ಮಾನವ ಕಳ್ಳ ಸಾಗಣೆಯಿಂದ 72,000ಕ್ಕೂ ಹೆಚ್ಚು ಜನರನ್ನು ರಕ್ಷಿಸಲು ಸಹಾಯ ಮಾಡಿದ ಹಸೀನಾ ಖರ್ಬಿಹ
ಭಾರತದಲ್ಲಿ ಶೇಕಡಾ 40 ರಷ್ಟು ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇಂತಹ ಹುಡುಗಿಯರು ಸಾಮಾನ್ಯ ಜೀವನ ನಡೆಸಲು ಬೆಂಬಲಿಸುವ ಮತ್ತು ಅದನ್ನು ಖಾತರಿ ಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಹಸೀನಾ ಖರ್ಬಿಹ.
ಮಾನವ ಕಳ್ಳ ಸಾಗಣೆ ಭಾರತದಲ್ಲಿ 32 ಬಿಲಿಯನ್ ಡಾಲರ್ ಮೌಲ್ಯದ ಉದ್ಯಮವನ್ನು ಹೊಂದಿದೆ, ಮತ್ತು ಈ ಮೂಲಕವಾಗಿ ಶೇಕಡಾ 40 ರಷ್ಟು ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಇಂತಹ ಹುಡುಗಿಯರು ಸಾಮಾನ್ಯ ಜೀವನ ನಡೆಸಲು ಬೆಂಬಲಿಸುವ ಮತ್ತು ಅದನ್ನು ಖಾತರಿ ಪಡಿಸುವ ಕೆಲಸವನ್ನು ಹಲವರು ಮಾಡುತ್ತಿದ್ದಾರೆ ಅವರಲ್ಲಿ ಅಶೋಕ ವಿಶ್ವ ವಿದ್ಯಾಲಯದ 47 ವರ್ಷ ವಯಸ್ಸಿನ ಹಸೀನಾ ಖರ್ಬಿಹ ಕೂಡ ಒಬ್ಬರು.
ಮಕ್ಕಳ ಕಳ್ಳಸಾಗಣೆ ತಡೆಗಟ್ಟಲು ಕಳೆದ 10 ವರ್ಷಗಳಲ್ಲಿ ಎಂಟು ಈಶಾನ್ಯ ರಾಜ್ಯಗಳು ಅಳವಡಿಸಿಕೊಂಡಿರುವ ಮೇಘಾಲಯ ಮಾದರಿಯನ್ನು ಹಸೀನಾ ಪರಿಚಯಿಸಿದರು. ಇದು ಭಾರತ ಸರ್ಕಾರದಿಂದ ಅನುಮೋದಿಸಲ್ಪಟ್ಟಿದೆ ಮತ್ತು ಯುನೈಟೆಡ್ ನೇಷನ್ಸ್ ಡ್ರಗ್ಸ್ ಅಂಡ್ ಕ್ರೈಮ್ ಮತ್ತು ಯುಎನ್ ವುಮೆನ್ ಕಚೇರಿಯಿಂದ ಬೆಂಬಲಿತವಾಗಿದೆ, ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರಿದ ಮಾಡಿದೆ.
ಜನವರಿ 2012 ರಲ್ಲಿ, ಅವರಿಗೆ ಇಂಡಿಯಾ ಚೇಂಬರ್ ಆಫ್ ಕಾಮರ್ಸ್‌ನಿಂದ ಈಶಾನ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಹಸೀನಾರವರು ಈಶಾನ್ಯದಲ್ಲಿ ಮಾನವ ಕಳ್ಳಸಾಗಣೆ ಕೊನೆಗೊಳಿಸಲು ಎರಡು ದಶಕಗಳಿಂದ ಹೋರಾಡುತ್ತಿದ್ದಾರೆ ಮತ್ತು ಅವರ ಇಂಪಲ್ಸ್ ಎನ್‌ಜಿಓ ನೆಟ್ವರ್ಕ್ (ಐಎನ್‌ಜಿಓಎನ್) ಮೂಲಕ ಇಲ್ಲಿಯವರೆಗೆ 72,442 ಜನರನ್ನು ರಕ್ಷಿಸಿದ್ದಾರೆ ಮತ್ತು 30,000 ಕ್ಕೂ ಹೆಚ್ಚು ಮಹಿಳಾ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸಿದ್ದಾರೆ ಎಂದು ದಿ ಬೆಟರ್ ಇಂಡಿಯಾ ತಿಳಿಸಿದೆ
ಇದು ಪ್ರಾರಂಭವಾದದ್ದು ಹೇಗೆ?
