ಆವೃತ್ತಿಗಳು
Kannada

ನಾಟಿ ಫ್ಯಾಕ್ಟರಿಯ Naughty ಸ್ಟೋರಿ..!

ಟೀಮ್​ ವೈ.ಎಸ್​. ಕನ್ನಡ

YourStory Kannada
22nd Dec 2016
Add to
Shares
9
Comments
Share This
Add to
Shares
9
Comments
Share

ನಾಟಿ ಫ್ಯಾಕ್ಟರಿಯ ವಿಡಿಯೋಗಳು ಫೇಸ್​ಬುಕ್ ಯೂಟ್ಯೂಬ್​ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ತಮ್ಮ ಸೃಜನಶೀಲ ಪ್ರತಿಭೆಯ ಅಭಿವ್ಯಕ್ತಿಗೆ ಆಧುನಿಕ ಮಾಧ್ಯಮಗಳನ್ನೇ ಬಳಸಿಕೊಂಡು ಈ ನಾಟಿ ಫ್ಯಾಕ್ಟರಿ ವಿಡಿಯೋಗಳು ಹಾಸ್ಯದ ಮೂಲಕ ಸದ್ಯದ ಸಮಸ್ಯೆಗಳನ್ನು ಜನರಿಗೆ ತಿಳಿಸುತ್ತಿದ್ದಾರೆ.

image


ಈ ನಾಟಿ ಫ್ಯಾಕ್ಟರಿಯನ್ನು ನಡೆಸುತ್ತಿರುವುದು ಚಿತ್ರದುರ್ಗ ಮೂಲದ ಪಂಪಾಪತಿ ಮತ್ತವರ ಸಹೋದರರು. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂಗಾರುಮಳೆ ಸಿನಿಮಾದ ದೃಶ್ಯದ ಮರು ರೂಪದಿಂದ ಈ ನಾಟಿ ಫ್ಯಾಕ್ಟರಿ ಸಖತ್ ಸದ್ದು ಮಾಡುತ್ತಿದೆ.

ಈ ವಿಡಿಯೋ ಈಗ ಎಲ್ಲರ ಫೇಸ್​ಬುಕ್ ಮತ್ತು ವಾಟ್ಸ್​ಆ್ಯಪ್​ಗಳಲ್ಲಿ ಓಡಾಡುತ್ತಿದೆ. ವೃತ್ತಿಯಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿರುವ ಈ ವಿನಯ್​ಪಂಪಾಪತಿ ಮತ್ತು ವಿಕಾಸ್ ಪಂಪಾಪತಿ ಎಂಬ ಯುವಕರೇ ಈ ಎಲ್ಲ ಫನ್ನಿ ವಿಡೀಯೋಳ ಸೂತ್ರಧಾರರು.

image


ಕಾಲೇಜು ದಿನಗಳಿಂದಲೂ ರಂಗಭೂಮಿಯಲ್ಲಿ ಒಲವಿದ್ದ ಈ ಸಹೋದರರು ಆಗಲೇ ಕೆಲ ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಇಂಟರ್​ನೆಟ್ ಮೂಲಕ ಎಲ್ಲವನ್ನು ಕಲಿತ ಈ ಸಹೋದರರು ವಿಡಿಯೋ ಎಡಿಟಿಂಗ್ ಸಹ ಇಂಟರ್​ನೆಟ್​ನಲ್ಲೇ ಕಲಿತಿದ್ದಾರೆ. ನಿರ್ದೇಶಕರಾದ ಸುನಿ, ಗುರುಪ್ರಸಾದ್ ಜತೆ ಕೆಲಸ ಮಾಡಿದ ಅನುಭವ ಕೂಡಾ ಇವರಿಬ್ಬರಿಗೆ ಇದೆ.

ಕನ್ನಡದಲ್ಲಿ ಒಂದು ಯೂಟ್ಯೂಬ್ ಚಾನೆಲ್ ಆರಂಭಿಸಿ ಅದರಲ್ಲಿ ಗುಣಮಟ್ಟದ ಕನ್ನಡ ಕಂಟೆಟ್ ಕೊಟ್ಟು ಕನ್ನಡದ ವೀಕ್ಷಕರನ್ನು ಹೆಚ್ಚಿಸಬೇಕು ಎಂದು ಈ ನಾಟಿ ಫ್ಯಾಕ್ಟರಿಯನ್ನು ಆರಂಭಮಾಡಿದ್ದಾರೆ. ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಿಂದಿ ಮತ್ತು ಇಂಗ್ಲೀಷ್ ವೀಡಿಯೊಗಳು ವೈರಲ್ ಆಗುತ್ತವೆ, ಕನ್ನಡ ಏಕೆ ಆಗಬಾರದು ಎಂದು ತೀರ್ಮಾನಿಸಿ ಈ ರೀತಿಯ ಕನ್ನಡ ವೀಡಿಯೊಗಳನ್ನು ಮಾಡಿದ್ದಾರೆ.

ಹೀಗೆ ತೀರ್ಮಾನ ಮಾಡಿ ಯೂ ಟ್ಯೂಬ್ ಚಾನೆಲ್ ಆರಂಭಿಸಬೇಕು ಎಂದಾಗ ಹೆಸರು ಏನಿಡಲಿ ಎಂಬ ಯೋಚನೆ ಆರಂಭವಾಯಿತು. ಅದಾಗಲೇ ಮೀಮ್ಸ್, ಟ್ರೊಲ್ ಎಂಬ ಹೆಸರುಗಳು ಇದ್ದ ಕಾರಣ ಇನ್ನೂ ಡಿಫರೆಂಟ್ ಆಗಿರಬೇಕು ಎನ್ನುವ ಕಾರಣಕ್ಕೆ ‘ನಾಟಿ ಫ್ಯಾಕ್ಟರಿ’ಎಂಬ ಹೆಸರನ್ನ ಇಡಲಾಯಿತು.

