ಕೊರೊನಾವೈರಸ್ ವಿರುದ್ಧ ಹೋರಾಡಲು ಸಜ್ಜಾಗಿವೆ ಔಷಧ ತಯಾರಕ ಸಂಸ್ಥೆಗಳು
ವಿಶ್ವದಾದ್ಯಂತ ವಿವಿಧ ಜೀವ ವಿಜ್ಞಾನ ಕಂಪನಿಗಳು ಕೋವಿಡ್-19 ಗೆ ಚಿಕಿತ್ಸೆ ನೀಡಲು ಸಂಭಾವ್ಯ ಲಸಿಕೆಗಳು ಮತ್ತು ರೋಗನಿರ್ಣಯಗಳ ಮೇಲೆ ತಮ್ಮ ಸಂಶೋಧನೆಯನ್ನು ಕೈಗೊಂಡಿವೆ.
ಜಗತ್ತಿನಾದ್ಯಂತ ಕರೋನವೈರಸ್ ಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ, ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಮೂಲಸೌಕರ್ಯಗಳ ಕೊರತೆಯ ಕುರಿತು ಎಲ್ಲೆಡೆ ಆತಂಕ ವ್ಯಕ್ತವಾಗಿದೆ. ಪರೀಕ್ಷಾ ಕಿಟ್‌ಗಳು, ಆಸ್ಪತ್ರೆ ಬೆಡ್‌ಗಳು, ರೋಗನಿರ್ಣಯ ಪ್ರಯೋಗಾಲಯಗಳು ಮತ್ತು ಆರೋಗ್ಯ ವೃತ್ತಿಪರರ ಕೊರತೆಯು ಮಾರಣಾಂತಿಕತ ವೈರಸ್ ಅನ್ನು ನಿಯಂತ್ರಿಸಲು ಎದುರಾದ ಬಹುದೊಡ್ಡ ತಡೆಯಾಗಿದೆ.
ಕೋವಿಡ್-19 ಗಾಗಿ ಔಷದಗಳನ್ನು, ಲಸಿಕೆಗಳನ್ನು ಮತ್ತು ಇತರ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡುವ ಮೂಲಕ ಅನೇಕ ಔಷಧ ತಯಾರಕ ಕಂಪನಿಗಳು ಮತ್ತು ಜೀವ ವಿಜ್ಞಾನ ಕಂಪನಿಗಳು ಈ ಎಲ್ಲ ಅಡೆತಡೆಗಳ ಮಧ್ಯೆಯೂ ಭರವಸೆಯ ಆಶಾಕಿರಣವನ್ನು ಮುಂದಿಟ್ಟಿವೆ.
ಒಗ್ಗಟ್ಟಿನಲ್ಲಿ ಬಲವಿದೆ
ಇಂದು ಜೀವ ವಿಜ್ಞಾನ ಉದ್ಯಮವು ಜೈವಿಕ ತಂತ್ರಜ್ಞಾನ, ಔಷಧಗಳ ತಯಾರಿಕೆ, ಬಯೋಮೆಡಿಕಲ್ ತಂತ್ರಜ್ಞಾನಗಳು ಮತ್ತು ನ್ಯೂಟ್ರಾಸ್ಯುಟಿಕಲ್‌ಗಳಲ್ಲಿ ತೊಡಗಿರುವ ಕಂಪನಿಗಳು ಮತ್ತು ಸಂಸ್ಥೆಗಳನ್ನು ಒಳಗೊಂಡಿದೆ. ಹಲವಾರು ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿರುವ ತಂತ್ರಜ್ಞರು ರೋಗನಿರ್ಣಯ, ವೈದ್ಯಕೀಯ ಸಂಯುಕ್ತಗಳು, ತನಿಖಾ ಲಸಿಕೆಗಳು ಮತ್ತು ಔಷಧಿಗಳಿಗೆ ಸಂಬಂಧಿಸಿದ ಉತ್ಪನ್ನಗಳು ಮತ್ತು ಅವುಗಳ ಪ್ರಕ್ರಿಯೆಗಳನ್ನು ನಿರ್ವಹಿಸುವಲ್ಲಿ ಸಾಕಷ್ಟು ಅನುಭವವನ್ನು ಗಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕರೋನವೈರಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದ ಬೆನ್ನಲ್ಲೇ ಇಂದು ಎಲ್ಲರ ದೃಷ್ಟಿ ಜೀವ ವಿಜ್ಞಾನ ಉದ್ಯಮದತ್ತ ಇದೆ.
