Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಕೇರಳದಲ್ಲಿ ಆಹಾರದ ಅಗತ್ಯವಿರುವವರಿಗಾಗಿ ಫುಡ್ ಬ್ಯಾಂಕ್ ಸ್ಥಾಪಿಸಿದ ಅಬ್ದುಲ್ ಖಾದರ್

ಯುಎಇಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಬ್ದುಲ್ ಖಾದರ್ ತಮ್ಮ ತಾಯ್ನಾಡಿಗೆ ಮರಳಿದ ನಂತರ ಆಹಾರದ ಅಗತ್ಯತೆಯನ್ನು ಹೊಂದಿರುವವರಿಗಾಗಿ ಪ್ರತಿದಿನ ಮಧ್ಯಾಹ್ನ ಉಚಿತವಾಗಿ ಆಹಾರದ ಪ್ಯಾಕೆಟ್‌ಗಳನ್ನು ವಿತರಿಸುತ್ತಿದ್ದಾರೆ.

ಕೇರಳದಲ್ಲಿ ಆಹಾರದ ಅಗತ್ಯವಿರುವವರಿಗಾಗಿ ಫುಡ್ ಬ್ಯಾಂಕ್ ಸ್ಥಾಪಿಸಿದ ಅಬ್ದುಲ್ ಖಾದರ್

Tuesday January 28, 2020 , 2 min Read

ಜಗತ್ತಿನಲ್ಲಿ ಜನರು ತುಂಬಾ ಹಸಿದಿದ್ದಾರೆ, ದೇವರು ಅವರಿಗೆ ಬ್ರೆಡ್ ರೂಪದಲ್ಲಿ ಹೊರತುಪಡಿಸಿ ಕಾಣಿಸುವುದಿಲ್ಲ.


- ಮಹಾತ್ಮ ಗಾಂಧಿ


ಹಸಿವು ಎನ್ನುವುದು ಬಹಳ ಕಾಡುವಂತಹದು. ಹಸಿವಿಗಾಗಿ ಮನುಷ್ಯ ಏನನ್ನೂ ಮಾಡಲು ಹೇಸುವುದಿಲ್ಲ. ಜಗತ್ತಿನಲ್ಲಿ ಎಷ್ಟೊಂದು ಜನರು ಸರಿಯಾಗಿ ಆಹಾರವನ್ನು ಸೇವಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಖಾದರ್ ಎಂಬುವವರು ಆಹಾರದ ಅಗತ್ಯವಿರುವವರಿಗೆಂದೆ ಆಹಾರ ಬ್ಯಾಂಕ್‌ನ್ನು ಸ್ಥಾಪಿಸಿದ್ದು, ಪ್ರತಿದಿನ ಮಧ್ಯಾಹ್ನ ಉಚಿತವಾಗಿ ಆಹಾರದ ಪ್ಯಾಕೇಟ್‌ಗಳನ್ನು ವಿತರಿಸುತ್ತಾರೆ‌.


ಅಬ್ದುಲ್ ಖಾದರ್ (ಚಿತ್ರಕೃಪೆ: ದ ನ್ಯೂಸ್ ಮಿನಿಟ್)


38 ವರ್ಷಗಳ ಹಿಂದೆ, ಉತ್ತಮ ಜೀವನ ನಡೆಸುವುದಕ್ಕೆಂದು ಯುಎಇಗೆ ವಲಸೆ ಹೋದ ಕೇರಳಿಗರಲ್ಲಿ ಅಬ್ದುಲ್ ಖಾದರ್ ಒಬ್ಬರು. ಅವರು ಬಡತನದಲ್ಲಿದ್ದ ಕಾರಣ ಹಸಿವಿನ ನೋವನ್ನು ಬಲ್ಲವರಾಗಿದ್ದರು. ಅವರ ಪೋಷಕರು ಗಾಂಧಿತತ್ವಗಳನ್ನು ಅಳವಡಿಸಿಕೊಂಡವರಾಗಿದ್ದರು. ಅಬ್ದುಲ್ ಅಕ್ಟೋಬರ್ 2019ರಲ್ಲಿ ತಮ್ಮ ತ್ರಿಶೂರ್ ಜಿಲ್ಲೆಯ ಪುಲ್ಲುಟ್ಟುವಿನ ಮನೆಗೆ ಮರಳಿದಾಗ, ಅಗತ್ಯವಿರುವವರಿಗೆ ಪ್ರತಿದಿನ ಊಟವನ್ನು ನೀಡಲು ಮನೆಯ ಬಳಿ ಆಹಾರ ಬ್ಯಾಂಕ್‌ನ್ನು ತೆರೆಯಲು ನಿರ್ಧರಿಸಿದರು, ವರದಿ ದ ನ್ಯೂಸ್ ಮಿನಿಟ್


ಸುನೀತಾ ಅಬ್ದುಲ್‌ ಖಾದರ್‌ (ಚಿತ್ರಕೃಪೆ: ದ ನ್ಯೂಸ್ ಮಿನಿಟ್)




ಮಲಯಾಳಂ ಮನೋರಮಾದೊಂದಿಗಿನ ಸಂದರ್ಶನವೊಂದರಲ್ಲಿ ಖಾದರ್,

"ಹಸಿದವರು ಆಹಾರಕ್ಕಾಗಿ ನಿಮ್ಮ ಬಳಿಗೆ ಬರಬಾರದು ಆದರೆ ಬದಲಾಗಿ ಅವರಿಗೆ ಉಚಿತ ಆಹಾರವನ್ನು ಪಡೆಯಲು ಒಂದು ವ್ಯವಸ್ಥೆ ಇರಬೇಕು ಏಕೆಂದರೆ ಅದು ಅವರ ಹಕ್ಕು," ಎಂದಿದ್ದಾರೆ.


