ವಿಶ್ವ ಪರಿಸರ ದಿನ: ಇಲ್ಲಿವೆ ಪರಿಸರ ಸಂರಕ್ಷಣೆಯ 7 ಸರಳ ಅಭ್ಯಾಸಗಳು
ವಿಶ್ವ ಪರಿಸರ ದಿನದಂದು 7 ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತ ಪರಿಸರ ಸಂರಕ್ಷಣೆಯಲ್ಲಿ ತೊಡಗೋಣ.
ಎಲ್ಲ ಜೀವಗಳನ್ನು ಒಳಗೊಂಡಿರುವುದೇ ಪರಿಸರವೆಂದರೆ, ಅದರ ಅವನತಿ ಪೂರ್ತಿ ಪರಿಸರ ವ್ಯವಸ್ಥೆಯ ಆರೋಗ್ಯವನ್ನೆ ಹಾಳುಗೆಡವುತ್ತದೆ. ಹವಾಮಾನದಲ್ಲಿ ಬದಲಾವಣೆಯಗುತ್ತಿರುವುದು ಕಣ್ಣ ಮುಂದಿರುವ ಸತ್ಯ. ವಿಪರೀತ ಹವಾಮಾನ, ಏರುತ್ತಿರುವ ಸಾಗರದ ಮಟ್ಟ, ಅರಣ್ಯನಾಶ ಇತ್ಯಾದಿಗಳ ಪರಿಣಾಮವು ಸಸ್ಯ ಮತ್ತು ಪ್ರಾಣಿ, ಸಮುದಾಯ ಮತ್ತು ಸಮಾಜದ ನಾಶಕ್ಕೆ ಕಾರಣವಾಗುತ್ತಿವೆ.
ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳು ಪ್ರಕೃತಿ ವಿಕೋಪಗಳನ್ನು ಮತ್ತು ಅವುಗಳ ಸಾಮಾಜಿಕ ಮತ್ತು ಪ್ರಾಕೃತಿಕ ಪರಿಣಾಮಗಳನ್ನು ಎದುರಿಸುವಲ್ಲಿ ಮುಖ್ಯ ಪಾತ್ರವಹಿಸುತ್ತಿರುವಾಗ, ನಾವು ಭೂವಿಯನ್ನು ಕಾಪಾಡಲು ಕೆಲವು ಸರಳ ಸಂರಕ್ಷಣಾತ್ಮಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ ಮತ್ತು ಅದು ನಮ್ಮ ಜವಾಬ್ದಾರಿಯಾಗಿದೆ.
1. ವಾಹನ ಹೊರಸೂಸುವಿಕೆಯನ್ನು ಕಡಿಮೆಗೊಳಿಸಿ
ಸಾರ್ವಜನಿಕ ಸಾರಿಗೆ ಅಥವಾ ಕಾರ್ ಪೂಲಿಂಗ್ ಅಥವಾ ಬೈಸಿಕಲ್ ನಂತಹ ಸುಸ್ಥಿರ ಸಾರಿಗೆ ಸಾಧನಗಳನ್ನು ಹೆಚ್ಚಾಗಿ ಉಪಯೋಗಿಸಿ. ಈ ಸ್ಮಾರ್ಟ್ ಜಗದಲ್ಲಿ ಇಂಧನ ಸಮರ್ಥವಾದ ಹೊಸ ಕಾರು ಬೈಕುಗಳನ್ನು ಖರೀದಿಸಿ ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಿ. ವಾಸ್ತವವಾಗಿ ಹೇಳುವುದಾದರೆ ಜಾಗತಿಕವಾಗಿ ಹಲವು ಅಭಿವೃದ್ಧಿಹೊಂದಿರುವ ಮತ್ತು ಪರಿಸರ ಸ್ನೇಹಿ ರಾಷ್ಟ್ರಗಳಲ್ಲಿ ಈ ಅಭ್ಯಾಸಗಳು ಸಾಮಾನ್ಯವಾಗಿವೆ.
2. ಪ್ಲಾಸ್ಟಿಕ್ ಬೇಡ
ಇದನ್ನು ತುಂಬಾ ದಿನದಿಂದ ಹೇಳುತ್ತಲಿದ್ದೇವೆ. ಆದರೆ ಇಂದು ನಾವು ಸಾಗರದಲ್ಲಿ ಶತಕೋಟಿ ಪೌಂಡ್‌ಗಳಷ್ಟು ಪ್ಲಾಸ್ಟಿಕ್ ತೇಲುತ್ತಿರುವುದನ್ನು ಕಾಣಬಹುದು. ಪ್ಲಾಸ್ಟಿಕ್ ವಿಶ್ವದ ಸಾಗರಗಳ 40 ಪ್ರತಿಶತ ಮೇಲ್ಮೈಯನ್ನು ಆವರಿಸಿದೆ.