ಈ ವೈರಸ್ ನನ್ನು ಕೊನೆಗೊಳಿಸುವಂತಹ, ಜನರ ಜೀವ ಉಳಿಸುವ ಲಸಿಕೆಯನ್ನು ಕಂಡುಹಿಡಿಯುವಲ್ಲಿ ಇದು ಯಶಸ್ವಿಯಾಗುತ್ತದೆಯೇ? ಕರೋನವೈರಸ್‌ನ ಪ್ರಭಾವವನ್ನು ನಿಧಾನಗೊಳಿಸುತ್ತದೆ?
ಹೊಸ ಹೆಜ್ಜೆ ಇಟ್ಟ ಗೇಟ್ಸ್ ಫೌಂಡೇಶನ್
ಮಾರ್ಚ್ 25, 2020 ರಂದು, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನೊಂದಿಗಿನ ಸಂಸ್ಥೆಗಳ ಒಕ್ಕೂಟವು ಸಾಂಕ್ರಾಮಿಕ ರೋಗಕ್ಕೆ ಬಲವಾದ ಮತ್ತು ತುರ್ತು ಪರಿಹಾರಗಳನ್ನು ಗುರುತಿಸಲು ಹಲವಾರು ಸಂಪನ್ಮೂಲಗಳು ಮತ್ತು ಪರಿಣತರನ್ನು ಒಂದೆಡೆ ಸೇರಿಸಲು ತಮ್ಮ ಸಹಯೋಗವನ್ನು ಘೋಷಿಸಿತು.
ಒಕ್ಕೂಟದ ಸಹ-ಅಧ್ಯಕ್ಷ ಮತ್ತು ನೊವಾರ್ಟಿಸ್‌ನ ಸಿಇಒ ವಾಸ್ ನರಸಿಂಹನ್, “ಈ ಸಾಂಕ್ರಾಮಿಕಕ್ಕೆ ಪರಿಹಾರಗಳನ್ನು ಚುರುಕುಗೊಳಿಸಬಲ್ಲ ನಿರ್ದಿಷ್ಟ ಕ್ಷೇತ್ರಗಳನ್ನು ಗಮನಿಸಬೇಕಾದ ಪ್ರಮುಖ ಜವಾಬ್ದಾರಿಯನ್ನು ನಾವು ಇಂದು ಹೊರಬೇಕಾಗಿದೆ. ವೈಯಕ್ತಿಕ ಕೊಡುಗೆಗಳ ಹೊರತಾಗಿ, ಅಪೇಕ್ಷಿತ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಸಾಮೂಹಿಕ ಕ್ರಮವು ಮುಖ್ಯವಾಗಿದೆ," ಎಂದರು.
ಕೋವಿಡ್-19 ಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಲಸಿಕೆಗಳು ಮತ್ತು ರೋಗನಿರ್ಣಯಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ಸ್ವಿಸ್ ಬಹುರಾಷ್ಟ್ರೀಯ ಔಷಧ ಕಂಪನಿ ನೊವಾರ್ಟಿಸ್ ನೀಡಿದ ಕೊಡುಗೆ ಪ್ರಮುಖವಾಗಿದೆ.
ಇನ್ನುಳಿದಂತೆ, ಇತರ ಕಂಪೆನಿಗಳಾದ ಬಿ ಡಿ, ಬಯೋ ಮೆರಿಯೂಸ್, ಬೊಹೇರಿನಗರ್ ಇಂಜಲಹೆಇಂ, ಬ್ರಿಸ್ಟಾಲ್ ಮೈಸೆರ್ ಸ್ಕ್ಸ್ಇಬ್ಬ, ಐಸೈ, ಎಲಿ ಲಿಲ್ಲಿ, ಗಿಲ್ಯಾಡ್, ಜಿಎಸ್‌ಕೆ, ಜಾನ್ಸನ್ ಮತ್ತು ಜಾನ್ಸನ್, ಮರ್ಕ್, ಮರ್ಕ್ ಕೆಜಿಎಎ, ಫೈಜರ್ ಮತ್ತು ಸನೋಫಿ ಸಹ ತಮ್ಮ ಕೊಡುಗೆಯನ್ನ ನೀಡುತ್ತಿವೆ.
