ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಂತು ಮಿಸ್ ಡೆಫ್ವರ್ಡ್ ಆದವಳ ಕಥೆ

ಜನನದ ಸಮಯದಲ್ಲಿ ಭಾಗಶಃ ಶ್ರವಣದೋಷದಿಂದ ಬಳಲುತ್ತಿದ್ದ ವಿದಿಷಾ ಬಲಿಯಾನ್ ಬಾಲ್ಯದಲ್ಲಿ ಶಾಲೆಯಲ್ಲಿ ಬೇದರಿಕೆಗಳನ್ನು ಎದುರಿಸಬೇಕಾಯಿತು. ಆದರೆ ಕ್ರೀಡೆ ಮತ್ತು ಮಾಡೆಲಿಂಗ್‌ನಲ್ಲಿ ತನ್ನ ಕನಸುಗಳನ್ನು ಸಾಧಿಸಲು ಆಕೆ ಸಜ್ಜಾದಳು. ಈ ವಾರದ ಮಂಡೇ ಮೋಟಿವೇಶನ್(ಸೋಮವಾರದ ಪ್ರೇರಣೆ)ನಲ್ಲಿ ನಾವು ನಿಮಗೆ ಪರಿಚಯಿಸುತ್ತಿದ್ದೇವೆ ಭಾರತದ ಮೊದಲ ಮಿಸ್ ಡೆಫ್ ವರ್ಲ್ಡ್.

ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಂತು ಮಿಸ್ ಡೆಫ್ವರ್ಡ್ ಆದವಳ ಕಥೆ

Monday August 19, 2019,

4 min Read

ಶಕ್ತಿ, ಬಲ ಬರುವುದು ಅದಮ್ಯ ಸಂಕಲ್ಪದಿಂದಲೇ ಹೊರತು ದೈಹಿಕ ಸಾಮರ್ಥ್ಯದಿಂದಲ್ಲ ಎನ್ನುವ ಮಾತಿದೆ. ಇದು ವಿದಿಶಾ ಬಲಿಯನ್‌ರ ಪ್ರಕರಣದಲ್ಲಿ ಅಕ್ಷರಶಹ ನಿಜವಾಗಿದೆ. ಉತ್ತರ ಪ್ರದೇಶದ ಮುಜಫರ್‌ ನಗರ ದ 21 ವರ್ಷದ ಈ ಯುವತಿ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭಾವಂತ ಟೆನಿಸ್ ಆಟಗಾರ್ತಿ ಮಾತ್ರವಲ್ಲದೆ ಆತ್ಮವಿಶ್ವಾಸ ಮತ್ತು ವರ್ಚಸ್ಸಿಗೆ ಹೆಸರುವಾಸಿಯಾಗಿದ್ದಾರೆ.


ಟ

ಭರವಸೆ ಮತ್ತು ಧೈರ್ಯದಿಂದ ತುಂಬಿದ 21 ವರ್ಷದ ವಿದಿಷಾ ಬಲಿಯಾನ್‌ರ ಪ್ರಯಾಣವು ಧೀರ್ಘ ಹಾಗೂ ಪ್ರಯತ್ನಪೂರ್ವಕವಾದ್ದದಾಗಿದೆ.

ವಿದಿಷಾರ ಕ್ರೀಡೆಗಳ ಮೇಲಿನ ಪ್ರೀತಿಯು ಅವರನ್ನು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಬೆಳ್ಳಿ ಪದಕಗಳನ್ನು ಗಳಿಸಲು ಹಾಗೂ 2017 ರಲ್ಲಿ ಟರ್ಕಿಯಲ್ಲಿ ನಡೆದ ಕಿವುಡರ ಒಲಿಂಪಿಕ್ಸ್‌ನಲ್ಲಿ ಐದನೇ ಸ್ಥಾನವನ್ನು ಗಳಿಸಲು ಕಾರಣವಾಯಿತು. ಕೆಲವು ವರ್ಷಗಳ ನಂತರ ಬೇರೆ ಏನನ್ನಾದರೂ ಪ್ರಯತ್ನ ಪಡುವ ಸಲುವಾಗಿ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಧುಮುಕಿದರು. ಎಲ್ಲ ಕಷ್ಟಗಳನ್ನು ಮೀರಿ ಅವರು ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಭಾರತೀಯ ಮಿಸ್ ಡೆಫ್ ವರ್ಡ್ ಎಂಬ ಕೀರ್ತಿಗೆ ಪಾತ್ರರಾದರು.


