Brands
Discover
Events
Newsletter
More

Follow Us

twitterfacebookinstagramyoutube
Bengaluru Tech Summit 2020

Bengaluru Tech Summit 2020

View Brand Publisher

ಇಂಡಿಯಾ ಬಯೋ@ಬಿಟಿಎಸ್ ತನ್ನ ವರ್ಚುವಲ್ ಅವತಾರದಲ್ಲಿ ಜಾಗತಿಕ ಬಯೋಟೆಕ್ ಸಮುದಾಯವು ಕೋವಿಡ್-19 ಸಂಬಂಧಿತ ಸವಾಲುಗಳನ್ನು ಹೇಗೆ ಒಟ್ಟಿಗೆ ಎದುರಿಸುತ್ತಿದೆ ಎಂಬುದನ್ನು ಸಾದರಪಡಿಸಲಿದೆ

ಇಂಡಿಯಾ ಬಯೋ@ಬಿಟಿಎಸ್ ತನ್ನ ವರ್ಚುವಲ್ ಅವತಾರದಲ್ಲಿ ಜಾಗತಿಕ ಬಯೋಟೆಕ್ ಸಮುದಾಯವು ಕೋವಿಡ್-19 ಸಂಬಂಧಿತ ಸವಾಲುಗಳನ್ನು ಹೇಗೆ ಒಟ್ಟಿಗೆ ಎದುರಿಸುತ್ತಿದೆ ಎಂಬುದನ್ನು ಸಾದರಪಡಿಸಲಿದೆ

Tuesday November 03, 2020 , 3 min Read

2025 ರ ಹೊತ್ತಿಗೆ ಭಾರತದ ಬಯೋಟೆಕ್ನಾಲಜಿ ಉದ್ಯಮ $150 ಬಿಲಿಯನ್‌ ಬೆಲೆಬಾಳಲಿದ್ದು, ಜಾಗತಿಕ ಬಯೋಟೆಕ್ನಾಲಜಿ ಮಾರುಕಟ್ಟೆಗೆ 2017ರಲ್ಲಿ ಶೇ. 3 ರಷ್ಟಿದ್ದ ಅದರ ಕೊಡುಗೆ ಶೇ.19 ರಷ್ಟು ವೃದ್ಧಿಸಲಿದೆ.


ಕಳೆದ ಕೆಲವು ವರ್ಷಗಳಲ್ಲಿ ಭಾರತದ ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯಾಗಿದೆ. ಭಾರತ ಬಯೋಟೆಕ್ನಾಲಜಿಯ 12 ಜಾಗತಿಕ ತಾಣಗಳಲ್ಲಿ ಒಂದಾಗಿದೆ. ಭಾರತದಲ್ಲಿ ಕರ್ನಾಟಕವು ಬಯೋಟೆಕ್ನಾಲಜಿಯ ಕೇಂದ್ರವಾಗಿ ಹೊರಹೊಮ್ಮಿದೆ. ಪ್ರಸ್ತುತ ಕರ್ನಾಟಕದಲ್ಲಿ 380 ಕಂಪನಿಗಳು, 194 ಕ್ಕೂ ಹೆಚ್ಚು ಸ್ಟಾರ್ಟಪ್‌ಗಳಿವೆ, ಒಟ್ಟಾರೆ ಭಾರತದ 60 ರಷ್ಟು ಬಯೋಟೆಕ್‌ ಸಾಮರ್ಥ್ಯ ಕರ್ನಾಟಕದಲ್ಲಿದೆ. ದೇಶದ ಅರ್ಧ ಬಯೋಟೆಕ್‌ ವಲಯದ ಉದ್ಯೋಗಿಗಳಿಗೆ ರಾಜ್ಯವು ಆಶ್ರಯ ನೀಡಿದೆ.


ದೇಶದಲ್ಲೆ ಇನ್ನೂ ಬಯೋಟೆಕ್‌ ವಲಯ ಪ್ರಾರಂಭದ ಹಂತದಲ್ಲಿದ್ದಾಗ ಕರ್ನಾಟಕ 2001 ರಲ್ಲೆ ಬಯೋಟೆಕ್‌ ನೀತಿಯನ್ನು ಪರಿಚಯಿಸಿತು. ಈ ನೀತಿಯು ಅಂದಿನಿಂದ ಎರಡು ಪುನರಾವರ್ತನೆಗಳನ್ನು ಕಂಡಿದೆ, 2017 ರ ಇತ್ತೀಚಿನ ಆವೃತ್ತಿಯು ಅಭಿವೃದ್ಧಿಯ ವೇಗವನ್ನು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.


