ಚೆನ್ನೈನ ವಂಡಲೂರು ಮೃಗಾಲಯದಲ್ಲಿ ಒಣಗಿದ್ದ ಕೆರೆಯನ್ನು ಪುನಶ್ಚೇತನಗೊಳಿಸಿದ ಭಾರತೀಯ ಅರಣ್ಯ ಸೇವಾ ಅಧಿಕಾರಿಗಳು
ಚೆನ್ನೈಯಲ್ಲಿ ನಿರ್ಜೀವ ಕೆರೆಯನ್ನು ಪುನಶ್ಚೇತನಗೊಳಿಸಿದ ಭಾರತೀಯ ಅರಣ್ಯ ಸೇವೆಯ ಅಧಿಕಾರಿ (ಐಎಫ್ಎಸ್) ಜನರಿಂದ ಪ್ರಶಂಸೆಗೊಳಪಟ್ಟಿದ್ದಾರೆ.
ನಗರ ಪ್ರದೇಶಗಳ ಜೀವನದ ಗುಣಮಟ್ಟ ಕೆರೆಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಕೆರೆಗಳ ಬರೀ ಅಂತರ್ಜಲವನ್ನು ಪುನಃ ಸ್ಥಾಪಿಪಿಸದೆ, ಸವೆತವನ್ನೂ ತಡೆಯುತ್ತದೆ ಮತ್ತು ಜೀವವೈವಿಧ್ಯತೆಯನ್ನು ಕಾಪಾಡುತ್ತವೆ.
ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ನಗರೀಕರಣದ ಬೆಳವಣಿಗೆ, ಕೈಗಾರಿಕೆಗಳ ಅತಿಕ್ರಮಣ ಮತ್ತು ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಮುಂತಾದ ಅಂಶಗಳಿಂದಾಗಿ ಹಲವಾರು ಜಲಮೂಲಗಳು ಕಣ್ಮರೆಯಾಗುತ್ತಿವೆ.
ಇತ್ತೀಚಿಗೆ, 2015ರಲ್ಲಿ ಚೆನ್ನೈನಲ್ಲಿ ಉಂಟಾದ ಪ್ರವಾಹದ ಕಾರಣವನ್ನು ವಿವರಿಸಿದ ಸಂಸದೀಯ ಸಮಿತಿಯು ‘ಕೆರೆ ಮತ್ತು ನದಿಪಾತ್ರಗಳ ಅತಿಕ್ರಮಣವು ವಿಪತ್ತನ್ನು ಉಂಟು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ' ಎಂದು ವರದಿ ಮಾಡಿದೆ.
ಇದನ್ನು ಮನಗಂಡ ಭಾರತೀಯ ಅರಣ್ಯ ಇಲಾಖೆ ವಂಡಲೂರು ಮೃಗಾಲಯ ಎಂದೇ ಖ್ಯಾತವಾದ ಅರಿಗ್ನಾರ್ ಅನ್ನಾ ಜೂಲಾಜಿಕಲ್ ಪಾರ್ಕ್‌ನಲ್ಲಿನ ಸಂಪೂರ್ಣವಾಗಿ ಒಣಗಿದ್ದ ಕೆರೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಮಾಡಿದೆ. ಕೆಲವು ತಿಂಗಳ ಹಿಂದೆ ತೀವ್ರ ಬರಗಾಲವನ್ನೆದುರಿಸಿದ್ದ ಈ ಕೆರೆ ಇಂದು ನೀರಿನಿಂದ ತುಂಬಿದೆ.
ಭಾರತೀಯ ಅರಣ್ಯ ಸೇವೆಯೊಂದಿಗೆ ಕೆಲಸ ಮಾಡುತ್ತಿರುವ ಅಧಿಕಾರಿಗಳಲ್ಲಿ ಒಬ್ಬರಾದ ಸುಧಾ ರಮೆನ್, ಸರೋವರದ ಪುನಶ್ಚೇತನದ ನಂತರ ಕೆರೆಯ ಅತಿಥಿಗಳು ಹೇಗೆ ಮರಳಿದ್ದಾರೆ ಎಂಬ ಬಗ್ಗೆ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. "ಈಗ ನೀರು ಮತ್ತು ಪಕ್ಷಿಗಳು ಒಟ್ಟಿಗೆ ಹಿಂತಿರುಗಿವೆ ಮತ್ತು ನಮ್ಮ ನಗು ಕೂಡ. ಕೆಲಸದಿಂದ ಸಂತೋಷವಾಗಿದೆ," ಎಂದು ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಬರೆದಿದ್ದಾರೆ.
ಭಾರತೀಯ ಅರಣ್ಯ ಸೇವೆಯ ಸದಸ್ಯರನ್ನು ಹೊಗಳಿದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಕೆಲವರು ಇದರ ಹಿಂದಿನ ರಹಸ್ಯ ಹಂಚಿಕೊಳ್ಳಲು ಕೇಳಿಕೊಂಡಿದ್ದರು, ಏಕೆಂದರೆ ಇದರಿಂದಾಗಿ ಅವರು ಇತರೆ ಪ್ರದೇಶಗಳಲ್ಲಿನ ಕೆರೆಗಳನ್ನು ಪುನಶ್ಚೇತನಗೊಳಿಸಲು ಅದೇ ವಿಧಾನವನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆಂದು.
ಇದಕ್ಕೆ ಉತ್ತರಿಸಿದ ಸುಧಾ ರಾಮೆನ್ ರವರು,
ಇದಕ್ಕೆ ಸಾಕಷ್ಟು ಶ್ರಮ ವಹಿಸಿದ್ದು, ನೈಸರ್ಗಿಕ ಒಳಚರಂಡಿ ಮಾರ್ಗಗಳನ್ನು ತೆರವುಗೊಳಿಸಿ, ಜಲಮೂಲಗಳನ್ನು ನಿರ್ಮಿಸಲಾಯಿತು. ನದಿದಡದ ಬಳಿ ಒಂದು ಗುಂಪಿನ ಮರಗಳನ್ನು ನೆಡಲಾಯಿತು ಮತ್ತು ಅಂತಿಮವಾಗಿ ಅದನ್ನು ನೀರಿನ ಮೂಲಕ್ಕೆ ಜೋಡಿಸಲಾಯಿತು. ಈ ಪ್ರಯತ್ನಕ್ಕೆ ಆರಂಭಿಕ ಈಶಾನ್ಯ ಮಾನ್ಸೂನ್ ಆಗಮಿಸಿದ್ದು ಹೆಚ್ಚಿನನೆರವು ನೀಡಿದೆ ಎಂದೆನ್ನುತ್ತಾರೆ. ಐಎಫ್ಎಸ್ ಅಧಿಕಾರಿ ಸರೋವರದ ಪುನಶ್ಚೇತನದ ನಂತರದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.