ನಾವು ವಸ್ತುಗಳನ್ನು ಖರೀದಿಸುವಾಗ ಮರುಬಳಕೆ ಮಾಡಬಹುದಾದಂತಹ ಚೀಲಗಳನ್ನು ಉಪಯೋಗಿಸಿಬೇಕು. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕಾದ ಸಮಯವಿದು. ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್ ಬಾಟಲಿ, ಬ್ಯಾಗ್, ಸ್ಟ್ರಾವ್ ಮತ್ತು ಪ್ಲಾಸ್ಟಿಕ್‌ನಿಂದ ಮಾಡಿದ ವಸ್ತುಗಳ ಬಳಕೆಗೆ ವಿದಾಯ ಹೇಳಿ.
3. ಲೇಬಲ್ ಗಮನಿಸಿ
ಕಾಫಿಯಿಂದ ಹಣ್ಣು ತರಕಾರಿಗಳವರೆಗೆ ನಮಗೆ ವಿವಿಧ ಬಗೆಯ ಹಲವು ಆಯ್ಕೆಗಳು ಲಭ್ಯವಿದೆ ಹೊರತು ಅವುಗಳು ಉತ್ತಮ ಪರಿಸರ ನಿರ್ವಹಿಸಲು ಸಹಾಯ ಮಾಡುವುದಿಲ್ಲ. ಹೆಚ್ಚಾಗಿ ಪ್ರಮಾಣೀಕೃತ ಸರಕುಗಳನ್ನು ಖರೀದಿಸಿ, ಸುಸ್ಥಿರ ಉತ್ಪಾದನೆಗೆ ಸೀಮಿತವಾಗಿರುವ ಕೈಗಾರಿಕೆಗಳನ್ನು ಬೆಂಬಲಿಸಿ. ಇವುಗಳು ಕಾರ್ಮಿಕರಿಗೆ ಉತ್ತಮ ವೇತನವನ್ನೂ ನೀಡುತ್ತವೆ.
ಹಾನಿಕಾರಕ ಕೀಟನಾಶಕಗಳನ್ನು ಭೂಮಿ ಮತ್ತು ನೀರಿನಿಂದ ಹೊರಗಿಡಲು, ಕೃಷಿ ಕಾರ್ಮಿಕರು, ವನ್ಯಜೀವಿಗಳು ಮತ್ತು ಕುಟುಂಬಗಳನ್ನು ರಕ್ಷಿಸಲು ಸಾವಯವ ಆಹಾರ ಅಭ್ಯಾಸವನ್ನು ರೂಢಿಸಿಕೊಳ್ಳಿ. ಆರೋಗ್ಯಕರ ಆಹಾರ ಮತ್ತು ಉತ್ತಮ ಪೋಷಣೆ ಎಲ್ಲರ ಕಾಳಜಿ.
4. ನೀರನ್ನು ಸಂರಕ್ಷಿಸಿ
ನೀರಿನ ಕೊರತೆ ಭಾರತದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಬಿಕ್ಕಟ್ಟಾಗಿದ್ದು, 600 ದಶಲಕ್ಷ ಜನರ ಮೇಲೆ ಇದು ಪ್ರತಿವರ್ಷ ಪರಿಣಾಮ ಬೀರುತ್ತಿದೆ. ಸರಾಸರಿಯಾಗಿ ಒಬ್ಬ ಮನುಷ್ಯ ಪ್ರತಿ ದಿನ 45 ಲೀಟರ್ ನೀರನ್ನು ವ್ಯರ್ಥ ಮಾಡುತ್ತಾನೆ. ಆದರೆ ಇದು ಪ್ರತಿದಿನ ಒಬ್ಬ ಮನುಷ್ಯನ ನೀರಿನ ಅವಷ್ಯಕತೆಯ 30 ಪ್ರತಿಶತವಾಗಿದೆ. ಹಾಗಾಗಿ ಸ್ನಾನಕ್ಕೆ, ತೊಳೆಯುವುದಕ್ಕೆ ಕಡಿಮೆ ನೀರನ್ನು ಬಳಸಿ, ನೀರು ಉಳಿಸಿ.