"ಖಾಸಗಿ ವಲಯವು ತಾಂತ್ರಿಕ ಕೌಶಲ್ಯಗಳನ್ನು ಹೊಂದಿದೆ ಮತ್ತು ಹೊಸ ಆವಿಷ್ಕಾರದಲ್ಲಿ, ಕ್ಲಿನಿಕಲ್ ಪ್ರಯೋಗದಲ್ಲಿ ಪ್ರಗತಿ ಸಾಧಿಸಿವೆ ಎಂಬುವುದು ನಮಗೆ ತಿಳಿದಿದೆ. ನಮ್ಮ ಫೌಂಡೇಶನ್ ಈ ಅನುಭವವನ್ನು ಒಟ್ಟಾಗಿ ಒಕ್ಕೂಟದ ಮೂಲಕ ಬಳಸಿಕೊಳ್ಳಲು ಎದುರು ನೋಡುತ್ತಿದೆ," ಎಂದು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಿಇಒ ಮಾರ್ಕ್ ಸುಜ್ಮಾನ್ ಹೇಳುತ್ತಾರೆ.
"ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಧಾನಗೊಳಿಸಲು ಮತ್ತು ಹೊಸ ರೋಗಿಗಳು ದಾಖಲಾಗದಂತೆ ಎಚ್ಚರವಹಿಸಲು ರಾಷ್ಟ್ರೀಯ ನಿಯಂತ್ರಕರು ಮತ್ತು ಡಬ್ಲ್ಯುಎಚ್‌ಒ ಜೊತೆ ಸಂಪರ್ಕ ಸಾಧಿಸಲು ನಾವು ಬಯಸುತ್ತೇವೆ. ಇದರ ಫಲಿತಾಂಶವು ಜನಸಾಮಾನ್ಯರಿಗೆ ವಿಶೇಷವಾಗಿ ಬಡಜನರಿಗೆ ತಲುಪುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ", ಮಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ.
ಗೇಟ್ಸ್ ಫೌಂಡೇಶನ್, ವೆಲ್‌ಕಮ್ ಮತ್ತು ಮಾಸ್ಟರ್‌ಕಾರ್ಡ್ ಎಂಬ ಮೂರು ಘಟಕಗಳು ಕೋವಿಡ್-19ಗೆ ಲಸಿಕೆ ಮತ್ತು ಔಷಧವನ್ನು ಕಂಡುಹಿಡಿಯುವಲ್ಲಿ ಸಂಶೋಧನೆಗೆ ಮುಂದಾದ ಬೆನ್ನಲ್ಲೇ ಚಿಕಿತ್ಸಕ ವೇಗವರ್ಧಕದೊಂದಿಗೆ ನಿರ್ದಿಷ್ಟ ಪ್ರಮಾಣದ ಸುರಕ್ಷತೆಯನ್ನು ಹೊಂದಿರುವ ಆಣ್ವಿಕ ಜೀವ ವಿಜ್ಞಾನಕ್ಕೆ ಸಂಬಂದಿಸಿದ ಶೇರ್ ಪ್ರಾಪರ್ಟಿ ಲೈಬ್ರೆರಿಯು ತನ್ನ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಈಗಾಗಲೇ ಒಪ್ಪಿಕೊಂಡಿದೆ. ಸಂಶೋಧನೆ ಕೈಗೊಂಡ, ಮುಂದಿನ ಎರಡು ತಿಂಗಳಲ್ಲಿ ಯಶಸ್ವಿಯಾದ ಫಲಿತಾಂಶಗಳನ್ನು ವಿವೋ ಪ್ರಯೋಗಗಳಿಗಾಗಿ ಕಳಿಸಲಾಗುವುದು.
"ಇದು ಇಂದಿನ ತುರ್ತುಪರಿಸ್ಥಿತಿಯಲ್ಲಿ ಪ್ರೋತ್ಸಾಹದಾಯಕ ಆರಂಭವಾಗಿದೆ, ಏಕೆಂದರೆ ಈ ಯಾವುದೇ ಸಂಯುಕ್ತಗಳು ಕೋವಿಡ್-19 ವಿರುದ್ಧ ಪರಿಣಾಮಕಾರಿ ಎಂದು ಕಂಡುಬಂದರೆ, ಆ ಉತ್ಪನ್ನದ ಅನುಮೋದನೆ ಮತ್ತು ಪ್ರಮಾಣವನ್ನು ಹೆಚ್ಚಿಸುವ ಹಾದಿಯನ್ನು ವೇಗಗೊಳಿಸುತ್ತದೆ. ಹೆಚ್ಚುವರಿಯಾಗಿ, ಒಕ್ಕೂಟದ ಪ್ರತಿಯೊಬ್ಬ ಪಾಲುದಾರರೂ ದೇಶೀಯ ಸರ್ಕಾರಗಳೊಂದಿಗೆ ಸ್ವತಂತ್ರ ಪ್ರಯತ್ನಗಳನ್ನು ಅನುಸರಿಸಿದರೆ, ಪ್ರಸ್ತುತ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಪರಿಹರಿಸುವಲ್ಲಿ ನಾವು ಆಶವಾದಿಗಳಾಗಬಹುದು,” ಎಂದು ಮಾರ್ಕ್ ಹೇಳುತ್ತಾರೆ.