ಜನನದ ಸಮಯದಲ್ಲಿ ಭಾಗಶಃ ಶ್ರವಣದೋಷದಿಂದ ಬಳಲುತ್ತಿದ್ದ ವಿದಿಷಾ ಬಲಿಯಾನ್ ಬಾಲ್ಯದಲ್ಲಿ ಶಾಲೆಯಲ್ಲಿ ಬೆದರಿಕೆಗಳನ್ನು ಎದುರಿಸಬೇಕಾಯಿತು. ಆದರೆ ಕ್ರೀಡೆ ಮತ್ತು ಮಾಡೆಲಿಂಗ್‌ನಲ್ಲಿ ತನ್ನ ಕನಸುಗಳನ್ನು ಸಾಧಿಸಲು ಅವರು ಸಜ್ಜಾದರು. ವಿದಿಷಾ ಬಲಿಯಾನ್‌ರ ಪ್ರಯಾಣವು ಧೀರ್ಘ ಹಾಗೂ ಪ್ರಯತ್ನಪೂರ್ವಕವಾದರೂ ಭರವಸೆ ಹಾಗೂ ಧೈರ್ಯದಿಂದ ಕೂಡಿದೆ.


ಟ

ವಿದಿಶಾ ಬಲಿಯಾನ್ ದಕ್ಷಿಣ ಆಫ್ರಿಕಾದಲ್ಲಿ ಮಿಸ್ ಡೆಫ್ ವರ್ಲ್ಡ್ 2019 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.


ಸೋಷಿಯಲ್ ಸ್ಟೋರಿ ಯೊಂದಿಗೆ ಮಾತನಾಡುತ್ತಾ ವಿದಿಶಾ ಹೀಗೆ ಹೇಳುತ್ತಾರೆ,


"ನನ್ನ ಪ್ರಯಾಣ ಸುಲಭವಾಗಿರಲಿಲ್ಲ‌. ನನ್ನ ಒಂದು ಕಿವಿ ನೂರು ಪ್ರತಿಶತ ಹಾಗೂ ಮತ್ತೊಂದು 90‌ ಪ್ರತಿಶತ ಕೇಳಿಸುತ್ತಿರಲಿಲ್ಲ. ಜನರು ನನ್ನೊಂದಿಗೆ ಮಾತನಾಡುವುದಕ್ಕೂ ಹಿಂಜರಿಯುತ್ತಿದ್ದರು. ಅವರು ನನ್ನನ್ನು ಅಪಹಾಸ್ಯ ಮಾಡಲು ಹಾಗೂ ಬಲಪ್ರಯೋಗ ಮಾಡಲು ಪ್ರಯತ್ನಿಸುತ್ತಿದ್ದರು. ನನ್ನ ಶಿಕ್ಷಕರು ತರಗತಿಯಲ್ಲಿ ಏನೇ ಹೇಳಿದರೂ ಅವರ ತುಟಿಗಳನ್ನು ಓದುವ(ಲಿಪ್‌ ರೀಡ್) ಮೂಲಕ ನಾನು ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಮುಗಿಸಿದೆ."


ವಿದಿಷಾ ಅವರ ಸಂಪೂರ್ಣ ಮನೋಭಾವ ಮತ್ತು ಪರಿಶ್ರಮವು ಅವರ ಅಂಗವೈಕಲ್ಯವನ್ನು ಸಾಮರ್ಥ್ಯವಾಗಿ ಪರಿವರ್ತಿಸಲು ಶಕ್ತವಾಯಿತು. ಹಾಗೂ ಇಂದು, ಅವರು ಭಾರತದಾದ್ಯಂತ ಇರುವ ಅಂಗವಿಕಲರಿಗೆ ಆದರ್ಶವಾಗಿ ಎತ್ತರದ ಸ್ಥಾನದಲ್ಲಿ ನಿಂತಿದ್ದಾರೆ.