1996 ರಲ್ಲಿ, ಈಶಾನ್ಯ ರಾಜ್ಯಗಳಲ್ಲಿ ಮರಗಳನ್ನು ಕಡಿಯುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿತು. ಕೋರ್ಟ್ ತೀರ್ಪಿನಲ್ಲಿ ಹೀಗೆ ಹೇಳಲಾಗುತ್ತದೆ,
"ಕತ್ತರಿಸಿದ ಮರಗಳು ಮತ್ತು ಮರಗಳನ್ನು ಏಳು ಈಶಾನ್ಯ ರಾಜ್ಯಗಳಿಂದ ದೇಶದ ಯಾವುದೇ ರಾಜ್ಯಕ್ಕೆ ರೈಲು, ರಸ್ತೆ ಅಥವಾ ಜಲಮಾರ್ಗಗಳ ಮೂಲಕ ಸಾಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು."
ಈ ಆಂದೋಲನವು ತಮ್ಮ ಗಳಿಕೆಗಾಗಿ ಬಿದಿರು ಮತ್ತು ಕಬ್ಬಿನ ಮೇಲೆ ಅವಲಂಬಿತರಾಗಿದ್ದ ಮಹಿಳಾ ಕುಶಲಕರ್ಮಿಗಳ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿತು. ಅಲ್ಪಾವಧಿಯಲ್ಲಿಯೇ ಈ ಮಹಿಳೆಯರು ಮಾನವ ಕಳ್ಳಸಾಗಣೆಗೆ ಜಾಲಕ್ಕೆ ಬಲಿಯಾದರು. ಇದ್ದಕ್ಕಿದ್ದಂತೆ ರಾಜ್ಯಾದ್ಯಂತ ಕಾಣೆಯಾದ ಮಕ್ಕಳ ಸಂಖ್ಯೆ ವೇಗವಾಗಿ ಏರಿಕೆ ಉಂಟಾಯಿತು.
ಹಸೀನಾರವರು ಹೀಗೆ ಹೇಳುತ್ತಾರೆ,
“ನಾವು ಕೆಲವು ಪ್ರಕರಣಗಳನ್ನು ತನಿಖೆ ಮಾಡಿದಾಗ, ಎಲ್ಲ ಮಕ್ಕಳನ್ನು ಕೆಲವು ನೇಮಕಾತಿದಾರು ಉತ್ತಮ ಸಂಬಳದ ಭರವಸೆ ನೀಡಿ ಕರೆದೊಯ್ಯುತ್ತಿದ್ದಾರರೆಂಬೂದನ್ನು ಕಂಡುಕೊಂಡಿದ್ದೆವು. ಆದರೆ ಅವರನ್ನು ದಾಸಿಯರು, ಟೀ ಸ್ಟಾಲ್ ಸಹಾಯಕರು, ಗಣಿಕೆಲಸಗಾರರು ಮತ್ತು ಲೈಂಗಿಕ ಗುಲಾಮರನ್ನಾಗಿ ಕೆಲಸ ಮಾಡಲು ಬಂಧಿತ ಕಾರ್ಮಿಕರನ್ನಾಗಿ ಮಾಡಲಾಯಿತು.”
ಇಂಪಲ್ಸ್ ಮೊಡಲ್(ಮೇಘಾಲಯ ಮಾದರಿ)
ಮಾನವ ಕಳ್ಳಸಾಗಣೆಗೆ ಬಲಿಯಾದವರ ಸಹಾಯಕ್ಕಾಗಿ ಮೇಘಾಲಯ ಮೊಡಲ್ ಪ್ರಾರಂಭವಾಯಿತು.
