Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ತಮಿಳುನಾಡಿನ 'ಆಧುನಿಕ ಭಗೀರಥ'ನಾದ ಸರವಣನ್ ತ್ಯಾಗರಾಜನ್.

ತಮಿಳುನಾಡಿನ ತಮ್ಮ ಗ್ರಾಮದಲ್ಲಿ ಕೆರೆ ಸೇರಿದಂತೆ ಅನೇಕ ಜಲಮೂಲಗಳನ್ನು ಪುನಶ್ಚೇತನಗೊಳಿಸಲು ಸರವಣನ್ ತ್ಯಾಗರಾಜನ್ ಅವರು 2017ರಲ್ಲಿ "ವೇಕ್ ಅವರ್ ಲೇಕ್" ಎಂಬ‌ ಸಂಘಟನೆಯೊಂದನ್ನು ಸ್ಥಾಪಿಸಿ ಅದರ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ತಮಿಳುನಾಡಿನ 'ಆಧುನಿಕ ಭಗೀರಥ'ನಾದ ಸರವಣನ್ ತ್ಯಾಗರಾಜನ್.

Monday July 15, 2019 , 2 min Read

ಸರಿಯಾಗಿ ಮಳೆ ಬೀಳದೆ ಇರುವುದು, ಕೆರೆ ಹಾಗೂ ಬೋರ್ ವೇಲ್ ಗಳು ಒಣಗುತ್ತಿರುವುದರಿಂದ ತಮಿಳುನಾಡಿನ ರಾಜಧಾನಿ‌ ಚೆನ್ನೈ ಸೇರಿದಂತೆ ಹಲವಾರು ಜಿಲ್ಲೆಗಳು ತೀವ್ರ ನೀರಿನ ಕೊರತೆಯಿಂದ ಬರಗಾಲದ ಸ್ಥಿತಿಯನ್ನು ಎದುರಿಸುತ್ತಿವೆ. 


ಅದಾಗ್ಯೂ, ಇದು ಚೆನ್ನೈಗೆ ಮಾತ್ರ ಸೀಮಿತವಾಗದೇ, ಕಳೆದ ಕೆಲವು ವರ್ಷಗಳಿಂದ ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲೂ ಈ ಪರಿಸ್ಥಿತಿ ಭೀಕರವಾಗಿ ಕಂಡು ಬರುತ್ತಿದೆ.


ತಮಿಳುನಾಡಿನ ಕೊಲ್ಲಿ‌ ಹಿಲ್ಸ್ ನಲ್ಲಿರುವ ತಮ್ಮ ಹಳ್ಳಿಯಲ್ಲಿ ಇದೇ ರೀತಿಯಾದಂತಹ ಪರಿಸ್ಥಿತಿಗೆ ಪ್ರತ್ಯಕ್ಷ ಸಾಕ್ಷಿಯಾದ ಅವರು, ಇದನ್ನು ಸುಧಾರಿಸಬೇಕೆಂದು‌ 36 ವರ್ಷದ ಸರವಣನ್ ತ್ಯಾಗರಾಜನ್ ನಿರ್ಧರಿಸಿದರು. ಅವರು ಕೆರೆಗಳನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ‌ 2017ರಲ್ಲಿ‌ "ವೇಕ್ ಅವರ್ ಲೇಕ್" ಅನ್ನು‌ವಂತಹ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಇದು ಜಲಮೂಲಗಳನ್ನು ಸಂರಕ್ಷಿಸಲು, ಅದರ ಸುತ್ತಲಿನ ಸಸ್ಯವರ್ಗವನ್ನು ಪುನರುಜ್ಜೀವನಗೊಳಿಸಲು ಮಾರ್ಗಸೂಚಿ ಒದಗಿಸುತ್ತದೆ. ಕೆರೆಗಳನ್ನು ಪುನಶ್ಚೇತನಗೋಳಿಸುವ ಬಗ್ಗೆ ಸಂಪೂರ್ಣ ಮಾರ್ಗಸೂಚಿಗಳನ್ನು ನೀಡುವ ಪ್ಲೋಚಾರ್ಟ್ ಅನ್ನು ಅವರ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.



Saravanan

ಸರವಣನ್ ತ್ಯಾಗರಾಜನ್ (ಚಿತ್ರ: ಎಡೆಕ್ಸ್ ಲೈವ್)

ಇದರ ಮೂಲಕ, ಜನರು ತಮ್ಮ‌- ತಮ್ಮ ಪ್ರದೇಶಗಳಲ್ಲಿ ನೀರಿನ ಸಂರಕ್ಷಣೆಗಾಗಿ ಕೆಲಸ ಮಾಡಲು ಪ್ರೋತ್ಸಾಹಿಸುವ ಉದ್ದೇಶ ಹೊಂದಿದ್ದಾರೆ. ಉದಾಹರಣೆಗೆ ಹೇಳಬೇಕಂದರೆ ತಮಿಳುನಾಡಿನ ಥೇನಿ ಎಂಬ ಗ್ರಾಮದಲ್ಲಿ ಸರವಣನ್ ಅವರು ಒಳಚರಂಡಿ ನೀರನ್ನು ಸಸ್ಯಗಳಿಗೆ ನೀರುಣಿಸಲು ಬಳಸುವ ಮೂಲಕ ಮರುಬಳಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ.


