ಕೋವಿಡ್-19 ಔಷಧ ಪ್ರಯೋಗಕ್ಕೆ ಮೆಕ್ಸಿಕನ್ ಪ್ರಾಧಿಕಾರದಿಂದ ಅನುಮತಿ ಪಡೆದ ಝೈಡಸ್ ಕ್ಯಾಡಿಲಾ
ಕೋವಿಡ್-19 ಸೋಂಕು ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಡೆಸಿಡುಸ್ಟಾಟ್ ಮಾತ್ರೆಗಳ ಪರಿಣಾಮ ಮತ್ತು ಸುರಕ್ಷತೆಯ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಕಂಪನಿ ಹೇಳಿದೆ.
ಔಷಧ ತಯಾರಕ ಸಂಸ್ಥೆ ಝೈಡಸ್ ಕ್ಯಾಡಿಲಾದ ಕೋವಿಡ್-19 ನಿರ್ವಹಣೆಯ ಸಂಶೋಧನಾ ಔಷಧಿ ಡೆಸಿಡುಸ್ಟಾಟ್ ಅನ್ನು ಪರೀಕ್ಷಿಸಲು ಮೆಕ್ಸಿಕೊದ ನಿಯಂತ್ರಣಾ ಪ್ರಾಧಿಕಾರ ಅನುಮತಿ ಸೂಚಿಸಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ.
“ಮೆಕ್ಸಿಕೊದ ಮೊಂಟೆರ್ರಿಯಲ್ಲಿ ಕೇಂದ್ರ ಕಛೇರಿ ಹೊಂದಿರುವ ಪ್ರಮುಖ ಗುತ್ತಿಗೆ ಸಂಶೋಧನಾ ಸಂಸ್ಥೆ ಅವಂಟ್ ಸ್ಯಾಂಟ್ ರಿಸರ್ಚ್ ಸೆಂಟರ್ ಎಸ್.ಎ. ಡಿ. ಸಿ.ವಿ. ನಲ್ಲಿ ಕೋವಿಡ್-19 ನಿರ್ವಹಣೆಯಲ್ಲಿ ಡೆಸಿಡುಸ್ಟಾಟ್ ಬಗೆಗಿನ ಕ್ಲಿನಿಕಲ್ ಮತ್ತು ರೆಗುಲೇಟರಿ ಅಭಿವೃದ್ಧಿಗಳನ್ನು ನಡೆಸಲಾಗುತ್ತಿದೆ,” ಎಂದು ಕ್ಯಾಡಿಲಾ ಹೇಲ್ತ್‌ಕೇರ್ ಹೇಳಿದೆ.
ಕೋವಿಡ್-19 ಸೋಂಕು ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಡೆಸಿಡುಸ್ಟಾಟ್ ಮಾತ್ರೆಗಳ ಪರಿಣಾಮ ಮತ್ತು ಸುರಕ್ಷತೆಯ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಕಂಪನಿ ಹೇಳಿದೆ.
“ಅಧ್ಯಯನದ ಭಾಗವಾಗಿ, 100 ಮಿ.ಗ್ರಾಂ. ಡೆಸಿಡುಸ್ಟಾಟ್ ಮಾತ್ರೆಯನ್ನು 14 ದಿನಗಳವರೆಗೆ ಶಿಫಾರಸ್ಸು ಮಾಡಿದ ಪ್ರಮಾಣೀಕೃತ ಚಿಕಿತ್ಸೆಯೊಂದಿಗೆ ನೀಡಲಾಗುವುದು,” ಎಂದು ಕಂಪನಿ ಹೇಳಿದೆ.
ಝೈಡಸ್ ಕ್ಯಾಡಿಲಾ ಅಧ್ಯಕ್ಷ ಪಂಕಜ್ ಆರ್ ಪಟೇಲ್ ಮಾತನಾಡಿ, ‘ಕೋವಿಡ್-19 ಮಹಾಮಾರಿ ವಿರುದ್ಧ ಹೋರಾಡಲು ನಾವು ಔಷಧಿಗಳು, ರೋಗನಿರ್ಣಯ ಮತ್ತು ಲಸಿಕೆಗಳ ತಯಾರಿಯತ್ತ ಕೆಲಸ ಮಾಡುತ್ತಿದ್ದೇವೆ. ಕೋವಿಡ್-19 ನಿರ್ವಹಿಸಲು ಡೆಸಿಡುಸ್ಟಾಟ್ ನಿಂದ ಹೊಸ ವಿಧಾನವನ್ನು ಅಭ್ಯಸಿಸುತ್ತಿದ್ದೇವೆ,ʼ ಎಂದರು.
ಝೈಡಸ್ ಡೆಸಿಡುಸ್ಟಾಟ್‌ನ ಹಂತ-3 ರ ಟ್ರಯಲ್‌ಗಳನ್ನು ಆರಂಭಿಸಿದೆ.
ಕಳೆದ ವಾರ ಝೈಡಸ್, ತನ್ನ ಕೋವಿಡ್-19 ಸಂಭಾವ್ಯ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲು ಭಾರತೀಯ ಪ್ರಾಧಿಕಾರಗಳಿಂದ ಅನುಮತಿ ಪಡೆದಿದೆ. ಭಾರತ ಬಯೋಟೆಕ್‌ನ ಕೋವ್ಯಾಕ್ಸಿನ್ ನಂತರ ಕೋವಿಡ್-19 ಗಾಗಿ ಸಿದ್ಧವಾಗುತ್ತಿರುವ ಭಾರತದ ಎರಡನೇ ಲಸಿಕೆ ಇದಾಗಿದೆ.
ಝೈಕೋವ್-ಡಿ ಎಂಬ ಈ ಲಸಿಕೆಯನ್ನು ಹೈದರಾಬಾದ್‌ನಲ್ಲಿರುವ ಕಂಪನಿಯ ಲಸಿಕಾ ತಂತ್ರಜ್ಞಾನ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಲಸಿಕೆಗೆ ಡಿಸಿಜಿಐ ಮತ್ತು ಸಿಡಿಎಸ್‌ಸಿಒ ನಿಂದ ಮಾನವರ ಮೇಲೆ ಪ್ರಯೋಗ ಮಾಡುವುದಕ್ಕೆ ಅನುಮತಿ ದೊರಕಿದೆ ಎಂದು ಕ್ಯಾಡಿಲಾ ಹೇಳಿದೆ.
(ವಿಶೇಷ ಸೂಚನೆ: ಪಿಟಿಐ ಲೇಖನಕ್ಕೆ ಅಗತ್ಯವಾದ ವಿವರಗಳನ್ನು ಸೇರಿಸಲಾಗಿದೆ)