ನೆಟ್ವರ್ಕ್ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ- 5ಬಾರ್ಜ್ ಟ್ರೈ ಮಾಡಿ...
ಟೀಮ್ ವೈ.ಎಸ್. ಕನ್ನಡ
ಇದು ಮೊಬೈಲ್ ಯುಗ. ಕೈಯಲ್ಲೊಂದು ಮೊಬೈಲ್ ಇದ್ರೆ ಅದರ ಗತ್ತೇ ಬೇರೆ. ಕೆಲವರಂತೂ ಎರಡು ಮೂರು ಮೊಬೈಲ್ಗಳನ್ನು ಇಟ್ಟುಕೊಳ್ಳುತ್ತಾರೆ. ವಿವಿಧ ನೆಟ್ವರ್ಕ್ಗಳ ಸಿಮ್ಕಾರ್ಡ್ಗಳು ಕೂಡ ಇರುತ್ತವೆ. ಪರ್ಸನಲ್ ನಂಬರ್, ಆಫೀಸ್ ನಂಬರ್, ಪ್ರೈವೇಟ್ ಕಾಲ್ಗಳಿಗೆಂದೇ, ನಂಬರ್ಗಳನ್ನು ಇಟ್ಟುಕೊಳ್ಳುವವರು ಕೂಡ ಇದ್ದಾರೆ. ಆದ್ರೆ ಒಂದಲ್ಲ ಒಂದು ಬಾರಿ ಮೊಬೈಲ್ ಯೂಸರ್ಗಳಿಗೆ ಒಂದು ಸಮಸ್ಯೆಯಂತೂ ಬಿಟ್ಟು ಬಿಡದೆ ಕಾಡಿರುತ್ತದೆ. ಕೆಲವೊಂದು ಬಾರಿ ಯಾಕಪ್ಪಾ ಹೀಗೆ ಅಂತ ಬಡ್ಕೊಂಡಿದ್ದು ಉಂಟು. ಮೊಬೈಲ್ ಬಳಕೆದಾರರ ಕಾಮನ್ ಸಮಸ್ಯೆ ಅಂದ್ರೆ ಅದು ನೆಟ್ವರ್ಕ್ ಪ್ರಾಬ್ಲಂ.
ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಫೋನ್ ಇದೆ ಒಮ್ಮೊಮ್ಮೆ ಕರೆ ಮಾಡುವಾಗ ಇದ್ದಕ್ಕಿದ್ದಂತೆ ಕಾಲ್ ಕಟ್ ಆಗುತ್ತದೆ. ಹಾಗಾಗದಿರಲಿ ಎಂದು ಗ್ರಾಹಕರಿಗೆ ಅನಗತ್ಯವಾಗಿ ಕಿರಿಕಿರಿ ಆಗವು ಸಮಸ್ಯೆಗೆ ಅಂತ್ಯ ಹಾಡಲು ಇಂಡಿಯಾ ಡಾಟ್ ಕಾಂ ಸಂಸ್ಥೆ ಹೊಸ ತಂತ್ರಜ್ಞಾನವನ್ನು ತಯಾರಿಸಿದೆ.
ಇದನ್ನು ಓದಿ: ನಿಮ್ಮೊಳಗಿನ ಉದ್ಯಮಿಯನ್ನು ಬಡಿದೆಬ್ಬಿಸುವ 5 ಟಿವಿ ಕಾರ್ಯಕ್ರಮಗಳು..!
ದೇಶದ ಮಾರುಕಟ್ಟೆಗಳಲ್ಲಿ ತನ್ನ ಕಬಂದ ಬಾಹುಗಳನ್ನು ವಿಸ್ತರಿಸುತ್ತಿರುವ ಸೆಲ್ಯುಲಾರ್ ನೆಟ್ವರ್ಕ್ ಸಂಪರ್ಕದ ಸವಾಲುಗಳನ್ನು ಎದುರಿಸುವ ಮತ್ತು ಸಿಗ್ನಲ್ ಸಾಮರ್ಥ್ಯವನ್ನು ಸುಧಾರಿಸಲು ಹುಟ್ಟಿಕೊಂಡಿರುವುದೇ 5ಬಾರ್ಜ್ ಇಂಡಿಯಾ ಡಾಟ್ ಕಾಂ. ಭಾರತದಲ್ಲಿ ನೆಟ್ ವರ್ಕ್ ಗುಣಮಟ್ಟವನ್ನು ಹೆಚ್ಚಿಸುವುದೆ ಇದರ ಮೂಲ ಉದ್ದೇಶ.