ಇದರ ಕುರಿತು "ಎಡೆಕ್ಸ್ ಲೈವ್" ಜೊತೆ ಮಾತನಾಡಿದ ಸರವಣನ್ ಹೀಗೆ ಹೇಳಿದರು,


“ಇಂತಹ ಅನೇಕ ಉದ್ದೇಶಗಳಿಗಾಗಿ ಒಳಚರಂಡಿಯ ನೀರನ್ನು ನೈಸರ್ಗಿಕ ರೀತಿಯಲ್ಲಿ ಫಿಲ್ಟರ್ ಮಾಡಲಾಗುತ್ತಿದೆ. ಕಾಡುಗಳನ್ನು ಪುನರ್ ಸ್ಥಾಪಿಸುತ್ತಿದ್ದೆವೆ. ಹಾಗೆಯೇ ತಮಿಳುನಾಡಿನ ಸುತ್ತ-ಮುತ್ತಲಿನ ಕೆರೆಗಳನ್ನು, ಜಲಮೂಲಗಳನ್ನು ಪುನರುಜ್ಜೀವನಗೊಳಿಸುತ್ತಿದ್ದೇವೆ. ಅಲ್ಲದೆ ಬೆಂಗಳೂರಿನ ಅನೇಕ ಕಡೆಗಳಲ್ಲಿ ಸ್ವಯಂಸೇವಕರಾಗಿ ಕೆಲಸವನ್ನು ಮಾಡಿದ್ದೇವೆ.”


ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಟೆಕ್ಕಿಯಾಗಿರುವ ಇವರು ವಾರಾಂತ್ಯದ ಬಿಡುವಿನ ವೇಳೆಯಲ್ಲಿ, ತಮ್ಮ ಗ್ರಾಮಕ್ಕೆ‌ ಭೇಟಿ ನೀಡಿ‌ ಕೆಲಸವನ್ನು ಮಾಡುತ್ತಾರೆ.


ತಮಿಳುನಾಡಿನ ನರಸಿಮಾನ್ ಗ್ರಾಮದಲ್ಲಿ ಇವರು ಮೊದಲ ಕೆರೆಯ ಪುನರುಜ್ಜೀವನ ಯೋಜನೆಯನ್ನು 2017 ರಲ್ಲಿ ಜಾರಿಗೊಳಿಸಿದರು. ಇದನ್ನು ಥೆಂಡ್ರಲ್ ಲೇಕ್ ಪ್ರಾಜೆಕ್ಟ್ ಎಂದು ಕರೆಯಲಾಯಿತು.


ಅಲ್ಲಿನ ಕೆರೆಯ ನೀರಿನ ಸವಕಳಿಯ ಮಟ್ಟ ಅಪಾಯಕಾರಿ ಮಟ್ಟದಲ್ಲಿತ್ತು. ಮತ್ತು ಇದರ ಕುರಿತು ಒಂದು ಸಮೀಕ್ಷೆಯು 800 ರಿಂದ 1000 ಅಡಿಯ ಆಳದ ಬೋರವೆಲ್ ಸಂಪೂರ್ಣವಾಗಿ ಒಣಗಿ ಹೋಗಿದೆ ಎಂದು ತೋರಿಸಿದೆ. ಜೊತೆಗೆ ಇದರಿಂದ ಸಸ್ಯವರ್ಗದ ಮೆಲೆಯೂ ತನ್ನ ಪರಿಣಾಮ ಬೀರಿದ್ದರಿಂದ ನೀರಿನ ಕೊರತೆಯಿಂದಾಗಿ ಬೆಳೆಗಳು, ಸಸ್ಯಗಳು ನಿಧಾನವಾಗಿ ಸಾಯತೊಡಗಿದವು.



Lake restore

ಊರಿನ ಗ್ರಾಮಸ್ಥರು ಕೊಳದ ಮರುನಿರ್ಮಾಣವನ್ನು ಮಾಡುತ್ತಿರುವುದು (ಚಿತ್ರ: ದಿ ಲಾಜಿಕಲ್‌ ಇಂಡಿಯನ್)

"ದಿ ಲಾಜಿಕಲ್ ಇಂಡಿಯನ್ " ಜೊತೆಗೆ ಮಾತನಾಡಿದ ಅವರು, ಕೆರೆಯನ್ನು ಪುನರುಜ್ಜೀವನಗೊಳಿಸಲು ಸರವಣನ್ ಅವರು ಸ್ವಯಂಸೇವಕರ ತಂಡದೊಂದಿಗೆ ತಾವೇ ಖುದ್ದಾಗಿ ನೀರಿನ ಒಳಹರಿವಿನ ಚಾನಲ್ ಅನ್ನು ರಚಿಸಲು ಪ್ರಾರಂಭಿಸದೆವು ಎಂದರು.


