ನಟ ಅಕ್ಷಯ ಕುಮಾರರವರ ಗಮನ ಸೆಳೆದ, ಗಿಡಗಳಿಂದ ಕೂಡಿದ ಮುಂಬೈನ ಆಟೋ ರಿಕ್ಷಾ

ಮುಂಬೈನ ಆಟೋ ಚಾಲಕರೊಬ್ಬರು ತಮ್ಮ ಆಟೋವನ್ನೆ ಸಣ್ಣ ಉದ್ಯಾನವನ್ನಾಗಿಸಿಕೊಂಡು ತಮ್ಮ ಪರಿಸರ ಪ್ರಜ್ಞೆಯಿಂದ ಸುದ್ದಿಯಾಗಿದ್ದಾರೆ.

ನಟ ಅಕ್ಷಯ ಕುಮಾರರವರ ಗಮನ ಸೆಳೆದ, ಗಿಡಗಳಿಂದ ಕೂಡಿದ ಮುಂಬೈನ ಆಟೋ ರಿಕ್ಷಾ

Wednesday September 18, 2019,

2 min Read

ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಮಾನವನ ವಿಲಾಸಿ ಜೀವನಶೈಲಿಯಿಂದ ಕಾಡು ಕಡಿಮೆಯಾಗುತ್ತಿದೆ, ಪರಿಸರ ನಾಶ ಮುಂದುವರೆದಿದೆ. ಮರುಭೂಮಿಯಲ್ಲಿ ನೀರು ಕಂಡರೆ ಹೇಗೆ ಖುಷಿಯಾಗುತ್ತದೆಯೋ ಹಾಗೆ ವಾಹನಗಳಿಂದ ತುಂಬಿ ಹೋಗಿರುವ ಮುಂಬೈ ಬೆಂಗಳೂರಿನಂತಹ ನಗರಗಳಲ್ಲಿ ಹಸಿರು ಗಿಡಗಳನ್ನು ಕಂಡರೆ ಮನಸ್ಸಿಗೊಂದು ಸಂಭ್ರಮ.


ಇಂತಹ ಕೆಲಸಗಳತ್ತ ಹಲವಾರು ಜನಸಾಮಾನ್ಯರು ತಮ್ಮ ಕೈಲಾದ ಪ್ರಯತ್ನವನ್ನು ಮಾಡುತ್ತಿರುತ್ತಾರೆ, ಅಂತಹದೇ ಪ್ರಯತ್ನ ಮುಂಬೈನಲ್ಲಿ ನಡೆದು ನಟ ಅಕ್ಷಯ ಕುಮಾರರವರ ಮೆಚ್ಚುಗೆಗೆ ಪಾತ್ರವಾಗಿದೆ.


q

ಗಿಡಗಳಿಂದ ಅಲಂಕೃತಗೊಂಡ ಆಟೋ ರಿಕ್ಷಾ ( ಚಿತ್ರಕೃಪೆ: ಅಕ್ಷಯಕುಮಾರ, ಇನ್ಸ್ಟಾಗ್ರಾಂ)

ಅಕ್ಷಯ ಕುಮಾರರವರ ಕಣ್ಣಿಗೆ ಬಿದ್ದ ಆಟೋ ನೋಡಿ ಅವರು ಸಂತಸಗೊಂಡು ತಮ್ಮ ಟ್ವಿಟರ್‌, ಇನ್ಸ್ಟಾಗ್ರಾಂ ಖಾತೆಯಲ್ಲಿ ಆ ಚಾಲಕನ ಪ್ರಯತ್ನವನ್ನು ಹೋಗಳಿದ್ದಾರೆ. ತಮ್ಮ ಟ್ವಿಟ್‌ ನಲ್ಲಿ ಅವರು


“ಶೂಟಿಂಗ್‌ ಗೆ ಹೋಗುವಾಗ ಗಿಡಗಳಿಂದ ತುಂಬಿದ ಈ ಸುಂದರವಾದ ಆಟೋ ರಿಕ್ಷಾ ನೋಡಿದೆ, ಇದನ್ನು ಮಾಡಿರುವ ಚಾಲಕನ ಪ್ರಯತ್ನದ ಬಗ್ಗೆ ತುಂಬಾ ಹೆಮ್ಮೆ ಇದೆ. ಅವರು ತಮಗೆ ತಿಳಿದ ರೀತಿಯಲ್ಲಿ ಪರಿಸರವನ್ನು ಮತ್ತಷ್ಟು ಹಸಿರಾಗಿಸುತ್ತಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ.




ಈ ಆಟೋವನ್ನು ನೀವು ಗಮನಕೊಟ್ಟು ನೋಡಿದರೆ ನಿಮಗೆ ಕಸದ ಬುಟ್ಟಿ ಅಳುವಿಡಿಸಿರುವುದು ಕಾಣುತ್ತದೆ. ಪ್ರಯಾಣಿಕರಿಗೆ ಸುಲಭವಾಗುವಂತಹ ಸ್ಥಳದಲ್ಲಿ ಹೊರಗಡೆ ಕಸ ಎಸೆಯಬಾರದೆಂಬ ದೃಷ್ಟಿಯಲ್ಲಿ ಅದನ್ನು ಅಳುವಡಿಸಲಾಗಿದೆ. ಈ ಆಟೋದಿಂದ ನಿಜಕ್ಕೂ ನಾವೆಲ್ಲರೂ ಕಲಿಯಬಹುದಾದ ಸಂಗತಿಗಳಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.


ಇಂತಹ ಪ್ರಯತ್ನಗಳು ದೇಶದ ಇತರ ಭಾಗಗಳಲ್ಲೂ ನಡೆಯುತ್ತಿವೆ. ಕೆಲವು ತಿಂಗಳ ಹಿಂದೆ ಕೊಲ್ಕತ್ತಾದಲ್ಲೊಬ್ಬರು ಆಟೋ ಮೇಲೊಂದು ಸಣ್ಣ ಉದ್ಯಾನವನ ಮಾಡಿ ಸುದ್ದಿಯಲ್ಲಿದ್ದರು.


Q

ಬಿಜಲ ಪಾಲ ರವರ ಆಟೋ ರಿಕ್ಷಾ (ಚಿತ್ರಕೃಪೆ: ಇಂಡಿಯಾ ಟುಡೇ)


ಗಿಡಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು 50 ರ ಬಿಜಯ ಪಾಲ ತಮ್ಮ ಆಟೋ ಮೇಲೆ ಸಣ್ಣ ಉದ್ಯಾನ ಬೆಳೆದಿದ್ದರು.


ತಮ್ಮ ಈ ವಿಭಿನ್ನ ಪ್ರಯತ್ನದ ಬಗ್ಗೆ ಬಿಜಯ ಕ್ವಿಂಟ್‌ ನೊಂದಿಗೆ ಮಾತನಾಡುತ್ತಾ ಹೀಗೆ ಹೇಳುತ್ತಾರೆ,


“ನಾನು ಮೂರು ದಶಕದಿಂದ ಆಟೋ ಓಡಿಸುತ್ತಿದ್ದೇನೆ. ಮಾನವನ ಪ್ರಕೃತಿ ನಾಶ ನನಗೆ ಬೇಜಾರು ಮಾಡಿದೆ. ಅದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ನನ್ನ ಆಟೋ ಮೇಲೆ ಚಿಕ್ಕ ಉದ್ಯಾನವನ್ನೆ ಬೆಳೆಸಿದ್ದೇನೆ.”

ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.