಳು ಕಳೆದಿವೆ ಮತ್ತು ಮಗಳು ಚಿಕಿತ್ಸೆಯಿಂದಾ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಇಂದು, ಎಲ್ಲಾ ಕಷ್ಟಗಳನ್ನು ಎದುರಿಸಿದ ನಂತರ, ಕುಲ್ವಿಂದರ್, “ಕ್ಯಾನ್ಸರ್ ಅನ್ನು ಗೆಲ್ಲಲು ಬಲವಾದ ಇಚ್ಚಾಶಕ್ತಿಯು ಪ್ರಮುಖವಾಗುತ್ತದೆ ಎಂದು ನಾನು ನಂಬುತ್ತೇನೆ. ನಾನು ಇನ್ನು ಮುಂದೆ ಅಪರಿಚಿತರಿಗೆ ಹೆದರುವುದಿಲ್ಲ, ಮತ್ತು ಇದೇ ಧೈರ್ಯವನ್ನು ನನ್ನ ಮಗಳಿಗೂ ನೀಡಲು ಪ್ರಯತ್ನಿಸಿದ್ದೇನೆ ಎನ್ನುತ್ತಾರೆ.
ಕುಟುಂಬ ಮತ್ತು ಇತರ ಸ್ಥಳಗಳಲ್ಲಿ ಬೆಂಬಲ: ಸತೀಂದರ್ ಕೌರ್ ರಾಯತ್
ಸತೀಂದರ್ ಕೌರ್ ಅವರಿಗೆ ಸ್ತನ ಕ್ಯಾನ್ಸರ್ ಇರುವುದು ಮೊದಲ ಬಾರಿಗೆ ಪತ್ತೆಯಾದಾಗ, ಅವರು ತಮ್ಮ ಇಡೀ ಜೀವನ ಕುಸಿಯುತ್ತಿದೆ ಎಂದು ಭಾವಿಸಿದರು. ಅವರು ತಕ್ಷಣ ಶಸ್ತ್ರಚಿಕಿತ್ಸೆಗೆ ಹೋದರು, ಆದರೆ 12 ಕೀಮೋಥೆರಪಿ ಸೆಷನ್‌ಗಳ ಅಡ್ಡಪರಿಣಾಮಗಳು ಮತ್ತು ರೇಡಿಯೊಥೆರಪಿಯಿಂದಾಗಿ ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು. ಯಾರೋ ತಮ್ಮಿಂದ ಜೀವನವನ್ನು ಕಸಿಯುತ್ತಿದ್ದಾರೆ ಎಂದು ಅವರು ಭಾವಿಸಲಾರಂಭಿಸಿದರು. ಪ್ರತಿ ಕೀಮೋಥೆರಪಿ ಚಿಕಿತ್ಸೆಗೆ ಮೊದಲು ಅವರು ಮಾನಸಿಕವಾಗಿ ಕುಗ್ಗಿಹೋಗುತ್ತಿದ್ದರು.
ಇದಲ್ಲದೆ, ಚಿಕಿತ್ಸೆಯ ಭಾರಿ ವೆಚ್ಚದಿಂದಾಗಿ ಸತಿಂದರ್ ಅವರ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಎಲ್ಲಾ ಕಷ್ಟಗಳ ಹೊರತಾಗಿಯೂ, ಅವರ ಪತಿ ಮತ್ತು ಮಕ್ಕಳು ಅವರಿಗೆ ಉತ್ತಮ ಬೆಂಬಲ ನೀಡಿದರು. ಅವರ ಮಕ್ಕಳು ತುಂಬಾ ಚಿಕ್ಕವರಾಗಿದ್ದರೂ, ಅವರ ಮನೆಯ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು ಮತ್ತು ಅವರ ಶಿಕ್ಷಣದೊಂದಿಗೆ ಅವರ ಅಂಗಡಿಯನ್ನು ಕೂಡ ನೋಡಿಕೊಳ್ಳುತ್ತಿದ್ದರು, ಮತ್ತು ಪ್ರತಿ ಚಿಕಿತ್ಸೆಯ ವೆಚ್ಚವನ್ನು ಪೂರೈಸಲು ಸಾಲವನ್ನು ಪಡೆದರು. ಅವರನ್ನು ಆರೋಗ್ಯವಾಗಿಡಲು ಅವರು ಸಮತೋಲಿತ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರೆಯೇ ಎಂದು ಅವರ ಪತಿ ಖಚಿತಪಡಿಸಿಕೊಳ್ಳುತ್ತಿದ್ದರು. ಕಷ್ಟದ ಹಂತದಲ್ಲಿ ನಮಗೆ ಬೆಂಬಲಾಗಿ ಬಂದದ್ದು ತನ್ನ ಕುಟುಂಬ ಮಾತ್ರ ಎಂದು ಸತೀಂದರ್ ಭಾವಿಸುತ್ತಾರೆ.
ಸತಿಂದರ್ ಏಳರಿಂದ ಎಂಟು ಕೀಮೋಥೆರಪಿ ಚಿಕಿತ್ಸೆಯನ್ನು ಪೂರ್ಣಗೊಳಿಸಿದಾಗ, ಪತಿಗೆ ಹೃದಯಾಘಾತವಾಗಿದ್ದರಿಂದ ಅವರ ಕುಟುಂಬಕ್ಕೆ ಮತ್ತೊಂದು ಹೊಡೆತ ಬಿತ್ತು. ಇದು ಮುಖ್ಯವಾಗಿ ಒತ್ತಡ ಮತ್ತು ಆತಂಕದಿಂದಾಗಿ ಆಗಿದ್ದು ಎಂದು ವೈದ್ಯರು ತಿಳಿಸಿದ್ದರು.
ಇದು ಕುಟುಂಬದ ಎಲ್ಲ ಸದಸ್ಯರಿಗೆ ಪರೀಕ್ಷಾ ಸಮಯವಾಗಿತ್ತು. ತಮ್ಮ ಗಂಡನ ಆಸ್ಪತ್ರೆಯ ಚಿಕಿತ್ಸೆ ಮತ್ತು ಅವರ ಕೀಮೋಥೆರಪಿ ಅವಧಿಗಳ ನಡುವೆ ಅವರು ಹೋರಾಡುತ್ತಿದ್ದರಿಂದ ಅವರ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸಿದರು. ಅದೃಷ್ಟವಶಾತ್, ಸತೀಂದರ್ ಅವರಿಗೆ, ಅವರ ಸಂಬಂಧಿಕರು ಮತ್ತು ಕುಟುಂಬವು ಸಹಾಯ ಮಾಡಲು ಮುಂದೆ ಬಂದು ಮನೆಯ ಕೆಲವು ಕೆಲಸಗಳನ್ನು ನೋಡಿಕೊಂಡರು. ಇಂದು, ಅವರು “ನನ್ನ ಹೆಣ್ಣುಮಕ್ಕಳು ಇಬ್ಬರೂ ಸಂತೋಷದಿಂದ ಮದುವೆಯಾಗಿದ್ದಾರೆ, ಮತ್ತು ನನ್ನ ಪತಿ ಆರೋಗ್ಯವಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ನನ್ನ ಕಳೆದುಹೋದ ಆತ್ಮವಿಶ್ವಾಸವನ್ನು ನಾನು ಮತ್ತೆ ಪಡೆದುಕೊಂಡಿದ್ದೇನೆ ಮತ್ತು ನಾನು ಈಗ ಸ್ವತಂತ್ರ ಮಹಿಳೆ” ಎಂದು ಹೇಳುತ್ತಾರೆ.