"ನಾವೇ ಕೈಯಾರೆ ಪಕ್ಕದ ಬೆಟ್ಟಗಳಿಂದ ಕೆರೆಗೆ‌ ಒಂದು ಕಿಲೋಮೀಟರ್ ಉದ್ದದ ಕಾಲುವೆಯನ್ನು ಅಗೆಯಲು ಆರಂಭಿಸಿದೆವು. ರೈತರಿಗೆ ಇದರ ಕುರಿತು ಅನುಮಾನವಿತ್ತು. ಅವರಲ್ಲಿ ಹತ್ತರಿಂದ ಇಪ್ಪತ್ತು ಮಂದಿ ಮಾತ್ರ ಇದಕ್ಕೆ ಬೆಂಬಲ ನೀಡಿದರು. ಆಗಲೇ ಒಂದು ಪವಾಡದಂತೆ ರಾತ್ರೋರಾತ್ರಿ ಬಂದ ಮಳೆಗೆ‌ ಕೆರೆಯು ತುಂಬಿತ್ತು. ಇದನ್ನು ಕಂಡ ರೈತರಿಗೆ ತಮ್ಮ ಕಣ್ಣುಗಳನ್ನು ನಂಬಲು ಸಾಧ್ಯವಾಗಿರಲಿಲ್ಲ.”


ಇದಾದ ನಂತರ ಸಂಸ್ಥೆಯು ಪಂಜಪಟ್ಟಿ ಕೆರೆಯ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಈ ಪಂಜಪಟ್ಟಿ ಕೆರೆಯಲ್ಲಿ ಅತೀಯಾಗಿ ಬೆಳೆದ ಜಲಸಸ್ಯದ(ಕಳೆ) ಕಾರಣದಿಂದಾಗಿ ‌ಒಣಗಿ‌‌ ಹೋಗಿತ್ತು.


‌ಇದರಿಂದ ಇದರ ಹತ್ತಿರ ಬೆಳೆದಿದ್ದ ಸಸ್ಯಗಳ‌ ಬೆಳವಣಿಗೆ ಕುಸಿಯಿತು. ಸರವಣನ್ ಇದರ ಕುರಿತು ಆ ಊರಿನ ಗ್ರಾಮಸ್ಥರನ್ನು ತಮ್ಮ‌ ಯೋಜನೆಯ ಕುರಿತು ಪ್ರೋತ್ಸಾಹಿಸಲು ‌ಮಾಡಿದ ಅವರ ಪ್ರಯತ್ನಗಳು ವಿಫಲವಾದವು. ಆದ್ದರಿಂದ ಕಳೆಯನ್ನು ಬೇರು ಸಹಿತ ಕಿತ್ತು‌ ಹಾಕಲು ಹಾಗೂ ಅದನ್ನು ಮರುಬಳಕೆ‌ ಮಾಡಬಹುದಾದ ಜೀವರಾಶಿಗಳನ್ನಾಗಿ‌ ಪರಿವರ್ತಿಸುವಂತೆ ಮಾಡಲು ಸಂಸ್ಥೆಯು ವಿಶೇಷ ಕ್ರಾವ್ಲರ್ ಯಂತ್ರವನ್ನು ನಿಯೋಜಿಸಿತು.


ಇಂತಹ ಅನೇಕ‌ ಪರಿಹಾರ ಕ್ರಮಗಳನ್ನು ಕೈಗೊಂಡ ನಂತರ ಅಸ್ತಿತ್ವದಲ್ಲಿರುವಂತಹ ಜಲಮೂಲಗಳನ್ನು ಮತ್ತು ನೈಸರ್ಗಿಕತೆಯನ್ನು ಉಳಿಸುವಲ್ಲಿ ಅನೇಕ‌ ಜನರು ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಅಲ್ಲದೇ ಭಾರತೀಯ ವಿಜ್ಞಾನ ಸಂಸ್ಥೆ(IISc)ಯ ಸಹಯೋಗದೊಂದಿಗೆ ಸರವಣನ್ ರವರು ತಮ್ಮ ಹಳ್ಳಿಯ ಸುತ್ತಲಿರುವ ಭೂಮಿಯನ್ನು ಹಸಿರು‌ ಹೊದಿಕೆಯನ್ನಾಗಿ‌ ಮಾಡಲು ಬಂಜರು ಭೂಮಿಯಲ್ಲಿ ಬೀಜದ‌ ಉಂಡೆಗಳನ್ನು ನೆಡುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ನಿಮ್ಮದೊಂದು ಮೆಚ್ಚುಗೆಯಿರಲಿ.