ತನ್ನನ್ನು ತಾನು ಕಂಡುಕೊಳ್ಳುತ್ತ


ವಿದಿಷಾ ಐದು ವರ್ಷದವರಿದ್ದಾಗ, ಅವರು ಭಾಗಶಃ ಕಿವುಡರಾಗಿದ್ದಾರೆ ಹಾಗೂ ಮಾತಿನ ಅಸ್ವಸ್ಥತೆ ಹೊಂದಿದ್ದಾರೆ ಎಂದು ಕಂಡುಕೊಂಡ ಪೋಷಕರು ಅವರನ್ನು ವಿಶೇಷ ಶಾಲೆಗೆ ಕಳುಹಿಸಲು ವೈದ್ಯರು ಸೂಚಿಸಿದಾಗ, ತಾಯಿ ಡಾ. ದೀಕ್ಷಿಕಾ ಕುಮಾರ್ ಮತ್ತು ತಂದೆ ವಿಪಿನ್ ಕುಮಾರ್ ನಿರಾಕರಿಸಿದರು.


ತಮ್ಮ ಮಗಳು ಕಳಂಕದಿಂದ ಮುಕ್ತವಾಗಿರುವ ವಾತಾವರಣದಲ್ಲಿ ಬೆಳೆಯಬೇಕೆಂದು ಅವರು ಬಯಸಿದ್ದರು ಹಾಗಾಗಿ ಅವಯನ್ನು ಮುಜಫರ್‌ ನಗರದ ಎಂಎನ್ ಪಬ್ಲಿಕ್ ಶಾಲೆಗೆ ಸೇರಿಸಿದರು. ಅಲ್ಲಿ ಅವರಿಗೆ ಇತರರ ಕಲಿಕೆಯ ವೇಗಕ್ಕೆ ಹೊಂದಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.


ಟ

ವಿದಿಷಾರಿಗೆ ಟೆನಿಸ್ ಮೇಲಿನ ಪ್ರೀತಿ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಆಕಾಂಕ್ಷೆಗಳನ್ನು ತಲುಪಲು ಪ್ರೇರೇಪಿಸಿತು.


"ಎಲ್ಲ ಪಾಠಗಳನ್ನು ಗ್ರಹಿಸಲು ಹಾಗೂ ಅರ್ಥ ಮಾಡಿಕೊಳ್ಳಲು ನಾನು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಶಾಲಾ ಅವಧಿಯ ನಂತರ ಟೂಷನ್‌ಗಳಿಗೆ ಹೋಗಲು ಆರಂಭಿಸಿದೆ. ನನ್ನ ಪೋಷಕರು ಸಹ ನನ್ನೊಂದಿಗೆ ಬಹಳಷ್ಟು ಸಮಯ ಕಳೆಯುತ್ತಿದ್ದರು. ಅವರು ನನಗೆ ನನ್ನ ಪಠ್ಯದಲ್ಲಿನ ಪಾಠಗಳನ್ನು ಗಟ್ಟಿಯಾಗಿ ಓದಿ ಹೇಳುತ್ತಿದ್ದರು. ಸ್ಪೀಚ್ ಥೆರಪಿಯ ಅವಧಿಗಳು ನನ್ನ ವೇಳಾಪಟ್ಟಿಯ ಅಂಗವಾಗಿದ್ದವು. ಇದೆಲ್ಲ ಪ್ರಯತ್ನಗಳ ಹೊರತಾಗಿಯೂ ಶಿಕ್ಷಣ ನನಗೆ ರಾಕೆಟ್ ಸೈನ್ಸ್‌ಆಗಿಯೇ ಉಳಿದುಬಿಟ್ಟಿತು. ಆಗಲೆ ನಾನು ಕೆಲ ಕ್ರೀಡೆಗಳನ್ನು ಪ್ರಯತ್ನಿಸಲು ಆರಂಭಿಸಿದೆ," ಎನ್ನುತ್ತಾರೆ ವಿದಿಷಾ.


ಬ್ಯಾಸ್ಕೆಟ್ ಬಾಲ್, ವಾಲಿ ಬಾಲ್ ಹಾಗೂ ಟೆನಿಸ್ ಆಡುವುದಕ್ಕೆ ಆರಂಭಿಸಿದಾಗ ವಿದಿಷಾರಿಗೆ 12 ವರ್ಷ. ಆದಾಗ್ಯೂ ಟೆನಿಸ್ ನಲ್ಲಿ ತಂಡದ ಪ್ರಯತ್ನಗಳು ಇರದೇ ಇದ್ದರಿಂದ ಅವರು ಅದನ್ನು ಇಷ್ಟಪಡಲು ಪ್ರಾರಂಭಿಸಿದರು. ಅಲ್ಲಿಂದೀಚೆಗೆ ಅವರು ಹಿಂತಿರುಗಿ ನೋಡಲಿಲ್ಲ.