ಹಸೀನಾರವರು ಹೀಗೆ ವಿವರಿಸುತ್ತಾರೆ,
ಇದು ಪ್ರಕರಣ ನಿರ್ವಹಣಾ ವ್ಯವಸ್ಥೆಯಾಗಿದೆ, ಇದನ್ನು 6ಆರ್ (ರಿಪೋರ್ಟಿಂಗ್, ರಿಸ್ಕ್, ರಿಹೆಬಿಲಿಟೇಶನ್, ರಿ–ಇಂಟಿಗ್ರೇಶನ್ ಮತ್ತು ರೀಕಂಪೆನ್ಶನ್) ಮತ್ತು 6ಪಿ (ಪಾರ್ಟ್ನರ್‌ಶಿಪ್, ಪ್ರಿವೆನ್ಶನ್, ಪ್ರೊಟೆಕ್ಷನ್, ಪಾಲಿಸಿಂಗ್, ಪ್ರೆಸ್ ಮತ್ತು ಪ್ರೊಸಿಕ್ಯೂಷನ್) ಎಂದು ಕರೆಯಲಾಗುತ್ತದೆ. ಪ್ರಚೋದನೆಯ ಮಾದರಿಯು ಏಕ ಕಿಟಕಿ ಮಾದರಿಯಾಗಿರಬೇಕೆಂದು ನಾವು ಬಯಸಿದ್ದೇವೆ. ಆದ್ದರಿಂದ ನಾವು ಪ್ರಚೋದನ ಪ್ರಕರಣ ಮಾಹಿತಿ ಕೇಂದ್ರವನ್ನು (ಐಸಿಐಸಿ) ರಚಿಸಿದ್ದೇವೆ, ಅದು ಮಾನವ ಕಳ್ಳ ಸಾಗಣೆ ಪ್ರಕರಣಗಳ ಸಂಬಧಿತ ಮಾಹಿತಿಯನ್ನು ದಾಖಲಿಸುತ್ತದೆ, ಸಂಗ್ರಹಿಸುತ್ತದೆ ಮತ್ತು ಟ್ರ್ಯಾಕ್ ಮಾಡುತ್ತದೆ, 6ಆರ್ 6ಪಿಯು ಪ್ರಚೋದನೆಯ ಮಾದರಿಯನ್ನು ಅನುಸರಿಸುತ್ತದೆ.
ಆಗ್ನೇಯ ಏಷ್ಯಾದಾದ್ಯಂತ ಐಸಿಐಸಿ 1,000 ಎನ್‌ಜಿಓ ಮತ್ತು ಸರ್ಕಾರಿ ಇಲಾಖೆಗಳ ಜಾಲವನ್ನು ಹೊಂದಿದೆ. ಮಾದರಿ ಆಧಾರಿತ ಹಸ್ತಕ್ಷೇಪದ ಪರಿಕಲ್ಪನೆಯ ಮೇಲೆ ಈ ಮಾದರಿ ಕಾರ್ಯನಿರ್ವಹಿಸುತ್ತದೆ ಮತ್ತು ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡಲು ವಿವಿಧ ಸಂಸ್ಥೆಗಳ ಸಹಕಾರವನ್ನು ಹೊಂದಿದೆ.
ನಿರ್ಣಾಯಕ ಸಂಗತಿಯೆಂದರೆ, ಕಳ್ಳ ಸಾಗಣೆಯಿಂದ ಪಾರು ಮಾಡಲ್ಪಟ್ಟ ಮಹಿಳೆಯರು ಪುನಃ ಕಳ್ಳ ಸಾಗಣೆಯ ಜಾಲಕ್ಕೆ ಬೀಳುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಹಸೀನಾರವರು ಐಎನ್‌ಜಿಓಎನ್‌ನ ಲಾಭರಹಿತ ಶಾಖೆಯಾದ ಇಂಪಲ್ಸ್ ಸೋಶಿಯಲ್ ಎಂಟರ್‌ಪ್ರೈಸ್(ಐಎಸ್‌ಇ) ಅನ್ನು ಪ್ರಾರಂಭಿಸಿದರು.