ನಾಟಿ ಎಂಬ ಪದಕ್ಕೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿಯೂ ವಿಭಿನ್ನ ಅರ್ಥವಿದೆ. ಇಂಗ್ಲೀಷ್​ನಲ್ಲಿ ನಾಟಿ ಎಂದರೆ ತುಂಟ ಮನಸ್ಸು ಕನ್ನಡದಲ್ಲಿ ಪಕ್ಕಾ ನಮ್ಮತನಕ್ಕೆ ನಾಟಿ ಎನ್ನುತ್ತಾರೆ ಎರಡನ್ನೂ ಸೇರಿಸಿ ನಾಟಿ ಫ್ಯಾಕ್ಟರಿ ಎನ್ನಲಾಗಿದೆ. ಈ ನಾಟಿ ಫ್ಯಾಕ್ಟರಿಯಲ್ಲಿ ಹಾಸ್ಯವೇ ಪ್ರಧಾನ ಅಂಶವಾಗಿದೆ. ರಕ್ಷಿತ್ ಶೆಟ್ಟಿ ಅಭಿನಯದ ಉಳಿದವರು ಕಂಡಂತೆ ಸಿನಿಮಾದ ಕೆಲ ಸನ್ನಿವೇಶಗಳನ್ನು ಇಟ್ಟುಕೊಂಡು ಮಾಡಿದ ಮೊದಲ ವೀಡಿಯೋ ಸಾಕಷ್ಟು ವೈರಲ್ ಆಯಿತು ಅಲ್ಲಿಂದ ನಾಟಿ ಫ್ಯಾಕ್ಟರಿಯ ಕೆಲಸ ಆರಂಭ ಆಗಿತ್ತು. ಈಗ ದೊಡ್ಡದಾಗಿ ಸದ್ದು ಮಾಡುತ್ತಿದೆ.

image


ಈ ನಾಟಿ ಫ್ಯಾಕ್ಟರಿಯಲ್ಲಿ ಸಾಮಾಜಿಕ ಕಳಕಳಿಯೂ ಇದ್ದು ಅಂತಹ ಹಲವು ವೀಡಿಯೋಗಳನ್ನು ಮಾಡಿದ್ದಾರೆ. ಬೆಂಗಳೂರಿನ ಸ್ಟೀಲ್ ಬ್ರಿಡ್ಜ್​ಗೆ ಸಂಬಂಧಪಟ್ಟಂತೆ ವೀಡಿಯೋ, ಸೇರಿದಂತೆ ಸಾಕಷ್ಟು ಸಾಮಾಜಿಕ ಕಳ ಕಳಿಯುಳ್ಳ ವೀಡಿಯೋಗಳನ್ನು ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಇದೇ ತರಹದ ಹಲವು ವೀಡಿಯೋಗಳನ್ನು ಮಾಡುವ ಮೂಲಕ ಕನ್ನಡದ ಎಲ್ಲಾ ಅಜ್ಞಾತ ಪ್ರತಿಭಾವಂತರನ್ನು ಗುರುತಿಸುವ ಕೆಲಸವೂ ಮುಂದಿನ ದಿನಗಳಲ್ಲಿ ಈ ನಾಟಿ ಫ್ಯಾಕ್ಟರಿಯಿಂದ ಆಗುತ್ತದಂತೆ.

ಅಷ್ಟೇ ಅಲ್ಲದೆ ನಾಟಿ ಫ್ಯಾಕ್ಟರಿಯಿಂದ ಹೊಸ ವೆಬ್​ಸೈಟ್ ಬರಲಿದ್ದು ಅದರಲ್ಲಿ ವೆಬ್​ಸಿರೀಸ್ ಕೂಡ ಬಿಡುಗಡೆಗೊಳಿಸುವ ಆಲೋಚನೆ ಇದೆಯಂತೆ. ಅಲ್ಲದೆ ಈ ನಾಟಿ ಫ್ಯಾಕ್ಟರಿಯಿಂದ ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾದ ಪ್ರಮೋಷನ್ ಸಹ ಮಾಡುವ ಐಡಿಯಾ ಈ ಪಂಪಾಪತಿ ಸಹೋದರರಿಗೆ ಇದೆಯಂತೆ. ಒಟ್ಟಿನಲ್ಲಿ ಈ ನಾಟಿ ಫ್ಯಾಕ್ಟರಿಯಿಂದ ಕನ್ನಡ ವೆಬ್​ಸಿರೀಸ್ ಆರಂಭವಾದರೂ ಸಂಶಯವಿಲ್ಲ.

ಇದನ್ನು ಓದಿ:

1. ಸನ್ಯಾಸಿ, ಯೋಗ ಗುರು, ಉದ್ಯಮಿ, ಕುಂಚ ಕಲಾವಿದ ಸಕಲಕಲಾ ವಲ್ಲಭ ಭರತ್ ಠಾಕುರ್ 

2. ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​

3. ಕ್ಯಾಶ್​ಲೆಸ್​ ವಹಿವಾಟಿನಲ್ಲೂ ಮಿಂಚಿದ ಬಿಎಂಟಿಸಿ - ಪ್ರಯಾಣಿಕರಿಗೆ ತಟ್ಟಿಲ್ಲ ಪ್ರಯಾಣದ ಬಿಸಿ

Add to
Shares
9
Comments
Share This
Add to
Shares
9
Comments
Share
Report an issue
Authors

Related Tags