ಟ

ಟರ್ಕಿಯಲ್ಲಿ ನಡೆದ 2019 ರ ಡೆಫಾಲಿಂಪಿಕ್ಸ್‌ನಲ್ಲಿ ವಿದಿಷಾ ಬಲಿಯಾನ್.


ಇವರು ಪ್ರತಿದಿನ ಸುಮಾರು ಎರಡು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದರು, ಹಾಗೂ ಶಕ್ತಿ ಹೆಚ್ಚಿಸಿಕೊಳ್ಳಲು, ಮೋಟಾರು ಕೌಶಲ್ಯ ಹಾಗೂ ಕೈ-ಕಣ್ಣಿನ ಸಮನ್ವಯವನ್ನು ಸುಧಾರಿಸಲು ಸಾಕಷ್ಟು ಪ್ರಯತ್ನಗಳನ್ನೂ ನಡೆಸಿದರು. ಉತ್ತರ ಪ್ರದೇಶ ಟೆನಿಸ್ ಅಸೋಸಿಯೇಷನ್ ​​ನಡೆಸಿದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿದಿಷಾ, ರನ್ನರ್ ಅಪ್ ಆಗಿ ತೃಪ್ತಿಪಟ್ಟರು. 2016 ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸಹ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ ವಿದಿಷಾ.


ಏಳು ಬೀಳುಗಳಲ್ಲಿ ಮತ್ತೆ ತನ್ನನ್ನು ಕಂಡುಕೊಳ್ಳುವುದು


21 ವರ್ಷದ ಯುವತಿ ವಿದಿಷಾ ಬೇಸಿಗೆಯ ಡೀಫಾಲಿಂಪಿಕ್ಸ್‌ಗೆ ಆಯ್ಕೆಯಾದಾಗ, ಅವರ ಸಂತೋಷಕ್ಕೆ ಯಾವುದೇ ಮಿತಿಯಿರಲಿಲ್ಲ‌. ಆದಾಗ್ಯೂ ಅವರ ಪ್ರಪಂಚ ಬಹಳ ಬೇಗನೆ ಕುಸಿದು ಬಿಟ್ಟಿತು.


"ಗಾಲಾ ಈವೆಂಟ್‌ಗಾಗಿ ಅಭ್ಯಾಸ ಮಾಡುವಾಗ ನನ್ನ ಬೆನ್ನುಮೂಳೆಗೆ ಪೆಟ್ಟಾಯಿತು. ಅದರ ಹೊರತಾಗಿಯೂ, ನಾನು ನನ್ನ ತರಬೇತಿಯನ್ನು ಮುಂದುವರೆಸಿದೆ - ಹೊಡೆತಗಳು ಮತ್ತು ಬ್ಯಾಕ್‌ಹ್ಯಾಂಡ್ ತಂತ್ರಗಳನ್ನು ಅಭ್ಯಾಸ ಮಾಡುವುದರಿಂದ ಹಿಡಿದು ಟೆನಿಸ್ ಕೋರ್ಟ್‌ನಲ್ಲಿ ವೇಗವಾಗಿ ಓಡುವುದರವರೆಗೂ ಅಭ್ಯಾಸ ಮಾಡಿದೆ. ಅದು ನನಗೆ ಕಷ್ಟದ ಸಮಯವಾಗಿದ್ದರೂ ನನಗೆ ಬಿಟ್ಟುಕೊಡಲು ಇಷ್ಟವಿರಲಿಲ್ಲ" ಎಂದು ವಿದಿಷಾ ನೆನಪಿಸಿಕೊಳ್ಳುತ್ತಾರೆ.


ಟ

ಮಿಸ್ ಡೆಫ್‌ವರ್ಡ್‌ ಕಿರೀಟಕ್ಕಾಗಿ ತರೆಬೇತಿ ಪಡೆಯುತ್ತಿರುವ ವಿದಿಷಾ.


