ಸೌರ ಶಕ್ತಿಯನ್ನು ಬಳಸಿ ಕಾರ್‌ ಚಾರ್ಜ್‌ ಮಾಡುತ್ತಿರುವ ಮುಂಬೈನ ಅಪಾರ್ಟಮೆಂಟ್

ಮುಂಬೈನ ಅಪಾರ್ಟಮೆಂಟ್ ಕಾರುಗಳಿಗೆ ಸೌರಶಕ್ತಿಯನ್ನು ಬಳಸಿ ನೇರವಾಗಿ ಚಾರ್ಜಿಂಗ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿದೆ. ಸೌರಶಕ್ತಿ ಬಳಸುವದರಿಂದ ವಿದ್ಯುತ್ ಬಳಕೆ‌ ಕಡಿಮೆಯಾಗಿ ಅಪಾರ್ಟ್ ಮೆಂಟ್ ಅತೀ ಕಡಿಮೆ ವಿದ್ಯುತ್‌ ಶುಲ್ಕವನ್ನು ಭರಿಸುತ್ತಿದೆ.

ಸೌರ ಶಕ್ತಿಯನ್ನು ಬಳಸಿ ಕಾರ್‌ ಚಾರ್ಜ್‌ ಮಾಡುತ್ತಿರುವ ಮುಂಬೈನ ಅಪಾರ್ಟಮೆಂಟ್

Tuesday October 29, 2019,

2 min Read

ಸೌರಶಕ್ತಿಯೂ ಎಲ್ಲ ಶಕ್ತಿಗಳ ಮೂಲವಾಗಿದೆ. ಇಂತಹ ಶಕ್ತಿಯನ್ನು ಉಪಯೋಗಿಸಿಕೊಂಡು ಮಹಾರಾಷ್ಟ್ರದ ಮುಂಬೈ ನಗರದಲ್ಲಿರುವ ವಸತಿ ಸಮುಚ್ಚಯವೊಂದು ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವದರ ಜೊತೆಗೆ ಮೂರು ಸೌರಶಕ್ತಿಚಾಲಿತ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ವಿನೂತನ ಪ್ರಯತ್ನವೊಂದನ್ನು ಮಾಡಿದೆ.


ಭಾರತದಲ್ಲಿಯೆ ಇದು ಮೊದಲ ಯೋಜನೆಯಾಗಿದೆ ಎಂದು ನೂತನ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ) ಹೇಳಿದೆ.


qw

(ಚಿತ್ರಕೃಪೆ: ಮೆಜೆಂಟಾ ಪವರ್‌, ನ್ಯೂಸ್18)




ಈ ಸೌರ ಯೋಜನೆಯನ್ನು ಅಳವಡಿಸಿಕೊಳ್ಳುವ ಮೂಲಕ ಸಾನ್‌ಪಾಡಾದಲ್ಲಿನ ಷಾ ಕಾಂಪ್ಲೆಕ್ಸ್ IV ಹೌಸಿಂಗ್ ಸೊಸೈಟಿಯೂ ‘ಶೂನ್ಯ ಶಕ್ತಿ' ಅಪಾರ್ಟಮೆಂಟ್ ಆಗಲು ಯಶಸ್ವಿಯಾಗಿದೆ. ಅಂದರೆ ವಾರ್ಷಿಕವಾಗಿ ಬಳಸಲ್ಪಡುವ ಒಟ್ಟು ಶಕ್ತಿಯು ಸೈಟ್‌ನಲ್ಲಿ ರಚಿಸಲಾದ‌ ನವೀರಿಸಬಹುದಾದ ಶಕ್ತಿಗೆ ಸಮವಾಗಿರುತ್ತದೆ. ಇದರಿಂದ ಸೊಸೈಟಿಯ ವಿದ್ಯುತ್ ಬಿಲ್ ಮಾಸಿಕ ಸರಾಸರಿ‌ 25,000 ರೂಪಾಯಿ ಬರುವುದು ಈಗ ಕಡಿಮೆ ದರಕ್ಕೆ ಇಳಿದೆದೆ.


ಸಂಕೀರ್ಣದ(ಕಾಂಪ್ಲೆಕ್ಸ್) ಕಾರ್ಯದರ್ಶಿಯಾಗಿರುವ ವೆಂಕಟೇಶ್ವರನ್‌ ಹಿಂದೂಸ್ಥಾನ್ ಟೈಮ್ಸ್ ಜೊತೆಗೆ ಮಾತನಾಡುತ್ತಾ,


"ಜವಾಬ್ದಾರಿಯುತ ಸಮಾಜದ ಹೊಣೆ ಹೊತ್ತ ನಾವು ಸೌರ ಯೋಜನೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದೇವೆ. ಇದರಿಂದ ಹೆಚ್ಚು ಲಾಭವನ್ನು ಪಡೆಯುತ್ತಿದ್ದೇವೆ. ಮುಂದಿನ ಭವಿಷ್ಯವು ಎಲೆಕ್ಟ್ರಿಕ್ ವಾಹನಗಳಾಗಿರುವುದರಿಂದ ನಾವು ಸೌರ ಸ್ಥಾವರವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆವು" ಎಂದರು.