ತಮ್ಮ ಮನೆಯ ಪಕ್ಕದಲ್ಲಿ ಗಾಜಿನ ಫಲಕಗಳನ್ನು ಹೊಂದಿರುವ ಆಹಾರದ ಕೌಂಟರ್‌ ಇದೆ. ಅದರ ಮೇಲೆ "ಹಸಿದವರಿಗೆ ಹಬ್ಬ" ಎಂದು ಮಲಯಾಳಂನಲ್ಲಿ ಬರೆಯಲಾಗಿದೆ. ಬದಿಯಲ್ಲಿರುವ ಇನ್ನೊಂದು ಬೋರ್ಡ್‌ನಲ್ಲಿ ‘ಊಟ ಮತ್ತು ಕುಡಿಯುವ ನೀರು ಲಭ್ಯವಿದೆ,' ಎಂದು ಬರೆಯಲಾಗಿದೆ.


"ನಾವು ಮನೆಯಲ್ಲಿ ಪ್ರತಿದಿನ ಏ‌ನು ತಯಾರಿಸುತ್ತೇವೆ, ಸಾಮಾನ್ಯವಾಗಿ ಅನ್ನ ಮತ್ತು ಮೇಲೋಗರ. ಅದನ್ನೆ ಅವರಿಗೂ ಕೊಡುತ್ತೇವೆ. ನನ್ನ ಪತ್ನಿ ಸುನೀತಾ ಮಾರ್ಗದರ್ಶನದಲ್ಲಿ ಎಲ್ಲವನ್ನೂ ನಮ್ಮ ಅಡುಗೆಮನೆಯಲ್ಲಿ ತಯಾರಿಸಲಾಗುತ್ತದೆ," ಎಂದು ಖಾದರ್ ದ ನ್ಯೂಸ್ ಮಿನಿಟ್‌ಗೆ ಹೇಳಿದರು.


ಆಹಾರದ ಕೌಂಟರ್ (ಚಿತ್ರಕೃಪೆ: ದ ನ್ಯೂಸ್ ಮಿನಿಟ್)


ಪ್ರತಿದಿನ ಮಧ್ಯಾಹ್ನ 12.30-2.30 ರವರೆಗೆ ಉಚಿತ ಊಟದ ಪ್ಯಾಕೆಟ್‌ಗಳನ್ನು ಪಡೆಯಬಹುದು. ಈ ಸಮಯದಲ್ಲಿ ಪ್ಯಾಕೆಟ್ ಖಾಲಿಯಾದರೆ ಮತ್ತೆ ಇಡಲಾಗುತ್ತದೆ. ಮಧ್ಯಾಹ್ನ 2.30ರ ನಂತರವೂ ಯಾರಿಗಾದರೂ ಆಹಾರದ ಅಗತ್ಯವಿದ್ದರೆ ಅವರು ನೇರವಾಗಿ ಖಾದರ್‌ರವರ ಮನೆಗೆ ಹೋಗಬಹುದು. ಅಲ್ಲಿ ಆಹಾರವನ್ನು ನೀಡಲಾಗುತ್ತದೆ.


"ಯಾರೂ ಆಹಾರವನ್ನು ಕೇಳಬಾರದು, ಆಹಾರವನ್ನು ಹೊಂದುವುದು ಎಲ್ಲರ ಹಕ್ಕು. ಅದಕ್ಕಾಗಿಯೇ ನಾನು ಆಹಾರವನ್ನು ಮುಕ್ತವಾಗಿ ಕೌಂಟರ್‌ನಲ್ಲಿಡಲು ನಿರ್ಧರಿಸಿದೆ. ಇದರಿಂದ ಯಾರೂ ಬೇಕಾದರೂ ಅದನ್ನು ಯಾರನ್ನೂ ಕೇಳದೆ ತೆಗೆದುಕೊಳ್ಳಬಹುದಾಗಿದೆ," ಎನ್ನುತ್ತಾರೆ ಖಾದರ್.


ಪ್ರತಿದಿನ ಕನಿಷ್ಟ 35 ಪ್ಯಾಕೆಟ್ ಊಟವನ್ನು ನೀಡಲಾಗುತ್ತದೆ. ಕೆಲವೊಂದು ಬಾರಿ ಅದು 50ರವರೆಗೆ ಹೋಗುತ್ತದೆ. ಬಡವರು ಮಾತ್ರವಲ್ಲದೆ, ಹಸಿವಿನಿಂದ ಬಳಲುತ್ತಿರುವ ಯಾರಾದರೂ ಆಹಾರವನ್ನು ತೆಗೆದುಕೊಳ್ಳಬಹುದಾಗಿದೆ.


ಕೆಲವು ಅತಿಥಿಗಳು ಆಹಾರವನ್ನು ಸೇವಿಸಿದ ನಂತರ ಖಾದರ್‌ರನ್ನು ಭೇಟಿಯಾಗಲು ಬರುತ್ತಾರೆ, ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ‘ಅವರು ನನಗೆ ಧನ್ಯವಾದ ಹೇಳಬೇಕಾಗಿಲ್ಲ, ಅದು ಅವರ ಹಕ್ಕು,' ಎಂದು ಖಾದರ್ ಹೇಳುತ್ತಾರೆ.


"ಹಸಿವಿನಿಂದ ಯಾರು ಬಳಲಬಾರದು, ಯಾರೂ ಹಸಿದುಕೊಂಡಿರದಂತೆ, ಇನ್ನೂ ಅನೇಕರು ಆಹಾರವನ್ನು ದಾನ ಮಾಡಲು ಮುಂದೆ ಬರಬೇಕು," ಎಂದೆನ್ನುತ್ತಾರೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.