ಪೌರಕರ್ಮಿಕರಾಗಿ ದುಡಿದ ಉಷಾ ಚೌಮರ್ ಗೆ ಪದ್ಮಶ್ರೀ ಪುರಸ್ಕಾರ
ಉಷಾ ಚೌಮರ್ ತಮ್ಮ 7 ನೇ ವಯಸ್ಸಿಗೆ ಬರಿಯ ಕೈಗಳಿಂದ ತ್ಯಾಜ್ಯವನ್ನು ಸ್ವಚ್ಚಗೊಳಿಸುವ ಕೆಲಸಕ್ಕೆ ಸೇರಿಕೊಂಡರು. ಪ್ರಸ್ತುತ ಸುಲಭ್ ಅಂತರರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷರಾಗಿ ಹಲವಾರು ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮನಸಲ್ಲಿ ಸಾಧಿಸುವ ಛಲ ಮತ್ತು ಬದುಕಿನ ಕುರಿತಾದ ಅಪಾರವಾದ ಪ್ರೀತಿ ಬಹುಶಃ ಇವೆರೆಡೆ ಸಾಕು ಬದುಕು ನಮ್ಮತ್ತ ಎಸೆದ ಎಲ್ಲಾಸವಾಲುಗಳನ್ನೂ ನಗುನಗುತ್ತಲೇ ಸ್ವೀಕರಿಸಿ ಸಾಧನೆಯ ಶಿಖರವನ್ನು ಏರಲು.
ಈ ಸಾಲಿನಲ್ಲಿ ಪ್ರತಿಯೊಬ್ಬರು ಮೆಚ್ಚಿಕೊಳ್ಳಬೇಕಾದ ಸಾಧನೆಗೈದು, ಭಾರತ ಸರಕಾರ ಕೊಡಮಾಡುವ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡ್ಮಶ್ರೀ ವಿಜೇತರಾದ ಉಷಾ ಚೌಮಾರ್ ನಿಲ್ಲುತ್ತಾರೆ.
ರಾಜಸ್ಥಾನದ ಭರತ್ ಪುರ್ ಜಿಲ್ಲೆಯ ಅತ್ಯಂತ ಬಡಕುಂಟುಂಬ ಒಂದರಲ್ಲಿ ಜನಿಸಿದ ಉಷಾ ತಮ್ಮ 7 ನೇ ವಯಸ್ಸಿಗೆ ಬರಿಯ ಕೈಗಳಿಂದ ನಗರದ ತ್ಯಾಜ್ಯವನ್ನು ಸ್ವಚ್ಚಗೊಳಿಸುವ ಕೆಲಸಕ್ಕೆ ಸೇರಿಕೊಂಡರು. ತಮ್ಮ 10 ನೇ ವಯಸ್ಸಿಗೆ ಅಲ್ವಾರ್ ಜಿಲ್ಲೆಗೆ ಮದುವೆ ಆಗಿ ಹೋದರು ತಮ್ಮ ಪತಿಯೊಂದಿಗೆ ಬರಿಯ ಕೈಗಳಿಂದ ನಗರದ ತ್ಯಾಜ್ಯವನ್ನು ಸ್ವಚ್ಚಗೊಳಿಸುವ ಕೆಲಸ ತಪ್ಪಲಿಲ್ಲಿ.
ಆದರೆ ಉಷಾರವರ ಜೀವನದಲ್ಲಿ ತಿರುವು ಪಡೆದುಕೊಂಡ ಘಟನೆ ಎಂದರೆ, ಡಾ. ಬಿಂದೇಶ್ವರ ಪಾಠಕ್ ಅಲ್ವಾರ್ನಲ್ಲಿ ಸುಲಭ್ ಇಂಟರ್ನ್ಯಾಷನಲ್ ಕೇಂದ್ರವನ್ನು ನಯಿ ದಿಶಾ ಎಂದು ಸ್ಥಾಪಿಸಿದ್ದು. ಇದು ಹಿಂದುಳಿದ ಮಹಿಳೆಯರಿಗೆ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ಮೊದಲಾದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಮಾರಿ ಹಣಸಂಪಾದಿಸುವ ಇತರ ಕೆಲಸಗಳಲ್ಲಿ ಮಹಿಳೆಯರು ತೊಡಗಿಕೊಳ್ಳುವಂತೆ ಪ್ರೇರೇಪಿಸಿತು, ವರದಿ ಶಿ ದ ಪೀಪಲ್.
ಇಂಡಿಯಾ ಟುಡೇ ಯೊಂದಿಗೆ ಮಾತನಾಡಿದ ಉಷಾ,
"ನಾನು ಎಂದಿಗೂ ಮಲಹೋರುವ ಕೆಲಸವನ್ನು ಬಿಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ, ಆದರೆ ಡಾ. ಪಾಠಕ್ ಅವರ ನಯಿ ದಿಶಾದಿಂದ ಅದು ಸಂಭವಿಸಿತು. ನಾನು 2003 ರಲ್ಲಿ ಮಲಹೋರುವ ಕೆಲಸವನ್ನು ಬಿಟ್ಟಿದ್ದೇನೆ," ಎಂದರು.
ಪ್ರಸ್ತುತ ಸುಲಭ್ ಅಂತರರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷರಾಗಿರುವ ಉಷಾ ಹಲವಾರು ದೇಶಗಳಿಗೆ ಭೇಟಿ
ನೀಡಿದ್ದಾರೆ, ವಿವಿಧ ವೇದಿಕೆಯಲ್ಲಿ ನಿರರ್ಗಳವಾಗಿ ಮಾತನಡುತ್ತಾರೆ, ಬರಿಯ ಕೈಗಳಿಂದ ತ್ಯಾಜ್ಯವನ್ನು ಸ್ವಚ್ಚಗೊಳಿಸುವಂತ ಅಮಾನವೀಯ ಕೆಲಸಗಳನ್ನು ಸಮಾಪ್ತಿಗೊಳಿಸಲು ಕಂಕಣಬದ್ಧರಾಗಿದ್ದರೆ.
ಇವರ ಈ ಸೇವಮನೋಭಾವಕ್ಕೆ ಭಾರತ ಸರಕಾರ 2020 ರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಈ ಬದುಕು ನಮಗೆಲ್ಲರಿಗೂ ಸ್ಪೂರ್ತಿಯಗಲಿ ಎಂದು ಆಶಿಸೋಣ.