ಮಿಷನ್ ಕೋವಿಡ್-19
ಈ ಸಂಸ್ಥೆಗಳ ಹೊರತಾಗಿ, ಇತರ ಬಯೋಟೆಕ್ ಸಂಸ್ಥೆಗಳು ವೈರಸ್ ಅನ್ನು ಗುರಿಯಾಗಿಸಿಕೊಂಡು ಲಸಿಕೆಗಳು ಮತ್ತು ಚಿಕಿತ್ಸಕಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ.
ಔಷಧಿ ಅಭಿವೃದ್ಧಿಗೆ ಹೆಸರುವಾಸಿಯಾದ ಮ್ಯಾಸಚೂಸೆಟ್ಸ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿಯಾದ ಮಾಡರ್ನಾ, ಆಂಟಿಜೆನ್‌ಗಳು ಮತ್ತು ಮೇಲ್ಮೈ ಪ್ರೋಟೀನ್‌ಗಳನ್ನು ಒಳಗೊಂಡಂತೆ ಕೋವಿಡ್-19 ನ ಹೆಚ್ಚಿನ ಇಮ್ಯುನೊಜೆನಿಕ್ ಭಾಗವನ್ನು ಸಂಕೇತಿಸುವ ಅನುಕ್ರಮಗಳನ್ನು ಬಳಸಿಕೊಂಡು ಅಗತ್ಯ ಲಸಿಕೆಯನ್ನು ತಯಾರಿಸುತ್ತಿದೆ.
ಮುಂಬರುವ ವಾರಗಳಲ್ಲಿ ಕೋವಿಡ್-19 ಗೆ ಚಿಕಿತ್ಸೆ ನೀಡುವ ಆಂಟಿವೈರಲ್ ರಿಮೆಡೆಸಿವಿರ್ ಸಾಮರ್ಥ್ಯವನ್ನು ಅನ್ವೇಷಿಸಲು ಗಿಲ್ಯಾಡ್ ಸೈನ್ಸಸ್ ತನ್ನ ಪ್ರಯೋಗವನ್ನು ಪ್ರಾರಂಭಿಸಲು ಸಜ್ಜಾಗಿದೆ. ಕೆವ್ಜಾರಾ ಎಂಬ ಸಂಧಿವಾತ ಔಷಧವನ್ನು ಬಳಸಿಕೊಂಡು ಕೊರೋನವೈರಸ್ ಚಿಕಿತ್ಸೆಗೆ ಔಷಧಿಗಳನ್ನು ನಿರ್ಣಯಿಸಲು ಯುಎಸ್ ಸಂಸ್ಥೆ ರೆಜೆನೆರಾನ್ ಇತ್ತೀಚೆಗೆ ತನ್ನ ಎರಡನೇ ಜಾಗತಿಕ ಕ್ಲಿನಿಕಲ್ ಪ್ರಯೋಗವನ್ನು ಮಾಡುತ್ತಿದೆ.
ಆನುವಂಶಿಕ ಮತ್ತು ಸೂಕ್ಷ್ಮಜೀವಿಯ ಪರೀಕ್ಷೆಯ ಬಿ 2 ಸಿ ಪ್ಲಾಟ್‌ಫಾರ್ಮ್ ಆಗಿರುವ ಭಾರತದ ಬಯೋನ್ ವೆಂಚರ್ಸ್, ವೈರಸ್ ಅನ್ನು ನಿಭಾಯಿಸಲು ಮನೆ ಸೂಕ್ಷ್ಮಜೀವಿ ಮತ್ತು ಆನುವಂಶಿಕ ಪರೀಕ್ಷೆಗಳನ್ನು ನಡೆಸುತ್ತಿದೆ. ವೈರಸ್‌ಗೆ ಬಲಿಯಾಗುವ ವ್ಯಕ್ತಿಯಲ್ಲಿ ಕಾರಣವಾಗುವ ನಿರ್ದಿಷ್ಟ ಜೀನ್ ರೂಪಾಂತರಗಳನ್ನು ಕಂಡುಹಿಡಿದಿದೆ ಮತ್ತು ಶೀಘ್ರದಲ್ಲೇ ಔಷಧವನ್ನು ಕಂಡುಹಿಡಿಯಲು ಸಂಶೋಧನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ. ಸದ್ಯಕ್ಕೆ ಇದು ಮನೆ ಮನೆಗೆ ರೋಗನಿರ್ಣಯ ಕಿಟ್‌ಗಳನ್ನು ಪರಿಚಯಿಸುವ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.