5. ಸುಸ್ಥಿರ ಬಟ್ಟೆ
ನೀವು ಧರಿಸುವ ಬಟ್ಟೆ ಮುಖ್ಯವಾಗುತ್ತದೆ! ತ್ವರೀತ ಬದಲಾವಣೆ ಮತ್ತು ಸುಸ್ಥಿರ ಕ್ರಮಗಳ ಅಳವಡಿಕೆಯ ಹೊರತಾಗಿಯೂ ಪ್ಯಾಶನ್ ಹಾಗೂ ಜವಳಿ ಕೈಗಾರಿಕೆ ಇನ್ನೂ ಭೂವಿಯ ಮೇಲೆ ನಕಾರಾತ್ಮಮ ಪರಿಣಾಮ ಬೀರುತ್ತಿದೆ.
ನಾವು ಧರಿಸುವ ಬಟ್ಟೆಗಳಲ್ಲಿ ಬಹುಪಾಲು ಸಂಶ್ಲೇಷತ ಬಟ್ಟೆಗಳು. ಇವುಗಳು ಬೃಹತ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಬಳಸುತ್ತವೆ. ಆದ್ದರಿಂದ ಟೆನ್ಸೆಲ್ ಮತ್ತು ಎಕೊವೆರೊ ನಂತಹ ನಾರುಗಳಿಂದ ಮಾಡಿದ ಬಟ್ಟೆಗಳನ್ನು ಅದರ ಟ್ಯಾಗ್ ಗಮನಿಸಿ ಖರೀದಿಸುವುದು ಉತ್ತಮ.
ಈ ನಾರುಗಳು ಬಟ್ಟೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಆರಾಮದಾಯಕವಾಗಿದೆ. ಅಲ್ಲದೇ ಇವುಗಳು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅವಕಾಶ ಕಲ್ಪಿಸದೆ, ಚರ್ಮಕ್ಕೆ ಒಣ ಮತ್ತು ತಂಪಾದ ವಾತಾವರಣವನ್ನು ಒದಗಿಸುತ್ತದೆ. ಇದೆಲ್ಲಕ್ಕೂ ಮಿಗಿಲಾಗಿರುವ ಮುಖ್ಯ ಅಂಶವೆಂದರೆ ಇವು ಶೇ. 100 ರಷ್ಟು ಜೈವಿಕ ವಿಘಟನೀಯವಾಗಿರುವುದು ಮತ್ತು ಅತೀ ಕಡಿಮೆ ಇಂಗಾಲದ ಗುರುತುಗಳನ್ನು ಬಿಡುವುದು.
6. ಸಸಿಗಳನ್ನು ಬೆಳೆಯುವುದು
ನಿಮ್ಮ ಬಳಿ ಮಗ್, ಊಟದ ಡಬ್ಬಿಯಂತಹ ಬಳಸದ ಅಥವಾ ಹಳೆಯ ಪಾತ್ರೆಗಳಿದ್ದರೆ ಅವುಗಳನ್ನು ಎಸೆಯಬೇಡಿ. ಅವುಗಳಲ್ಲಿ ಪುದೀನ, ಕೊತ್ತಂಬರಿ, ಹೂವುಗಳನ್ನು ಅಥವಾ ಯಾವುದೇ ಸಸಿಯನ್ನು ನೆಟ್ಟು ಕಿಟಕಿಯಲ್ಲಿ ಇಟ್ಟು ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು.
7. ಅಡುಗೆ ಮನೆಯ ಕಸದಿಂದ ಮಿಶ್ರಗೊಬ್ಬರದ ತಯಾರಿ
ತರಕಾರಿಗಳ ಸಿಪ್ಪೆ, ಚಹಾ ಎಲೆಗಳು, ಹಣ್ಣುಗಳಂತಹ ಅಡುಗೆ ಮನೆಯ ತ್ಯಾಜ್ಯದಿಂದ ನಿಮ್ಮ ಮನೆಯಲ್ಲಿರುವ ಸಸ್ಯಗಳಿಗೆ ಗೊಬ್ಬರವನ್ನು ತಯಾರಿಸಬಹುದು. ಇದಕ್ಕೆ ಹೆಚ್ಚು ಸಮಯವು ತಗಲುವುದಿಲ್ಲ.
ಇದು ಇಂತಹ ಸರಳ ಅಭ್ಯಾಸಗಳನ್ನು ನಮ್ಮ ದೈನಿಕ ಚಟುವಟಿಕೆಗಳಲ್ಲಿ ಸೇರಿಸುವ ಸಮಯ. ಇವು ತುಂಬಾ ಸರಳವಾಗಿದ್ದರೂ ಇವುಗಳ ಪರಿಣಾಮ ಮುಂದಿನ ದಿನಗಳಲ್ಲಿ ಆಶ್ಚರ್ಯಮೂಡಿಸುವಂತಿವೆ.