ಜುಲೈ 2017 ರಲ್ಲಿ ಟರ್ಕಿಯ ಸ್ಯಾಮ್‌ಸುನ್‌ನಲ್ಲಿ ನಡೆದ ಬಹು-ಕ್ರೀಡಾಕೂಟದಲ್ಲಿ ವಿವಿಧ ದೇಶಗಳ 72 ಟೆನಿಸ್ ಆಟಗಾರರು ಭಾಗವಹಿಸಿದ್ದರು. ವಿದಿಷಾ ಅದರಲ್ಲಿ ಆಡಿದ್ದಷ್ಟೇ ಅಲ್ಲದೆ ಇಡೀ ಪಂದ್ಯಾವಳಿಯಲ್ಲಿ 5ನೇ ಸ್ಥಾನದಲ್ಲಿದ್ದರು‌. ಅದಾದ ನಂತರ ವಿದಿಷಾ ಅವರ ವೈದ್ಯರು ಅವರಿಗೆ ಕನಿಷ್ಠ ಒಂದು ವರ್ಷವಾದರೂ ಕ್ರೀಡೆಯಿಂದ ದೂರ ಉಳಿಯುವಂತೆ ಹೇಳಿದರು.


ತಮ್ಮ ವಿಶ್ರಾಂತಿಯ ಸಮಯದಲ್ಲಿ ಪತ್ರಿಕೆಯೊಂದರಲ್ಲಿ ಮಿಸ್ ಡೆಫ್‌ವರ್ಡ್‌ ಕಾರ್ಯಕ್ರಮದ ಬಗ್ಗೆ ನೋಡಿದ ವಿದಿಷಾ ಅದರಲ್ಲಿ ಭಾಗವಹಿಸಲು ನಿರ್ಧರಿಸಿದರು.


"ನನಗೆ ಬಾಲ್ಯದಿಂದಲೂ ಮಾಡೆಲಿಂಗ್‌ನೆಡೆಗೆ ಒಲವಿತ್ತು. ನಾನು ಬಾಲಿವುಡ್‌ನ ತಾರೆಗಳನ್ನು ಅನುಕರಣೆ ಮಾಡುತ್ತ, ಕೆಲವು ನೃತ್ಯಗಳನ್ನು ಮಾಡುತ್ತಿದ್ದೆ. ಹಾಗಾಗಿ ಇದನ್ನೂ ಪ್ರಯತ್ನಿಸಿದೆ. ನನಗೆ ಕ್ರೀಡಾ ಪಟುವಿನ ಮೈಕಟ್ಟು ಇದ್ದಿದ್ದರಿಂದ ನನ್ನ ದೇಹವನ್ನು ಹಾಗೂ ಮನಸ್ಸನ್ನು ಸೌಂದರ್ಯ ಸ್ಪರ್ಧೆಗೆ ಅಣಿಗೊಳಿಸಿದೆ. ಕ್ರೀಡಾ ಶೂಗಳಿಂದ ಹೀಲ್ಸ್ ಗಳಿಗೆ ಬದಲಾದದ್ದು ಕಷ್ಟವೂ ಹಾಗೂ ಅತ್ಯಾಕರ್ಷಕವೂ ಅಗಿತ್ತು" ಎಂದು ವಿದಿಷಾ ನೆನಪಿಸಿಕೊಳ್ಳುತ್ತಾರೆ.


ಟ

ವಿದಿಷಾ ಬಲಿಯಾನ್ ಮತ್ತು ಮಿಸ್ ಡೆಫ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದವರು.


ಈ ಸಮಯದಲ್ಲಿ, ವಿದಿಷಾ ವೀಲಿಂಗ್ ಹ್ಯಾಪಿನೆಸ್ ಎಂಬ ಸಂಸ್ಥೆಯ ಸಹಾಯವನ್ನು ಸಹ ಪಡೆದರು, ಇದು ತನ್ನ ವಕಾಲತ್ತು ಕಾರ್ಯಕ್ರಮಗಳ ಮೂಲಕ ವಿಭಿನ್ನ ಸಾಮರ್ಥ್ಯವುಳ್ಳವರಿಗೆ ಸಹಾಯ ಮಾಡುತ್ತದೆ. ಮೇಕಪ್, ಅಂದಗೊಳಿಸುವಿಕೆ, ಪ್ರಯಾಣದ, ಮತ್ತು ಚಿತ್ರೀಕರಣದಲ್ಲಿ ತೊಡಗಿರುವ ಎಲ್ಲಾ ಹಣಕಾಸಿನ ವೆಚ್ಚಗಳನ್ನು ನೀಡಿದ ಸಂಸ್ಥೆ ವಿದಿಷಾಗೆ ಬೆಂಬಲವಾಗಿ ನಿಂತಿತು.