2001 ರಲ್ಲಿ ಬೆಂಗಳೂರು ದೇಶದ ಮೊದಲ ಬಯೋಟೆಕ್ ಕಾರ್ಯಕ್ರಮವಾದ ಬೆಂಗಳೂರು ಇಂಡಿಯಾ ಬಯೋವನ್ನು ಆಯೋಜಿಸಿತ್ತು. 2017 ರಲ್ಲಿ ಪ್ರಮುಖ ಐಟಿ ಕಾರ್ಯಕ್ರಮ ಬೆಂಗಳೂರು ಐಟಿ.ಕಾಂ ನೊಂದಿಗೆ ಸೇರಿಕೊಂಡು ಬೆಂಗಳೂರು ಟೆಕ್‌ ಸಮ್ಮಿಟ್‌ ಆಗಿದೆ. ಅಂದಿನಿಂದ, ಕಾರ್ಯಕ್ರಮದ ವ್ಯಾಪ್ತಿಯು ಅನೇಕ ಪಟ್ಟು ಹೆಚ್ಚಾಗಿದ್ದು, ಜೈವಿಕ ವಿಜ್ಞಾನದ ಆವಿಷ್ಕಾರಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಬೆಂಗಳೂರು ಟೆಕ್ ಶೃಂಗಸಭೆಯು ಪ್ರಮುಖ ಪಾತ್ರ ವಹಿಸುತ್ತಿದೆ.


ಹೇಗೆ ಬೆಂಗಳೂರು ಬಯೋಟೆಕ್‌ನ ಕೇಂದ್ರವಾಗಿದೆ?

ಉದ್ಯಮದ ಅಂದಾಜಿನ ಪ್ರಕಾರ 2025 ರ ಹೊತ್ತಿಗೆ ದೇಶದ ಶೇ 50 ರಷ್ಟು ಜೈವಿಕ ಉತ್ಪಾದನೆಗೆ ಕರ್ನಾಟಕ ಕೊಡುಗೆ ನೀಡುವ ನೀರಿಕ್ಷೆಯಿದೆ, ಇದರ ಮೌಲ್ಯವು $40 ಬಿಲಿಯನ್‌ ಮತ್ತು $60 ಬಿಲಿಯನ್‌ಗಳ ನಡುವಿರಲಿದೆ.


ಕಳೆದ ಎರಡು ದಶಕಗಳಿಂದ ಪ್ರಬಲ ಜೈವಿಕ ಆರ್ಥಿಕತೆಯ ಅಭಿವೃದ್ಧಿಯನ್ನು ಉತ್ತೇಜಿಸಲು, ಹೂಡಿಕೆಗಳನ್ನು ಆಕರ್ಷಿಸಲು, ಆವಿಷ್ಕಾರದ ಪ್ರಚಾರಕ್ಕೆ ಮತ್ತು ಉದ್ಯಮಕ್ಕೆ ಬಲವಾದ ಕಾರ್ಯಪಡೆ ನೀಡುವುದಕ್ಕಾಗಿ ರಾಜ್ಯ ಸರ್ಕಾರ ಮತ್ತು ಖಾಸಗಿ ವಲಯ ಸಂಯೋಜಿತ ಜೈವಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಕೆಲಸ ಮಾಡುತ್ತಿದೆ. ಇದರಲ್ಲಿ ಶ್ರೇಣಿ 2 ಮತ್ತು 3 ನೇ ನಗರಗಳಲ್ಲಿ ಬಯೋಟೆಕ್ನಾಲಜಿ ಉದ್ಯಾನಗಳು, ಸಮೂಹಗಳು ಮತ್ತು ತಂತ್ರಜ್ಞಾನ ಇನ್ಕ್ಯೂಬೇಷನ್‌ ಕೇಂದ್ರಗಳನ್ನು ಸ್ಥಾಪಿಸುವುದು; ಅನುಕೂಲಕರ ನೀತಿ ಪರಿಸರವನ್ನು ಜಾರಿಗೆ ತರುವುದು; ವ್ಯಾಪಾರವನ್ನು ಸುಲಭವಾಗಿಸುವುದು; ಮುಕ್ತವಾದ ಮತ್ತು ಪಾರದರ್ಶಕವಾದ ವ್ಯವಹಾರ ಪರಿಸರವನ್ನು ನಿರ್ಮಿಸುವುದು; ಮತ್ತು ಉದಯೋನ್ಮುಖ ತಂತ್ರಜ್ಞಾನ ವಲಯಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌&ಡಿ)ಗೆ ಪ್ರೋತ್ಸಾಹ ನೀಡುವುದು ಸೇರಿದೆ.


