Bengaluru Tech Summit 2020
View Brand Publisher25+ ದೇಶಗಳು ಭಾಗವಹಿಸುತ್ತಿರುವ ಬಿಟಿಎಸ್2020 ನಾವೀನ್ಯತೆ ಮತ್ತು ಸಹಭಾಗಿತ್ವದ ಮುಖ್ಯ ಕೇಂದ್ರವಾಗಿದೆ
ಭಾರತದ ಬಹುದೊಡ್ಡ ಟೆಕ್ ಶೃಂಗಸಭೆಯಾದ ಬೆಂಗಳೂರು ಟೆಕ್ ಸಮ್ಮಿಟ್(ಬಿಟಿಎಸ್)ನಲ್ಲಿ 25 ಕ್ಕೂ ಅಧಿಕ ದೇಶಗಳು ಭಾಗವಹಿಸಲಿವೆ. ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ವಿಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಉಪಕ್ರಮವಾದ ಗ್ಲೋಬಲ್ ಇನ್ನೊವೇಷನ್ ಅಲ್ಲಿಯಾನ್ಸ್(ಜಿಐಎ) ಜಗತ್ತಿನ ಪ್ರಮುಖ ತಂತ್ರಜ್ಞಾನ ಮತ್ತು ನಾವೀನ್ಯ ಹಬ್‌ಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಹಕಾರಿಯಾಗಿದೆ. ಬಿಟಿಎಸ್2020 ನಲ್ಲಿ ಜಿಐಎ ಕಂಟ್ರಿ ಪಾರ್ಟ್ನರ್‌ಗಳು ಅವರ ದೇಶಗಳ ಐಟಿ, ಬಯೋಟೆಕ್, ಆರೋಗ್ಯ, ಅಗ್ರಿಟೆಕ್, ಫಿನ್‌ಟೆಕ್, ಆಹಾರ ಮತ್ತು ಪೋಷಕಾಂಶ, ಸೈಬರ್‌ಸುರಕ್ಷೆ ಮತ್ತು ಇತರೆ ಕ್ಷೇತ್ರಗಳ ಸೆಷನ್‌ಗಳನ್ನು ಸಂಗ್ರಹಿಸುವುದಲ್ಲದೆ ಕ್ರಾಂತಿಕಾರಿ ತಂತ್ರಜ್ಞಾನ, ಶಕ್ತಿ ಮತ್ತು ಸಹಭಾಗಿತ್ವ ಅವಕಾಶಗಳನ್ನು ತೆರೆದಿಡುತ್ತಾರೆ.
ಸೋಮವಾರ ಕರ್ನಾಟಕ ಸರ್ಕಾರ ಐಟಿ, ಬಿಟಿ ಇಲಾಖೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಿಟಿಎಸ್‌ನಲ್ಲಿ ಜಾಗತಿಕ ಪಾಲುದಾರಿಕೆಯನ್ನು ಎತ್ತಿ ತೋರಿಸಲು 10 ದೇಶಗಳ ಎಕೊಸಿಸ್ಟಮ್ ನಾಯಕರು ಪಾಲ್ಗೊಂಡಿದ್ದರು.
ಉಪಮುಖ್ಯಮಂತ್ರಿ ಸಿ ಎನ್ ಅಶ್ವಥ್ ನಾರಾಯಣ ಮಾತನಾಡಿ, “ಜಿಐಎ ಪಾಲುದಾರರ ಸಹಾಯದಿಂದ ಬಿಟಿಎಸ್ ದೃಢವಾಗಿ ಬೆಳೆದಿದೆ. ಇದರಿಂದ ಸಭೆ ಜಾಗತಿಕ ಸಭೆಯಾಗಿ ಮಾರ್ಪಟ್ಟಿದೆ,” ಎಂದರು.
ಬಿಟಿಎಸ್‌ನಲ್ಲಿ ಅಂಕಿತಗೊಳ್ಳಲಿರುವ ಮೂರು ಒಪ್ಪಂದಗಳು(ಒಟ್ಟು ಏಳು) ಹೀಗಿವೆ:
- ಸೆಂಟರ್ ಫಾರ್ ಎಕ್ಸಲೆನ್ಸ್ ಆಫ್ ಡಾಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಕರ್ನಾಟಕ ಮತ್ತು ಬಿಸಿನೆಸ್ ಫಿನ್‌ಲ್ಯಾಂಡ್ ನಡುವಿನ ಒಪ್ಪಂದವು ಸ್ಟಾರ್ಟಪ್‌ಗಳಿಗೆ ಬೈ-ಲಾಟರಲ್ ಮಾರುಕಟ್ಟೆ ಪ್ರವೇಶ, ಸಮಾಜದ ಉನ್ನತಿ ಮತ್ತು ಪರಸ್ಪರ ವಿದ್ಯಾರ್ಥಿಗಳಿಗಾಗಿ ಜಂಟಿ ಸಂಶೋಧನಾ ಕಾರ್ಯಕ್ರಮ ಮತ್ತು ಅಧ್ಯಾಪಕರ ವಿನಿಮಯ ಕಾರ್ಯಕ್ರಮದ ಬಗ್ಗೆ ಗಮನ ಹರಿಸಲಿದೆ.