ನೆಟ್ ವರ್ಕ್ ಅಪ್ಗ್ರೇಡ್ ಮಾಡುವುದು, ಬೇಸ್ ಸ್ಟೇಷನ್ ಸಾಮರ್ಥ್ಯಗಳನ್ನು ಸುಧಾರಿಸುವುದು ಅಥವಾ ಹೊಸ ತಲೆಮಾರಿನ ಸೆಲ್ಯುಲಾರ್ ತಂತ್ರಜ್ಞಾನಗಳನ್ನು ಪರಿಚಯಿಸುವುದರ ಜತೆಗೆ ನಗರದಲ್ಲಿರುವ ಆಪ್ಟಿಕಲ್ ಜಾಲದ ಬ್ರಾಡ್ ಬ್ಯಾಂಡ್ ಮತ್ತು ಸೀಮಿತ ರೂಟರ್ ಸಾಮರ್ಥ್ಯದಿಂದ ಸಮಸ್ಯೆಯನ್ನು ಪರಿಹರಿಸಲೂ ಸಾಧ್ಯವಾಗಿಲ್ಲ. ನೈಜ ಅವಿಷ್ಕಾರ ಎಂದರೆ ಸಂಕೇತ ಪೂರ್ಣ ಸಾಮರ್ಥ್ಯ ಹೊಂದಿರುವಾಗಲೂ ಕೊನೆಯ ಕ್ಷಣದ ಸಂಪರ್ಕ ಕಟ್ಟಡಗಳು ಅಥವಾ ಮುಚ್ಚಿದ ಪ್ರದೇಶಗಳಲ್ಲಿ ಕಟ್ಟಡದ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸುವುದಾಗಿದೆ.
ಈ ನಿಟ್ಟಿನಲ್ಲಿ 5ಬಾರ್ಜ್ ಇಂಡಿಯಾಡಾಟ್ ಕಾಂ ನೆಟ್ವರ್ಕ್ ಎಕ್ಸೆಟೆಂಡರ್ ಸಣ್ಣ ಪ್ಲಗ್ ಆ್ಯಂಡ್ ಪ್ಲೇಬಾಕ್ಸ್ ಮೂಲಕ ಪೆಟೆಂಟ್ ಪಡೆಯುಲಾದ ದುರ್ಬಲ ಸೆಲ್ಯುಲಾರ್ ಸಿಗ್ನಲ್ಗಳನ್ನು ಎಲ್ಲಾ ಸೆಲ್ಯುಲಾರ್ ಡಿವೈಸ್ಗಳಲ್ಲಿ ಸದೃಢಗೊಳಿಸಲು ಸಹಾಯಕಾರಿಯಾಗಿದೆ.
ಮೊಬೈಲ್ ಹಾಗೂ ಲ್ಯಾಂಡ್ ಫೋನ್ ಮೂಲಕ ಮಾತನಾಡುವಾಗ ಕರೆಗಳು ಇದ್ದಕ್ಕಿದ್ದಂತೆ ಕಟ್ ಆಗುತ್ತವೆ. ಮನೆಯಲ್ಲಿ ವೈಫೈ ಹೊಂದಿದ್ದರೆ ಕೂಡ ಅದ್ರಲ್ಲೂ ಇಂತಹ ಸಮಸ್ಯೆಗಳು ಕಂಡು ಬರುತ್ತವೆ. ಈ ಸಮಸ್ಯೆಗಳನ್ನು ಪರಿಹರಿಸಲೂ 5ಬಾರ್ಜ್ ಇಂಡಿಯಾಡಾಟ್ ಕಾಂ ಹೊಸದಾಗಿ ಒಂದು ಡಿವೈಸ್ ತಯಾರಿಸಿದೆ ಇದು ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ.