ಅಸ್ಸಾಂನ ಗುಹಾವಟಿಯಲ್ಲಿ 2019 ರ ಫೆಬ್ರವರಿಯಲ್ಲಿ ಮಿಸ್ ಡೆಫ್ ಇಂಡಿಯಾ ಕೀರಿಟವನ್ನು ಮುಡಿಗೇರಿಸಿಕೊಂಡಾಗ ಅವರ ಶ್ರಮಕ್ಕೆ ಫಲ ದೊರಕಿತು. ಇವರು ಜುಲೈನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿಸ್ ಡೆಫ್ ವರ್ಡ್ ಪಟ್ಟವನ್ನು ಅಲಂಕರಿಸಿದ ಮೊದಲ ಭಾರತೀಯಳು ಎಂಬ ಇತಿಹಾಸ ಸೃಷ್ಟಿಸಿದ್ದಾರೆ' ನಾನು ನನಗೆ ಏನನ್ನಿಸಿತು ಎಂದು ವಿವರಿಸಲಾರೆ, ನಾನು ಆಗ ಪ್ರಪಂಚದ ತುತ್ತತುದಿಯಲ್ಲಿ ಇದ್ದೆ" ಎನ್ನುತ್ತಾರೆ ವಿದಿಷಾ.


ಆದರ್ಶ ವ್ಯಕ್ತಿಯಾಗಲು ಏನು ಬೇಕು?


ಇಂದು, ವಿದಿಷಾ ಬಲಿಯಾನ್ ಅವರ ಉತ್ಸಾಹ ಮತ್ತು ಸಮರ್ಪಣೆ ಕೇವಲ ವಿಭಿನ್ನ ಸಾಮರ್ಥ್ಯದ ಜನರಿಗೆ ಮಾತ್ರವಲ್ಲ, ಎಲ್ಲರಿಗೂ ಸ್ಫೂರ್ತಿಯಾಗಿದೆ‌. ಅವರು ತಮ್ಮೆಲ್ಲಾ ಸಾಧನೆಯನ್ನು ಅವರ ಎಂದಿಗೂ-ಸಾಯುತ್ತೇನೆ-ಎಂದು ಹೇಳಬೇಡ ಎಂಬ ಮನೋಭಾವಕ್ಕೆ ಅರ್ಪಿಸುತ್ತಾರೆ.

"ಅಂತರಿಕ ಶಕ್ತಿಗಳೆ ನನ್ನ ಗೆಲುವಿನ ರಹಸ್ಯ. ಮನಸ್ಸನ್ನು ಶೃತಿಗೊಳಿಸಿದರೆ ಎಂತಹ ಅಡಚಣೆಗಳನ್ನು ಬೇಕಾದರು ಎದುರಿಸಬಹುದು ಎಂದು ನಾನು ನಂಬಿದ್ದೇನೆ. ನನ್ನದೇ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ನನ್ನ ತರಹದ ವ್ಯಕ್ತಿಗಳಿಗೆ ಬೆಂಬಲಿಸಿ ಹಾಗೂ ಅವರಿಗೆ ಅವಕಾಶಗಳನ್ನು ಒದಗಿಸುವುದು ನನ್ನ ತಕ್ಷಣದ ಗುರಿಯಾಗಿದೆ. ವಿಮರ್ಶಾತ್ಮಕ ಸಮಾಜದಲ್ಲಿ ಅಂಗವೈಕಲ್ಯದಿಂದ ಬದುಕುವುದು ಎಷ್ಟು ಕಷ್ಟವೆಂದು ನನಗೆ ತಿಳಿದಿದೆ. ಗುರುತಿಸಿಕೊಳ್ಳಲು ಮುಖ್ಯವಾಗಿ ದೈರ್ಯ ಹಾಗೂ ಕಠಿಣ ಪರಿಶ್ರಮ ಎರಡೂ ಬೇಕಾಗುತ್ತದೆ" ಎನ್ನುತ್ತಾರೆ ವಿದಿಷಾ.