ಬಲವಾದ ಸಂಶೋಧನಾ ನೆಲೆ ಮತ್ತು ಉದ್ಯಮ-ಸಿದ್ಧ ಕಾರ್ಯಪಡೆ ಮತ್ತು ಅನುಕೂಲಕರ ನೀತಿಗಳ ಲಭ್ಯತೆಯು ಕರ್ನಾಟಕವು ದೊಡ್ಡ ಜಾಗತಿಕ ಮತ್ತು ದೇಶೀಯ ಬಯೋಟೆಕ್ ಕಂಪನಿಗಳಿಗೆ ಆದ್ಯತೆಯ ತಾಣವಾಗಿದೆ ಎಂಬುದನ್ನು ತಿಳಿಸುತ್ತದೆ.


ಬಯೋಟೆಕ್‌ ಸ್ಟಾರ್ಟಪ್‌ಗಳಿಗೆ ಫಂಡಿಂಗ್‌ ಒದಗಿಸುವುದು ಮತ್ತು ಮಾರ್ಗದರ್ಶನ ನೀಡುವುದು ಮತ್ತು ಆ ವಲಯದಲ್ಲಿನ ಹೂಡಿಕೆಗಳಿಗೆ ಮತ್ತು ಮಾರ್ಗದರ್ಶನವನ್ನು ಉತ್ತೇಜಿಸುವುದರ ಜತೆಗೆ ಆವಿಷ್ಕಾರಗಳನ್ನು ಲ್ಯಾಬ್‌ನಿಂದ ಮಾರುಕಟ್ಟೆಗೆ ಕೊಂಡೊಯ್ದು ನೈಜ ಸಮಸ್ಯೆಗಳನ್ನು ಅರಿಯುವಂತೆ ಮಾಡುವುದರ ಮೇಲೆ ಗಮನಹರಿಸಲಾಗಿದೆ. ಈ ಉದ್ದೇಶಕ್ಕಾಗಿಯೆ ಬಿಟಿಎಸ್‌ನಲ್ಲಿ ಲ್ಯಾಬ್‌ ಟು ಮಾರ್ಕೆಟ್‌ ಎಂಬ ನಿಗದಿತ ಟ್ರ್ಯಾಕ್‌ ಇದೆ.


ಇಂಡಿಯಾ ಬಯೋ@ಬಿಟಿಎಸ್‌ನಲ್ಲಿ ನೀವೇಕೆ ಪಾಲ್ಗೋಳ್ಳಬೇಕು?

ನವೆಂಬರ್‌ 19 ರಿಂದ 21 ರವರೆಗೆ ನಡೆಯುವ ಮೂರು ದಿನಗಳ ಇಂಡಿಯಾ ಬಯೋ@ಬಿಟಿಎಸ್‌ನಲ್ಲಿ ಭಾರತ ಮತ್ತು ಜಗತ್ತಿಲ್ಲೆಡೆಯಿಂದದ ಪ್ರತಿಭಾವಂತರು ಭಾಗವಹಿಸುವ ನಿರೀಕ್ಷೆಯಿದೆ. ಜೀವ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಮಹತ್ವದ ವಿಚಾರಗಳ ಮೇಲೆ ಮತ್ತು ಸಾಂಕ್ರಾಮಿಕವು ಒಡ್ಡಿದ ಸಮಸ್ಯೆಗಳ ಪರಹಾರಕ್ಕೆ ಬಯೋಟೆಕ್‌ ಸಮುದಾಯವು ಹೇಗೆ ಸಹಕರಿಸುತ್ತದೆ ಎಂಬುದರ ಮೇಲೆ ಗಮನ ಹರಿಸಲಾಗುವುದು.