- ನೆದರ್‌ಲ್ಯಾಂಡ್ಸ್‌ನ ವರ್ಲ್ಡ್ ಸ್ಟಾರ್ಟ್ಅಪ್ ಫ್ಯಾಕ್ಟರಿ ಮತ್ತು ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಪ್ಲಾಟ್‌ಫಾರ್ಮ್‌ಗಳಲ್ಲಿ (ಸಿ-ಸಿಎಎಮ್‌ಪಿ) ಇರಿಸಲಾಗಿರುವ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಅಗ್ರಿ ಇನ್ನೋವೇಶನ್ ನಡುವಿನ ಒಪ್ಪಂದವು ಬೆಳವಣಿಗೆಯ ಹಂತದಲ್ಲಿರುವ ಸ್ಟಾರ್ಟಪ್‌ಗಳಿಗೆ ವರ್ಚುವಲ್ ಮಾರುಕಟ್ಟೆ ಪ್ರವೇಶ ಕಾರ್ಯಕ್ರಮದ ಮೇಲೆ ಕೇಂದ್ರೀಕರಿಸುತ್ತದೆ.
- ಇಂಡಿಯಾನಾ ಎಕನಾಮಿಕ್ ಡೆವಲಪ್‌ಮೆಂಟ್ ಜತೆಗೆ ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆ ಮತ್ತು ವಾಣಿಜ್ಯ ಇಲಾಖೆಯ ನಡುವಿನ ಒಪ್ಪಂದವು ಎಲೆಕ್ಟ್ರಿಕ್ ವಾಹನ ಮತ್ತು ವೈದ್ಯಕೀಯ ಸಾಧನ/ಆರೋಗ್ಯ ರಕ್ಷಣೆಯ ಮೇಲೆ ಗಮನಹರಿಸಲಿದೆ.
ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಜಿಐಎನ ನಾಯಕರು ಬಿಟಿಎಸ್‌ನಂತಹ ವೇದಿಕೆಯ ಮಹತ್ವದ ಬಗ್ಗೆ ಮಾತನಾಡಿದರು.
ಆಸ್ಟ್ರೇಲಿಯಾದ ಹೈ ಕಮಿಷನರ್ ಟು ಇಂಡಿಯಾ ಬೆರ್ರಿ ಒ ಫಾರೆಲ್ ಮಾತನಾಡುತ್ತಾ, ಆಸ್ಟ್ರೇಲಿಯಾದ 180+ ನೀತಿ ನಿರೂಪಕರು, ಉದ್ಯಮ ನಾಯಕರು ಮತ್ತು ಶಿಕ್ಷಣ ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ. ಕೋವಿಡ್-19 ನಾಗರಿಕರ ಉತ್ತಮ ಭವಿಷ್ಯಕ್ಕಾಗಿ ಸಮಾನ ಮನಸ್ಕ ದೇಶಗಳೊಂದಿಗೆ ಸೇರಿ ಹೊಸ ತಂತ್ರಜ್ಞಾನ ಮತ್ತು ನಾವೀನ್ಯತೆ ಪರಿಹಾರಗಳನ್ನು ಸಿದ್ಧಪಡಿಸುವಿಕೆಯ ಮಹತ್ವವನ್ನು ಎತ್ತಿ ತೋರಿಸಿದೆ. ಬಿಟಿಎಸ್2020ನಲ್ಲಿ ಭಾರತ-ಆಸ್ಟ್ರೇಲಿಯಾ ಮೈತ್ರಿಯ ಪ್ರಭಾವವನ್ನು ತೋರಿಸಲು ಬಯಸುತ್ತೇವೆ ಎಂದರು.
ಡೆನ್ಮಾರ್ಕ್‌ನ ಕೌನ್ಸಲ್ ಜನರಲ್ ಜೆಟ್ಟೆ ಜೆರ್ರಮ್ ಡೆನ್ಮಾರ್ಕ್ ಮೊದಲ ಬಾರಿಗೆ ಬಿಟಿಎಸ್‌ನಲ್ಲಿ ಜಿಐಎ ಪಾರ್ಟ್ನರ್ ಆಗಿ ಪಾಲ್ಗೊಳ್ಳಲಿದೆ. ಇದು ಹೆಮ್ಮೆಯ ಸಂಗತಿ ಎಂದರು.
ಫ್ರಾನ್ಸ್‌ನ ಕೌನ್ಸಲ್ ಜನರಲ್ ಡಾ. ಮರ್ಜೊರಿ ವಾನ್‌ಬೇಲಿಂಗೆಮ್ ಭಾರತ ಮತ್ತು ಫ್ರಾನ್ಸ್ ಒಳ್ಳೇಯದಕ್ಕಾಗಿ ತಂತ್ರಜ್ಞಾನ ಮತ್ತು ಅಂತರ್ಗತ ಸುರಕ್ಷತಾ ತಂತ್ರಜ್ಞಾನ ಎಂಬ ಸಾಮಾನ್ಯ ಧ್ಯೇಯವನ್ನು ಹೊಂದಿದೆ ಎಂದು ತಿಳಿಸಿದರು.