ಅಳವಡಿಸುವುದು ಹೇಗೆ..?
ಅಧಿಕವಾಗಿ ಮಾತನಾಡುವ ಚಂದದಾರರ ಮನೆಯಲ್ಲಿ ಈ ಸಂಸ್ಥೆಯಿಂದ ಈ ಡಿವೈಸ್ ಅಳವಡಿಸಲು ನಿರ್ಧರಿಸಲಾಗಿದೆ. ಡಿವೈಸ್ನ್ನು ಆದಷ್ಟು ಮದ್ಯವರ್ತಿಗಳನ್ನಿಟ್ಟುಕೊಂಡು ಚಂದಾದಾರ ಮನೆಗೆ ಅಳವಡಿಸುವತ್ತ ಕಂಪನಿ ಗಮನ ಹರಿಸಿದೆ. ಇದರ ಅಳವಡಿಕೆಯಿಂದ ಗಾರ್ಬಲ್ ವಾಯ್ಸ್ ಚಾಪಿವಾಯ್ಸ್ ತಡೆಯಬಹುದು. ಈ 5ಬಾರ್ಜ್ ಡಿವೈಸ್ ಅಳವಡಿಕೆಗೆ ಪ್ರಸ್ತುತವಾಗಿ ದೇಶದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಏರ್ಟೆಲ್ನೊಂದಿಗೆ ಪಾರ್ಟ್ನರ್ಶಿಪ್ ಮಾಡಿಕೊಂಡಿದೆ. ವೈಫೈ ಸಿಗ್ನಲ್ ಸಹ ಮನೆಯ ತುಂಬಾ ಸಿಗುವುದಿಲ್ಲ. ಅದನ್ನು ನಿಯಂತಿಸಲು ಈ 5ಬಾರ್ಜ್ ಡಿವೈಸ್ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ಏಕ ಕಾಲಕ್ಕೆ ಐದರಿಂದ ಆರು ಫೋನ್ಗಳ ಬಳಕೆಗೂ ಸಹಕಾರಿಯಾಗಿದೆ.
ಈ ಡಿವೈಸ್ನ್ನು ನಿಮ್ಮ ಮನೆಗೆ ಅಳವಡಿಸಿಕೊಂಡರೆ ನೀವು ಯಾವುದೇ ಕಾಲ್ ಮಾಡುವಾಗ ಕರೆ ಕಡಿತಗೊಳಿತಗೊಳ್ಳುವುದು ನಡೆಯುವುದಿಲ್ಲ. ಈ ಕಂಪನಿಯ ಸಿಇಒ ಸಮರ್ಥ ರಾಘವ ನಾಗಭೂಷಣಂ ಮೈಸೂರು ವಿವಿಯಿಂದ ಕಮ್ಯುನಿಕೇಷನ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ. ಜಪಾನ್ನಲ್ಲಿ ಕೆಲಸ ಮಾಡುತ್ತಿದ್ದ ಇವರು ಭಾರತಕ್ಕೆ ವಾಪಾಸ್ ಬಂದು 5ಬಾರ್ಜ್ ಇಂಡಿಯಾಡಾಟ್ ಕಾಂ ಸಂಸ್ಥೆ ಕಟ್ಟಿ ಭಾರತದಲ್ಲಿ ನೆಟ್ವರ್ಕ್ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ.
1. ಜೋಧ್ಪುರದ ಉದ್ಯಮಿಗಳಿಗೆ ಸಹಾಯ ನೀಡುತ್ತಾ "ಫೇಸ್ಬುಕ್"ಎಂಟ್ರಿ..?
2. ಮನಸ್ಸಿದ್ದರೆ ಮಾರ್ಗ- ಕುಡಿಯುವ ನೀರಿನ ಸಮಸ್ಯೆ ಮೆಟ್ಟಿನಿಂತ ಸೋಮಾಪುರ