ಸೌರಶಕ್ತಿಯು ಸುಲಭವಾಗಿ ನವೀಕರಣಗೊಳ್ಳಬಹುದಾದಂತಹ ಉಚಿತ ಶಕ್ತಿಯ ಮೂಲವಾಗಿದೆ. ಇದು ಯಾವುದೇ ರೀತಿಯ ಇಂಗಾಲದ ಹೊರಸೂಸುವಿಕೆಯನ್ನು ಮಾಡದೆ ಇರುವದರಿಂದ ಯಾವುದೇ ಮಾಲಿನ್ಯ ಉಂಟಾಗುವುದಿಲ್ಲ. ಜೊತೆಗೆ ವಿದ್ಯುತ್ತಾಗಿ, ಅನಿಲ, ತೈಲ,‌ ಎಲೆಕ್ಟ್ರಿಕ್ ವಾಹನಗಳ ಬಳಕೆಗೂ ಉಪಯೋಗವಾಗುತ್ತದೆ. ಖಾಸಗಿ ಕಂಪನಿ ಮೆಜೆಂಟಾ ಪವರ್ ಸ್ಥಾಪಿಸಿದ ಯೋಜನೆಯೊಂದು‌ 492 ಟನ್ ಇಂಗಾಲದ ಡೈ ಆಕ್ಸೈಡ್ ಅನ್ನು ತಗ್ಗಿಸಲು ಸಹಾಯ ಮಾಡುತ್ತದೆ, ಇದು 787 ತೇಗದ ಮರಗಳನ್ನು ನೆಡುವುದಕ್ಕೆ ಸಮನಾಗಿದೆ, ವರದಿ ದಿ ಲಾಜಿಕಲ್ ಇಂಡಿಯನ್.


ಹಿರಿಯ ಎಂಎನ್‌ಆರ್‌ಇ ಅಧಿಕಾರಿಯೊಬ್ಬರು 2030ರ ವೇಳೆಗೆ ಭಾರತವು ತನ್ನ ಶಕ್ತಿಯ ಕನಿಷ್ಟ 40 ಪ್ರತಿಶತವನ್ನು ಪಳೆಯುಳಿಕೆ ರಹಿತ ಇಂಧನ ಮೂಲಗಳಿಂದ ಉತ್ಪತ್ತಿಮಾಡುತ್ತದೆ ಎಂದು ಹೇಳುತ್ತಾರೆ. "ವಸತಿ ಸಮುಚ್ಛಯಗಳ ಈ ರೀತಿಯ ವಿನೂತನ ಹಂತಗಳು ನಮ್ಮ ಗುರಿಗಳನ್ನು ಸಾಧಿಸಲು ಆಧಾರವಾಗಿವೆ" ಎನ್ನುತ್ತಾರೆ.


ರಾಜ್ಯ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಸಿಂಗ್,


"ಇಂತಹ ಪ್ರಯತ್ನಗಳು ಮಹಾರಾಷ್ಟ್ರದ ಅತಿ ಹೆಚ್ಚು ಮೇಲ್ಛಾವಣಿಯ ಸೌರ ಸ್ಥಾಪನೆಗಳನ್ನು(200 ಮೆಗಾವ್ಯಾಟ್) ಹೊಂದುವ ಗುರಿಗೆ ಬಲ ನೀಡುತ್ತದೆ. ಅಂತಹ ಸ್ಥಾಪನೆಗಳಿಗಾಗಿ ನಾವು ಹೆಚ್ಚಿನ ಸಬ್ಸಿಡಿಗಳನ್ನು ಒದಗಿಸುತ್ತೇವೆ" ಎಂದಿದ್ದಾರೆ.


ಸಣ್ಣ ವಸತಿ ಸಂಕೀರ್ಣಗಳ ಈ ಕ್ರಮವು ನಗರದ ಇತರೆ ಅಪಾರ್ಟ್‌ಮೆಂಟ್‌ಗಳಿಗೆ ಸೌರಶಕ್ತಿ ಅಳವಡಿಕೊಳ್ಳಲು ಸಹಾಯಕವಾಗಿದೆ. 2025ರ ನಂತರದಲ್ಲಿ ಪಳೆಯುಳಿಕೆ ಇಂಧನವನ್ನು ಬಳಸುವ ದ್ವಿಚಕ್ರ ವಾಹನಗಳನ್ನು ವಿದ್ಯುಚ್ಛಕ್ತಿಗೆ ಬದಲಾಯಿಸಬೇಕೆಂಬ ಸರ್ಕಾರದ ಪ್ರಸ್ತಾವಿತ ಯೋಜನೆಗೆ ಈ ಕ್ರಮವು ಹೊಂದಿಕೊಳ್ಳುತ್ತದೆ. ಇದರ ಮೂಲಕ ಮಾಲಿನ್ಯ ಕಡಿಮೆಯಾಗುತ್ತದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.