ಬಿಟಿಎಸ್2020ನಲ್ಲಿ ಜಿಐಎನ ಮುಖ್ಯ ಅಂಶಗಳು
- ಉದ್ಯಮಿ, ಹೂಡಿಕೆದಾರ ಮತ್ತು ‘ಧೋ ಶಾಲ್ಟ್ ಇನ್ನೊವೆಟ್’ ಪುಸ್ತಕದ ಲೇಖಕ ಅವಿ ಜೊರಿಸ್ಚ್ ಬಿಎಎಸ್‌ನಲ್ಲಿ ಇಸ್ರೇಲ್‌ನ ನಾವೀನ್ಯ ಸಂಸ್ಕೃತಿ ಮತ್ತು ಅದು ಹೇಗೆ ಇತರೆ ದೇಶಗಳಿಗೆ ಮಾದರಿ ಎಂದು ಹಂಚಿಕೊಳ್ಳಲಿದ್ದಾರೆ.
- ಅಂತರಾಷ್ಟ್ರೀಯ ತಂತ್ರಜ್ಞಾನ ತಜ್ಞರು ಎಲ್ಲ ಟ್ರ್ಯಾಕ್‌ನ ಚರ್ಚಾ ಕೂಟಗಳ ಭಾಗವಾಗಿರುತ್ತಾರೆ. ಇದರಲ್ಲಿ ರಾಬರ್ಟ್ ಬಾಷ್ ಇಂಡಿಯಾ, ಮರ್ಸಿಡಿಸ್ ಆರ್ & ಡಿ ಇಂಡಿಯಾ, ಸೀಮೆನ್ಸ್ ಇಂಡಿಯಾ ಮತ್ತು ಫಿಲಿಪ್ಸ್ನಂತಹ ಭಾರತದ ಜರ್ಮನ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು; ಮತ್ತು ಇಸ್ರೇಲ್ ಬಾಹ್ಯಾಕಾಶ ಏಜೆನ್ಸಿಯ ಮಹಾನಿರ್ದೇಶಕ, ಅವಿ ಜೋರಿಷ್ ಸೇರಿದ್ದಾರೆ.
- ಪ್ರಮುಖ ಜಿಐಎ ಪಾರ್ಟ್ನರ್ ದೇಶಗಳ ಸಚಿವ ಮಟ್ಟದ ಪ್ರತಿನಿಧಿಗಳು ಮೂರು ದಿನದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅನ್ನಿಕಾ ಸರಿಕ್ಕೊ, ಫಿನ್ಲೆಂಡ್ನ ವಿಜ್ಞಾನ ಮತ್ತು ಸಂಸ್ಕೃತಿ ಸಚಿವೆ; ಕರೆನ್ ಆಂಡ್ರ್ಯೂಸ್, ಆಸ್ಟ್ರೇಲಿಯಾದ ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ; ಲಾರ್ಡ್ ತಾರಿಕ್ ಅಹ್ಮದ್, ದಕ್ಷಿಣ ಏಷ್ಯಾ ಮತ್ತು ಕಾಮನ್ವೆಲ್ತ್, ಯುಕೆ ಸಚಿವ; ಫೆಡರಲ್ ಸ್ಟೇಟ್ ಆಫ್ ನಾರ್ತ್ ರೈನ್-ವೆಸ್ಟ್ಫಾಲಿಯಾ, ಜರ್ಮನಿಯ ಆರ್ಥಿಕ ವ್ಯವಹಾರಗಳು, ನಾವೀನ್ಯತೆ, ಡಿಜಿಟಲೀಕರಣ ಮತ್ತು ಇಂಧನ ಸಚಿವ ಪ್ರೊ. ಆಂಡ್ರಿಯಾಸ್ ಪಿಂಕ್ವಾರ್ಟ್; ಮತ್ತು ಫ್ರಾನ್ಸ್‌ನ ಡಿಜಿಟಲ್ ಸೆಕ್ಟರ್‌ನ ರಾಜ್ಯ ಕಾರ್ಯದರ್ಶಿ ಸೆಡ್ರಿಕ್ ಒ ವರ್ಚುಅಲ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್‌ನ 23 ನೇ ಆವೃತ್ತಿಯನ್ನು ನವೆಂಬರ್ 19, 2020 ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಮೂರು ದಿನದ ಈ ಶೃಂಗಸಭೆಯಲ್ಲಿ 100 ಕ್ಕೂ ಹೆಚ್ಚಿನ ಸ್ಟಾರ್ಟಪ್‌ಗಳು, 4000 ಕ್ಕೂ ಅಧಿಕ ಉದ್ಯಮ ಪ್ರತಿನಿಧಿಗಳು ಮತ್ತು 20000 ಕ್ಕೂ ಅಧಿಕ ವೀಕ್ಷಕರು ಪಾಲ್ಗೊಳ್ಳಲಿದ್ದಾರೆ.