ಇದು ಈಶಾನ್ಯದ ವಿವಿಧ ರಾಜ್ಯಗಳಿಂದ ಐಎನ್‌ಜಿಓಎನ್ ಮೂಲಕ ಸೇರ್ಪಡೆಗೊಂಡ 30,000 ಕುಶಲಕರ್ಮಿಗಳಿಗೆ ನೆರವಾಗುತ್ತಿದೆ. ಕುಶಲಕರ್ಮಿಗಳು ಈಗ ತಮ್ಮ ಜೀವನೋಪಾಯಕ್ಕಾಗಿ ಮೂಲಭೂತ ಪರಿಕರಗಳು ಮತ್ತು ಗೃಹೋಪಯೋಗಿ ಉತ್ಪನ್ನಗಳಂತಹವುಗಳನ್ನು ತಯಾರಿಸಲು ಕೌಶಲ್ಯತೆಗಳನ್ನು ಹೊಂದಿದ್ದಾರೆ.
ಇಲ್ಲಿಯವರೆಗಿನ ಪರಿಣಾಮಗಳು
ಮೇಘಾಲಯದ ಜೈನ್ತಿಯಾ ಬೆಟ್ಟಗಳಲ್ಲಿನ ಕಲ್ಲಿದ್ದಲು ಗಣಿಗಳು ಕಿರಿದಾದ ಪ್ರವೇಶದ್ವಾರಗಳನ್ನು ಹೊಂದಿದ್ದು, ಅಲ್ಲಿ ಕೆಲವೇ ಜನರಿಗೆ ಮಾತ್ರ ಹೋಗಲು ಸಾಧ್ಯ. ಗಣಿಗಳಲ್ಲಿ ಕೆಲಸ ಮಾಡಲು ಗುತ್ತಿಗೆದಾರರು ಆರು ವರ್ಷದ ಮಕ್ಕಳನ್ನು ಸಹ ನೇಮಿಸಿಕೊಂಡಿದ್ದಾರೆಂಬೂದನ್ನು ಹಸೀನಾರವರ ಸಂಘಟನೆಯು ಪತ್ತೆಹಚ್ಚಿದೆ. ಅಲ್ಲದೆ, ಇದುವರೆಗೆ 70,000 ಕ್ಕೂ ಹೆಚ್ಚು ಮಕ್ಕಳನ್ನ ಇಲ್ಲಿ ದುಡಿಸಿಕೊಳ್ಳಲಾಗಿದೆ.
ಎನ್‌ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಮಂಡಳಿ) ಇಕ್ಕಟ್ಟಾದ ಪ್ರದೇಶದಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿತು, ಇದು ಸುಮಾರು 1200 ಮಕ್ಕಳನ್ನು ಉಳಿಸಲು ಐಎನ್‌ಜಿಓಎನ್‌ಗೆ ಸಹಾಯ ಮಾಡಿತು.
ಹಸೀನಾರವರು ಹೇಳುವಂತೆ,
‘ನಾವು ಅಂತಹ 40 ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಸಾಧ್ಯವಾಯಿತು. ಕೆಲವರು ಬೋರ್ಡಿಂಗ್ ಶಾಲೆಗಳಲ್ಲಿದ್ದಾರೆ. ಅವರಲ್ಲಿ ಒಂದೆರಡು ಮಕ್ಕಳು ಮೆಟ್ರಿಕ್ಯುಲೇಷನ್ ಕೂಡ ಪೂರ್ಣಗೊಳಿಸಿದ್ದಾರೆ.’
ಭವಿಷ್ಯದ ದಾರಿ
ಹಸೀನಾರವರು ಈಗ ಕೇಂದ್ರ ಸರ್ಕಾರದ ಸಹಾಯದಿಂದ ದೇಶಾದ್ಯಂತ ತಮ್ಮ ಉಪಕ್ರಮಗಳನ್ನು ಹರಡಲು ಎದುರು ನೋಡುತ್ತಿದ್ದಾರೆ. ಮಾನವ ಕಳ್ಳಸಾಗಣೆ ಕುರಿತ ಮಾಹಿತಿಯ ಕೇಂದ್ರೀಕೃತ ಭಂಡಾರವನ್ನು ಶೀಘ್ರದಲ್ಲೇ ಸ್ಥಾಪಿಸುವುದು ಅವರ ಆಶಯವಾಗಿದೆ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.