ಬಯೋಪಾರ್ಟ್ನರಿಂಗ್‌: ಇದೆ ಮೊದಲ ಬಾರಿಗೆ 3 ದಿನಗಳ ಇಂಡಿಯಾ ಬಯೋ@ಬಿಟಿಎಸ್‌ ಇನೊವಾ ಸಾಫ್ಟ್‌ವೆರ್‌ ಅಭಿವೃದ್ಧಿಪಡಿಸಿರುವ ಸುಧಾರಿತ ಮೀಟಿಂಗ್‌ ಷೆಡ್ಯೂಲರ್‌ ವೇದಿಕೆಯನ್ನು ಪರಿಚಯಿಸುತ್ತಿದೆ. ಈ ವೇದಿಕೆ ಪಾಲ್ಗೋಳ್ಳುವವರಿಗೆ ಆಹ್ವಾನಿತ ಕಂಪನಿಗಳನ್ನು ಹುಡುಕಲು, ಆಮಂತ್ರಣಗಳನ್ನು ಸ್ವೀಕರಿಸಲು ಮತ್ತು ವರ್ಚುಅಲ್‌ ಆಗಿ ಮೀಟಿಂಗ್‌ ನಡೆಸಲು ಅವಕಾಶ ನೀಡುತ್ತದೆ. ಇನೊವಾ ಸಾಫ್ಟ್‌ವೆರ್‌ ಜಾಗತಿಕವಾಗಿ ಪ್ರಮುಖ ಬಯೋಟೆಕ್‌ ಶೋಗಳಲ್ಲಿ ಕೆಲಸ ಮಾಡಿದ್ದು, ಭಾರತದಲ್ಲಿ ಇದು ಅವರ ಮೊದಲ ದೊಡ್ಡ ಬಯೋಟೆಕ್‌ ಇವೆಂಟ್‌ ಆಗಿದೆ.


ಬಯೋ ಪೊಸ್ಟರ್‌ - ಅನ್ವೇಷಣೆಯ ದಾರಿ: ಬಯೋಟೆಕ್ನಾಲಜಿ ಮತ್ತು ಲೈಫ್‌ ಸೈನ್ಸ್‌ ಕ್ಷೇತ್ರದಲ್ಲಿ ಪರಿಣಾಮ ಬೀರುವಂತಹ ನಾವೀನ್ಯ ಯೋಚನೆಗಳನ್ನು, ಅಪ್ರತಿಮ ಸಂಶೋಧನೆಗಳನ್ನು ಮತ್ತು ಅಧ್ಯಯನಗಳನ್ನು ಇದರಲ್ಲಿ ಪ್ರಸ್ತುತಪಡಿಸಲಾಗುತ್ತದೆ. ವಿಶ್ವದೆಲ್ಲೆಡೆಯ ಪ್ರತಿನಿಧಿಗಳೊಂದಿಗೆ ತಮ್ಮ ಮಹತ್ವವಾದ ಯೋಜನೆಗಳನ್ನು ಹಂಚಿಕೊಳ್ಳಲು ಯುವ ಸಂಶೋಧಕರಿಗೆ ಇದು ಉತ್ತಮವಾದ ವೇದಿಕೆಯಾಗಿದೆ. ಈ ವರ್ಷದ ವಿಶೇಷ ಗಮನ ಸಾಂಕ್ರಾಮಿಕವನ್ನು ಲಸಿಕೆಗಳು, ಔಷಧಗಳು, ರೋಗ ಪತ್ತೆ ಹಚ್ಚುವಿಕೆ, ಚಿಕಿತ್ಸೆ, ರೋಗ ನಿರೋಧಕ ಶಕ್ತಿ ಮತ್ತು ಸೋಂಕು ತಾಗಿದ ನಂತರದ ಆರೈಕೆಯಿಂದ ಹೇಗೆ ಎದುರಿಸಬಹುದು ಎಂಬ ವಿಷಯದ ಮೇಲಿದೆ. ಅಗ್ರ 10 ಪೋಸ್ಟರ್‌ಗಳು ತಲಾ 20,000 ರೂ. ನಗದು ಬಹುಮಾನವನ್ನು ಗೆಲ್ಲಬಹುದು.


ನೀವು ಬಯೋಟೆಕ್ನಾಲಜಿ ಮತ್ತು ಲೈಫ್‌ ಸೈನ್ಸ್‌ಸ್‌ನಲ್ಲಿ ಆಸಕ್ತಿಯುಳ್ಳವರಾಗಿದ್ದರೆ ನವೆಂಬರ್‌ 19 ರಿಂದ 21 ರಂದು ನಡೆಯುವ ಇಂಡಿಯಾ ಬಯೋ@ಬಿಟಿಎಸ್‌ನಲ್ಲಿ ಮರೆಯದೆ ಪಾಲ್ಗೋಳ್ಳಿ.


ಆಕರ್ಷಕ ವಿನಾಯಿತಿಯನ್ನು ಪಡೆಯಲು ಈಗಲೇ ಬಿಟಿಎಸ್‌ಗೆ ನೋಂದಾಯಿಸಿಕೊಳ್ಳಿ.